2018ರಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್‌ಫೋನ್‌ಗಳ ಲೀಸ್ಟ್ ಇಲ್ಲಿದೆ!!

|

ಒಂದು ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತ ಮುಂಚೆ ಮೊಬೈಲ್‌ಗಳ ಬಗ್ಗೆ ಹೆಚ್ಚು ತಿಳಿದಿರುವವರನ್ನು ನೀವು ಸಂಪರ್ಕಿಸಿರುತ್ತೀರಾ ಅಲ್ಲವೇ?. ಆದರೆ, ಇದಕ್ಕಿಂತಲೂ ಹೆಚ್ಚು ನಿಖರವಾಗಿ ನೀವು ಯಾವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂಬುದಕ್ಕೆ ಒಂದು ವರದಿ ಸಹಾಯಕವಾಗಲಿದೆ. ಏಕೆಂದರೆ, ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೂತನ ವರದಿಯೊಂದು ಬಿಡುಗಡೆ ಮಾಡಿದೆ.

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮೊಬೈಲ್ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ 'ಕೌಂಟರ್ ಪಾಯಿಂಟ್' ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿದೆ.! ವಿಶ್ವದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಮಾಹಿತಿಯನ್ನು ಹುಡುಕಿ ಹೆಕ್ಕಿರುವ 'ಕೌಂಟರ್ ಪಾಯಿಂಟ್' ಸ್ಮಾರ್ಟ್‌ಫೋನ್‌ಗಳ ರ್ಯಾಂಕಿಂಗ್ ಅನ್ನು ಬಿಡುಗಡೆ ಮಾಡಿದೆ.

2018ರಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಟಾಪ್ 10 ಫೋನ್‌ಗಳ ಲೀಸ್ಟ್!!

'ಕೌಂಟರ್ ಪಾಯಿಂಟ್' ಸಂಸ್ಥೆ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಆಪಲ್ 'ಐಫೋನ್ ಎಕ್ಸ್' ನಿರೀಕ್ಷೆಯಂತೆ ಮೊದಲ ಸ್ಥಾನದಲ್ಲಿದೆ. ಆದರೆ, ಗೆಲಾಕ್ಸಿ ಎಸ್9ಗೆ 5ನೇ ಸ್ಥಾನ ಸಿಕ್ಕಿದೆ.! ಹಾಗಾದರೆ, 2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಕುತೋಹಲ ವರದಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

10. ಆಪಲ್ ಐ ಫೋನ್ 6

10. ಆಪಲ್ ಐ ಫೋನ್ 6

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಆಪಲ್ ಐ ಫೋನ್ 6 ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. 2014 ರಲ್ಲಿ ಬಿಡುಗಡೆಗೊಂಡ ಸ್ಮಾರ್ಟ್ ಫೋನ್ ಶೇ.1.2 ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 23,999 ರೂ. ಬೆಲೆಯಿದೆ.

9.ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ

9.ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ ಇದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 18,900 ರೂ. ಬೆಲೆಯಿದೆ.

8.ಆಪಲ್ ಐಫೋನ್ 8

8.ಆಪಲ್ ಐಫೋನ್ 8

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಆಪಲ್ ಐ ಫೋನ್ 8 ಎಂಟನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 53,749 ರೂ. ಬೆಲೆಯಲ್ಲಿ 64 ಜಿಬಿ ಆಂತರಿಕ ಮೆಮೊರಿಯ ಫೋನ್ ಖರೀದಿಸಬಹುದು.

7.ಐಪೋನ್ 7

7.ಐಪೋನ್ 7

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ 2016 ಸೆಪ್ಟಂಬರ್ ನಲ್ಲಿ ಬಿಡುಗಡೆಗೊಂಡಿದ್ದ ಆಪಲ್ ಐಫೋನ್ 7 ಏಳನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.6 ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 41,499 ರೂ. ಬೆಲೆಯಿದೆ.

6.ಸ್ಯಾಮ್ ಸಂಗ್ ಎಸ್ 9 ಪ್ಲಸ್

6.ಸ್ಯಾಮ್ ಸಂಗ್ ಎಸ್ 9 ಪ್ಲಸ್

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಸ್ಯಾಮ್‌ಸಂಗ್ ಎಸ್ 9 ಪ್ಲಸ್ ಫೋನಿಗೆ 6 ನೇ ಸ್ಥಾನ ಸಿಕ್ಕಿದೆ. ಶೇ 1.6 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 64,900 ರೂ. ಬೆಲೆಯಿದೆ.

5.ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 9

5.ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 9

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 9 ಶೇ 1.6 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 55,099 ರೂ. ಬೆಲೆ ನಿಗದಿಯಾಗಿದೆ.

4. ಒಪ್ಪೊ ಎ83

4. ಒಪ್ಪೊ ಎ83

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಒಪ್ಪೊ ಎ83 ಶೇ.1.8 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ. ಶೇ 1.8 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 15,990 ರೂ. ಇದೆ.

How to send WhatsApp Payments invitation to others - GIZBOT KANNADA
2.ಆಪಲ್ ಐ ಫೋನ್ 8 ಪ್ಲಸ್

2.ಆಪಲ್ ಐ ಫೋನ್ 8 ಪ್ಲಸ್

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಆಪಲ್ ಐ ಫೋನ್ 8 ಪ್ಲಸ್ ಮಾರುಕಟ್ಟೆಯಲ್ಲಿ ಶೇ 2.3 ಪಾಲನ್ನು ಪಡೆಯುವುದರ ಮೂಲಕ ಎರಡನೇ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 69,990 ರೂ. ಇದ್ದರೆ 256 ಜಿಬಿ 78,999 ರೂ.

1.ಆಪಲ್ ಐಫೋನ್ ಎಕ್ಸ್

1.ಆಪಲ್ ಐಫೋನ್ ಎಕ್ಸ್

2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಆಪಲ್ ಐ ಫೋನ್ ಎಕ್ಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಶೇ3.5 ಪಾಲನ್ನು ಪಡೆಯುವುದರ ಮೂಲಕ ಮೊದಲ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 76,488 ರೂ. ಇದ್ದರೆ 256 ಜಿಬಿ 92,990 ರೂ. ಇದೆ.

Best Mobiles in India

English summary
The iPhone X Was The World's Best Selling Smartphone In Q1 2018. Although Apple and Samsung dominated the top 10 list for the first quarter of 2018. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X