ಸ್ಮಾರ್ಟ್ ಫೋನಿನ ಎಲ್.ಇ.ಡಿ ಲೈಟನ್ನು ಕ್ರಿಯಾತ್ಮಕವಾಗಿ ಉಪಯೋಗಿಸಲು ಏಳು ಸಲಹೆಗಳು.

|

ಮೊಬೈಲ್ ಫೋನುಗಳಲ್ಲಿ ಫ್ಲಾಷ್ ಲೈಟ್ ಕೊಡುವುದನ್ನಾರಂಭಿಸಿದ್ದು ನೋಕಿಯಾ 1100. ಇದನ್ನೇ ಎಲ್ಲಾ ಸ್ಮಾರ್ಟ್ ಫೋನುಗಳು ಹಿಂಬಾಲಿಸಿದವು.

ಸ್ಮಾರ್ಟ್ ಫೋನಿನ ಎಲ್.ಇ.ಡಿ ಲೈಟನ್ನು ಕ್ರಿಯಾತ್ಮಕವಾಗಿ ಉಪಯೋಗಿಸಲು ಏಳು ಸಲಹೆಗಳು.

ಎಲ್ಲಾ ಸ್ಮಾರ್ಟ್ ಫೋನುಗಳ ಹಿಂಬದಿಯಲ್ಲೂ ಕ್ಯಾಮೆರ ಸಂವೇದಕದೊಂದಿಗೆ ಒಂದು ಫ್ಲಾಷ್ ಇರುತ್ತದೆ. ಕೆಲವು ಫೋನುಗಳಲ್ಲಿ ಮುಂಬದಿಯಲ್ಲೂ ಫ್ಲಾಷ್ ಇರುತ್ತದೆ.

ಓದಿರಿ: ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ಈ ಫ್ಲಾಷ್ ಲೈಟಿನ ಮುಖ್ಯ ಉದ್ದೇಶ ಕಡಿಮೆ ಬೆಳಕಿನ ಸಮಯದಲ್ಲಿ ಉತ್ತಮ ಫೋಟೋಗಳನ್ನು ತೆಗೆಯುವುದು. ಆದರೂ ಈ ಫ್ಲಾಷ್ ಅನ್ನು ಹಲವು ಕ್ರಿಯಾತ್ಮಕ ರೀತಿಯಲ್ಲಿ ಉಪಯೋಗಿಸಬಹುದು.

ಓದಿರಿ: ಮಾರುಕಟ್ಟೆಯಲ್ಲಿ ಲಭ್ಯವಿರುವ 6 ಜಿಬಿ ರ್ಯಾಮಿನ ಟಾಪ್ 6 ಫೋನುಗಳು.

ಸ್ಮಾರ್ಟ್ ಫೋನಿನಲ್ಲಿರುವ ಅತ್ಯಾಕರ್ಷಕ ಗುಣ ವೈಶಿಷ್ಟ್ಯಗಳಲ್ಲಿ ಕಳೆದುಹೋಗಿರುವ ಬಳಕೆದಾರ ಎಲ್.ಇ.ಡಿ ಲೈಟ್ ಮಾಡಬಹುದಾದ ಕೆಲಸಗಳನ್ನೇ ಮರೆತುಬಿಟ್ಟಿದ್ದಾನೆ. ಕೆಳಗಿನ ಸ್ಲೈಡರುಗಳಲ್ಲಿ ಅಂತಹ ಕ್ರಿಯಾತ್ಮಕ ಕಾರ್ಯಗಳನ್ನು ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇಮೇಜ್ ಪ್ರೊಜೆಕ್ಟರ್.

ಇಮೇಜ್ ಪ್ರೊಜೆಕ್ಟರ್.

ಎಲ್.ಇ.ಡಿ ಬೆಳಕನ್ನು ಉಪಯೋಗಿಸಿಕೊಂಡು ಪಾರದರ್ಶಕ ಫಿಲ್ಮ್ ಗಳಲ್ಲಿರುವ ಚಿತ್ರಗಳನ್ನು ಪ್ರೊಜೆಕ್ಟ್ ಮಾಡಬಹುದು, ಥೇಟು ಓವರ್ ಹೆಡ್ ಪ್ರೊಜೆಕ್ಟರುಗಳಂತೆ. ಪ್ರಿಂಟಾದ ಆದ ಚಿತ್ರಗಳು ಚಿಕ್ಕದಿರುವಂತೆ ನೋಡಿಕೊಳ್ಳಿ ಆಥವಾ ನೀವೇ ಒಂದು ಡಿ.ಐ.ವೈ ಪ್ರೊಜೆಕ್ಟರ್ ತಯಾರಿಸಬಹುದು ಮತ್ತು ಒಂದು ಭೂತಗನ್ನಡಿ ಉಪಯೋಗಿಸಿ ಚಿತ್ರಗಳು ದೊಡ್ಡದಾಗಿ ಕಾಣುವಂತೆ ಮಾಡಬಹುದು. ನೆರಳಿನ ಬೊಂಬೆಗಳನ್ನೂ ಮಾಡಬಹುದು.

ಮೋರ್ಸ್ ಕೋಡ್ ಸಾಧನ.

ಮೋರ್ಸ್ ಕೋಡ್ ಸಾಧನ.

ಡಿಜಿಟಲ್ ಪೂರ್ವ ದಿನಗಳ ಮಕ್ಕಳಿಗೆ ಫ್ಲಾಷ್ ಲೈಟ್ ಉಪಯೋಗಿಸಿ ಮೋರ್ಸ್ ಕೋಡ್ ಸಂದೇಶಗಳನ್ನು ಕಳುಹಿಸುವುದು ತಿಳಿದಿರುತ್ತದೆ. ಈಗ ಅನೇಕ ವೇಗದ ಸಂದೇಶ ವಾಹಕಗಳು ಲಭ್ಯವಿರುವುದಾದರೂ, ಇದು ನಿಜಕ್ಕೂ ಖುಷಿ ಕೊಡುವ ವಿಧಾನ. ಫ್ಲಾಷ್ ಅನ್ನು ಆನ್ ಮತ್ತು ಆಫ್ ಮಾಡುವುದರ ಮೂಲಕ ಸಂದೇಶ ಕೊಡಬಹುದು. ಸಂದೇಶವನ್ನು ತೆಗೆದುಕೊಂಡು ಕಳುಹಿಸುವುದಕ್ಕೆ ಈಗ ಆ್ಯಪ್ ಗಳೂ ಲಭ್ಯವಿದೆ.

ಮ್ಯುಸಿಕಲ್ ಲೈಟ್ ಶೋ.

ಮ್ಯುಸಿಕಲ್ ಲೈಟ್ ಶೋ.

ಎಲ್.ಇ.ಡಿ ಲೈಟುಗಳಿಂದ ಚಿಕ್ಕದಾದ ಒಂದು ಲೈಟ್ ಶೋ ನಡೆಸಬಹುದು. ಸಂಗೀತ ಮತ್ತೊಂದು ಸಾಧನದಿಂದ ಬರುತ್ತಿದ್ದರೂ ಎಲ್.ಇ.ಡಿ ಲೈಟ್ ಫ್ಲಾಷ್ ಆಗುವಂತೆ ಕೆಲವರು ಮಾಡಬಲ್ಲರು. ನಿಮ್ಮ ಮೊಬೈಲಿಗೆ ಒಂದು ಪ್ಲಾಸ್ಟಿಕ್ ಕೇಸ್ ಹಾಕುವ ಮೂಲಕ ಲೈಟ್ ಹತ್ತಿಕೊಂಡಾಗ ಇಡೀ ಫೋನ್ ಬೆಳಕು ಚೆಲ್ಲುವಂತೆ ಮಾಡಬಹುದು.

ಸ್ಟ್ರೋಬ್ ಲೈಟ್.

ಸ್ಟ್ರೋಬ್ ಲೈಟ್.

ನಿಮ್ಮ ಸ್ಮಾರ್ಟ್ ಫೋನನ್ನು ಸ್ಟ್ರೋಬ್ ಲೈಟಿನಂತೆಯೂ ಉಪಯೋಗಿಸಬಹುದು. ನಿಮ್ಮ ಮೊಬೈಲನ್ನು ಮೊದಲು ರೂಟ್ ಮಾಡಬೇಕು ಅಥವಾ ಜೈಲ್ ಬ್ರೇಕ್ ಮಾಡಬೇಕು, ನಂತರ ಎಲ್.ಇ.ಡಿ ಲೈಟ್ ಸ್ಟ್ರೋಬ್ ಲೈಟಿನಂತೆ ಆನ್ - ಆಫ್ ಆಗುವಂತೆ ಮಾಡಬಹುದು. ಫ್ಲಾಷ್ ನ ವೇಗವನ್ನು ನಿಯಂತ್ರಿಸಲು ತಂತ್ರಾಂಶಗಳು ಲಭ್ಯವಿದೆ. ಎಲ್.ಇ.ಡಿ ಲೈಟಿನ ಮುಂದೆ ನೀರಿರುವ ಪಾತ್ರೆಯನ್ನಿಟ್ಟು ಬೆಳಕನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ನೋಟಿಫಿಕೇಷನ್ಸ್.

ನೋಟಿಫಿಕೇಷನ್ಸ್.

ನೋಟಿಫಿಕೇಷನ್ ಬಂದಾಗ ನಿಮ್ಮನ್ನು ಎಚ್ಚರಿಸುವುದು ಕೂಡ ಎಲ್.ಇ.ಡಿಯ ಕೆಲಸ. ನೊಟಿಫಿಕೇಷನ್ಸ್ ಬಂದಾಗ ಎಲ್.ಇ.ಡಿ ಲೈಟ್ ಹೊತ್ತಿಕೊಳ್ಳುವಂತೆ ಮಾಡಬಹುದು. ಕರೆ ಅಥವಾ ಮೆಸೇಜ್ ಬಂದಾಗ ಎಲ್.ಇ.ಡಿ ಲೈಟ್ ಆನ್ - ಆಫ್ ಆಗುವಂತೆ ಮಾಡಿಕೊಳ್ಳಬಹುದು.

ರೂಮ್ ಲ್ಯಾಂಪ್.

ರೂಮ್ ಲ್ಯಾಂಪ್.

ಎಲ್.ಇ.ಡಿ ಲೈಟನ್ನು ಆನ್ ಮಾಡಿ. ಎಲ್.ಇ.ಡಿ ಲೈಟ್ ಮೇಲಕ್ಕೆ ನೊಡುವಂತಿರಲಿ. ನೀರು ತುಂಬಿರುವ ಪಾರದರ್ಶಕ ಬಾಟಲಿಯೊಂದನ್ನು ಅದರ ಮೇಲಿಡಿ. ಇದರಿಂದ ಹೆಚ್ಚಿನ ಬೆಳಕು ಬರುತ್ತದೆ. ವಿವಿಧ ಬಣ್ಣಗಳನ್ನು ಉಪಯೋಗಿಸಿಕೊಂಡು ಬೇರೆ ಬೇರೆ ಪರಿಣಾಮಗಳನ್ನು ಪಡೆಯಬಹುದು.

ಫ್ಲಾಷ್ ಲೈಟ್.

ಫ್ಲಾಷ್ ಲೈಟ್.

ಇದು ಎಲ್.ಇ.ಡಿ ಲೈಟಿನ ಅತ್ಯಂತ ಸಾಮಾನ್ಯ ಉಪಯೋಗ. ಕತ್ತಲಿದ್ದಾಗ, ಎಲ್.ಇ.ಡಿ ಫ್ಲಾಷನ್ನು ಉಪಯೋಗಿಸಲಾಗುತ್ತದೆ. ವಿದ್ಯುತ್ ಹೋದಾಗ ಬ್ಯಾಟರಿಗೆ ತಡಕಾಡುವ ದಿನಗಳು ಈಗಿಲ್ಲ!

Best Mobiles in India

English summary
There is a LED flash on all the smartphones that are launched now. You can use the flash for several purposes other than while you click photos. Take a look at the creative uses of the same from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X