ಸ್ಮಾರ್ಟ್‍ಫೋನ್ ಚಟದ 10 ಲಕ್ಷಣಗಳು ಮತ್ತು ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ

By Prateeksha
|

ವರದಿಯ ಪ್ರಕಾರ ಸ್ಮಾರ್ಟ್‍ಫೋನ್ ಹೊಂದಿದವರಲ್ಲಿ ಬಹಳಷ್ಟು ಜನ ಅದರ ದಾಸರಾಗಿದ್ದಾರೆ. ನಿಮ್ಮದೇನು ಕಥೆ ?

ಸ್ಮಾರ್ಟ್‍ಫೋನ್ ಚಟದ 10 ಲಕ್ಷಣಗಳು ಮತ್ತು ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ

ಬಹುಶಃ ಎಲ್ಲರಿಗು ಫೋನ್ ಇಲ್ಲದೆ ಬದುಕುವುದು ಕಷ್ಟ ಎನ್ನುವುದರಲ್ಲಿ ಅನುಮಾನವಿಲ್ಲಾ. ದಿನನಿತ್ಯದ ಜೀವನದಲ್ಲಿ ಕಾಲ್ಸ್ ಮಾಡಲು ಅಥವಾ ಪಡೆಯಲು, ಬೇರೆಯವರೊಂದಿಗೆ ಸಂಪರ್ಕದಲ್ಲಿರಲು ಮತ್ತು ಸಾರ್ವಜನಿಕವಾಗಿರಲು ಹಾಗು ಇತ್ಯಾದಿ ಕಾರಣಗಳಿಗಾಗಿ ಫೋನಿನ ಅವಶ್ಯಕತೆಯಿದೆ.

ಓದಿರಿ: ಆಂಡ್ರಾಯ್ಡ್‌ನಲ್ಲಿ ಆಟೋಮೆಟಿಕಲಿ ಸಿನಿಮಾ ಸಬ್‌ಟೈಟಲ್‌ ಡೌನ್‌ಲೋಡ್‌ ಹೇಗೆ?

ಅದೇನಿದ್ದರು ಕೆ¯ವರು ತಮ್ಮ ಫೋನನ್ನು ಅನಾವಶ್ಯಕವಾಗಿ ಎಲ್ಲಾ ಕಾರಣಕ್ಕು ಉಪಯೋಗಿಸಿ ಬಲೆಯಲ್ಲಿ ಬೀಳುತ್ತಾರೆ ಇದರಿಂದ ಹೆಚ್ಚಿನ ಬಳಕೆಯಾಗಿ ಹಲವು ಸಮಸ್ಯೆಗಳಿಗೆ ಎಡೆಮಾಡುತ್ತದೆ. ಜನರು ಫೋನಿಗೆ ದಾಸರಾಗುವುದು ತುಂಬಾ ಸುಲಭ ಏಕೆಂದರೆ ಇದು ಹಲವು ಕೊಡುಗೆಗಳನ್ನು ನೀಡುತ್ತದೆ.

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ಹಂತಕ ಅಪ್ಲಿಕೇಶನ್‌ಗಳು

ಇಲ್ಲಿವೆ ಕೆಲವು ಲಕ್ಷಣಗಳು ನೀವು ದಾಸರಾಗಿದ್ದೀರಾ ಎಂದು ಪರೀಕ್ಷಿಸಲು ಮತ್ತು ಪರಿಹಾರಗಳಿವೆ ಈ ದಾಸ್ಯತ್ವದಿಂದ ಮುಕ್ತರಾಗಲು.

ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಫೋನ್ ಇಲ್ಲದೆ ಒಂದಿನವು ಸಾಗುವುದಿಲ್ಲಾ

ಫೋನ್ ಇಲ್ಲದೆ ಒಂದಿನವು ಸಾಗುವುದಿಲ್ಲಾ

ಫೋನ್ ಗೆ ದಾಸರಾದವರು ಫೋನ್ ಇಲ್ಲದೆ ಒಂದು ದಿನ ಸಾಗಿಸುವುದು ಕಷ್ಟ. ತಪ್ಪಿ ಫೋನ್ ಏನಾದರು ಮನೆಯಲ್ಲಿ ಬಿಟ್ಟು ಹೋದರೆ ಮಧ್ಯ ದಾರಿಯಲ್ಲಿ ನೆನಪಾದರೆ ಆಗ ಪುನಃ ವಾಪಸ್ ಹೋಗಿ ಫೋನ್ ತರುವಂತೆ ನೋಡಿಕೊಳ್ಳುತ್ತೀರಿ ಅದಕ್ಕೆ ಕಾರಣ ನೀವದನ್ನು ಬಿಟ್ಟು ಇರಲಾರಿರಿ. ಸರಳ ಮಾತಲ್ಲಿ ಹೇಳುವುದಾದರೆ, ಫೋನ್ ಇಲ್ಲದೆ ನೀವು ಅಪೂರ್ಣ ಎನಿಸುವ ಭಾವ.

ಸ್ನಾನದ ಕೋಣೆಗು ಕೂಡ ತೆಗೆದುಕೊಂಡು ಹೋಗುವಿರಿ

ಸ್ನಾನದ ಕೋಣೆಗು ಕೂಡ ತೆಗೆದುಕೊಂಡು ಹೋಗುವಿರಿ

ನೀವು ವಿಪರೀತವಾಗಿ ಅವಲಂಬಿತರಾಗಿದ್ದರೆ ನೀವು ಹೋದಲ್ಲೆಲ್ಲಾ ತೆಗೆದುಕೊಂಡು ಹೋಗುತ್ತೀರಿ. ನೀವು ಸ್ನಾನದ ಕೋಣೆಗು ತೆಗೆದುಕೊಂಡು ಹೋಗಲು ಶುರು ಮಾಡಿದರೆ ಹೊರ ಬರಲು ನೀವು ಹೆಚ್ಚು ಸಮಯ ತೆಗೆದುಕೊಳ್ಳಬಹುದು ನೀವು ಫೋನಲ್ಲಿ ಮುಳುಗಿ ಹೋಗುವುದರಿಂದ.

ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೂಡ ಫೋನನ್ನು ಉಪಯೋಗಿಸುತ್ತೀರಿ

ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೂಡ ಫೋನನ್ನು ಉಪಯೋಗಿಸುತ್ತೀರಿ

ಕಾರ್ಯಕ್ರಮಗಳು , ಸಮಾರಂಭಗಳು ಸಂತಸ ಪಡಲು ಇರುವಂತುಹುದು. ಅದರ ಮುಖ್ಯ ಉದ್ದೇಶ ಜನರೊಂದಿಗೆ ಬೆರೆತು ಮಾತಾಡಲು ಫೋನೊಂದಿಗೆ ಅಂಟಿಕೊಂಡಿರಲು ಅಲ್ಲಾ. ಅದೇನಿದ್ದರೂ ನೀವು ಫೋನಿನಲ್ಲಿ ಮಗ್ನರಾಗಿದ್ದು ಜನರೊಂದಿಗೆ ಬೆರೆಯದೆ ಹೋಗುತ್ತೀರಿ.

ಕಾರಣವಿಲ್ಲದೆ ನಿಮ್ಮ ಫೋನನ್ನು ಪರೀಕ್ಷಿಸುತ್ತಾ ಇರುತ್ತೀರಿ

ಕಾರಣವಿಲ್ಲದೆ ನಿಮ್ಮ ಫೋನನ್ನು ಪರೀಕ್ಷಿಸುತ್ತಾ ಇರುತ್ತೀರಿ

ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ನಿಮ್ಮ ಫೋನನ್ನು ಪದೆ ಪದೆ ನೋಡುವ ಅಭ್ಯಾಸ ಬೆಳೆಸಿಕೊಳ್ಳುತ್ತೀರಿ. ನಿಮಗೆ ಅದರೊಂದಿಗಿರಬೇಕೆಂಬ ಆಸೆಯೆ ಹೊರತು ನೀವು ಯಾವುದೆ ಮುಖ್ಯ ಕೊಲ್ಸ್ ಅಥವಾ ಮೆಸೆಜ್ ಗಾಗಿ ನಿರೀಕ್ಷೆ ಇರುವುದಿಲ್ಲಾ.

ಬೆಳಿಗ್ಗೆ ಎದ್ದೊಡನೆ ಮೊದಲು ಫೋನನ್ನು ನೋಡುತ್ತೀರಿ

ಬೆಳಿಗ್ಗೆ ಎದ್ದೊಡನೆ ಮೊದಲು ಫೋನನ್ನು ನೋಡುತ್ತೀರಿ

ರಾತ್ರಿ ಮಲಗುವ ಮುಂಚೆ ಅಥವಾ ಬೆಳಿಗ್ಗೆ ಎದ್ದೊಡನೆ ಮೊದಲು ಮಾಡುವ ಕೆಲಸ ಫೋನನ್ನು ನೋಡುವುದೇ ? ಹಾಗಿದ್ದಲ್ಲಿ ನೀವು ವಿಪರೀತವಾಗಿ ಅವಲಂಬಿತರಾಗಿದ್ದಿರಿ ಎಂದರ್ಥ. ನೆನಪಿರಲಿ ಈ ಅಭ್ಯಾಸ ಅಹಿತಕರ ಮತ್ತು ನಿಮ್ಮ ನಿದ್ರಾ ಪದ್ದತಿಯನ್ನು ಬದಲಿಸುತ್ತದೆ ನೀವು ನಿದ್ದೆಯ ಮಧ್ಯೆ ಪರೀಕ್ಷಿಸುವವರಾದರೆ.

ನೀವು ಎಲ್ಲಾ ಸಮಯದಲ್ಲಿಯು ಕೂಡ ಫೋನನ್ನು ನಿಮ್ಮ ಕೈಯಲ್ಲಿ ಹಿಡಿದು ಕೊಂಡಿರುತ್ತೀರಿ

ನೀವು ಎಲ್ಲಾ ಸಮಯದಲ್ಲಿಯು ಕೂಡ ಫೋನನ್ನು ನಿಮ್ಮ ಕೈಯಲ್ಲಿ ಹಿಡಿದು ಕೊಂಡಿರುತ್ತೀರಿ

ನೀವು ಪೊಕೆಟ್ ಅಥವಾ ಬ್ಯಾಗಿನಲ್ಲಿ ತೆಗೆದಯಕೊಂಡು ಹೋಗುವ ಬದಲು ಯಾವಾಗಲು ಕೈಯಲ್ಲಿ ಹಿಡಿದಿರುತ್ತೀರಿ. ಯಾವಾಗಲು ಕೈಯಲ್ಲಿ ಹಿಡಿದುಕೊಂಡಿರುವುದು ಪದೆ ಪದೆ ಪರೀಕ್ಷಿಸುವ ಅಭ್ಯಾಸಕ್ಕೆ ನಾಂದಿ ಹಾಡುತ್ತದೆ ಏಕೆಂದರೆ ಸ್ಕ್ರೀನ್ ನೋಡಲು ಸುಲಭ ದಾರಿ ಸಿಗುತ್ತದೆ.

ನೀವು ಫೋನನ್ನು ಒತ್ತಡ ನಿವಾರಿಸುವ ಪರಿಹಾರದಂತೆ ಕಾಣುತ್ತೀರಿ

ನೀವು ಫೋನನ್ನು ಒತ್ತಡ ನಿವಾರಿಸುವ ಪರಿಹಾರದಂತೆ ಕಾಣುತ್ತೀರಿ

ನೀವು ಹೆಚ್ಚಾನು ಹೆಚ್ಚಾಗಿ ಬೇಸರವಾದಾಗ ನಿಮ್ಮ ಫೋನಿನ ಮೇಲೆ ಅವಲಂಬಿಸುತ್ತೀರಾ ಮನಸು ಸರಿಮಾಡಲು ? ಹೌದೆಂದಾದಲ್ಲಿ ಬಹುಶಃ ನೀವು ಫೋನಿನ ದಾಸರಾಗಿರಬಹುದು. ಅಪರೂಪಕ್ಕೆ ಅದು ನಿಮ್ಮ ಸಹಾಯಕ ಆಗಬಹುದು. ಆದರೆ ಪದೆ ಪದೆ ಅದನ್ನೇ ಅವಲಂಬಿಸುವುದು ದಾಸರಾಗುವ ಲಕ್ಷಣ ತೋರಿಸುತ್ತದೆ.

ಉಪಯೋಗಿಸುವುದಕ್ಕೆ ಪ್ರತಿಬಂಧ ಹಾಕಿ

ಉಪಯೋಗಿಸುವುದಕ್ಕೆ ಪ್ರತಿಬಂಧ ಹಾಕಿ

ಮೊದಲು ಪ್ರಾರಂಭಿಕವಾಗಿ ಕೆಲವು ಗೈಡ್ ಲೈನ್ಸ್ ಮಾಡಿಕೊಳ್ಳಿ ಉಪಯೋಗದ ನಿರ್ವಹಣೆಗೆ ಸಹಾಯ ಮಾಡಲು. ಉದಾಹರಣೆಗೆ : ನೀವು ಬೆಳಿಗ್ಗೆ ಎದ್ದ ಮೇಲೆ ಒಂದು ಘಂಟೆ ಫೋನ್ ಮುಟ್ಟಲು ಕಾಯುವಿರಿ ಅಥವಾ ಊಟದ ಸಮಯದಲ್ಲಿ ಆಫ್ ಮಾಡಿ ಇಡುವಿರಿ.

ಅನ್ ಚೆಕ್ಕಾಗಿ ಹೋಗಲಿ

ಅನ್ ಚೆಕ್ಕಾಗಿ ಹೋಗಲಿ

ನಿಮಗನ್ನಿಸುವುದೆ ನಿಮಗೆ ಯಾವುದೆ ಕಾಲ್ಸ್, ಸಂದೇಶ ಅಥವಾ ಈ-ಮೇಲ್ ಬರಲಿ ಆ ಕೂಡಲೆ ಪ್ರತಿಕೀಯಿಸಬೇಕೆಂದು. ನಿಮ್ಮ ಫೋನ್ ವೊಯಸ್ ಮೇಲ್ ಗೆ ಹೋಗಲಿ ಅಥವಾ ಸಂದೇಶ ಓದದಯೇ ಬಿಡಿ ನಿಮ್ಮ ಸಂಪೂರ್ಣ ಗಮನ ಅದರ ಮೇಲೆ ಹೋಗುವ ತನಕ. ನಿಧಾನವಾಗಿ ಕಾಯುವ ಸಮಯ ಹೆಚ್ಚಿಸಿ ನಿಜವಾಗಲು ನೀವು ಫೋನಿಗೆ ಪ್ರತಿಕ್ರಿಯಿಸಬೇಕು ಎಂದು ಅನಿಸುವ ತನಕ.

ನಿಮ್ಮ ಭಾವನೆ ಗಮನಿಸಿ

ನಿಮ್ಮ ಭಾವನೆ ಗಮನಿಸಿ

ನಿಮ್ಮ ಭಾವನೆಯ ಸ್ಥರವನ್ನು ಗಮನಿಸಿ ನೀವು ಫೋನಿನ ಬಳಿ ಏಕೆ ಹೋಗುತ್ತಿದ್ದೀರಿ ಎನ್ನುವುದಕ್ಕೆ ಕುರುಹು ಸಿಗುತ್ತದೆ. ನಿಮಗೆ ಬೇಸರವಾಗಿದೆಯೆ, ಚಿಂತೆಯೆ, ಒತ್ತಡವೆ ಅಥವಾ ಒಂಟಿತನದ ಭಾವವೇ? ಒಮ್ಮೆ ನೀವು ಯಾವ ಭಾವ ನಿಮಗೆ ಫೋನಿನೆಡೆಗೆ ಕರೆದೊಯ್ಯುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಆರಂಭಿಸಿದ ಮೇಲೆ ನೀವು ಪರಿಹಾರಕ್ಕೆ ಬೇರೆ ದಾರಿಯನ್ನು ಹುಡುಕಬಹುದು.

Best Mobiles in India

English summary
Smartphone addiction is something that is very common these days. Here we have come up with some signs that show that you are addicted to your smartphone and the solutions to fix the same. Take a look at this content to know more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X