ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ ಟೆನ್‌ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ.!

|

ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ನೂತನ ಫೀಚರ್ಸ್‌ ಇರುವ ಫೋನುಗಳನ್ನು ರಿಲೀಸ್‌ ಮಾಡುತ್ತಲೇ ಇರುತ್ತವೆ. ಆದರೆ ಎಲ್ಲ ಹೊಸ ಸ್ಮಾರ್ಟ್‌ಫೋನ್‌ಗಳು ಗ್ರಾಹಕನಿಗೆ ಆಕರ್ಷಿಸದೆ ಹೋಗಬಹುದು. ಬಜೆಟ್‌ ಬೆಲೆಯಲ್ಲಿನ ಅತ್ಯುತ್ತಮ ಸ್ಮಾರ್ಟ್‌ಫೋನಗಳು ಗ್ರಾಹಕರನ್ನು ಬಹುಬೇಗನೆ ಸೆಳೆಯುತ್ತವೆ, ಆದರೆ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ಇದ್ದಾರೆ.

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ ಟೆನ್‌ ಸ್ಮಾರ್ಟ್‌ಫೋನ್‌ಗಳು!

ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ಕೇವಲ ಅಗ್ಗದ ಬೆಲೆಯನಷ್ಟೆ ಗಮನಿಸುವುದಿಲ್ಲ ಬದಲಾಗಿ ಸ್ಮಾರ್ಟ್‌ಫೋನ್‌ ಬ್ಯ್ರಾಂಡ್‌, ಫೋನಿನ ಗುಣಮಟ್ಟ, ಸೇರಿದಂತೆ ಯಾವ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಗಮನಿಸಿಯೇ ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗುತ್ತಾರೆ. ಪೈಪೋಟಿ ನಡುವೆ ಗ್ರಾಹಕರ ಗಮನ ಸೆಳೆಯುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮುಂಚುತ್ತದೆ.

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ ಟೆನ್‌ ಸ್ಮಾರ್ಟ್‌ಫೋನ್‌ಗಳು!

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಡಿಮ್ಯಾಂಡ ಏರಿಳಿತವಾಗುತ್ತಿರುತ್ತವೆ. ಸದ್ಯ ಈ ವಾರದ ವದರಿಯಂತೆ ಸ್ಯಾಮ್‌ಸಂಗ್, ಹುವಾಯಿ ಕಂಪನಿಗಳ ಸ್ಮಾರ್ಟ್‌ಫೋನ್‌ಗಳೊಂದಿಗೆ ಚೀನಾ ಮೂಲದ ಶಿಯೋಮಿ ಕಂಪನಿಗಳು ರೆಡ್ಮಿ ನೋಟ್‌ ಸರಣಿ ಟ್ರೆಂಡಿಂಗ್‌ನಲ್ಲಿವೆ. ಹಾಗಾದರೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ80

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ80

1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಸೂಪರ್‌ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಈಗಾಗಲೇ ಟ್ರೆಂಡ್‌ ಹುಟ್ಟುಹಾಕಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ಇರಲಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸಾಮರ್ಥ್ಯವನ್ನು ಹೊಂದಿರಲಿದೆ. 25w ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರಲಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.47 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಮೂರು ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮೆರಾ 25 ಮೆಗಾಪಿಕ್ಸಲ್‌ ಆಗಿವೆ. Exynos 9610 ಚಿಪ್‌ಸೆಟ್‌ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹುವಾಯಿ ಪಿ30 ಪ್ರೋ

ಹುವಾಯಿ ಪಿ30 ಪ್ರೋ

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ OLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಅಲ್ಯುಮಿನಿಯಮ್‌ನಿಂದ ಫ್ರೇಮ್‌ನ ರಚನೆಯನ್ನು ಹೊಂದಿದೆ. ಆಕ್ಟಾಕೋರ್‌ ಹಿಸಿಲಿಕಾನ್ ಕಿರಿನ್ 980 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದೆ. ಇದರೊಂದಿಗೆ 32ಎಂಪಿ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ70

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ70

1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಸೂಪರ್‌ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಕ್ವಾಲ್ಕಮ್ SDM675 ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸೆರ್‌ ಅನ್ನು ಒಳಗೊಂಡಿರಲಿದೆ. ಇದರೊಂದಿಗೆ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಇರಲಿದ್ದು, ಮುಖ್ಯ ಕ್ಯಾಮೆರಾ 32ಎಂಪಿ ಸಾಮರ್ಥ್ಯವನ್ನು ಹೊಂದಿರಲಿದೆ. 4500 ಸಾಮರ್ಥ್ಯದ ಬ್ಯಾಟರಿ ಇರಲಿದೆ.

ಶಿಯೋಮಿ ರೆಡ್ಮಿ ನೋಟ್‌7 ಪ್ರೋ

ಶಿಯೋಮಿ ರೆಡ್ಮಿ ನೋಟ್‌7 ಪ್ರೋ

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಸ್ನ್ಯಾಪ್‌ಡ್ರಾಗನ್‌ 675 ಪ್ರೊಸೆಸರ್‌ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಡ್ಯುಯಲ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 13 ಮೆಗಾಪಿಕ್ಸಲ್‌ ಸಾಮರ್ಥ್ಯದಲ್ಲಿವೆ.

ಶಿಯೋಮಿ ರೆಡ್ಮಿ ನೋಟ್‌7

ಶಿಯೋಮಿ ರೆಡ್ಮಿ ನೋಟ್‌7

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಸ್ನ್ಯಾಪ್‌ಡ್ರಾಗನ್‌ 660 ಪ್ರೊಸೆಸರ್‌ ಜೊತೆಗೆ, 4/6GB RAM 64GB ಸ್ಟೋರೆಜ್‌ ಮತ್ತು 3/32GB ಸಾಮರ್ಥ್ಯದ ಆಯ್ಕೆಗಳಲ್ಲಿ ದೊರೆಯಲಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಡ್ಯುಯಲ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 12 ಮೆಗಾಪಿಕ್ಸಲ್‌ ಸಾಮರ್ಥ್ಯದಲ್ಲಿವೆ.

ಹುವಾಯಿ ಪಿ30 ಲೈಟ್‌

ಹುವಾಯಿ ಪಿ30 ಲೈಟ್‌

1080 x 2312 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.15 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು,ಆಕ್ಟಾಕೋರ್‌ Exynos 9610 ಪ್ರೊಸೆಸರ್‌ ಅನ್ನು ಹೊಂದಿದೆ. ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದ್ದು, ಮುಖ್ಯ ರೇರ್‌ ಕ್ಯಾಮೆರಾವು 25ಎಂಪಿ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾಗೂ ಸಹ 25ಎಂಪಿ ಸಾಮರ್ಥ್ಯ ಒದಗಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ30

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ30

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್‌ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸಲ್ ಮತ್ತು 16 ಮೆಗಾಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಇದೆ. Exynos 7904 ಚಿಪ್‌ಸೆಟ್‌ ಜೊತೆಗೆ, 4/64 ಮತ್ತು 6/128 GB ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ದೊರೆಯಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್‌

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್‌

6.4 ಇಂಚಿನ ಡೈನಾಮಿಕ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1440 x 3040 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇ ಮತ್ತು ಫೋನ್‌ ಬಾಹ್ಯ ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ನೀಡಿದ್ದು, ಅವು 12+12+16 ಮೆಗಪಿಕ್ಸಲ್‌ ಸಾಮರ್ಥ್ಯದಲ್ಲಿವೆ ಹಾಗೂ ಸೆಲ್ಫಿಗಾಗಿ 10+8 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಎರಡು ಕ್ಯಾಮೆರಾ ಒದಗಿಸಲಾಗಿದೆ. Exynos 9820 ಸಾಮರ್ಥ್ಯದ ಚಿಪ್‌ಸೆಟ್‌ ನೊಂದಿಗೆ 12 GB RAM/1 TB ಮತ್ತು 8 GB RAM/128/512 GB ಸಾಮರ್ಥ್ಯದಲ್ಲಿ ಸ್ಟೋರೆಜ್‌ ಆಯ್ಕೆ ದೊರೆಯಲಿದ್ದು, 4100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ40

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ40

1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.9 ಇಂಚಿನ ಸೂಪರ್‌ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇ ಮತ್ತು ಬಾಡಿಯ ನಡುವಿನ ಅನುಪಾತ 19.5:9 ಆಗಿದೆ. ಹಿಂಬದಿ ಡ್ಯುಯಲ್ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸಲ್ ಮತ್ತು ಸೆಲ್ಫಿ ಕ್ಯಾಮೆರಾ 25 ಮೆಗಾಪಿಕ್ಸಲ್‌ ಸಾಮರ್ಥ್ಯ ಹೊಂದಿವೆ. Exynos 7885 ಚಿಪ್‌ಸೆಟ್‌ ಜೊತೆಗೆ 6GB RAM/64 GB ಸ್ಟೋರೆಜ್ ಸಾಮರ್ಥ್ಯದಲ್ಲಿ ದೊರೆಯಲಿದ್ದು, 3100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಓದಿರಿ : ಇಲ್ಲಿವೇ ನೋಡಿ ಗ್ರಾಹಕರನ್ನು ಸೆಳೆಯುತ್ತಿರುವ ಟಾಪ್ 'ಸ್ಯಾಮ್‌ಸಂಗ್' ಸ್ಮಾರ್ಟ್‌ಫೋನ್‌ಗಳು! ಓದಿರಿ : ಇಲ್ಲಿವೇ ನೋಡಿ ಗ್ರಾಹಕರನ್ನು ಸೆಳೆಯುತ್ತಿರುವ ಟಾಪ್ 'ಸ್ಯಾಮ್‌ಸಂಗ್' ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
Top 10 trending phones of week 15.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X