ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಈ ಟಿಪ್ಸ್ ಬಳಸಿ; ಇತರರಿಂದ ಫೋನ್ ರಕ್ಷಿಸಿ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಆಪ್ತ ಜೊತೆಗಾರ ಎನಿಸಿವೆ. ಪ್ರಮುಖ ಹಾಗೂ ಖಾಸಗಿ ಮಾಹಿತಿಗಳು, ಫೋಟೊಗಳು, ಫೈಲ್‌ಗಳು ಇತ್ಯಾದಿಗಳನ್ನು ಬಳಕೆದಾರರು ಫೋನಿನಲ್ಲಿ ಸ್ಟೋರ್ ಮಾಡಿ ಇಟ್ಟಿರುತ್ತಾರೆ. ಬಳಕೆ ದಾರರ ಖಾಸಗಿ ಮಾಹಿತಿಯ ಸುರಕ್ಷತೆ ದೃಷ್ಠಿಯಿಂದ ಹಲವು ಸೆಕ್ಯುರಿಟಿ ಆಯ್ಕೆಗಳನ್ನು ಇಂದಿನ ಆಂಡ್ರಾಯ್ಡ್‌ ಫೋನ್‌ಗಳು ಒಳಗೊಂಡಿವೆ. ಆದಾಗ್ಯೂ ಕೆಲವು ಬಳಕೆ ದಾರರು ಇವುಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಆದರೆ ಇತರರು ಫೋನ್‌ ಜಾಲಾಡ ದಂತೆ ತಡೆಯಲು ಆಂಡ್ರಾಯ್ಡ್‌ನಲ್ಲಿರುವ ಈ ಫೀಚರ್ ಬಳಕೆ ಮಾಡುವುದು ಉತ್ತಮ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಈ ಟಿಪ್ಸ್ ಬಳಸಿ; ಇತರರಿಂದ ಫೋನ್ ರಕ್ಷಿಸಿ!

ಹೌದು, ಕೆಲವರಿಗೆ ಒಪ್ಪಿಗೆ ಪಡೆಯದೇ ಫೋನ್‌ ಪರಿಶೀಲಿಸುವ ರೂಢಿ ಹೊಂದಿರುತ್ತಾರೆ. ಅವರು ಆತ್ಮೀಯರಾಗಿದ್ದರೇ, ಫೋನ್ ಮುಟ್ಟಬೇಡಿ ಎಂದು ಹೇಳುವುದು ಸರಿ ಅನಿಸುವುದಿಲ್ಲ. ಆದರೆ ಫೋನಿನಲ್ಲಿರುವ ಕೆಲವು ಉಪಯುಕ್ತ ಫೀಚರ್‌/ಆಯ್ಕೆಗಳನ್ನು ಬಳಕೆ ಮಾಡುವ ಮೂಲಕ ಇಂತಹ ಸಂದರ್ಭಗಳಲ್ಲಿ ನಿರಾತಂಕವಾಗಿರಬಹುದು ಹಾಗೂ ಸುರಕ್ಷತೆ ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.

ಪಿನ್ ದಿ ಸ್ಕ್ರೀನ್ ಫೀಚರ್
ಆಂಡ್ರಾಯ್ಡ್ ಫೋನ್‌ಗಳಲ್ಲಿ ಪಿನ್ ದಿ ಸ್ಕ್ರೀನ್ ಅಥವಾ ಸ್ಕ್ರೀನ್ ಪಿನ್ನಿಂಗ್ ಎಂಬ ವಿಶೇಷ ಫೀಚರ್ ನೀಡಲಾಗಿದೆ. ಈ ಆಯ್ಕೆಯನ್ನು ಬಳಕೆ ಮಾಡುವ ಮೂಲಕ ಒಪ್ಪಿಗೆಯಿಲ್ಲದೆ ನಿಮ್ಮ ಅನ್ಲಾಕ್ ಮಾಡಿದ ಫೋನ್ ಅನ್ನು ಯಾರೂ ಬಳಸಲು ಸಾಧ್ಯವಾಗುವುದಿಲ್ಲ. ಈ ಫೀಚರ್ ಆಂಡ್ರಾಯ್ಡ್ 5.0 ಮತ್ತು ಅದಕ್ಕಿಂತ ಮೇಲ್ಪಟ್ಟ ಇತ್ತೀಚಿಗಿನ ಎಲ್ಲ ಹೊಸ ಆವೃತ್ತಿಗಳಲ್ಲಿ ಲಭ್ಯ ಇರುವುದು.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಈ ಟಿಪ್ಸ್ ಬಳಸಿ; ಇತರರಿಂದ ಫೋನ್ ರಕ್ಷಿಸಿ!

ಏನಿದು ಪಿನ್ ದಿ ಸ್ಕ್ರೀನ್ ಫೀಚರ್
ಈ ಫೀಚರ್‌ನ ಪ್ರಮುಖ ಕಾರ್ಯವೆಂದರೆ ನೀವು ಆಪ್ ಅನ್ನು ಲಾಕ್ ಮಾಡಬಹುದು ಅಥವಾ ಪಿನ್ ಮಾಡಬಹುದು. ಈ ರೀತಿ ಮಾಡುವುದರಿಂದ ಫೋನಿನಲ್ಲಿ ನೀವು ಅನುಮತಿ ನೀಡುವವರೆಗೆ ಆಪ್ ಅನ್ನು ತೆರೆಯಲು ಇತರರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಫೋನಿನಲ್ಲಿ ಯಾವುದೇ ಅಪ್ಲಿಕೇಶನ್‌ಗಳನ್ನು ಇತರರು ಪರಿಶೀಲಿಸದಂತೆ ತಡೆಯಲು ಆ ಅಪ್ಲಿಕೇಶನ್‌ನಲ್ಲಿ ಪಿನ್ ದಿ ಸ್ಕ್ರೀನ್ ಗೆ ಹಾಕುವುದು ಉತ್ತಮ.

* ಪಿನ್ ದಿ ಸ್ಕ್ರೀನ್ ಫೀಚರ್ ಎಲ್ಲಾ ಆಂಡ್ರಾಯ್ಡ್ 5.0 ಅಥವಾ ನಂತರದ ಓಎಸ್‌ಗಳಲ್ಲಿ ಸಪೋರ್ಟ್ ಮಾಡುತ್ತದೆ.

* ಸ್ಕ್ರೀನ್ ಪಿನ್ ಅಥವಾ ಸ್ಕ್ರೀನ್ ಪಿನ್ನಿಂಗ್ ಹೆಸರಿನಿಂದ ಈ ಆಯ್ಕೆ ಇದೆ.
* ಫೋನ್‌ ಸೆಟ್ಟಿಂಗ್‌ಗಳಲ್ಲಿ ಈ ಆಯ್ಕೆ ಇದೆ. ಅದಕ್ಕಾಗಿ ಫೋನಿನ ಸೆಟ್ಟಿಂಗ್ಸ್ ನಲ್ಲಿ ಸೆಕ್ಯುರಿಟಿ ಮತ್ತು ಲಾಕ್ ಸ್ಕ್ರೀನ್ ಆಯ್ಕೆ ಸೆಲೆಕ್ಟ್ ಮಾಡಿ.
* ಸೆಕ್ಯುರಿಟಿ ಮತ್ತು ಲಾಕ್ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿದ ನಂತರ, ಪ್ರೈವಸಿಗೆ ಸಂಬಂಧಿಸಿದ ಹಲವು ಆಯ್ಕೆಗಳು ಇಲ್ಲಿ ಕಾಣಿಸುತ್ತವೆ. ನಂತರ ಕೆಳಭಾಗದಲ್ಲಿ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಕಾಣಿಸುತ್ತದೆ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಈ ಟಿಪ್ಸ್ ಬಳಸಿ; ಇತರರಿಂದ ಫೋನ್ ರಕ್ಷಿಸಿ!

* ನಂತರ ಸ್ಕ್ರೀನ್ ಪಿನ್ನಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿ ಹಾಗೂ ಆನ್ ಮಾಡಿ.
* ಫೋನ್‌ನಲ್ಲಿ ನೀವು ಪಿನ್ ಮಾಡಲು ಬಯಸುವ ಆಪ್ ಅನ್ನು ತೆರೆಯಿರಿ, ನಂತರ ಕ್ಲೋಸ್ ಮಾಡಿ.
* ತದ ನಂತರ ಇತ್ತೀಚಿನ ಆಪ್ಸ್ ಆಯ್ಕೆಗೆ ಹೋಗಿ ಮತ್ತು ಪಿನ್ ಮಾಡಲು ಬಯಸುವ ಆಪ್ ಮೇಲೆ ದೀರ್ಘವಾಗಿ ಒತ್ತಿರಿ. ಬಳಿಕ ಪಿನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
* ಪಿನ್ ಮಾಡಿದ ಆಪ್ ಹೊರತುಪಡಿಸಿ ಬೇರೆ ಯಾವುದೇ ಆಪ್‌ಗಳು ಫೋನ್‌ನಲ್ಲಿ ತೆರೆಯುವುದಿಲ್ಲ.
* ನಂತರ ಪಿನ್ ಆಯ್ಕೆಯನ್ನು ತೆಗೆದುಹಾಕಲು, ನೀವು ಹೋಮ್ ಮತ್ತು ಬ್ಯಾಕ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತಿ ಮತ್ತು ಲಾಕ್‌ಸ್ಕ್ರೀನ್ ಪಾಸ್‌ವರ್ಡ್ ಬಳಸಿ.

ನೋಟಿಫೀಕೆಶನ್‌ನಲ್ಲಿ ಮೆಸೆಜ್‌ಗಾಗಿ ಟ್ಯಾಬ್

ಪ್ರಸ್ತುತ ದಿನ ಗಳಲ್ಲಿ ಜನರು ತಮ್ಮ ಸಂಪರ್ಕಗಳೊಂದಿಗೆ ಸಂವಹನ ನಡೆಸಲು ಬಹು ಮೆಸೆಂಜರ್ ಅಪ್ಲಿಕೇಶನ್‌ಗಳ ಮೂಲಕ ನ್ಯಾವಿಗೇಟ್ ಮಾಡುತ್ತಾರೆ. ಆಂಡ್ರಾಯ್ಡ್ 11 ರಲ್ಲಿ, ಜನರಿಗೆ ಒಂದೇ ಸ್ಥಳದಲ್ಲಿ ಪ್ರತಿಕ್ರಿಯಿಸಲು ಸುಲಭವಾಗುವಂತೆ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿನ ಸಂಭಾಷಣೆಗಳನ್ನು ಅಧಿಸೂಚನೆಗಳ ವಿಭಾಗದಲ್ಲಿ ಮೀಸಲಾದ ಟ್ಯಾಬ್‌ಗೆ ಸರಿಸಲಾಗುತ್ತದೆ. ಬಳಕೆದಾರರು ಕೆಲವು ಜನರ ಸಂಭಾಷಣೆಗಳನ್ನು ಇತರರಿಗಿಂತ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಆದ್ದರಿಂದ ಪ್ರಮುಖ ಪಠ್ಯಗಳನ್ನು ತ್ವರಿತವಾಗಿ ಸ್ವೀಕರಿಸಲಾಗುತ್ತದೆ.

Best Mobiles in India

English summary
This Hidden Android Feature You May Forget To Use.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X