ವಿಶ್ವದ ಮೊದಲ ಮೊಬೈಲ್‌ ಯಾವುದು ಗೊತ್ತೇ? ಫೀಚರ್‌ ಅಚ್ಚರಿ!!

Written By:

ಮೊಬೈಲ್‌ ಜಗತ್ತಿನ ಸತ್ಯವಿದು. ಮೊಟ್ಟಮೊದಲ ಬಾರಿಗೆ ಕೈಯಲ್ಲಿ ಹಿಡಿದು ಮಾತನಾಡುವ ಮೊಬೈಲ್‌ ಅನ್ನು ಅಭಿವೃದ್ದಿಗೊಳಿಸಿದ್ದು ಮೊಟೊರೊಲಾ ಕಂಪನಿ. ಅಲ್ಲದೇ ಮೊಟ್ಟ ಮೊದಲ ಕರೆಯನ್ನು ಮೊಬೈಲ್‌ ಅನ್ನು ಕೈಯಲ್ಲಿ ಹಿಡಿದು ಕಾಲ್‌ ಮಾಡಿದ್ದು ಸಹ ಮೊಟೊರೊಲಾ ಸಂಶೋಧಕ ಮತ್ತು ಕಾರ್ಯನಿರ್ವಾಹಕರಾದ 'ಮಾರ್ಟಿನ್‌ ಕೂಪರ್'. ಅದು ಪ್ರಪಂಚದ ಮೊಟ್ಟ ಮೊದಲ ಕರೆ ಆಗಿತ್ತು. ಅಂದಹಾಗೆ ಈ ಮೊಟ್ಟ ಮೊಬೈಲ್‌ ಫೋನ್‌ ಯಾವಾಗ ಅಭಿವೃದ್ದಿಗೊಂಡಿದ್ದು ಎಂಬುದರ ಬಗ್ಗೆ ಮತ್ತು ಮಾರ್ಟಿನ್‌ ಕೂಪರ್‌ ಯಾರು? ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏಪ್ರಿಲ್‌ 3, 1973

ಏಪ್ರಿಲ್‌ 3, 1973

ಏಪ್ರಿಲ್‌ 3, 1973

ಮೊಟೊರೊಲಾ ಇಂಜಿನಿಯರ್‌ 'ಮಾರ್ಟಿನ್‌ ಕೂಪರ್‌' ರವರು ಮೊಟ್ಟ ಮೊದಲ ಬಾರಿಗೆ ಏಪ್ರಿಲ್‌ 3, 1973 ರಲ್ಲಿ ಮೊಟೊರೊಲಾ ಮೊಬೈಲ್‌ನಿಂದ ಕರೆಯನ್ನು ಮಾಡಿದರು.

Motorola DynaTAC ವಾಣಿಜ್ಯ ಫೋನ್

Motorola DynaTAC ವಾಣಿಜ್ಯ ಫೋನ್

Motorola DynaTAC ವಾಣಿಜ್ಯ ಫೋನ್

ವಿಶ್ವದ ಮೊಟ್ಟ ಮೊದಲ ವಾಣಿಜ್ಯ ಫೋನ್‌ "Motorola DynaTAC" ಆಗಿದ್ದು, ಅದರ ಅತ್ಯಂತ ಅಚ್ಚರಿ ವಿಷಯ ಅಂದ್ರೆ ತೂಕ 1.1 ಕೆಜಿ ಇತ್ತು.

ಕರೆ ಮಾಡಿದ್ದು ಎಲ್ಲಿ ಗೊತ್ತೇ?

ಕರೆ ಮಾಡಿದ್ದು ಎಲ್ಲಿ ಗೊತ್ತೇ?

ಕರೆ ಮಾಡಿದ್ದು ಎಲ್ಲಿ ಗೊತ್ತೇ?

ಅಮೇರಿಕದ ನ್ಯೂಯಾರ್ಕ್‌ನಲ್ಲಿ ಸೆಲ್‌ಫೋನ್‌ ಕರೆಯನ್ನು ಮೊದಲ ಬಾರಿಗೆ ಮಾಡಲಾಗಿತ್ತು. ಮಾರ್ಟಿನ್‌ ಕೂಪರ್‌'ರವರು ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವೆ 6 ಮುಖ್ಯ ವಿಶಾಲ ಬೀದಿಯಲ್ಲಿ 900MHz ಮುಖ್ಯ ಕೇಂದ್ರ ಹೊಂದಿದ್ದರು. ಹಾಗೆಯೇ, ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್‌ ಲ್ಯಾಬ್ಸ್‌ಗೆ ಕರೆ ಮಾಡಲಾಗಿತ್ತು.

 ರುಡಿ ಕ್ರೊಲಾಪ್ಪ್ ಜೊತೆಗೆ ಮಾರ್ಟಿನ್‌ ಕೂಪರ್‌

ರುಡಿ ಕ್ರೊಲಾಪ್ಪ್ ಜೊತೆಗೆ ಮಾರ್ಟಿನ್‌ ಕೂಪರ್‌

ರುಡಿ ಕ್ರೊಲಾಪ್ಪ್ ಜೊತೆಗೆ ಮಾರ್ಟಿನ್‌ ಕೂಪರ್‌

ಮಾರ್ಟಿನ್‌ ಕೂಪರ್‌'ರವರು ತಮ್ಮ ಮೊದಲ ಡಿವೈಸ್ ಅನ್ನು ಹೊರತರಲು ಪೇಟೆಂಟ್‌ ಸಹ ಪಡೆದು ವಿನ್ಯಾಸಕಾರರಾದ 'ರುಡಿ ಕ್ರೊಲಾಪ್ಪ್' ಜೊತೆಗೆ ಕಾರ್ಯನಿರ್ವಹಿಸಿದ್ದರು. ಅವರಿಬ್ಬರು ಸೇರಿ DynaTAC (Dynamic Adaptive Total Area Coverage) ಫೋನ್‌ ಅನ್ನು ಅಭಿವೃದ್ದಿ ಪಡಿಸಿದ್ದರು.

ಮೊದಲ ಫೋನ್‌ ಫೀಚರ್‌ ಏನಿತ್ತು ಗೊತ್ತೇ?

ಮೊದಲ ಫೋನ್‌ ಫೀಚರ್‌ ಏನಿತ್ತು ಗೊತ್ತೇ?

ಮೊದಲ ಫೋನ್‌ ಫೀಚರ್‌ ಏನಿತ್ತು ಗೊತ್ತೇ?

ಮೊಟ್ಟ ಮೊದಲ 'ಮೊಟೊರೊಲಾ DynaTAC' ಫೋನ್‌ 23cm ಉದ್ದ ಮತ್ತು 1.1kg ತೂಕ ಹೊಂದಿತ್ತು. ಅಲ್ಲದೇ ಇದು ಸಂಪೂರ್ಣ ಚಾರ್ಜ್‌ ಹೊಂದಲು 10 ಗಂಟೆಗಳ ಸಮಯ ಬೇಕಿತ್ತು. ಆದರೆ ಬಳಕೆ ಆಗುತ್ತಿದ್ದದ್ದು ಮಾತ್ರ ಕೇವಲ 35 ನಿಮಿಷಗಳು.

ಮಾರ್ಟಿನ್‌ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಹೇಳಿದ್ದು ಏನು?

ಮಾರ್ಟಿನ್‌ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಹೇಳಿದ್ದು ಏನು?

ಮಾರ್ಟಿನ್‌ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಹೇಳಿದ್ದು ಏನು?

ಮೊಟ್ಟ ಮೊದಲು ಫೋನ್‌ ತಯಾರಿಸಿದ್ದು ಮಾರ್ಟಿನ್‌ ಓಕೆ. ಆದ್ರೆ ಕರೆಯ ವಿಶೇಷತೆ ಅಂದ್ರೆ ಮಾರ್ಟಿನ್‌ ಮೊಟ್ಟಮೊದಲು ತಮ್ಮ ಪ್ರತಿಸ್ಪರ್ಧಿ ಬೆಲ್‌ ಲ್ಯಾಬ್‌ನ ಪ್ರಧಾನ ಸಂಶೋಧಕರಾದ 'ಜೊಯೆಲ್‌ ಏಂಜೆಲ್‌'ಗೆ. ಅದು ಏಪ್ರಿಲ್‌ 3, 1973 ರಲ್ಲಿ. ಅಲ್ಲದೇ ಮಾರ್ಟಿನ್‌ರವರು ನ್ಯೂಯಾರ್ಕ್‌ನ ರೇಡಿಯೋ ವರದಿಗಾರರಿಗೂ ಸಹ ಕರೆ ಮಾಡಿದ್ದರು.

 ಮೊಟೊರೊಲಾ

ಮೊಟೊರೊಲಾ

ಮೊಟೊರೊಲಾ

1983 ರಲ್ಲಿ DynaTAC 8000X ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಯಿತು. ಅಂದು ಬಿಡುಗಡೆಯಾದ ಫೋನ್‌ ಬೆಲೆ $3,955 . ಆದರೆ ಇಂದು ಸ್ಮಾರ್ಟ್‌ಫೋನ್‌ಗಳು 250 ರೂಪಾಯಿಗಳಿಗೂ ಸಿಗುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The First Cell Phone Call Was Made on Motorola Phone in 1973, it weighed 1.1Kg. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot