ಭರ್ಜರಿ ಸೌಂಡ್‌ ಮಾಡುತ್ತಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳಿವು.!!

|

ಪ್ರಸ್ತುತ ಮೊಬೈಲ್ ತಯಾರಿಕೆಯು ತೀವ್ರ ಪೈಪೋಟಿಯಲ್ಲಿ ಸಾಗುತ್ತಿದ್ದು, ಅತೀ ನೂತನವಾದ ಫೀಚರ್ಸ್‌ಗಳನ್ನು ಪರಿಚಯಿಸಲು ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ದುಂಬಾಲು ಬಿದ್ದಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೊಸ ಹೊಸ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಇದ್ದು, ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು ಫುಲ್ ಕನ್‌ಫ್ಯೂಸ್‌ ಆಗಿರದೇ ಇರಲಾರರು.!

ಭರ್ಜರಿ ಸೌಂಡ್‌ ಮಾಡುತ್ತಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳಿವು.!!

ಹೌದು, ಬಾರ್ಸಿಲೋನಾದಲ್ಲಿ ಇತ್ತೀಚಿಗಷ್ಟೆ ಮುಕ್ತಾಯವಾದ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್' 2019 ಮೇಳದಲ್ಲಿ ಸಧ್ಯದಲ್ಲಿಯೇ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳ ಪ್ರದರ್ಶನವನ್ನು ಮಾಡಲಾಗಿದ್ದು, ಒಂದಕ್ಕಿಂತ ಒಂದು ಅದ್ಭುತ್ ಫೀಚರ್ಸ್‌ಗಳಿಂದ ಗಮನಸೆಳೆದಿವೆ. ಭವಿಷ್ಯದಲ್ಲಿ ಗ್ರಾಹಕರು ಊಹಿಸಲಾರದಂತಹ ಫೀಚರ್ಸ್‌ಗಳನ್ನು ಸ್ಮಾರ್ಟ್‌ಫೋನ್‌ ಹೊತ್ತು ತರುವುದರಲ್ಲಿ ಅಚ್ಚರಿಯಿಲ್ಲ.

ಈ ವರ್ಷದ ಅಂತ್ಯದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಫೋಲ್ಡೆಬಲ್ ಫೋನ್‌ಗಳು ಮಾರುಕಟ್ಟೆಗೆ ಬರಲಿದ್ದು, ಗ್ರಾಹಕರಲ್ಲಿ ಮತ್ತುಷ್ಟು ನಿರೀಕ್ಷೆಗಳನ್ನು ಮೂಡಿಸುತ್ತಿವೆ. ಇಂದಿನ ಲೇಖನದಲ್ಲಿ ಸಧ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸೌಂಡ್ ಮಾಡಿರುವ ಹತ್ತು ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಲಾಗಿದೆ. ಹಾಗಾದರೇ ಆ ಹತ್ತು ಸ್ಮಾರ್ಟ್‌ಫೋನ್‌ಗಳು ಯಾವವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10+'

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10+'

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಇತ್ತೀಚಿಗೆ ಹೊಸ ಸ್ಮಾರ್ಟ್‌ಫೋನ್‌ಗಳ ದೊಡ್ಡ ಸರಣಿಯನ್ನು ಪರಿಚಯಿಸಿದ್ದು, ಅದರಲ್ಲಿ 'ಗ್ಯಾಲ್ಯಾಕ್ಸಿ ಎಸ್‌10+' ಸ್ಮಾರ್ಟ್‌ಪೋನ್ ಸಖತ್ ಗಮನಸೆಳೆದಿದೆ. 6.4 ಇಂಚಿನ ಡಿಸ್‌ಪ್ಲೇ, SDM855 ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್, ಹಾಗೂ 12/8GB RAM ಇದೆ. ಹಿಂಬದಿ 12MP+12MP+16MP ಸಾಮರ್ಥ್ಯದ ಮೂರು ಕ್ಯಾಮೆರಾ ಮತ್ತು 10MP ಸೆಲ್ಫಿ ಕ್ಯಾಮೆರಾ ಫೀಚರ್ಸ್‌ಗಳಿಂದ ಆಕರ್ಷಿಸಿದೆ.

ಶಿಯೋಮಿ 'ರೆಡ್ಮಿ ನೋಟ್ 7 ಪ್ರೋ'

ಶಿಯೋಮಿ 'ರೆಡ್ಮಿ ನೋಟ್ 7 ಪ್ರೋ'

ಗ್ರಾಹಕರನ್ನು ಸತಾಯಿಸಿ ಅಂತೂ ಬಿಡುಗಡೆ ಆಗಿರುವ 'ರೆಡ್ಮಿ ನೋಟ್‌ 7 ಪ್ರೋ' ಸ್ಮಾರ್ಟ್‌ಫೋನ್ 48MP ಕ್ಯಾಮೆರಾ ಫೀಚರ್‌ನಿಂದ ಮಾರುಕಟ್ಟೆಯಲ್ಲಿ ಫುಲ್ ಹೈಲೈಟ್‌ ಆಗಿತ್ತು. ಅದರೊಂದಿಗೆ 6.3 ಇಂಚಿನ ಡಿಸ್‌ಪ್ಲೇ, SDM675 ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್, 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಜೊತೆಗೆ 4000mAh ಬ್ಯಾಟರಿಯನ್ನು ಒಳಗೊಂಡಿದ್ದು, ಗ್ರಾಹಕರಲ್ಲಿ ಕ್ರೇಜ್ ಮೂಡಿಸಿತ್ತು.

ಶಿಯೋಮಿ 'ರೆಡ್ಮಿ ನೋಟ್ 7'

ಶಿಯೋಮಿ 'ರೆಡ್ಮಿ ನೋಟ್ 7'

'ರೆಡ್ಮಿ ನೋಟ್ 7 ಪ್ರೋ' ಫೋನಿನ ಜತೆಗೆ ಲಾಂಚ್ ಆಗಿರುವ ರೆಡ್ಮಿ ನೋಟ್ 7 ಸ್ಮಾರ್ಟ್‌ಪೋನ್ ಸಹ 6.3 ಇಂಚಿನ ಡಿಸ್‌ಪ್ಲೇ ಮತ್ತು SDM675 ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಅನ್ನು ಹೊಂದಿದೆ. ಇದರೊಂದಿಗೆ 3GB RAM+32GB ಸಂಗ್ರಹ ಸಾಮರ್ಥ್ಯ ಹಾಗೂ 6/4GB RAM ಮತ್ತು 64GB ಸಂಗ್ರಹ ಸಾಮರ್ಥ್ಯದ ಆಯ್ಕೆಗಳಲ್ಲಿ ದೊರೆಯಲಿದೆ. 4000mAh ಸಾಮರ್ಥ್ಯದ ಬ್ಯಾಟರಿ ಇದರ ಪ್ಲಸ್‌ ಪಾಯಿಂಟ್ ಆಗಿದೆ.

ವೀವೊ iQOO

ವೀವೊ iQOO

ವಿಭಿನ್ನ ಹೆಸರಿನಿಂದ ಭಾರೀ ಕೂತುಹಲ ಮೂಡಿಸಿದ್ದ ವೀವೊ ಕಂಪನಿಯ ಈ ಸ್ಮಾರ್ಟ್‌ಫೋನ್ ಗೇಮಿಂಗ್ ಫೋನ್‌ ಆಗಿದ್ದು, 6.41 ಇಂಚಿನ ಡಿಸ್‌ಪ್ಲೇ ಜೊತೆಗೆ 256 GB ಸಂಗ್ರಹ ಸಾಮರ್ಥ್ಯ ಹೊಂದಿದ್ದು, 8/12 GB RAM ಆಯ್ಕೆಗಳಲ್ಲಿ ದೊರೆಯಲಿದೆ. SDM855 ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಪ್ರೊಸೆಸರ್ ಗೇಮಿಂಗ್ ಆಟಗಳಿಗೆ ಬೆಂಬಲ ನೀಡಲಿದೆ. ಇದರೊಂದಿಗೆ 4000mAh ಬ್ಯಾಟರಿಯನ್ನು ಒದಗಿಸಲಾಗಿದೆ.

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10'

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10'

ಸ್ಯಾಮ್‌ಸಂಗ್ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ 'ಗ್ಯಾಲ್ಯಾಕ್ಸಿ ಎಸ್‌10' ಸ್ಮಾರ್ಟ್‌ಪೋನ್ ಸಹ ಒಂದು. 6.1 ಇಂಚಿನ ಡಿಸ್‌ಪ್ಲೇ, SDM855 ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ನೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ಹಿಂಬದಿ 12MP+12MP+16MP ಮೂರು ಕ್ಯಾಮೆರಾ ಮತ್ತು ಸೆಲ್ಫಿಗಾಗಿ 10MP ಕ್ಯಾಮೆರಾ ನೀಡಿದ್ದು, 15W ನ ಫಾಸ್ಟ್‌ ಚಾರ್ಜರ್ ಒದಗಿಸಲಾಗಿದೆ.

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ20'

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ20'

1080 x 2340 ಪಿಕ್ಸಲ್ ರೆಸಲ್ಯೂಶನ್ 6.3 ಇಂಚಿನ ಡಿಸ್‌ಪ್ಲೇ ಇದ್ದು, ಆಕ್ಟಾ ಕೋರ್‌ Exynos 7904 ಚಿಪ್‌ಸೆಟ್ಟ್ ಪ್ರೊಸೆಸರ್‌ ಇದೆ. 4 GB RAM ಮತ್ತು 64 GB ಅಥವಾ 3 GB RAM ಮತ್ತು 32 GB ಸಂಗ್ರಹದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುವ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ನೀಡಿರುವುದು ವಿಶೇಷ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಇದೆ.

ಹುವಾಯಿ 'ಮೇಟ್ ಎಕ್ಸ್'

ಹುವಾಯಿ 'ಮೇಟ್ ಎಕ್ಸ್'

ಹುವಾಯಿ ಕಂಪನಿಯ ಮೊದಲ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಕೀರ್ತಿಗೆ ಪಾತ್ರವಾಗಿರುವ 'ಮೇಟ್‌ ಎಕ್ಸ್‌' ಫೋನ್ ಪೂರ್ಣ ತೆರೆದಾಗ 8 ಇಂಚಿನಲ್ಲಿ ಕಾಣಿಸಿಕೊಳ್ಳಲಿದ್ದು, AMOLED ಡಿಸ್‌ಪ್ಲೇ ಹೊಂದಿದೆ. 8 GB RAM ನೊಂದಿಗೆ 512 GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಹಿಸಿಲಿಕಾನ್ ಕಿರಿನ್ 980 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ ಪೈ 9.0ನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ30'

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ30'

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್ 6.4 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 7904 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.4 GB/6 GB RAM ಮತ್ತು 64 GB/128 GB ಸಂಗ್ರಹ ಸಾಮರ್ಥ್ಯದ ಆಯ್ಕೆಗಳಲ್ಲಿ ದೊರೆಯಲಿದೆ. ಇದರ ಆಕರ್ಷಣೆಯೆಂದರೇ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವುದು.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ 'ಫೋಲ್ಡ್‌'

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ 'ಫೋಲ್ಡ್‌'

ಸ್ಯಾಮ್‌ಸಂಗ್ ಕಂಪನಿಯ ಮೊದಲ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಇದಾಗಿದ್ದು, ತೆರೆದಾಗ 7.3 ಇಂಚಿನ ಸ್ಕ್ರೀನಿನಲ್ಲಿ ಕಾಣಿಸಲಿದ್ದು, ಡೈನಾಮಿಕ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. SDM855 ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಪ್ರೊಸೆಸರ್ ಒಳಗೊಂಡಿದ್ದು, 12 GB RAM ಮತ್ತು 512 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. 4380 mAh ಬ್ಯಾಟರಿ, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ.

ಸೋನಿ 'ಎಕ್ಸ್‌ಪಿರಿಯಾ 1'

ಸೋನಿ 'ಎಕ್ಸ್‌ಪಿರಿಯಾ 1'

ಸೋನಿ ಮತ್ತೆ ಎಕ್ಸ್‌ಪಿರಿಯಾ ಸರಣಿಯನ್ನು ಮುಂದುವರೆಸಿದ್ದು, ಹೊಸ 'ಎಕ್ಸ್‌ಪಿರಿಯಾ 1' ಕಂಪನಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದ್ದು, 6.5 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿರಲಿದೆ. SDM855 ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಪ್ರೊಸೆಸರ್ ಅನ್ನು ಹೊಂದಿರುವ ಜೊತೆಗೆ ವಾಟರ್‌ಪ್ರೂಫ್‌ ಮತ್ತು ದೂಳು ಮುಕ್ತವಾದ ರಚನೆಯನ್ನು ಸಹ ಹೊಂದಿದೆ. ಬ್ಯಾಟರಿ 3330 mAh ಸಾಮರ್ಥ್ಯದಲ್ಲಿರಲಿದೆ.

Best Mobiles in India

English summary
After skipping a week as we were busy roaming around the MWC grounds in Barcelona, the top 10 trending chart is back.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X