Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲಿನೊವೊ ಕೆ6 ಪವರ್ ಸ್ಮಾರ್ಟ್ ಫೋನಿನಲ್ಲಿ ನೀವು ಬದಲಿಸಬೇಕಾದ ಸೆಟ್ಟಿಂಗ್ಸ್ ಗಳು.
ಹೊಸ ಲಿನೊವೊ ಕೆ6 ಪವರ್ ಸ್ಮಾರ್ಟ್ ಫೋನ್ ಉತ್ತಮ ಬಜೆಟ್ ಸ್ಮಾರ್ಟ್ ಫೋನ್. ಇದನ್ನು ನೀವು ಖಂಡಿತ ಖರೀದಿಸಬಹುದು. ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಈ ಫೋನಿನಲ್ಲಿ 5 ಇಂಚಿನ ಪರದೆ, 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 13 ಹಾಗೂ 8 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಹಾಗೂ ಇನ್ನೂ ಅನೇಕ ವಿಶೇಷತೆಗಳಿವೆ. ಜೊತೆಗೆ ಇದರಲ್ಲಿ ಮ್ಯಾಗ್ನೆಟೊಮೀಟರ್, ಪ್ರಾಕ್ಸಿಮಿಟಿ ಸಂವೇದಕ, ಆ್ಯಕ್ಸಿಲೆರೊಮೀಟರ್, ಆ್ಯಂಬಿಯೆಂಟ್ ಲೈಟ್ ಸಂವೇದಕ ಹಾಗೂ ಗೈರೋಸ್ಕೋಪ್ ಇದೆ.

ಇವೆಲ್ಲದಕ್ಕಿಂತ ಹೆಚ್ಚಾಗಿ ಇದರ ಪ್ರಮುಖ ಆಕರ್ಷಣೆಯೆಂದರೆ ಸುದೀರ್ಘ ಬ್ಯಾಟರಿ ಆಯುಷ್ಯ. 4000 ಎಂ.ಎ.ಹೆಚ್ ಸಾಮರ್ಥ್ಯದ ತೆಗೆಯಲಾಗದ ಬ್ಯಾಟರಿ ಇದರಲ್ಲಿದೆ, ಸಲೀಸಾಗಿ ಎರಡು ದಿನಗಳ ಕಾಲ ಬಾಳಿಕೆ ಬರುತ್ತದೆ. ಬ್ಯಾಟರಿ ವಿಷಯಕ್ಕೆ ಬಂದರೆ 2016ರ ಉತ್ತಮ ಸ್ಮಾರ್ಟ್ ಫೋನುಗಳಲ್ಲಿ ಇದೂ ಒಂದು.
ಓದಿರಿ: ಏರ್‌ಟೆಲ್‌ನಿಂದ 12 ತಿಂಗಳ ಫ್ರೀ ಡೇಟಾ ಪಡೆಯುವುದು ಹೇಗೆ? ಕಂಪ್ಲೀಟ್ ಡೀಟೆಲ್ಸ್!!!
ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಲಿನೊವೊ ಕೆ6 ಪವರ್ ಅನೇಕ ವಿಶೇಷತೆಗಳನ್ನು ನೀಡುತ್ತದೆ. ಇದು ಜನರನ್ನು ಆಕರ್ಷಿಸುತ್ತದೆ.
ಈಗ ನಿಮಗೆ ಲಿನೊವೊ ಕೆ6 ಪವರ್ ಫೋನಿನ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ, ಈ ಫೋನನ್ನು ನೀವು ಖರೀದಿಸಲು ನಿರ್ಧರಿಸಿದರೆ ಅಥವಾ ಈಗಾಗಲೇ ನಿಮ್ಮ ಬಳಿ ಈ ಫೋನ್ ಇದ್ದರೆ ನಿಮ್ಮ ಬಳಕೆಯ ಅನುಭವವನ್ನು ಹೆಚ್ಚಿಸಲು ಹಲವು ತಂತ್ರ - ಸಲಹೆಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ.
ಓದಿರಿ: ಉತ್ತಮ ಫೋಟೋಗಳನ್ನು ತೆಗೆಯಲು ಹೊಂದಿರಬೇಕಾದ ಸ್ಮಾರ್ಟ್ ಫೋನ್ ಕ್ಯಾಮೆರಾ ಆಕ್ಸೆಸರೀಸ್.
ಲಿನೊವೊ ಕೆ6 ಪವರ್ ನಲ್ಲಿರುವ ಕೆಲವು ಶಾರ್ಟ್ ಕಟ್ಟುಗಳಿವು, ಇದರಿಂದ ವೇಗದ ಬಳಕೆ ಸಾಧ್ಯವಾಗುತ್ತದೆ.
ಲಿನೊವೊ ಕೆ6 ಪವರ್ ನಲ್ಲಿ ಈ ಶಾರ್ಟ್ ಕಟ್ಟುಗಳನ್ನು ನಿಯೋಜಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಈ ಲೇಖನ ಓದಿ.

ಕ್ವಿಕ್ ಸ್ನ್ಯಾಪ್.
ಈ ಸೌಲಭ್ಯವನ್ನು ನೀವು ಆನ್ ಮಾಡಿದ್ದರೆ ಕ್ಯಾಮೆರಾ ತಂತ್ರಾಂಶವನ್ನು ತೆರೆಯದೆಯೇ ಚಿತ್ರವನ್ನು ತೆಗೆಯಬಹುದು. ಸ್ಕ್ರೀನ್ ಲಾಕ್ ಆಗಿದ್ದಾಗ ಅಥವಾ ಆಫ್ ಆಗಿದ್ದಾಗ ಯಾವುದಾದರೂ ವಾಲ್ಯೂಮ್ ಕೀಅನ್ನು ಎರಡು ಸಲ ಒತ್ತಿದರೆ ಆಯಿತು. ಈ ಸೌಕರ್ಯವನ್ನು ಉಪಯೋಗಿಸಲು ಸೆಟ್ಟಿಂಗ್ಸ್ > ಫೀಚರ್ > ಕ್ವಿಕ್ ಸ್ನ್ಯಾಪ್ ಗೆ ಹೋಗಿ ಆನ್ ಮಾಡಿ.
ಸಂಗೀತ ಆಲಿಸುತ್ತಿದ್ದಾಗ ಇದು ಕಾರ್ಯ ನಿರ್ವಹಿಸುವುದಿಲ್ಲ ಎನ್ನುವುದನ್ನು ನೆನಪಿಡಿ.

ಫಿಂಗರ್ ಪ್ರಿಂಟ್ ಸ್ನ್ಯಾಪ್.
ಬೆರಳಚ್ಚು ಸಂವೇದಕವನ್ನು ಉಪಯೋಗಿಸಿಕೊಂಡು ಚಿತ್ರ ತೆಗೆಯಬಹುದು. ಚಿತ್ರ ತೆಗೆಯಲು ಬೆರಳಚ್ಚು ಸಂವೇದಕದ ಮೇಲೆ ನಿಮ್ಮ ಬೆರಳನ್ನು ಇಟ್ಟರೆ ಆಯಿತು. ಇದನ್ನು ಸಕ್ರಿಯಗೊಳಿಸಲು ಸೆಟ್ಟಿಂಗ್ಸ್ > ಫೀಚರ್ > ಫಿಂಗರ್ ಪ್ರಿಂಟ್ ಸ್ನ್ಯಾಪ್ ಗೆ ಹೋಗಿ.

ವಿ.ಆರ್. ಮೋಡ್ ಸ್ವಿಚ್.
ಈ ಫೋನಿನಲ್ಲಿ ವಿ.ಆರ್ ಆ್ಯಪ್ ಇದೆ. ವಿ.ಆರ್ ಮೋಡ್ ನಲ್ಲಿ ನೀವು ವೀಕ್ಷಿಸಬಹುದು. ನಿಮಗೆ ವಿ.ಆರ್ ಇಷ್ಟವಿದ್ದರೆ, ನಿಮ್ಮ ಬಳಿ ವಿ.ಆರ್ ಹೆಡ್ ಸೆಟ್ ಇದ್ದರೆ ಪವರ್ ಬಟನ್ ಅನ್ನು ದೀರ್ಘವಾಗಿ ಒತ್ತಿ ಹಿಡಿಯುವ ಮೂಲಕ ವಿ.ಆರ್ ಮೋಡ್ ಅನ್ನು ಆಯ್ದುಕೊಳ್ಳಬಹುದು. ಮೊದಲಿಗೆ ಸೆಟ್ಟಿಂಗ್ಸ್ > ಫೀಚರ್ > ವಿ.ಆರ್ ಮೋಡ್ ಸ್ವಿಚ್ ಗೆ ಹೋಗಿ ಆನ್ ಮಾಡಿ.
ನಂತರ ಪವರ್ ಬಟನ್ ಅನ್ನು ಒತ್ತಿ ಹಿಡಿದಾಗ ವಿಆರ್ ಮೋಡ್ ಆಯ್ಕೆ ಮೂಡುತ್ತದೆ, ಪ್ರತಿ ಬಾರಿಯೂ ಸೆಟ್ಟಿಂಗ್ಸ್ ಪುಟಕ್ಕೆ ಹೋಗುವ ಅವಶ್ಯಕತೆಯಿಲ್ಲ.

ಕ್ಯಾಮೆರಾ ಉಪಯೋಗಿಸಲು ಪವರ್ ಬಟನ್.
ಸ್ಕ್ರೀನನ್ನು ಅನ್ ಲಾಕ್ ಮಾಡದೆ ಕ್ಯಾಮೆರಾ ತಂತ್ರಾಂಶವನ್ನು ತೆರೆಯಬಹುದು. ಪವರ್ ಬಟನ್ ಅನ್ನು ಎರಡು ಬಾರಿ ಶೀಘ್ರವಾಗಿ ಒತ್ತಿದರೆ ಕ್ಯಾಮೆರಾ ತೆರೆದುಕೊಳ್ಳುತ್ತದೆ. ಸೆಟ್ಟಿಂಗ್ಸ್ > ಫೀಚರ್ > ಪ್ರೆಸ್ ಪವರ್ ಬಟನ್ ಟ್ವೈಸ್ ಫಾರ್ ಕ್ಯಾಮೆರ ಅನ್ನು ಸಕ್ರಿಯಗೊಳಿಸಿ. ಚಿತ್ರಗಳನ್ನು ಶೀಘ್ರವಾಗಿ ತೆಗೆಯಲು ಇದು ಸಹಕಾರಿ.

ಕ್ವಿಕ್ ಫ್ಲಾಷ್ ಲೈಟ್.
ಕರೆಂಟ್ ಹೋದಾಗ ಫೋನಿನ ಫ್ಲಾಷ್ ಲೈಟ್ ನೆನಪಾಗುತ್ತದೆ. ಇದನ್ನು ಕಾರ್ಯರೂಪಕ್ಕೆ ತರಲು ನಿಮಗೆ ಆ್ಯಪ್ ಅವಶ್ಯಕ ಅಥವಾ ಕ್ಯಾಮೆರಾ ಅನ್ನು ತೆರೆಯಬೇಕು.
ಲಿನೊವೊ ಕೆ6 ಪವರ್ ನಲ್ಲಿ ಸ್ಕ್ರೀನ್ ಲಾಕ್ ಆಗಿದ್ದಾಗ ಪವರ್ ಬಟನ್ ಅನ್ನು ಒಮ್ಮೆ ದೀರ್ಘವಾಗಿ ಒತ್ತಿದರೆ ಫ್ಲಾಷ್ ಲೈಟ್ ಆನ್ ಆಗುತ್ತದೆ. ಇದನ್ನು ಸಕ್ರಿಯಗೊಳಿಸಲು ಸೆಟ್ಟಿಂಗ್ಸ್ > ಫೀಚರ್ > ಕ್ವಿಕ್ ಫ್ಲಾಷ್ ಲೈಟ್ ಗೆ ಹೋಗಿ.

ಕ್ನಾಕ್ ಟು ಲೈಟ್.
ಪ್ರತಿ ಬಾರಿ ನೀವು ಅನ್ ಲಾಕ್ ಬಟನ್ ಅನ್ನು ಒತ್ತಿ ಮೊಬೈಲನ್ನು ಆನ್ ಮಾಡುವ ಅವಶ್ಯಕತೆಯಿಲ್ಲ. ಬದಲಿಗೆ ಲಿನೊವೊ ಕೆ6 ಪವರ್ ನಲ್ಲಿ 'ಕ್ನಾಕ್ ಟು ಲೈಟ್' ಆಯ್ಕೆಯನ್ನು ಸೆಟ್ಟಿಂಗ್ಸ್ ನಲ್ಲಿ ಆಯ್ದುಕೊಂಡರೆ ಸಾಕು. ನಿಮ್ಮ ಮೊಬೈಲಿನ ಸ್ಕ್ರೀನ್ ಆಫ್ ಆಗಿದ್ದಾಗ ಎರಡು ಬಾರಿ ಪರದೆಯ ಮೇಲೆ ಮೆಲ್ಲಗೆ ಮುಟ್ಟಿದರೆ ಸಾಕು ಮೊಬೈಲ್ ಬೆಳಕು ಮೂಡುತ್ತದೆ.

ಟೋನ್ ವಾಲ್ಯೂಮ್ ಅನ್ನು ಕಡಿಮೆಗೊಳಿಸುವುದು.
ನೀವು ಫೋನ್ ಎತ್ತಿಕೊಂಡಾಗ ತನ್ನಿಂತಾನೇ ಫೋನಿನ ರಿಂಗಿಂಗ್ ಟೋನ್ ವಾಲ್ಯೂಮ್ ಕಡಿಮೆಯಾಗುತ್ತದೆ. ಫೋನನ್ನು ಸೈಲೆಂಟ್ ಮೋಡ್ ನಲ್ಲಿ ಇಡಲು ಮರೆತಂತಹ ಸನ್ನಿವೇಶಗಳಲ್ಲಿಇದು ಮುಜುಗರವನ್ನು ತಪ್ಪಿಸುತ್ತದೆ. ಸೆಟ್ಟಿಂಗ್ಸ್ > ಫೀಚರ್ > ಟೋನ್ ವಾಲ್ಯೂಮ್ ಅನ್ನು ಕಡಿಮೆಗೊಳಿಸುವ ಆಯ್ಕೆಯನ್ನು ಆನ್ ಮಾಡಿ.
ಲಿನೊವೊ ಕೆ6 ಪವರ್ ಆಕರ್ಷಕ ಫೋನ್ ಹೌದು. ಈ ವಿಶೇಷ ಗುಣಗಳಿಂದಾಗಿ ಅನೇಕ ಸಂಗತಿಗಳನ್ನು ಸುಲಭವಾಗಿ ಮಾಡಬಹುದು. ಜೊತೆಗೆ, ಲಿನೊವೊ ಕೆ6 ಪವರ್ ನ ಬೆಲೆ ಹತ್ತು ಸಾವಿರಕ್ಕಿಂತ ಕಡಿಮೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470