51,990 ರುಪಾಯಿಯ ಸೋನಿ ಎಕ್ಸ್ ಪೀರಿಯಾ XZ: ನಿಮಗೆ ಗೊತ್ತಿರಬೇಕಾದ ಹತ್ತು ಸಂಗತಿಗಳು.

|

ಉದಯಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋನಿ ಕಂಪನಿಯು ತನ್ನ ಫ್ಲಾಗ್ ಶಿಪ್ ಫೋನಾದ ಸೋನಿ ಎಕ್ಸ್ ಪೀರಿಯಾ XZ ಅನ್ನು ಬಿಡುಗಡೆಗೊಳಿಸಿತು. ಮೊದಲು ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದ್ದು ಐ.ಎಫ್.ಎ 2016ರಲ್ಲಿ, ಸೋನಿ ಭಾರತದಲ್ಲಿ ಬಿಡುಗಡೆಗೊಳಿಸಿರುವ ಈ ಫೋನಿನ ಬೆಲೆ 51,990; 49,990ರುಪಾಯಿಯಷ್ಟು ಉತ್ತಮ ಬೆಲೆಗೆ ಲಭ್ಯವಿದೆ.

51,990 ರುಪಾಯಿಯ ಸೋನಿ ಎಕ್ಸ್ ಪೀರಿಯಾ XZ: ನಿಮಗೆ ಗೊತ್ತಿರಬೇಕಾದ ಹತ್ತು ಸಂಗತಿಗಳು

ತೊಂದರೆಯಲ್ಲಿರುವ ಸ್ಮಾರ್ಟ್ ಫೋನ್ ತಯಾರಕ ಸೋನಿ ಈ ವರ್ಷ ಸೋನಿ ಎಕ್ಸ್ ಪೀರಿಯಾ Z ಆವೃತ್ತಿಯ ಉತ್ಪಾದನೆಯನ್ನು ನಿಲ್ಲಿಸಿಬಿಟ್ಟಿತು. ಆದರೆ Z ಅಕ್ಷರದಿಂದ ದೂರ ಸರಿದಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ ಸೋನಿ ಎಕ್ಸ್ ಪೀರಿಯಾ XZ ಹೆಸರು ಸೋನಿ ಎಕ್ಸ್ ಪೀರಿಯಾ Z6 ಎಂದಿರಬೇಕಿತ್ತು ಮತ್ತಿದು ಎಕ್ಸ್ ಪೀರಿಯಾ ಎಕ್ಸ್ ನ ಅಪ್ ಗ್ರೇಡೆಡ್ ಆವೃತ್ತಿ.

ರಿಲಾಯನ್ಸ್ ಜಿಯೋ 4G ಇಂಟರ್ನೆಟ್ ಅನ್ನು ಪಿಸಿ/ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಹೇಗೆ?

ಸೋನಿ ಈಗಲೂ ಬುದ್ಧಿ ಕಲಿತಂತಿಲ್ಲ, ಮೊಬೈಲುಗಳ ಬೆಲೆಯನ್ನು ಹೆಚ್ಚೇ ಇಟ್ಟುಬಿಟ್ಟಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಈ ಫೋನ್ ಅರ್ಹವೇ? ಬನ್ನಿ ಸೋನಿ ಎಕ್ಸ್ ಪೀರಿಯಾ XZನ ಹತ್ತು ವಿಶಿಷ್ಟತೆಗಳನ್ನು ನೋಡೋಣ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಕಾಲಾಯ್ಡೋ ವಸ್ತುವಿನಿಂದ ಮಾಡಲಾಗಿದೆ!

ಅಲ್ಕಾಲಾಯ್ಡೋ ವಸ್ತುವಿನಿಂದ ಮಾಡಲಾಗಿದೆ!

ಈ ಫ್ಲಾಗ್ ಶಿಪ್ ಸ್ಮಾರ್ಟ್ ಫೋನಿನಲ್ಲಿ ಹೊಸ ವಸ್ತು ಅಲ್ಕಾಲಾಯ್ಡೋ ಅನ್ನು ಉಪಯೋಗಿಸಲಾಗಿದೆ. ಇದು ಬೆರಳ ಗುರುತುಗಳ ನಿರೋಧಕ. ಈ ಮೊಬೈಲ್ 161 ಗ್ರಾಂ ತೂಕವಿದೆ ಮತ್ತು 8.1ಎಂಎಂ ದಪ್ಪವಿದೆ.

ಎಕ್ಸ್ - ರಿಯಾಲಿಟಿ ಇಂಜಿನ್ ಅಪ್ ಗ್ರೇಡ್ ಆಗಿದೆ.

ಎಕ್ಸ್ - ರಿಯಾಲಿಟಿ ಇಂಜಿನ್ ಅಪ್ ಗ್ರೇಡ್ ಆಗಿದೆ.

ಎಲ್ಲಾ ಎಕ್ಸ್ ಪೀರಿಯಾ ಫ್ಲಾಗ್ ಶಿಪ್ ಸ್ಮಾರ್ಟ್ ಫೋನುಗಳಲ್ಲಿ ಎಕ್ಸ್ ರಿಯಾಲಿಟಿ ಇಂಜಿನ್ ಇದೆ; ಇದರಲ್ಲಿ ಬಣ್ಣಗಳ ತೋರುವಿಕೆ ಚೆನ್ನಾಗಿರುತ್ತದೆ. ಸೋನಿ ಎಕ್ಸ್ ಪೀರಿಯಾ XZನಲ್ಲಿ 5.1 ಇಂಚಿನ ಫುಲ್ ಹೆಚ್.ಡಿ ಟ್ರೈಲ್ಯುಮಿನೋಸ್ ಪರದೆಯಿದೆ. ಜೊತೆಗೆ ಸೋನಿಯು ಸೋನಿ ಎಕ್ಸ್ ಪೀರಿಯಾ XZನಲ್ಲಿ ಹೊಸ ತಂತ್ರಜ್ಞಾನಗಳಾದ ಲೈವ್ ಕಲರ್ ಎಲ್.ಇ.ಡಿ ಮತ್ತು ಲೈವ್ ಕಲರ್ ಕ್ರಿಯೇಷನ್ ಅನ್ನು ಸೇರಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ನಾಪ್ ಡ್ರಾಗನ್ 820 ಎಸ್.ಒ.ಸಿ.

ಸ್ನಾಪ್ ಡ್ರಾಗನ್ 820 ಎಸ್.ಒ.ಸಿ.

ಸೋನಿ ಎಕ್ಸ್ ಪೀರಿಯಾ XZನಲ್ಲಿ ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಚಿಪ್ ಇದೆ. ಜೊತಗೆ ಗ್ರಾಫಿಕ್ಸ್ ಗಾಗಿ ಅಡ್ರಿನೊ 530 ಚಿಪ್ ಇದೆ.

3ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

3ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

ಸೋನಿ ತನ್ನ ಎಕ್ಸ್ ಪೀರಿಯಾ XZ ಫೋನಿನಲ್ಲಿ ಇನ್ನೂ 3ಜಿಬಿ ರ್ಯಾಮ್ ಅನ್ನು ಇರಿಸಿದೆ. ಫ್ಲಾಗ್ ಶಿಪ್ ಫೋನಿನಲ್ಲಿ ಕೊನೇ ಪಕ್ಷ 4ಜಿಬಿ ರ್ಯಾಮ್ ಆದರೂ ಇದ್ದಿದ್ದರೆ ಉಳಿದ ಫೋನುಗಳೊಂದಿಗೆ ಸ್ಫರ್ಧೆಗಿಳಿಯಬಹುದಿತ್ತು. ಜೊತೆಗೆ ಭಾರತೀಯ ಆವೃತ್ತಿಯಲ್ಲಿ 64 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ, ಮೈಕ್ರೋ ಎಸ್.ಡಿ ಕಾರ್ಡ್ ಬೆಂಬಲವಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ಐ.ಎಂ.ಎಕ್ಸ್ 300 ಸಂವೇದಕ.

ಹೊಸ ಐ.ಎಂ.ಎಕ್ಸ್ 300 ಸಂವೇದಕ.

ಸೋನಿ ಎಕ್ಸ್ ಪೀರಿಯಾ XZನಲ್ಲಿ ಕಂಪನಿಯ ಹೊಸ ಸೋನಿ ಐ.ಎಂ.ಎಕ್ಸ್ 300 ಸಂವೇದಕವಿದೆ. 23 ಮೆಗಾಪಿಕ್ಸೆಲ್ಲಿನ ದೊಡ್ಡ ಕ್ಯಾಮೆರಾ ಇದೆ. ಜೊತೆಗೆ ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 13 ಮೆಗಾಪಿಕ್ಸೆಲ್ಲಿನ ವೈಡ್ ಆ್ಯಂಗಲ್ ಮುಂಬದಿ ಕ್ಯಾಮೆರಾ ಇದೆ.

ಹೊಸತಾದ ಟ್ರಿಪಲ್ ಇಮೇಜ್ ಸೆನ್ಸಿಂಗ್ ತಂತ್ರಜ್ಞಾನ.

ಹೊಸತಾದ ಟ್ರಿಪಲ್ ಇಮೇಜ್ ಸೆನ್ಸಿಂಗ್ ತಂತ್ರಜ್ಞಾನ.

ಎಕ್ಸ್ ಪೀರಿಯಾ XZನಲ್ಲಿರುವ ಕ್ಯಾಮೆರಾದಲ್ಲಿ ಹೊಸ ತಂತ್ರಜ್ಞಾನವಾದ ಟ್ರಿಪಲ್ ಇಮೇಜ್ ಸೆನ್ಸಿಂಗ್ ಇದೆ. ಇರದಿಂದ ಪಿಡಿಎಫ್ ಮತ್ತು ಡಿಒಎಫ್ ಉತ್ತಮವಾಗಲಿದೆ. ಟ್ರಿಪಲ್ ಇಮೇಜ್ ಸೆನ್ಸಿಂಗ್ ತಂತ್ರಜ್ಞಾನವು ಚಲಿಸುತ್ತಿರುವ ವಸ್ತುಗಳನ್ನು ಉತ್ತಮವಾಗಿ ಸೆರೆಹಿಡಿಯಲಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಟೆಡಿಶಾಟ್ ಇಂಟೆಲಿಜೆಂಟ್ ಆ್ಯಕ್ಟೀವ್ ಮೋಡ್ ಎಂಬ ಹೊಸ ಒಐಎಸ್.

ಸ್ಟೆಡಿಶಾಟ್ ಇಂಟೆಲಿಜೆಂಟ್ ಆ್ಯಕ್ಟೀವ್ ಮೋಡ್ ಎಂಬ ಹೊಸ ಒಐಎಸ್.

ಈ ಸ್ಮಾರ್ಟ್ ಫೋನಿನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಇಲ್ಲ. ಬದಲಿಗೆ ಕಂಪನಿಯು ಸ್ಟೆಡಿಶಾಟ್ ಇಂಟೆಲಿಜೆಂಟ್ ಆ್ಯಕ್ಟೀವ್ ಮೋಡ್ ಅನ್ನು ಆಯ್ದುಕೊಂಡಿದೆ, ಇದು 5 ಆ್ಯಕ್ಸಿಸ್ ಗೈರೋಸ್ಕೋಪ್ ಅನ್ನು ಬಳಸಿಕೊಂಡು ಚಿತ್ರ ಮತ್ತು ವೀಡಿಯೋಗಳನ್ನು ಸ್ಟೆಬಿಲೈಜ್ ಮಾಡುತ್ತದೆ.

13 ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರ.

13 ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರ.

1/3.06" ಲೋ ಲೈಟ್ ಸಂವೇದಕ ಮತ್ತು 22 ಎಂಎಂ ವೈಡ್ ಆ್ಯಂಗಲ್ ಲೆನ್ಸ್ ಇರುವ 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಎಕ್ಸ್ ಪೀರಿಯಾ XZನಲ್ಲಿದೆ. ಈ ಕ್ಯಾಮೆರಾದಿಂದ 4ಕೆ ವೀಡಿಯೋಗಳನ್ನು ಮಾಡಬಹುದು ಮತ್ತು 2x ಲಾಸ್ ಲೆಸ್ ಝೂಮ್ ಕೂಡ ಇದರಲ್ಲಿ ಲಭ್ಯವಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಲ ನಿರೋಧಕ ಗುಣ.

ಜಲ ನಿರೋಧಕ ಗುಣ.

ಸೋನಿಯ ಎಲ್ಲಾ ಫ್ಲಾಗ್ ಶಿಪ್ ಸ್ಮಾರ್ಟ್ ಫೋನುಗಳು ಜಲನಿರೋಧಕವಾಗಿವೆ. ಎಕ್ಸ್ ಪೀರಿಯಾ XZ ಕೂಡ ಇದಕ್ಕೆ ಹೊರತಲ್ಲ.

ಕ್ವಿಕ್ ಚಾರ್ಜ್ 3.0 ಬೆಂಬಲ ಕೂಡ ಇದೆ.

ಕ್ವಿಕ್ ಚಾರ್ಜ್ 3.0 ಬೆಂಬಲ ಕೂಡ ಇದೆ.

ಎಕ್ಸ್ ಪೀರಿಯಾ XZನಲ್ಲಿ ಚಿಕ್ಕದೇ ಎನ್ನಬಹುದಾದ 2,900 ಎಂ.ಎ.ಹೆಚ್ ಬ್ಯಾಟರಿ ಇದೆ. ಜೊತೆಗೆ ಸ್ಮಾರ್ಟ್ ಫೋನ್ ಕ್ವಾಲ್ ಕಮ್ ಕ್ವಿಕ್ ಚಾರ್ಜ್ 3.0 ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಜೊತೆಗೆ ಈ ಫೋನಿನಲ್ಲಿ ಅಡಾಪ್ಟೀವ್ ಚಾರ್ಜಿಂಗ್ ಬೆಂಬಲವಿದೆ, ನೀವು ಯಾವಾಗ ಬ್ಯಾಟರಿ ಚಾರ್ಜ್ ಮಾಡುತ್ತಿದ್ದೀರಾ ಎನ್ನುವುದನ್ನು ಅರಿತುಕೊಂಡು 90ಪ್ರತಿಶತಃದಷ್ಟು ಚಾರ್ಜ್ ಆದಾಗ ಕ್ವಿಕ್ ಚಾರ್ಜ್ ಅನ್ನು ನಿಲ್ಲಿಸಿ ಬೆಳಗಿನವರೆಗೂ 100ಪರ್ಸೆಂಟಿನವರೆಗೆ ಚಾರ್ಜ್ ಆಗುವಂತೆ ನೋಡಿಕೊಳ್ಳುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Sony, at an event in Udaipur, India launched their flagship smartphone- Xperia XZ. The smartphone was first unveiled at IFA 2016 and Sony today launched it in India with a price tag of Rs. 51,990 and the best buy will be Rs. 49,990.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X