2016ರ ಟಾಪ್ 4G ಡೇಟಾ ಪ್ಲಾನ್ ಮತ್ತು ಕಾಲಿಂಗ್ ಪ್ಲಾನ್ ಗಳು..!

|

2016ರಲ್ಲಿ ಟೆಲಿಕಾಮ್ ಭಾರೀ ಸದ್ದು ಮಾಡಿದೆ. ಈ ವರ್ಷದ ಮಧ್ಯಂತರದಲ್ಲಿ ಸಖತ್ ಸುದ್ದಿ ಮಾಡಿದ್ದು 4G ನೆಟ್‌ವರ್ಕ್. ಅದರಲ್ಲಿಯೂ ರಿಲಯನ್ಸ್ ಮಾಲೀಕತ್ವದ ಜಿಯೋ ಪರಿಚಯಿಸಿದ ಮೇಲೆ ಮಾರುಕಟ್ಟೆಯಲ್ಲಿ 4G ಸ್ಮಾರ್ಟ್‌ಪೋನ್‌ಗಳ ಭರಾಟೆಯೂ ಅಧಿಕವಾಗಿದ್ದು, ವಿವಿಧ ಟೆಲಿಕಾಮ್ ಆಪರೇಟರ್ ಗಳು ದರ ಸಮರಕ್ಕೆ ಇಳಿದ್ದು ಗ್ರಾಹಕರಿಗೆ ವರವಾಗಿ ಪರಿಣಮಿಸಿತ್ತು.

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ Asus ZenFone 3 Max ಪೋನಿನ ಇತಿ-ಮಿತಿ

ತನ್ನ ಆರಂಭಿಕ ಕೊಡುಗೆಯಾಗಿ ಜಿಯೋ ಉಚಿತ 4G ಡೇಟಾವನ್ನು ಉಚಿತವಾಗಿ ಅದೂ ಯಾವುದೇ ಇತಿ-ಮಿತಿ ಇಲ್ಲದೇ ನೀಡಿದ್ದು, ಜೊತೆಗೆ ಉಚಿತ ಕರೆಯ ಕೊಡುಗೆಯನ್ನು ತ್ವರೆ ಮಾಡಿದ್ದು ಇತರ ಕಂಪನಿಗಳ ಕಣ್ಣು ಕೆಂಪಾಗುವಂತೆ ಮಾಡಿದ್ದು ಸುಳ್ಳಲ್ಲ. ಹಾಗಾಗಿ ವಿವಿಧ ಕಂಪನಿಗಳು ಈ ವರ್ಷ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದು, ಅವುಗಳು ಯಾವುವು ಅಂದ್ರಾ ಇಲ್ಲಿದೇ ನೋಡಿ ಸಂಪೂರ್ಣ ವಿವರ.

ರಿಲಯನ್ಸ್ ಜಿಯೋ ಕೊಡುಗೆಗಳು

ರಿಲಯನ್ಸ್ ಜಿಯೋ ಕೊಡುಗೆಗಳು

ಸೆಪ್ಟೆಂಬರ್ 1 ರಂದು ಲಾಂಚ್ ಆದ ಜಿಯೋ, ಭಾರತೀಯ ಟೆಲಿಕಾಮ್ ಇತಿಹಾಸದಲ್ಲೇ ಹೊಸದೊಂದು ಅಧ್ಯಾಯವನ್ನು ಆರಂಭಿಸಿತು. 3G ಇಂಟರ್ನೆಟ್ ಬೆಲೆಗೆ ಕಣ್ಣು-ಕಣ್ಣು ಬಿಡುತ್ತಿದ್ದ ಭಾರತೀಯರಿಗೆ ಮೂರು ತಿಂಗಳ ಉಚಿತ ಡೇಟಾ-ಕರೆ ಗಳನ್ನು ನೀಡಿತು. ಅಲ್ಲದೇ 10 ಪ್ಲಾನ್ ಗಳನ್ನು ಪರಿಚಯಿಸಿತು. ಮಾಸಿಕ ರೂ. 150 ರಿಂದ ಹಿಡಿದು 5,000 ರೂ ವರೆಗಿನ ಪ್ಲಾನ್ ಘೋಷಿಸಿತು. ಅಲ್ಲದೇ 50 ರೂ.ಗಳಿಗೆ 1GB 4G ಇಂಟರ್ನೆಟ್ ಸಹ ನೀಡಲು ಮುಂದಾಯಿತು. ಅಲ್ಲದೇ ಸದ್ಯ 2017ರ ಮಾರ್ಚ್ ವೆರೆಗೂ ಉಚಿತ ಸೇವೆಯನ್ನು ಮುಂದುವರೆಸಿತು ಸಹ. ಇದರೊಂದಿಗೆ 1000 ರೂಗಳಿಗೆ VoLTE ಸಪೋರ್ಟ್ ಮಾಡುವ ಸ್ಮಾರ್ಟ್ ಪೋನ್ ಗಳನ್ನು ಪರಿಚಯಿಸಿತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್ ಟೆಲ್ 4G ಪ್ಲಾನ್

ಏರ್ ಟೆಲ್ 4G ಪ್ಲಾನ್

ಜಿಯೋ ನೀಡಿದ ಕೊಡುಗೆಯಿಂದಾಗಿ ಬೇರೆ ಎಲ್ಲಾ ಕಂಪನಿಗಳ ಗ್ರಾಹಕರು ಇತ್ತ ಕಡೆಯೇ ಆಕರ್ಷಿತರಾಗಿದ್ದ ಕಾರಣ, ತಮ್ಮ ಗ್ರಾಹಕರನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ವಿವಿಧ ಆಫರ್ ಗಳನ್ನು ನೀಡಲು ಮುಂದಾದವರಲ್ಲಿ ಏರ್ ಟೆಲ್ ಮೂಚುಣಿಯಲ್ಲಿದೆ. 1,495 ರೂ ಗಳಿಗೆ 90 ದಿನಗಳ ಕಾಲ ಉಚಿತ 4G ಡೇಟಾ ಬಳಸುವ ಆಫರ್ ನೀಡಿತು.

ಬಿಎಸ್ಎನ್ಎಲ್ ಕೊಡುಗೆಗಳು

ಬಿಎಸ್ಎನ್ಎಲ್ ಕೊಡುಗೆಗಳು

ಜಿಯೋ ಉಚಿತ ಸೇವೆಯನ್ನು ನೀಡಿದ ಬೆನ್ನ ಹಿಂದೆಯೇ ಬಿಎಸ್ಎನ್ಎಲ್ ಸಹ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನು ನೀಡಲು ಮುಂದಾಯಿತು. BB 249 ಎಂಬ ಹೊಸ ಪ್ಲಾನ್ ನಲ್ಲಿ ಹೊಸ ಗ್ರಾಹಕರು ಮಾಸಿಕ 249 ರೂ ಗಳಂತೆ ಆರು ತಿಂಗಳ ಇತಿ-ಮಿತಿ ಇಲ್ಲದೇ ಇಂಟರ್ನೆಟ್ ಸೇವೆಯನ್ನು ನೀಡಿತು. ಇದರಲ್ಲಿ ಮೊದಲ 2GB ಡೇಟಾ 2Mbps ವೇಗದಲ್ಲಿ ಕಾರ್ಯ ನಿರ್ವಹಿಸಿದರೆ ಅದರ ನಂತೆ 1 Mbps ವೇಗದ ಭರವಸೆಯನ್ನು ನೀಡಿತ್ತು. ಹಳೆ ಗ್ರಾಹಕರು ಈ ಕೊಡುಗೆ ಪಡೆಯಲು 449 ರೂ ನೀಡಬೇಕಿತ್ತು.

ವೊಡಪೋನ್ ರೋಮಿಂಗ್ ಫ್ರೀ ಕೊಡುಗೆ

ವೊಡಪೋನ್ ರೋಮಿಂಗ್ ಫ್ರೀ ಕೊಡುಗೆ

ಜಿಯೋ ದೇಶಾದ್ಯಂತ ಉಚಿತ ರೋಮಿಂಗ್ ನೀಡಿದ ಕಾರಣಕ್ಕಾಗಿ ವೊಡಫೋನ್ ಸಹ ಒಳಬರುವ ಕರೆಗಳಿಗೆ ಉಚಿತ ರೋಮಿಂಗ್ ಕೊಡುಗೆಯನ್ನು ತನ್ನ ಗ್ರಾಹಕರಿಗೆ ನೀಡಿತು. ಅಲ್ಲದೇ ವಾಯ್ಸ್ ಕಾಲಿಂಗ್ ಗಾಗಿಯೂ ಹೊಸ ಹೊಸ ಕೊಡುಗೆಯನ್ನು ನೀಡಿತ್ತು, ರೂ 144 ಮತ್ತು ರೂ. 349ಗಳಿಗೆ ಅನ್ ಲಿಮಿಟೆಡ್ ಕರೆ ಮಾಡುವ ಸೌಲಭ್ಯವನ್ನು ನೀಡಿತು.

ಐಡಿಯಾ ಅನ್ ಲಿಮಿಟೆಡ್ ಉಚಿತ ಕರೆಗಳ ಪ್ಲಾನ್

ಐಡಿಯಾ ಅನ್ ಲಿಮಿಟೆಡ್ ಉಚಿತ ಕರೆಗಳ ಪ್ಲಾನ್

ಮಾರುಕಟ್ಟೆಯಲ್ಲಿ ತನ್ನ ಗ್ರಾಹಕನ್ನು ಉಳಿಸಿಕೊಳ್ಳಲು ಐಡಿಯಾ ಸಹ ಉಚಿತ ಕೊಡುಗೆಗಳನ್ನು ಘೊಷಿಸಿದ್ದು, 28 ದಿನಗಳಿಗೆ ರೂ. 698 ಪಾವತಿಸಿ ಲೊಕಲ್ ಮತ್ತು ಎಸ್‌ಟಿಡಿ ಕರೆಗಳನ್ನು ಯಾವುದೇ ಮಿತಿ ಇಲ್ಲದೇ ಮಾಡುವ ಅವಕಾಶವನ್ನು ನೀಡಿತು. ಅಲ್ಲದೇ 297 ರೂಗಳಿಗೆ 1GB ಡೇಟಾ ಮತ್ತು 400 ನಿಮಿಷಗಳ ಉಚಿತ ಕರೆಗಳನ್ನು ನೀಡಿತು. ಅಲ್ಲದೇ 497 ರೂಗಳಿಗೆ 2GB 4G ಡೇಟಾ ಮತ್ತು 800 ನಿಮಿಷಗಳ ಉಚಿತ ಕರೆಯ ಕೊಡುಗೆಯನ್ನು ನೀಡಿತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The VoLTE based technology instantly triggered a war in the Indian telecom space and forced other telcos to introduce their share of voice and data offers to counterfeit Jio plans.to Konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X