ಉತ್ತಮ ಫೋಟೋಗಳನ್ನು ತೆಗೆಯಲು ಹೊಂದಿರಬೇಕಾದ ಸ್ಮಾರ್ಟ್ ಫೋನ್ ಕ್ಯಾಮೆರಾ ಆಕ್ಸೆಸರೀಸ್.

Written By:

ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ನೀವು ಪರಿಗಣಿಸುವ ಅಂಶವ್ಯಾವುದು? ಪ್ರೊಸೆಸರ್, ಬ್ಯಾಟರಿ ಸಾಮರ್ಥ್ಯ, ಸಾಫ್ಟ್ ವೇರ್ ಅಥವಾ ಬಾಳಿಕೆಯನ್ನು ನೀವು ಪರಿಗಣಿಸಬಹುದು. ಈಗಿನ ಕಾಲದಲ್ಲಿ ಕ್ಯಾಮೆರಾದ ಗುಣಮಟ್ಟ ಕೂಡ ಸ್ಮಾರ್ಟ್ ಫೋನ್ ಖರೀದಸಲಿರುವ ಪ್ರಮುಖ ಮಾನದಂಡ.

ಉತ್ತಮ ಫೋಟೋಗಳನ್ನು ತೆಗೆಯಲು ಹೊಂದಿರಬೇಕಾದ ಸ್ಮಾರ್ಟ್ ಫೋನ್ ಕ್ಯಾಮೆರಾ ಆಕ್ಸೆಸರೀಸ್

ಸಂಭ್ರಮಾಚರಣೆ ಇರಬಹುದು, ಪ್ರವಾಸವಿರಬಹುದು ಅಥವಾ ಕಛೇರಿಯಲ್ಲಿನ ಕ್ರಿಸ್ಮಸ್ ಸಂಭ್ರಮವಿರಬಹುದು, ಪ್ರತಿಯೊಬ್ಬರಿಗೂ ಉತ್ತಮ ಚಿತ್ರಗಳನ್ನು ಕ್ಲಿಕ್ಕಿಸಿ, ನೆನಪನ್ನು ಜೀವನಪರ್ಯಂತ ಉಳಿಸಿಕೊಳ್ಳುವ ಆಸೆ, ಇದಕ್ಕಾಗಿ ಉತ್ತಮ ಕ್ಯಾಮೆರಾ ಇರುವ ಸ್ಮಾರ್ಟ್ ಫೋನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಓದಿರಿ: ಫ್ಲಿಪ್‌ಕಾರ್ಟ್‌ನ ಏಕ್ಸ್‌ಚೇಂಜ್ ಆಫರ್‌ನಲ್ಲಿ ರೂ. 9,999ಕ್ಕೆ ಆಪಲ್ ಐಫೋನ್ 6

ಡಿಜಿಟಲ್ ಕ್ಯಾಮೆರಾವನ್ನು ಹೊತ್ತೊಯ್ಯುವ ದಿನಗಳು ಮುಗಿದೇ ಹೋದವು, ಸ್ಮಾರ್ಟ್ ಫೋನುಗಳಿಗೆ ವಂದನೆಗಳನ್ನು ಸಲ್ಲಿಸಿ. ಬಹುತೇಕ ಸ್ಮಾರ್ಟ್ ಫೋನುಗಳಲ್ಲೀಗ ಉತ್ತಮ ಗುಣಮಟ್ಟದ ಕ್ಯಾಮೆರಾ ಇರುತ್ತದೆ, ಮುಂಬದಿಯಲ್ಲಿ ಹಾಗೂ ಹಿಂಬದಿಯಲ್ಲಿ.

ಓದಿರಿ: ಎಚ್ಚರ!..."ಭೀಮ್" ಆಪ್ ನಕಲಿಯಾಗಿದೆ!!

ಇಲ್ಲಿರುವ ಪ್ರಶ್ನೆಯೆಂದರೆ, ಈ ಮೊಬೈಲು ಕ್ಯಾಮೆರಾಗಳು ಎಸ್.ಎಲ್.ಆರ್ ಮತ್ತು ಡಿ.ಎಸ್.ಎಲ್.ಆರ್ ಕ್ಯಾಮೆರಾದ ಗುಣಮಟ್ಟದೊಂದಿಗೆ ಸ್ಫರ್ಧಿಸಬಲ್ಲದೇ? ಡಿ.ಎಸ್.ಎಲ್.ಆರ್ ರೀತಿಯಲ್ಲಿ ಉತ್ತಮ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲದೇ? ಉತ್ತರ 'ಇಲ್ಲ'.

ಪ್ರೊಫೆಷನಲ್ ಕ್ಯಾಮೆರಾಗಳಿಗೆ ಹೋಲಿಸಿದರೆ, ಸ್ಮಾರ್ಟ್ ಫೋನ್ ಕ್ಯಾಮೆರಾಗಳಲ್ಲಿ ಬಹಳಷ್ಟು ನ್ಯೂನತೆಗಳಿವೆ. ಇದನ್ನು ಸರಿಪಡಿಸಿಕೊಂಡು ಉತ್ತಮ ಗುಣಮಟ್ಟದ, ಡಿ.ಎಸ್.ಎಲ್.ಆರ್ ಗೆ ಸರಿಸಾಟಿಯಾದ ಚಿತ್ರಗಳನ್ನು ತೆಗೆಯಲು ಅನೇಕ ಕ್ಯಾಮೆರಾ ಆ್ಯಕ್ಸೆಸರಿಗಳು ಲಭ್ಯವಿದೆ.

ಗಿಝ್ ಬಾಟ್ನಲ್ಲಿ ಇಂತಹ ಹಲವು ಆ್ಯಕ್ಸೆಸರಿಗಳ ಪಟ್ಟಿ ಮಾಡಿದ್ದೀವಿ. ನಿಮ್ಮಲ್ಲೊಬ್ಬ ಫೋಟೋಗ್ರಾಫರ್ ಇದ್ದರೆ, ದುಬಾರಿ ಕ್ಯಾಮೆರಾಗಳನ್ನು ಕೊಳ್ಳಲು ನಿಮಗೆ ಸಾಧ್ಯವಾಗದೇ ಹೋದರೆ ಈ ಪಟ್ಟಿಯನ್ನೊಮ್ಮೆ ಗಮನಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾಕೆಟ್ ಸ್ಪಾಟ್ ಲೈಟ್.

ಪಾಕೆಟ್ ಸ್ಪಾಟ್ ಲೈಟ್.

ಬಹಳಷ್ಟು ಜನರಿಗೆ ಪಾಕೆಟ್ ಸ್ಪಾಟ್ ಲೈಟ್ ಬಗ್ಗೆ ಗೊತ್ತಿರುವುದಿಲ್ಲ. ಪಾಕೆಟ್ ಸ್ಪಾಟ್ ಲೈಟ್ ಅನ್ನು ಉಪಯೋಗಿಸಿಕೊಂಡು ನೀವು ಕಡಿಮೆ ಬೆಳಕಲ್ಲೂ ಉತ್ತಮ ಚಿತ್ರವನ್ನು ತೆಗೆಯಬಹುದು. ಇದರಲ್ಲಿ ಮೂರು ಹಂತಗಳಲ್ಲಿ ಬೆಳಕನ್ನು ನಿಯಂತ್ರಿಸಬಹುದು. ಒಳಾಂಗಣದ ಚಿತ್ರ ತೆಗೆಯಲು ಉತ್ತಮ ನೆರಳು ಬೆಳಕಿನ ಸಂಯೋಜನೆಯನ್ನು ಸೃಷ್ಟಿಸಲು ಇದು ಸಹಕಾರಿ.

ಪಾಕೆಟ್ ಸ್ಪಾಟ್ ಲೈಟ್ ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಸಲೀಸಾಗಿ ನಿಮ್ಮ ಜೇಬಿನಲ್ಲಿ ಕೂರುತ್ತದೆ. ಪಾಕೆಟ್ ಸ್ಪಾಟ್ ಲೈಟ್ ಅನ್ನು ನಿಮ್ಮ ಮೊಬೈಲಿನ ಹೆಡ್ ಫೋನ್ ಜ್ಯಾಕಿಗೆ ಹಾಕಿ, ಆನ್ ಮಾಡಿ ಮತ್ತು ನಿರಂತರ ಬೆಳಕಿನ ಸಹಾಯದಿಂದ ಉತ್ತಮ ಗುಣಮಟ್ಟದ ಚಿತ್ರ / ವೀಡಿಯೋಗಳನ್ನು ತೆಗೆಯಿರಿ. ಪಾಕೆಟ್ ಸ್ಪಾಟ್ ಲೈಟ್ ಬ್ಯಾಟರಿ ಜೊತೆಗೆ ಬರುವ ಕಾರಣ ಅದು ನಿಮ್ಮ ಮೊಬೈಲಿನ ಬ್ಯಾಟರಿಯನ್ನು ಉಪಯೋಗಿಸುವುದಿಲ್ಲ. ಯು.ಎಸ್.ಬಿ ಕೇಬಲ್ ಬಳಸಿ ಪಾಕೆಟ್ ಸ್ಪಾಟ್ ಲೈಟ್ ಅನ್ನು ಚಾರ್ಜ್ ಮಾಡಬಹುದು.

ಟ್ರೈಪಾಡ್.

ಟ್ರೈಪಾಡ್.

ಟ್ರೈಪಾಡ್ ಅವಶ್ಯಕವೇ? ಉತ್ತಮ ಗುಣಮಟ್ಟದ ಚಿತ್ರ ತೆಗೆಯಲು ಖಂಡಿತ ಅವಶ್ಯಕ. ಫೋಟೋಗ್ರಫಿಯಲ್ಲಿ ಆಸಕ್ತಿಯಿರುವವರು ಟ್ರೈಪಾಡ್ ಹೊಂದುವುದನ್ನು ಮರೆಯಲೇಬಾರದು. ಕೈಲಿಡಿದು ತೆಗೆವ ಚಿತ್ರಗಳು ಬಹಳಷ್ಟು ಬಾರಿ ಅಲುಗಾಟದಿಂದಾಗಿ ಅಸ್ಪಷ್ಟವಾಗಿರುತ್ತದೆ. ಸ್ಮಾರ್ಟ್ ಫೋನನ್ನು ಕೈಲಿಡಿದು ಸೂರ್ಯಾಸ್ತಮಾನದ ಚಿತ್ರ ತೆಗೆಯುವುದು ಉತ್ತಮ ನಿರ್ಧಾರವಲ್ಲ. ಇಂತಹ ಸಂದರ್ಭದಲ್ಲಿ ಟ್ರೈಪಾಡ್ ಅನುಕೂಲಕರ. ನಿಧಾನಗತಿಯ ಶಟರ್ ವೇಗವನ್ನು ಬಳಸಿ ಚಿತ್ರ ತೆಗೆಯಬಹುದು, ಒಂದೇ ಸ್ಥಳದಲ್ಲಿ ಸರಣಿ ಚಿತ್ರಗಳನ್ನು ತೆಗೆದು ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಸೆಲ್ಫಿ ಸ್ಟಿಕ್.

ಸೆಲ್ಫಿ ಸ್ಟಿಕ್.

ಪರಿಸರವನ್ನು ತೆಗೆಯುವುದಕ್ಕಿಂತ ಹೆಚ್ಚಾಗಿ ಜನರೀಗ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರು. ಉತ್ತಮ ಸೆಲ್ಫಿ ತೆಗೆಯಲು ಸೆಲ್ಫಿ ಸ್ಟಿಕ್ ಗಳು ಅವಶ್ಯಕ. ಸೆಲ್ಫಿ ಸ್ಟಿಕ್ ಗಳು ಸರಳವಾಗಿವೆ, ಆರಾಮಾಗಿ ಹೊತ್ತೊಯ್ಯಬಹುದು, ಮತ್ತು ಇವು ದುಬಾರಿ ಕೂಡ ಅಲ್ಲ. ಸ್ಮಾರ್ಟ್ ಫೋನ್ ಲೋಕಕ್ಕೆ ಸೆಲ್ಫಿ ಸ್ಟಿಕ್ ಗಳು ಪ್ರವೇಶಿಸಿದ್ದು ತೀರ ಇತ್ತೀಚೆಗೆ, ಸೆಲ್ಫಿ ಹುಚ್ಚಿನಿಂದಾಗಿ ಇದರ ಮಾರುಕಟ್ಟೆ ವ್ಯಾಪಕವಾಗಿಬಿಟ್ಟಿದೆ.

ಸೆಲ್ಫಿ ಸ್ಟಿಕ್ ನಿಂದ ನೀವು ಸೆಲ್ಫಿ ತೆಗೆಯಬಹುದು, ಗ್ರೂಪಿ ತೆಗೆಯಬಹುದು ಅಥವಾ ವಿಭಿನ್ನ ಕೋನದಿಂದ ಚಿತ್ರವನ್ನು ಸೆರೆಹಿಡಿಯಬಹುದು. ಕೆಲವು ಸೆಲ್ಫಿ ಸ್ಟಿಕ್ ಗಳಲ್ಲಿ ಬ್ಲೂಟೂಥ್ ನಿಯಂತ್ರಕಗಳಿವೆ, ಇವೆಲ್ಲವೂ ಜೇಬಿಗೆ ಹೊರೆಯಾಗುವುದಿಲ್ಲ.

ಲೆನ್ಸುಗಳು.

ಲೆನ್ಸುಗಳು.

ಹೆಚ್ಚುವರಿ ಲೆನ್ಸುಗಳನ್ನು ಉಪಯೋಗಿಸಿಕೊಂಡು ಉತ್ತಮ ಚಿತ್ರವನ್ನು ನಿಮ್ಮ ಸ್ಮಾರ್ಟ್ ಫೋನಿನಿಂದ ತೆಗೆಯಬಹುದು. ಹಲವಾರು ಕಿರು ಚಿತ್ರಗಳನ್ನು ಮತ್ತು ಡಾಕ್ಯುಮೆಂಟರಿಗಳನ್ನು ಈ ಲೆನ್ಸುಗಳನ್ನು ಉಪಯೋಗಿಸಿ ತೆಗೆಯಲಾಗಿದೆ, ಮತ್ತವುಗಳು ಅತ್ಯಾಕರ್ಷಕವಾಗಿಯೂ ಮೂಡಿ ಬಂದಿದೆ.

ವಿವಿಧ ಗಾತ್ರದ, ವಿವಿಧ ರೂಪದ ಹಲವಾರು ಸ್ಮಾರ್ಟ್ ಫೋನ್ ಕ್ಯಾಮೆರಾ ಲೆನ್ಸುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ, ಕೈಗೆಟುಕುವ ದರದಲ್ಲಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Must-have smartphone camera accessories to capture DSLR-like picture.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot