ರಂಧ್ರವಿಲ್ಲದ ಕ್ಯಾಮೆರಾ; ಸ್ಯಾಮ್‌ಸಂಗ್‌ನ ಭವಿಷ್ಯದ ಯೋಜನೆ.!!

|

ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಪ್ರಸ್ತುತ ಅಂಚು ರಹಿತ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಕರ್ಷಿಸುತ್ತಿವೆ. ನೂತನ ಫೀಚರ್ಸ್‌ಗಳನ್ನು ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್ ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಮೊಬೈಲ್ ಲೋಕವೇ ಬೆರಗುಗೊಳ್ಳುವಂತಹ ಕ್ಯಾಮೆರಾ ಫೀಚರ್ ಒಂದನ್ನು ಪರಿಚಯಿಸಲಿದೆ.

ರಂಧ್ರವಿಲ್ಲದ ಕ್ಯಾಮೆರಾ; ಸ್ಯಾಮ್‌ಸಂಗ್‌ನ ಭವಿಷ್ಯದ ಯೋಜನೆ.!!

ಹೌದು, ಜನಪ್ರಿಯ ಸ್ಯಾಮ್‌ಸಂಗ್ ಕಂಪನಿ ಹೊಸದೊಂದು ಸ್ಮಾರ್ಟ್‌ಫೋನ್‌ ಸಿದ್ಧಪಡಿಸುವ ತಯಾರಿಯಲ್ಲಿಸದ್ದು, ಆ ಸ್ಮಾರ್ಟ್‌ಫೋನಿನ ಕ್ಯಾಮೆರಾ ರಂಧ್ರ ಕಾಣಿಸದಂತ ರಚನೆಯನ್ನು ಹೊಂದಿರಲಿದೆ ಎಂಬ ಸೂಚನೆಗಳನ್ನು ಹೊರಹಾಕಿದೆ. ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಕಾಣಿಸುವುದು ಸಹಜ ಆದರೆ ಕ್ಯಾಮೆರಾ ಇದ್ದು, ಅದು ಕಾಣಿಸದಂತ ಈ ಹೊಸ ರಚನೆ ಗ್ರಾಹಕರಲ್ಲಿ ಅಚ್ಚರಿ ಮೂಡಿಸದೇ ಇರದು.

ರಂಧ್ರವಿಲ್ಲದ ಕ್ಯಾಮೆರಾ; ಸ್ಯಾಮ್‌ಸಂಗ್‌ನ ಭವಿಷ್ಯದ ಯೋಜನೆ.!!

ಭವಿಷ್ಯದ ಈ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮರಾ ಇರುತ್ತದೆ ಆದರೆ ಕ್ಯಾಮೆರಾದ ರಂಧ್ರ ಅಗೋಚರವಾಗಿರಲಿದ್ದು, ಅತ್ಯುತ್ತಮವಾಗಿ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಕ್ಯಾಮೆರಾಗೆ ಯಾವುದೇ ದಕ್ಕೆ ಆಗದಂತರ ರಚನೆ ಇರಲಿದ್ದು, ಕ್ಯಾಮೆರಾ ಕಾರ್ಯಕ್ಕೆ ಯಾವುದೇ ಅಡಚಣೆ ಸಹ ಆಗುವುದಿಲ್ಲ ಎಂದು ಸ್ಯಾಮ್‌ಸಂಗ್ ಮೊಬೈಲ್ ಕಮ್ಯುನಿಕೇಶನ್ ಆರ್‌ ಮತ್ತು ಡಿ ಡಿಸ್‌ಪ್ಲೇ ಉಪಾಧ್ಯಕ್ಷ ಯಾಂಗ್ ಬೈಂಗ್ ಡ್ಯುಕ್‌ ಹೇಳಿದ್ದಾರೆ.
ರಂಧ್ರವಿಲ್ಲದ ಕ್ಯಾಮೆರಾ; ಸ್ಯಾಮ್‌ಸಂಗ್‌ನ ಭವಿಷ್ಯದ ಯೋಜನೆ.!!

ಸ್ಯಾಮ್‌ಸಂಗ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಗ್ಯಾಲ್ಯಾಕ್ಸಿ ಎಸ್‌10 ಸರಣಿಯ ಸ್ಮಾರ್ಟ್‌ಫೋನ್‌ಗಳ OLED ಪ್ಯಾನಲ್‌ನಲ್ಲಿ ರಂಧ್ರ ನೀಡಿರುವುದು ಸ್ಯಾಮ್‌ಸಂಗ್‌ಗೆ ಮೊದಲಾಗಿದೆ. ಮುಂಬರುವ ದಿನಗಳಲ್ಲಿ ಭಾರೀ ಯೋಜನೆಗಳನ್ನು ಹಾಕಿಕೊಂಡಿರುವ ಸ್ಯಾಮ್‌ಸಂಗ್, ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ಸ್ಪೀಕರ್‌ ಆಗಿಯೂ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಪರಿಚಯಿಸುವ ಯೋಜನೆಯು ಸಹ ಹೊಂದಿದೆ.

ವೇಗದಲ್ಲಿ ಮುನ್ನುಗ್ಗುತ್ತಿರುವ ಸ್ಮಾರ್ಟ್‌ಫೋನ್‌ ತಂತ್ರಜ್ಞಾನವು ಗ್ರಾಹಕರಿಗೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳು ಪರಿಚಯಿಸಿದ್ದು, ಸಂಪೂರ್ಣ ಹೈ ಎಂಡ್‌ ಕ್ಯಾಮೆರಾ, 4K ಗುಣಮಟ್ಟದ ಡಿಸ್‌ಪ್ಲೇ, ದೈತ್ಯ ಬ್ಯಾಟರಿ ಶಕ್ತಿ ಇನ್ನು ಅನೇಕ ಆಶ್ಚರ್ಯಕರ ಫೀಚರ್ಸ್‌ಗಳು ಸ್ಮಾರ್ಟ್‌ಫೋನ್‌ ಸೇರಿಕೊಳ್ಳಲಿವೆ ಎನ್ನುವ ಸೂಚನೆಗಳು ಇದ್ದು, ಆದರೆ ಅವುಗಳನ್ನು ನೇರವಾಗಿ ಕಂಡಾಗ ಮಾತ್ರ ಆ ಎಲ್ಲ ವದಂತಿಗಳಿತೆ ತೆರೆ.

Best Mobiles in India

English summary
the technology can move forward to the point where the camera hole will be invisible.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X