2017‍‍ರಲ್ಲಿ ಜನಪ್ರಿಯಗೊಳ್ಳಲಿರುವ ಸ್ಮಾರ್ಟ್ ಫೋನ್ ವಿಶೇಷತೆಗಳು.

|

2017ಕ್ಕೆ ನಾವು ಕಾಲಿಟ್ಟಿದ್ದೇವೆ. ಈ ವರುಷದ ಮೊದಲ ಸಿ.ಇ.ಎಸ್(ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ)ನಲ್ಲಿ ಹಲವು ಹೊಸ ಫೋನುಗಳು ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. 2017ರಲ್ಲಿ ಸ್ಮಾರ್ಟ್ ಫೋನ್ ತಂತ್ರಜ್ಞಾನವು ಮತ್ತೊಂದು ಮಜಲನ್ನು ತಲುಪುವ ನಿರೀಕ್ಷೆಯಿದೆ. ಕಳೆದ ವರ್ಷದಲ್ಲೇ ಸ್ಮಾರ್ಟ್ ಫೋನ್ ತಂತ್ರಜ್ಞಾನದಲ್ಲಿ ಹಲವಾರು ಅಭಿವೃದ್ಧಿ ನಡೆದಿತ್ತು, ಅದು ಈ ವರ್ಷ ಮತ್ತಷ್ಟು ಉತ್ತಮಗೊಳ್ಳಲಿದೆ.

2017‍‍ರಲ್ಲಿ ಜನಪ್ರಿಯಗೊಳ್ಳಲಿರುವ ಸ್ಮಾರ್ಟ್ ಫೋನ್ ವಿಶೇಷತೆಗಳು.

2016ರಲ್ಲಿ ಖ್ಯಾತವಾದ ಸ್ಮಾರ್ಟ್ ಫೋನ್ ಟ್ರೆಂಡುಗಳ ಬಗ್ಗೆ ಈಗಾಗಲೇ ಗಿಝ್ ಬಾಟ್ ನಲ್ಲಿ ತಿಳಿಸಿದ್ದೇವೆ. ಇದರಲ್ಲಿ ಪ್ರಮುಖವಾದುವೆಂದರೆ ಡುಯಲ್ ಕ್ಯಾಮೆರಾ, ಬೆಝೆಲ್ ಲೆಸ್ ಪರದೆಯ ವಿನ್ಯಾಸ, ಮಾಡ್ಯುಲಾರ್ ವಿನ್ಯಾಸ. 2017ರಲ್ಲಿ ಖ್ಯಾತಗೊಳ್ಳಲಿರುವ ಕೆಲವು ಟ್ರೆಂಡುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಓದಿರಿ: ಡೆಸ್ಕ್‌ಟಾಪ್ ಫೇಸ್‌ಬುಕ್‌ನಲ್ಲಿ ಆಗಿದೆ ಭಾರೀ ಬದಲಾವಣೆ..! ನೋಡಿದ್ರಾ..?

ಈ ವಿಶೇಷತೆಗಳು ಇದ್ದಕ್ಕಿದ್ದಂತೆ ಖ್ಯಾತಗೊಂಡುಬಿಡುತ್ತವೆ ಎಂದು ನಾವು ಹೇಳುತ್ತಿಲ್ಲ. ಆದರೆ ನಿಧಾನಕ್ಕಾದರೂ ಈ ಎಲ್ಲಾ ಲಕ್ಷಣಗಳು ಫೋನಿನಲ್ಲಿ ಸಾಮಾನ್ಯವಾಗುತ್ತವೆ.

ಓದಿರಿ: ಸಾಮಾನ್ಯ ಸ್ಮಾರ್ಟ್‌ಪೋನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್‌ ಮಾಡುವುದು ಹೇಗೆ....?

ಸ್ಪರ್ಧೆಯನ್ನು ತುರುಸುಗೊಳಿಸುವಂತಹ ಐದು ವಿಶೇಷತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಇವುಗಳಲ್ಲಿ ಕೆಲವು ಈಗಾಗಲೇ ಬಂದಿದೆಯಾದರೂ ಹೆಚ್ಚಿನ ಸಾಧನಗಳಲ್ಲಿ ಇನ್ನೂ ಲಭ್ಯವಾಗಿಲ್ಲ. ಈ ವರುಷ ಸಾಮಾನ್ಯವಾಗುವ ನಿರೀಕ್ಷೆ ನಮ್ಮದು.

4ಕೆ ಪರದೆ

4ಕೆ ಪರದೆ

ಸ್ಮಾರ್ಟ್ ಫೋನುಗಳಲ್ಲಿ ಉತ್ತಮ ರೆಸೊಲ್ಯೂಷನ್ ನೀಡಲು ಸ್ಮಾರ್ಟ್ ಫೋನ್ ತಯಾರಕರು ಶ್ರಮ ಪಡುತ್ತಲೇ ಇರುತ್ತಾರೆ. ಸದ್ಯಕ್ಕೆ ಫುಲ್.ಹೆಚ್.ಡಿ 1080 ಪಿ ಪರದೆಗಳು ಸಾಮಾನ್ಯವಾಗಿದೆ. ಸೋನಿ ಎಕ್ಸ್ಪೀರಿಯಾ ಝಡ್ 5ನಂತಹ ಫೋನುಗಳಲ್ಲಿ 4ಕೆ ರೆಸೊಲ್ಯೂಷನ್ ಈಗಾಗಲೇ ಬಂದಿದೆಯಾದರೂ ಮುಖ್ಯವಾಹಿನಿಗೆ 4ಕೆ ಬಂದಿಲ್ಲ. ಈ ವರುಷ ಬಿಡುಗಡೆಯಾಗಲಿರುವ ಫ್ಲಾಗ್ ಶಿಪ್ ಫೋನುಗಳಾದ ಗ್ಯಾಲಕ್ಸಿ ಎಸ್8 ಮತ್ತು ಎಸ್8 ಎಡ್ಜ್ ನಲ್ಲಿ 4ಕೆ ಪರದೆಯನ್ನು ನಿರೀಕ್ಷಿಸಬಹುದಾಗಿದೆ.

ಮುಂಬರುವ ವರುಷಗಳಲ್ಲಿ 4ಕೆ ಪರದೆಗಳು ಸಾಮಾನ್ಯವಾಗಲಿದೆ, ಉತ್ತಮ ಗುಣಮಟ್ಟದ ವೀಡಿಯೋಗಳನ್ನು ನಾವು ವೀಕ್ಷಿಸಬಹುದಾಗಿದೆ.

ಬೆಝೆಲ್ ಮತ್ತಷ್ಟು ಕಿರಿದಾಗುತ್ತದೆ

ಬೆಝೆಲ್ ಮತ್ತಷ್ಟು ಕಿರಿದಾಗುತ್ತದೆ

ಕಳೆದ ಕೆಲವು ವರುಷಗಳಿಂದ ಬೆಝೆಲ್ ಲೆಸ್ ಪರದೆಗಳು ಸುದ್ದಿ ಮಾಡುತ್ತಿದೆ. 2016ರಲ್ಲಿ ಬೆಝೆಲ್ ಲೆಸ್ ಪರದೆಯನ್ನು ಹೊಂದಿದ್ದ ಶಿಯೋಮಿ ಎಂಐ ಮಿಕ್ಸ್ ಕಾನ್ಸೆಪ್ಟ್ ಫೋನನ್ನು ನಾವು ನೋಡಿದ್ದೆವು. ಸ್ಮಾರ್ಟ್ ಫೋನುಗಳಲ್ಲಿನ ಬೆಝೆಲ್ ವರುಷದಿಂದ ವರುಷಕ್ಕೆ ಚಿಕ್ಕದಾಗುತ್ತಿದೆ. 2017ರಲ್ಲಿ ಅನೇಕ ಬೆಝೆಲ್ ಲೆಸ್ ಫೋನುಗಳನ್ನು ನಿರೀಕ್ಷಿಸಬಹುದು. ಎಲ್.ಜಿ ಜಿ6ನಂತಹ ಫೋನುಗಳಲ್ಲಿ ಅತ್ಯಂತ ಕಿರಿದಾದ ಬೆಝೆಲ್ ಇರಲಿದೆ.

ಬೆಝೆಲ್ ಲೆಸ್ ಫೋನುಗಳಲ್ಲಿನ ಪರದೆಯು ದೊಡ್ಡದಾಗಿ ಕಾಣಿಸುತ್ತದೆ, ಫೋನ್ ಆಕರ್ಷಕವಾಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಲೂಟೂಥ್ 5.0 ಸ್ಟ್ಯಾಂಡರ್ಡ್

ಬ್ಲೂಟೂಥ್ 5.0 ಸ್ಟ್ಯಾಂಡರ್ಡ್

2016ರ ಕೊನೆಯಲ್ಲಿ ಬ್ಲೂಟೂಥ್ 5.0 ಸ್ಟ್ಯಾಂಡರ್ಡ್ ಬಿಡುಗಡೆಯಾಯಿತು. ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗಲಿರುವ ಫೋನುಗಳಲ್ಲಿ ಈ ಸೌಲಭ್ಯ ಬರುವ ಎಲ್ಲಾ ಸಾಧ್ಯತೆಗಳೂ ಇದೆ. ಹೊಸತಾಗಿ ಬಿಡುಗಡೆಗೊಂಡ ಬ್ಲೂಟೂಥ್ 5.0 ಸ್ಟ್ಯಾಂಡರ್ಡ್ ನಲ್ಲಿನ ಬ್ಲೂಟೂಥ್ ಸಂಪರ್ಕದ ಗುಣಮಟ್ಟ ಉತ್ತಮವಾಗಿರಲಿದೆ, ಗೋಡೆಗಳು ಮೂಡಿಸುವ ಅಡಚಣೆಯು ತಗ್ಗಲಿದೆ.

ನಾಲ್ಕು ಪಟ್ಟಿನಷ್ಟು ವೇಗವಾಗಿರಲಿರುವ ಬ್ಲೂಟೂಥ್ 5.0 ಸ್ಟ್ಯಾಂಡರ್ಡ್ ಅನ್ನು ಎಲ್ಲಾ ಹೊಸ ಸ್ಮಾರ್ಟ್ ಫೋನುಗಳಲ್ಲೂ ನಿರೀಕ್ಷಿಸಬಹುದಾಗಿದೆ.

ಉತ್ತಮ ಕಾರ್ಯನಿರ್ವಹಣೆ ಮತ್ತು ಬ್ಯಾಟರಿಗಾಗಿ ಹೊಸ ಪ್ರೊಸೆಸರ್ ಗಳು

ಉತ್ತಮ ಕಾರ್ಯನಿರ್ವಹಣೆ ಮತ್ತು ಬ್ಯಾಟರಿಗಾಗಿ ಹೊಸ ಪ್ರೊಸೆಸರ್ ಗಳು

ಸ್ಮಾರ್ಟ್ ಫೋನುಗಳು ವಿಕಸನಗೊಳ್ಳುತ್ತಿದ್ದಂತೆಯೇ ಹೆಚ್ಚಿನ ಶಕ್ತಿಯನ್ನು ಬೇಡುತ್ತವೆ, ಬ್ಯಾಟರಿ ಶೀಘ್ರವಾಗಿ ಮುಗಿದುಹೋಗುತ್ತದೆ. ಉತ್ತಮ ಬ್ಯಾಟರಿಗಾಗಿ ಸ್ಮಾರ್ಟ್ ಫೋನುಗಳಲ್ಲಿನ ಪ್ರೊಸೆಸರ್ ಗಳು ದಕ್ಷವಾಗಿರಬೇಕು. ಸದ್ಯಕ್ಕೆ ಇರುವ ಪ್ರೊಸೆಸರ್ ಗಳಲ್ಲಿ 14ಎನ್.ಎಂ ತಂತ್ರಜ್ಞಾನವಿದೆ. ಹೊಸ ತಂತ್ರಜ್ಞಾದಲ್ಲಿ 10ಎನ್.ಎಂ ತಂತ್ರಜ್ಞಾನವಿರಲಿದೆ. 10ಎನ್.ಎಂ ತಂತ್ರಜ್ಞಾನದಿಂದಾಗಿ ಕಾರ್ಯನಿರ್ವಹಣೆ ಮತ್ತು ಬ್ಯಾಟರಿಯ ಬಾಳಿಕೆ ಉತ್ತಮಗೊಳ್ಳಲಿದೆ.

ಸ್ಮಾರ್ಟ್ ಫೋನ್ ಬಳಕೆದಾರರಿಗೆ 10ಎನ್.ಎಂ ಪ್ರೊಸೆಸರ್ ವರವೆಂದೇ ಹೇಳಬಹುದು. ಈ ಫೋನುಗಳಿಗಾಗಿ ಜನರು ಕಾದಿರುವುದರಲ್ಲಿ ಅಚ್ಚರಿಯೇನಿಲ್ಲ.

ಡುಯಲ್ ಕ್ಯಾಮೆರಾ ಜನಪ್ರಿಯವಾಗಲಿದೆ.

ಡುಯಲ್ ಕ್ಯಾಮೆರಾ ಜನಪ್ರಿಯವಾಗಲಿದೆ.

ಕೆಲವೊಂದು ದುಬಾರಿ ಫ್ಲಾಗ್ ಶಿಪ್ ಫೋನುಗಳು ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾ ಕೊಡಲು ಪ್ರಾರಂಭಿಸಿವೆ. ಕಳೆದ ವರ್ಷದಲ್ಲಿ ಶುರುವಾದ ಡುಯಲ್ ಕ್ಯಾಮೆರಾ ಈ ವರ್ಷ ಇನ್ನೂ ಹೆಚ್ಚಿನ ಫೋನುಗಳಲ್ಲಿ ಲಭ್ಯವಾಗಲಿದೆ. 2017ರಲ್ಲಿ ಕಡಿಮೆ ಬೆಲೆಯ ಫೋನುಗಳಲ್ಲೂ ಡುಯಲ್ ಕ್ಯಾಮೆರಾಗಳನ್ನು ಕಾಣಬಹುದು.

ಹೆಚ್ಚಿನ ಝೂಮ್, ಕಲಾತ್ಮಕ ಪರಿಣಾಮಗಳು, ಉತ್ತಮಗೊಂಡ ಡೆಪ್ತ್ ಆಫ್ ಫೀಲ್ಡ್ ಅನ್ನು ಡುಯಲ್ ಕ್ಯಾಮೆರಾದಲ್ಲಿ ಪಡೆಯಬಹುದಾಗಿದೆ. ಡುಯಲ್ ಕ್ಯಾಮೆರಾ ಫೋನುಗಳ ಅನುಭವವನ್ನು ಕಂಡುಕೊಳ್ಳಲು ಗ್ರಾಹಕರು ಕಾತರರಾಗಿರುವುದಂತೂ ಹೌದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here we have listed some of the worthy features such as dual camera, bezel-less display, 10nm processor technology and more that might become common. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X