ಮಳೆಗಾಲದಲ್ಲಿ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಅಪಾಯ ಹೆಚ್ಚು.!

|

ಭಾರತೀಯ ಮಾರುಕಟ್ಟೆಗೆ ಚೀನಾ ಮೂಲದ ಅನೇಕ ಕಂಪನಿಗಳು ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದ್ದು, ಅವುಗಳಲ್ಲಿ ಕೇಲವು ಹೈ ಎಂಡ್‌ ಫೀಚರ್ಸ್‌ಗಳಿಂದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳೆಂದು ಗುರುತಿಸಿಕೊಳ್ಳುತ್ತವೆ. ಆದ್ರೆ ಸದ್ಯ ಶಿಯೋಮಿ, ಒಪ್ಪೊ, ವಿವೋ, ಆಸೂಸ್‌, ಮೊಟೊರೊಲಾ, ಹಾನರ್‌, ಸೇರಿದಂತೆ ಜನಪ್ರಿಯ ಗೂಗಲ್ ಮತ್ತು ಸ್ಯಾಮ್‌ಸಂಗ್‌ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗ ಭಾರಿ ಅಪಾಯದಲ್ಲಿವೆ ಎನ್ನಲಾಗಿದೆ.

ಮಳೆಗಾಲದಲ್ಲಿ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಅಪಾಯ ಹೆಚ್ಚು.!

ಹೌದು, ದೇಶದಲ್ಲಿಗ ಮಳೆಗಾಲ ಶುರುವಾಗಿದ್ದು, ಜನಪ್ರಿಯ ಶಿಯೋಮಿ, ಒಪ್ಪೊ, ವಿವೋ, ಆಸೂಸ್‌, ಮೊಟೊರೊಲಾ, ಹಾನರ್‌, ಗೂಗಲ್ ಮತ್ತು ಸ್ಯಾಮ್‌ಸಂಗ್‌ ಕಂಪನಿಗಳ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ವಾಟರ್‌ಪ್ರೂಫ್‌ (IP) ಸೌಲಭ್ಯವನ್ನು ಪಡೆದಿಲ್ಲ. ಹೀಗಾಗಿ ಈ ಸ್ಮಾರ್ಟ್‌ಫೋನ್‌ಗಳು ಮಳೆಯಿಂದಾಗಿ ಹಾಳಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.ಹೀಗಾಗಿ ಈ ಸ್ಮಾರ್ಟ್‌ಫೋನ್‌ಗಳು ಮಳೆಯಿಂದಾಗಿ ಹಾಳಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಒಂದು ವೇಳೆ ನೀವು ಈ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದರೇ ಸ್ವಲ್ಪ ಕಾಳಜಿ ವಹಿಸಿರಿ. ಹಾಗಾದರೇ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಅಪಾಯದಲ್ಲಿವೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಖಂಡಿತಾ ನಿಮಗೆ ಉಪಯುಕ್ತ! ಓದಿರಿ : ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಖಂಡಿತಾ ನಿಮಗೆ ಉಪಯುಕ್ತ!

ಶಿಯೋಮಿ ಸ್ಮಾರ್ಟ್‌ಫೋನ್ಸ್‌

ಶಿಯೋಮಿ ಸ್ಮಾರ್ಟ್‌ಫೋನ್ಸ್‌

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪನಿಯಾದ ಶಿಯೋಮಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಾದ ಶಿಯೋಮಿ ರೆಡ್ಮಿ ನೋಟ್‌ 7s, ಶಿಯೋಮಿ ರೆಡ್ಮಿ ನೋಟ್‌ 7 ಪ್ರೊ ಮತ್ತು ಶಿಯೋಮಿ ಪೊಕೊ ಎಫ್‌1, ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು, ಆದರೆ ವಾಟರ್‌ಪ್ರೂಫ್‌ ಸೌಲಭ್ಯದ ಆಯ್ಕೆಯನ್ನು ಹೊಂದಿಲ್ಲ. ಮಳೆಗಾಲದಲ್ಲಿ ಫೋನ್‌ ಕಾಳಜಿವಹಿಸಿರಿ.

ವಿವೋ ಮತ್ತು ಒಪ್ಪೊ

ವಿವೋ ಮತ್ತು ಒಪ್ಪೊ

ವಿವೋ ಮತ್ತು ಒಪ್ಪೊ ಸಹ ಚೀನಾ ಮೂಲದ ಕಂಪನಿಯಾಗಳಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿವೆ. ಈ ಕಂಪನಿಗಳ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಾದ 'ಒಪ್ಪೊ ರೆನೊ 10x ಝೂಮ್, ವಿವೋ ನೆಕ್ಸ್, ವಿವೋ ವಿ15 ಪ್ರೊ, ಒಪ್ಪೊ ಆರ್‌ 17 ಪ್ರೊ ಮತ್ತು ವಿವೋ ಎಕ್ಸ್‌21, ಸ್ಮಾರ್ಟ್‌ಫೋನ್‌ಗಳು ಸಹ ವಾಟರ್‌ಪ್ರೂಫ್ ಆಯ್ಕೆ ಹೊಂದಿಲ್ಲ.

ಓದಿರಿ : ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'! ಓದಿರಿ : ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!

ಆಸೂಸ್‌, ಮೊಟೊ ಮತ್ತು ಹಾನರ್

ಆಸೂಸ್‌, ಮೊಟೊ ಮತ್ತು ಹಾನರ್

ಜನಪ್ರಿಯ ಆಸೂಸ್‌, ಮೊಟೊ ಮತ್ತು ಹಾನರ್ ಕಂಪನಿಗಳ ಹಾನರ್‌ 20, ಹಾನರ್‌ ವ್ಯೂವ್ 20, ಆಸೂಸ್‌ ROG ಮತ್ತು ಮೊಟೊರೊಲಾದ ಒನ್‌ ವಿಷನ್ ಸ್ಮಾರ್ಟ್‌ಫೋನ್‌ಗಳು ಸಹ ವಾಟರ್‌ಪ್ರೂಫ್‌ ಸೌಲಭ್ಯದ ಪಡೆದುಕೊಂಡಿಲ್ಲ. ಹೀಗಾಗಿ ಈ ಸ್ಮಾರ್ಟ್‌ಫೋನ್ ಬಳಕೆದಾರರು ಮಳೆಗಾಲದಲ್ಲಿ ಫೋನ್‌ ಬಗ್ಗೆ ಗಮನವಹಿಸಿರಿ.

ಓದಿರಿ :ಭಾರತದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು! ಓದಿರಿ :ಭಾರತದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್‌

ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್‌

ಸ್ಯಾಮ್‌ಸಂಗ್‌ ಮತ್ತು ಒನ್‌ಪ್ಲಸ್‌ ಕಂಪನಿಯ ಕೇಲವು ಸ್ಮಾರ್ಟ್‌ಫೋನ್‌ಗಳು ವಾಟರ್‌ಪ್ರೂಫ್‌ ಸೌಲಭ್ಯ ಹೊಂದಿಲ್ಲ. ಆ ಲಿಸ್ಟಿಗೆ ಒನ್‌ಪ್ಲಸ್‌ 6T, ಒನ್‌ಪ್ಲಸ್‌ 7, ಸ್ಯಾಮ್‌ಸಂಗ್ ಎ30, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ9, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40 ಮತ್ತು ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ70 ಸ್ಮಾರ್ಟ್‌ಫೋನ್‌ಗಳು ಸೇರಿಕೊಳ್ಳುತ್ತವೆ.

ಗೂಗಲ್ ಮತ್ತು ರಿಯಲ್ ಮಿ

ಗೂಗಲ್ ಮತ್ತು ರಿಯಲ್ ಮಿ

ಟೆಕ್‌ ದೈತ್ಯ ಗೂಗಲ್‌ ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಾದ ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್‌ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳು ಸಹ ವಾಟರ್‌ಪ್ರೂಫ್‌ ಸೌಲಭ್ಯ ಹೊಂದಿಲ್ಲ. ಹಾಗೂ ಚೀನಾದ ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನ್‌ ಕೂಡಾ ವಾಟರ್‌ಪ್ರೂಫ್‌ ಸೌಲಭ್ಯ ಪಡೆದಿಲ್ಲ.

ಓದಿರಿ : ಬೆಲೆ ಇಳಿಕೆ ಕಂಡ 'ನೋಕಿಯಾ 6.1' ಸ್ಮಾರ್ಟ್‌ಫೋನ್‌! ಓದಿರಿ : ಬೆಲೆ ಇಳಿಕೆ ಕಂಡ 'ನೋಕಿಯಾ 6.1' ಸ್ಮಾರ್ಟ್‌ಫೋನ್‌!

Best Mobiles in India

English summary
popular smartphones from some of the top brands are not water-proof and may get damaged in rains. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X