ಗ್ರಾಹಕರ ಕೂತುಹಲ ಹೆಚ್ಚಿಸಿರುವ ಈ 5 ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲಿಯೇ ಲಾಂಚ್‌ ಆಗಲಿವೆ.!!

|

ಭಾರತೀಯ ಮೊಬೈಲ್ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿಕೊಡುತ್ತಲೇ ಇವೆ. ಆದರೆ ಅವುಗಳಲ್ಲಿ ಕೆಲವು ಭಾರೀ ಸದ್ದು ಮಾಡಿ ಗ್ರಾಹಕರಲ್ಲಿ ನಿರೀಕ್ಷೆಯ ಕೂತುಹಲ ಹೆಚ್ಚಿಸುತ್ತಲೆ ಇದ್ದು, ಯಾವಾಗ ಲಾಂಚ್‌ ಆಗಲಿವೆ ಎಂದು ಕಾಯುತ್ತಿದ್ದಾರೆ. ಅಂಥಹ ಗ್ರಾಹಕರಿಗೆ ಸಿಹಿಸುದ್ದಿಯೊಂದು ಬಂದಿದ್ದು, ಅದೆನೆಂದರೇ ಗ್ರಾಹಕರು ಎದುರು ನೋಡುತ್ತಿರುವ ಬಹುನಿರೀಕ್ಷಿತ ಐದು ಸ್ಮಾರ್ಟ್‌ಫೋನ್‌ಗಳು ಅತೀ ಶೀಘ್ರದಲ್ಲಿ ಮಾರುಕಟ್ಟೆ ಪ್ರವೇಶಿಸುವುದು ಕನ್‌ಫರ್ಮ್!

ಗ್ರಾಹಕರ ಕೂತುಹಲ ಹೆಚ್ಚಿಸಿರುವ ಈ 5 ಫೋನ್‌ಗಳು ಶೀಘ್ರದಲ್ಲಿಯೇ ಲಾಂಚ್‌ ಆಗಲಿವೆ.!!

ಭಾರತೀಯ ಮಾರುಕಟ್ಟೆಯನ್ನು ಆಳುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳು ದೇಶಿಯ ಗ್ರಾಹಕರ ಮನಸ್ಥಿತಿಯನ್ನು ಅರಿತಿದ್ದು, ಅವರ ಅಭಿರುಚಿಗೆ ತಕ್ಕನಾದ ಮತ್ತು ಅದರೊಂದಿಗೆ ಹೊಸತನದ ಅತ್ಯುತ್ತಮ ಫೀಚರ್ಸ್‌ಗಳನ್ನು ಸಹ ಅಳವಡಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರ ನಿರೀಕ್ಷೆಯ ಮಟ್ಟ ಏರುತ್ತಲೆ ಇದ್ದು, ಈಗಾಗಲೇ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ಗ್ರಾಹಕರ ನಿದ್ದೆಗೆಡಿಸಿವೆ. ಹಾಗಾದರೇ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸ್ಮಾರ್ಟ್‌ಫೋನ್‌ಗಳು ಯಾವವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಶಿಯೋಮಿ ನೋಟ್ 7

ಶಿಯೋಮಿ ನೋಟ್ 7

ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿ ಇದಾಗಿದ್ದು, ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದೆ. ಈ ಕಂಪನಿಯು ಇತ್ತೀಚಿಗೆ ರೆಡ್ಮಿ ನೋಟ್ 7 ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಲೆ ಇದೆ. ಗ್ರಾಹಕರ ನಿದ್ದೆಗೆ ಭಂಗ ತಂದಿರುವ ಈ ಸ್ಮಾರ್ಟ್‌ಫೋನ್ ಈ ತಿಂಗಳ ಅಂತ್ಯದೊಳಗೆ ಪಕ್ಕಾ ರಿಲೀಸ್. 48 ಮೆಗಾಪಿಕ್ಸಲ್ ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆಯ ಫೀಚರ್ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30

ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ಆಗಿರುವ ಸ್ಯಾಮ್‌ಸಂಗ್, ಭಾರತೀಯ ಮಾರುಕಟ್ಟೆಯಲ್ಲಿ ಇವತ್ತಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ಕಂಪನಿಯು ಸಹ M ಸರಣಿಯಲ್ಲಿ ಈಗಾಗಲೇ M10 M20 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ಮೆಚ್ಚುಗೆ ಗಳಸಿದ್ದು, ಆದರೆ ಮತ್ತೆ M30 ಸ್ಮಾರ್ಟ್‌ಫೋನ್‌ ಒಂದನ್ನು ರಿಲೀಸ್ ಮಾಡುವುದಾಗಿ ತಿಳಿಸಿ ನಿರೀಕ್ಷೆಗಳನ್ನು ಮೂಡಿಸಿದೆ. ಅತೀ ಶೀಘ್ರದಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಗ್ಯಾರಂಟಿ.!

ಒಪ್ಪೊ ಎಫ್‌11 ಪ್ರೋ

ಒಪ್ಪೊ ಎಫ್‌11 ಪ್ರೋ

ಸೆಲ್ಫಿ ಎಕ್ಸ್‌ಪರ್ಟ್ ಎಂದೇ ಹೆಸರುಗಳಿಸಿರುವ ಒಪ್ಪೊ ಕಂಪನಿಯು ಮಾರುಕಟ್ಟೆಯಲ್ಲಿ ಹೊಸ 'ಎಫ್‌11 ಪ್ರೋ' ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡುವುದಾಗಿ ಹೇಳಿ ಸುದ್ದಿ ಮಾಡಿತ್ತು. 48ಮೆಗಾಪಿಕ್ಸಲ್ ಕ್ಯಾಮೆರಾ ಸೇರಿದಂತೆ ಅತೀ ನೂತನ ಫೀಚರ್ಸ್‌ಗಳನ್ನು ಅಳವಡಿಸಿರುವುದಾಗಿ ತಿಳಿಸಿ ಗ್ರಾಹಕರನ್ನು ತನ್ನತ ಸೆಳೆದಿರುವ ಒಪ್ಪೊ ತನ್ನ ಹೊಸ ಸ್ಮಾರ್ಟ್‌ಫೋನ್ ಎಫ್ 11 ಫ್ರೋ ಅನ್ನು ಶೀಘ್ರದಲ್ಲಿಯೇ ಪರಿಚಯಿಸಲಿದೆ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ M50

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ M50

ಸ್ಯಾಮ್‌ಸಂಗ್ ಕಂಪನಿ ಒಂದು ಸರಣಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತ ಬಂದಿದೆ. ಇದೀಗ M ಸರಣಿ ಜನಪ್ರಿಯವಿದ್ದು, ಈ ಸರಣಿಯಲ್ಲಿ M10 ಮತ್ತು M20 ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಗ್ರಾಹಕರಿಗೆ M30 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ನಿರೀಕ್ಷೆಗಳನ್ನು ಮೂಡಿಸಿದ್ದ ಕಂಪನಿ ಇದೀಗ ಮತ್ತೆ M ಸರಣಿಯಲ್ಲಿಯೇ ಇನ್ನೊಂದು ಹೊಸ 'ಗ್ಯಾಲ್ಯಾಕ್ಸಿ M50' ಹೆಸರಿನ ಸ್ಮಾರ್ಟ್‌ಫೋನ್ ಬಿಡುವ ಬಗ್ಗೆ ತಿಳಿಸಿ ಗ್ರಾಹಕರಿಗೆ ಶಾಕ್ ನೀಡಿದೆ.

ರಿಯಲ್ ಮಿ 3

ರಿಯಲ್ ಮಿ 3

ರಿಯಲ್ ಮಿ ಸ್ಮಾರ್ಟ್‌ಫೋನ್ ಕಂಪನಿಯ ರಿಯಲ್ ಮಿ 2 ಪ್ರೋ ಹೆಚ್ಚು ಜನಪ್ರಿಯ ಗಳಿಸಿದ್ದು, ಅದೇ ಅಂಶದೊಂದಿಗೆ ಕಂಪನಿ ಈಗ ರಿಯಲ್ ಮಿ 3 ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುವ ಆಲೋಚನೆಯನ್ನು ಹೊರಹಾಕಿದೆ. ಈ ಸ್ಮಾರ್ಟ್‌ಫೋನ್ ಸಹ 48 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಹೊಂದಿರುವುದು ಗ್ರಾಹಕರಲ್ಲಿ ಭಾರೀ ಕುತೂಹಲ ಉಂಟುಮಾಡಿದೆ. ಈ ಸ್ಮಾರ್ಟ್‌ಫೋನ್ ಆದಷ್ಟು ಬೇಗ ಮಾರುಕಟ್ಟೆಗೆ ಲಾಂಚ್‌ ಆಗಲಿದೆ.

Best Mobiles in India

English summary
Xiaomi Redmi Note 7, Samsung Galaxy M30, Samsung Galaxy M50, Realme 3, Oppo R11 Pro smartphones are expected to launch in India soon.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X