2017ರಲ್ಲಿ ಸ್ಯಾಮ್ಸಂಗ್ ಬಿಡುಗಡೆಗೊಳಿಸಲಿರುವ ಫೋನುಗಳ್ಯಾವುದು ಗೊತ್ತೆ?

2017ರಲ್ಲಿ ಈ ಸ್ಯಾಮ್ಸಂಗ್ ಫೋನುಗಳು ಮಾರುಕಟ್ಟೆಗೆ ಬಿಡುಗಡೆಗೊಳ್ಳುವ ನಿರೀಕ್ಷೆಗಳಿವೆ.

|

2016 ಸ್ಯಾಮ್ಸಂಗ್ ಗೆ ಶುಭ ತರಲಿಲ್ಲ, ಹೊಸ ವರುಷದಲ್ಲಿ ಹಳೆಯ ಕಹಿ ನೆನಪುಗಳನ್ನು ಹಿಂದಕ್ಕೆ ಹಾಕಿ ಹೊಸ ಉತ್ಸಾಹದೊಂದಿಗೆ ಮುನ್ನುಗ್ಗಲು ಸ್ಯಾಮ್ಸಂಗ್ ಸಜ್ಜಾಗಿದೆ. 2016ರಲ್ಲಿ ಬ್ಯಾಟರಿ ಸ್ಪೋಟದಂತಹ ಕೆಟ್ಟ ಘಟನೆಗಳಿಂದ ಸ್ಯಾಮ್ಸಂಗ್ ಸುದ್ದಿಯಲ್ಲಿತ್ತು. ಟೀಕೆಗಳ ಹೊರತಾಗಿಯೂ ಸ್ಯಾಮ್ಸಂಗ್ ಹಲವಾರು ಫೋನುಗಳನ್ನು 2016ರಲ್ಲಿ ಬಿಡುಗಡೆಗೊಳಿಸಿತು, ಗ್ಯಾಲಕ್ಸಿ ನೋಟ್ 7ನಿಂದಾದ ನಷ್ಟವನ್ನು ತುಂಬಿಕೊಳ್ಳಲು ಪ್ರಯತ್ನಿಸಿತು.

2017ರಲ್ಲಿ ಸ್ಯಾಮ್ಸಂಗ್ ಬಿಡುಗಡೆಗೊಳಿಸಲಿರುವ ಫೋನುಗಳ್ಯಾವುದು ಗೊತ್ತೆ?

ಹೊಸ ತಂತ್ರಜ್ಞಾನಕ್ಕೆ ಸ್ಯಾಮ್ಸಂಗ್ ಹೇಗೆ ತೆರೆದುಕೊಳ್ಳುತ್ತಿದೆ ಎನ್ನುವುದರ ಬಗ್ಗೆ ಹಲವಾರು ಗಾಳಿ ಸುದ್ದಿಗಳಿವೆ. ಗ್ಯಾಲಕ್ಸಿ ನೋಟ್ 7 ಸ್ಪೋಟದಿಂದ ದೂರಾದ ಗ್ರಾಹಕರನ್ನು ಆಕರ್ಷಿಸಲು ತನ್ನ ಹೊಸ ಫೋನುಗಳಿಗೆ ಹಲವಾರು ಹೊಸ ವಿಶೇಷತೆಗಳನ್ನು ನೀಡುವುದರತ್ತ ಸ್ಯಾಮ್ಸಂಗ್ ಗಮನಹರಿಸುತ್ತಿದೆ. ಸ್ಯಾಮ್ಸಂಗ್ ಹೊರತರುತ್ತಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8 ಫೋನು ಐಫೋನ್ 8 ಅನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.

ಓದಿರಿ: 2016 ರಲ್ಲಿ ಬಂದ 10 ಉತ್ತಮ ಸ್ಯಾಮ್ಸಂಗ್ ಗೆಲಾಕ್ಸಿ ಸ್ಮಾರ್ಟ್‍ಫೋನ್‍ಗಳು

ಗ್ಯಾಲಕ್ಸಿ ಎಸ್ 8 ಜೊತೆಗೆ ಸ್ಯಾಮ್ಸಂಗ್ 2017ರಲ್ಲಿ ಇನ್ನೂ ಹಲವಾರು ಫೋನುಗಳನ್ನು ಬಿಡುಗಡೆ ಮಾಡುತ್ತದೆ ಎನ್ನಲಾಗಿದೆ. 2017ರಲ್ಲಿ ಬಿಡುಗಡೆಯಾಗುತ್ತದೆ ಎನ್ನಲಾದ ಸ್ಯಾಮ್ಸಂಗ್ ಫೋನುಗಳ ಕಡೆಗೊಮ್ಮೆ ಗಮನಹರಿಸೋಣ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ5 (2017)

ಸ್ಯಾಮ್ಸಂಗ್ ಗ್ಯಾಲಕ್ಸಿ ಎ5 (2017)

ಈ ವರ್ಷ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಗ್ಯಾಲಕ್ಸಿ ಎ5 ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಗಾಳಿ ಸುದ್ದಿಗಳ ಪ್ರಕಾರ ಗ್ಯಾಲಕ್ಸಿ ಎ5 ಜನ ನಿರೋಧಕವಾಗಿರುತ್ತದೆ. ಕಪ್ಪು, ಗೋಲ್ಡ್, ಪಿಂಕ್ ಮತ್ತು ನೀಲಿ ಬಣ್ಣಗಳಲ್ಲಿ ಗ್ಯಾಲಕ್ಸಿ ಎ5 ಲಭ್ಯವಾಗಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

ಸ್ಯಾಮ್ಸಂಗ್ ನ ಗ್ಯಾಲಕ್ಸಿ ಎಸ್8 ರ ಬಗ್ಗೆ ಅಂತರ್ಜಾಲದಲ್ಲಿ ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿವೆ. ಸ್ಯಾಮ್ಸಂಗ್ ನ ಈ ಹೊಸ ಫೋನು ಆ್ಯಪಲ್ ನ ಐಫೋನ್ 8ಕ್ಕೆ ತೀವ್ರ ಸ್ಪರ್ಧೆ ನೀಡುತ್ತದೆ ಎನ್ನಲಾಗಿದೆ. ಬೀಸ್ಟ್ ಮೋಡ್, ಆನ್ ಸ್ಕ್ರೀನ್ ನ್ಯಾವಿಗೇಷನ್ ನಂತಹ ವಿಶೇಷತೆಗಳು ಇದರಲ್ಲಿರಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ1 ಮಿನಿ ಪ್ರೈಮ್

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ1 ಮಿನಿ ಪ್ರೈಮ್

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ1 ಮಿನಿ ಪ್ರೈಮ್ ನಲ್ಲಿ 4 ಇಂಚಿನ ಕೆಪಾಸಿಟೇಟಿವ್ ಟಚ್ ಪರದೆಯಿರಲಿದೆ. ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ1 ಮಿನಿ ಪ್ರೈಮ್ ನಲ್ಲಿ 1.2GHz ಕಾರ್ಟೆಕ್ಸ್ ಎ7 ಕ್ವಾಡ್ ಕೋರ್ ಪ್ರೊಸೆಸರ್, 5ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಇರಲಿದೆ. 1,500 ಎಂ.ಎ.ಹೆಚ್ ಸಾಮರ್ಥ್ಯದ ಲಿಐಯಾನ್ ಬ್ಯಾಟರಿ ಇದರಲ್ಲಿರಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ7 (2017)

ಸ್ಯಾಮ್ಸಂಗ್ ಗ್ಯಾಲಕ್ಸಿ ಎ7 (2017)

ಫ್ಲಾಗ್ ಶಿಪ್ ಫೋನಾದ ಗ್ಯಾಲಕ್ಸಿ ಎಸ್8 ಅನ್ನು ಬಿಡುಗಡೆಗೊಳಿಸುವುದಕ್ಕೂ ಮೊದಲು ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಎ7ನ ಸುಧಾರಿತ 2017 ಆವೃತ್ತಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಇತ್ತೀಚೆಗೆ ಯು.ಎಸ್ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ನಿಂದ ಪ್ರಮಾಣೀಕೃತ ಗೊಂಡಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ7 ಬ್ಲೂಟೂಥ್ ಪ್ರಮಾಣೀಕೃತಗೊಂಡಿದೆ. ಎ7(2017) ಫೋನಿನಲ್ಲಿ ಎಕ್ಸಿನೋಸ್ 7870 ಚಿಪ್ ಇರಲಿದೆ. 32/64 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿರಲಿದೆ, ಮೈಕ್ರೋ ಎಸ್.ಡಿ ಕಾರ್ಡ್ ಬಳಸಿಕೊಂಡು 256ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ3 (2017)

ಸ್ಯಾಮ್ಸಂಗ್ ಗ್ಯಾಲಕ್ಸಿ ಎ3 (2017)

ನಿರೀಕ್ಷೆಗೂ ಮೊದಲೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎ3 ಬಿಡುಗಡೆಗೊಳ್ಳಲಿದೆ. 4.7 ಇಂಚಿನ ಸೂಪರ್ ಅಮೊಲೆಡ್ ಪರದೆ, 1.5 GHz ಆಕ್ಟಾ ಕೋರ್ ಎಕ್ಸಿನೋಸ್ 7870 ಪ್ರೊಸೆಸರ್ ಇದರಲ್ಲಿರಲಿದೆ. 2ಜಿಬಿ ರ್ಯಾಮಿನ ಫೋನಿನ ಆಂತರಿಕ ಸಂಗ್ರಹ ಸಾಮರ್ಥ್ಯ 16ಜಿಬಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 (2017).

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 (2017).

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 ಬಗೆಗಿನ ಹಲವು ಸುದ್ದಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಫೆಡರಲ್ ಕಮ್ಯುನಿಕೇಷನ್ ಕಮಿಷನ್ ಗೆ ಪ್ರಮಾಣೀಕೃತಗೊಳ್ಳಲು ಈ ಫೋನ್ ಸಿದ್ಧವಾಗಿದೆ ಮತ್ತು ಈಗಾಗಲೇ TENAA ದಿಂದ ಅನುಮತಿ ಪಡೆದಿದೆ. ಇದರರ್ಥ ಅತಿ ಶೀಘ್ರದಲ್ಲಿ ಈ ಫೋನನ್ನು ನಾವು ಕಾಣಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ7 ಪ್ರೊ.

ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ7 ಪ್ರೊ.

ಡಿಸೆಂಬರ್ 2016ರಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ7 ಪ್ರೊ ಬಿಡುಗಡೆಗೊಳ್ಳುತ್ತದೆ ಎನ್ನಲಾಗಿತ್ತು. ತಡವಾಗಿದೆ, 2017ರಲ್ಲಿ ಬಿಡುಗಡೆಗೊಳ್ಳುತ್ತದೆ. ಯುನಿಬಾಡಿ ಮೆಟಲ್ ವಿನ್ಯಾಸ, ಮತ್ತು ಚೌಕಾಕಾರದ ಹೋಮ್ ಬಟನ್ ಇದರಲ್ಲಿರಲಿದೆ ಎಂಬ ಸುದ್ದಿಗಳಿವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 ಎಮರ್ಜ್

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 ಎಮರ್ಜ್

ಏಪ್ರಿಲ್ 2017ರಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3 ಎಮರ್ಜ್ ಬಿಡುಗಡೆಯಾಗುವ ಸಾಧ್ಯತೆಯಿದೆ. 5ಇಂಚಿನ ಪರದೆ, ಪ್ಲಾಸ್ಟಿಕ್ ಬಾಡಿ, 5ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ, 2 ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರಾ ಇದರಲ್ಲಿರಲಿದೆ. ಈ ಫೋನಿನ ಇತರೆ ವಿಶೇಷತೆಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಯಿಲ್ಲ.

Best Mobiles in India

English summary
Smartphones Samsung is rumored to launch in 2017

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X