ಟೆಕ್ನೋ ಸ್ಪಾರ್ಕ್‌ 9 ಫಸ್ಟ್‌ ಲುಕ್‌: ಅಗ್ಗದ ಬೆಲೆಯಲ್ಲಿ ಪವರ್‌ಫುಲ್‌ ಬ್ಯಾಟರಿ ಫೋನ್‌!

|

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಟೆಕ್ನೋ ಸಂಸ್ಥೆಯು ಈಗಾಗಲೇ ಸ್ಪಾರ್ಕ್‌ ಸರಣಿಯಲ್ಲಿ ಹಲವು ಫೋನ್‌ಗಳನ್ನು ಲಾಂಚ್ ಮಾಡಿ ಸೈ ಎನಿಸಿಕೊಂಡಿದೆ. ಆ ಪೈಕಿ ಇದೀಗ ಹೊಸದಾಗಿ ಬಿಡುಗಡೆ ಮಾಡಿರುವ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್ ಹಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಮುಖ್ಯವಾಗಿ ಈ ಫೋನ್‌ ಬಿಗ್ RAM ಮತ್ತು ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿರುವುದು ಪ್ಲಸ್‌ ಪಾಯಿಂಟ್‌ ಆಗಿ ಕಂಡು ಬಂದಿದೆ.

ಭಾರತೀಯ

ಹೌದು, ಟೆಕ್ನೋ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ನೂತನವಾಗಿ ಪರಿಚಯಿಸಿರುವ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಇನ್ನು ಈ ಫೋನ್ 6 GB RAM ಆಯ್ಕೆ ಪಡೆದಿದ್ದು, ಮೀಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಎಸ್‌ಡಿ ಕಾರ್ಡ್‌ ಆಯ್ಕೆಯು ಇದೆ.

ಸ್ಮಾರ್ಟ್‌ಫೋನ್‌

ಹಾಗೆಯೇ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಈ ಫೋನಿನ ಇನ್ನೊಂದು ಪ್ರಮುಖ ಹೈಲೈಟ್‌ ಆಗಿದೆ. ಮುಖ್ಯವಾಗಿ ಅಗ್ಗದ ದರದ ಶಿಯೋಮಿ ಹಾಗೂ ರಿಯಲ್‌ಮಿ ಮೊಬೈಲ್‌ಗಳಿಗೆ ನೇರ ಪೈಪೋಟಿ ನೀಡುವ ಲಕ್ಷಣ ಹೊಂದಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನಿನ ಫಸ್ಟ್‌ ಲುಕ್ ಹೇಗಿದೆ?.. ಫೀಚರ್ಸ್‌ಗಳ ಕಾರ್ಯ ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 266 ppi ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದ್ದು, ವೀಡಿಯೋ ವೀಕ್ಷಣೆಗೆ ಹಾಗೂ ವೀಡಿಯೋ ಕರೆಗಳಿಗೆ ಯೋಗ್ಯವಾದ ಮಾದರಿಯನ್ನು ಒಳಗೊಂಡಿದೆ. ಇದರ ವಿಶಾಲವಾದ ಡಿಸ್‌ಪ್ಲೇಯು ಗೇಮಿಂಗ್ ಪ್ರಿಯರನ್ನು ಆಕರ್ಷಿಸಲಿದೆ.

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ

ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4 GB RAM + 64 GB, 6 GB RAM + 128 GB ಹಾಗೂ 3 GB RAM + 64 GB ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ನೀವು ವರ್ಚುವಲ್‌ RAM ಫೀಚರ್ಸ್‌ ಮೂಲಕ 5 GB RAM ವರೆಗೆ RAM ವಿಸ್ತರಿಸಬಹುದು. ಇನ್ನು RAM ವಿಸ್ತರಣೆಗೆ OTA ಅಪ್‌ಡೇಟ್ ಅಗತ್ಯವಿರಬಹುದು ಎಂದು ಕಂಪೆನಿ ಹೇಳಿದೆ. ತನ್ನ ವರ್ಗದಲ್ಲೇ ಈ ಫೋನಿನ ಅತ್ಯುತ್ತಮ RAM ಆಯ್ಕೆಯನ್ನು ಒದಗಿಸಿದೆ. ಜೊತೆಗೆ ಹೆಚ್ಚುವರಿಯಾಗಿ RAM ವಿಸ್ತರಿಸುವ ಆಯ್ಕೆ ಸಹ ನೀಡಿದೆ.

ಕ್ಯಾಮೆರಾ ಸೆನ್ಸಾರ್ ಸ್ಪೆಷಲ್

ಕ್ಯಾಮೆರಾ ಸೆನ್ಸಾರ್ ಸ್ಪೆಷಲ್

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು AI ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ LED ಫ್ಲ್ಯಾಷ್ ಅನ್ನು ಹೊಂದಿದೆ. ಇದರೊಂದಿಗೆ 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಅನ್ನು ಇದು ಒಳಗೊಂಡಿದೆ. ಡ್ಯುಯಲ್‌ ಕ್ಯಾಮೆರಾ ಆಯ್ಕೆ ಇದೆ. ಆದ್ರೆ, ಈ ಫೋನಿನ ಮುಖ್ಯ ಕ್ಯಾಮೆರಾ ಸೆನ್ಸಾರ್‌ ಅನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು ಎಂದೆನಿಸುತ್ತದೆ. ಪ್ರಸ್ತುತ ಗ್ರಾಹಕರು ಕ್ಯಾಮೆರಾ ಅಂಶವನ್ನು ಹೆಚ್ಚಾಗಿ ಪರಿಗಣಿಸುತ್ತಾರೆ.

ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಇತರೆ ಸೌಲಭ್ಯಗಳು

ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ ವೈ ಫೈ, ಮತ್ತು ಬ್ಲೂಟೂತ್ 5.0. GPS, GNSS, ಗೆಲಿಲಿಯೋ, ಬೀಡೌ ಮತ್ತು 4G LTE ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ DTS ಬೆಂಬಲಿಸುವ ಸ್ಪೀಕರ್‌ಗಳನ್ನು ಒಳಗೊಂಡಿದೆ. ಜೊತೆಗೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಆಕ್ಸಿಲೆರೊಮೀಟರ್‌ ಅನ್ನು ಒಳಗೊಂಡಿದೆ. ತನ್ನ ವರ್ಗದಲ್ಲೇ ಈ ಫೊನ್ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವುದು ಗಮನಾರ್ಹ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 4GB + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 8,499 ರೂ. ಗಳು ಆಗಿದೆ. ಹಾಗೆಯೇ 6GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯ ಬೆಲೆ 9,499ರೂ. ಆಗಿದೆ. ಇನ್ನು ಈ ಫೋನ್‌ ಅನ್ನು ಗ್ರಾಹಕರು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಬಜೆಟ್‌ ದೃಷ್ಠಿಯಿಂದಲೂ ಸುಮಾರು 10,000ರೂ. ಒಳಗೆ ಈ ಫೋನ್‌ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.

ಟೆಕ್ನಾಲಜಿಯೊಂದಿಗೆ

ಹಾಗೆಯೇ ಟೆಕ್ನೋ ಕಂಪೆನಿ ಇತ್ತೀಚಿಗೆ ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ನೂತನವಾಗಿ ಟೆಕ್ನೋ ಕ್ಯಾಮನ್‌ 19 ಮತ್ತು ಟೆಕ್ನೋ ಕ್ಯಾಮನ್‌ 19 ನಿಯೋ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಕೇಂದ್ರಿತ ಫೋನ್‌ಗಳಾಗಿದ್ದು, ಮೆಮೊರಿ ಫ್ಯೂಷನ್ ಟೆಕ್ನಾಲಜಿಯೊಂದಿಗೆ ಬರುತ್ತವೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿವೆ. ಆದರೆ ಮುಖ್ಯ ಕ್ಯಾಮೆರಾಗಳು ಮಾತ್ರ ಭಿನ್ನವಾಗಿವೆ.

Best Mobiles in India

English summary
Tecno Spark 9 First Look: Powerful Phone at Entry Level Price Tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X