ಹೋನರ್ 8 ಮತ್ತು ಐಫೋನ್ 7 ಗಿರುವ ವ್ಯತ್ಯಾಸಗಳನ್ನು ಅರಿತುಕೊಳ್ಳಿ

By Shwetha
|

ಡ್ಯುಯಲ್ ಲೆನ್ಸ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಈಗ ಅತ್ಯಾಧುನಿಕ ಹುವಾವೆ ಹೋನರ್ 8 ಸೇರ್ಪಡೆಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಡಿವೈಸ್ ರೂ 29,999 ಕ್ಕೆ ಲಭ್ಯವಿದ್ದು ಈ ಫ್ಲ್ಯಾಗ್‌ಶಿಪ್ ಹ್ಯಾಂಡ್‌ಸೆಟ್ ಅನ್ನು ನಿಮಗೆ ಅರ್ಧ ಬೆಲೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಗಿಂತ ಹುವಾವೆ ಪಿ9 ಹೇಗೆ ಅತ್ಯುತ್ತಮ?

ಇಂದಿನ ಲೇಖನದಲ್ಲಿ ಹೋನರ್ 8 ಮತ್ತು ಐಫೋನ್ 7 ಗಿರುವ ವ್ಯತ್ಯಾಸಗಳನ್ನು ನಾವು ಅರಿತುಕೊಳ್ಳಬಹುದಾಗಿದ್ದು ಐಫೋನ್ 7 ನಲ್ಲಿ ನೀವು ಮಾಡದೇ ಕಾರ್ಯಗಳನ್ನು ಹೋನರ್ 8 ನಲ್ಲಿ ಮಾಡಬಹುದಾಗಿದೆ.

ಓದಿರಿ: ಹುವಾವೆ ಪಿ9 ನ ಕ್ಯಾಮೆರಾ ವಿಶೇಷತೆಗೆ ಮನಸೋಲದವರೇ ಇಲ್ಲ!

ಉತ್ತಮ ಮಲ್ಟಿಮೀಡಿಯಾ ವೀಕ್ಷಣಾ ಅನುಭವ

ಉತ್ತಮ ಮಲ್ಟಿಮೀಡಿಯಾ ವೀಕ್ಷಣಾ ಅನುಭವ

ಹೋನರ್ 8 ಡಿಸ್‌ಪ್ಲೇಯಲ್ಲಿ ಬಹು ವರ್ಣರಂಜಿತ ಎಂದೆನಿಸಿದ್ದು ಐಫೋನ್ 7 ಡಿಸ್‌ಪ್ಲೇಗೆ ಹೋಲಿಸಿದಾಗ ಇದು ಮಂಕಾಗಿ ಕಾಣುತ್ತದೆ. ಹೋನರ್ 8, 5.2 ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು 1080x1920 ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ. ಐಫೋನ್ 7, 4.7 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 1,334x720 ಪಿಕ್ಸೆಲ್‌ಗಳನ್ನು 326ಪಿಪಿಐ ನಲ್ಲಿ ಪಡೆದಿದೆ. ಸಂದೇಶ, ಚಿತ್ರಗಳು, ವೀಡಿಯೊಗಳು ಮತ್ತು ಗೇಮ್ಸ್ ಇನ್ನಷ್ಟು ಆಕರ್ಷಕವಾಗಿ ಇದರಲ್ಲಿ ಕಾಣುತ್ತಿದ್ದು ಐಫೋನ್ 7 ಗಿಂತ ಕ್ಲಾರಿಟಿಯಲ್ಲಿ ಎತ್ತಿದ ಕೈ ಎಂದೆನಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಡಿಮೆ ಬೆಳಕಿನಲ್ಲೂ ಗಾಢವಾದ ಚಿತ್ರಗಳು

ಕಡಿಮೆ ಬೆಳಕಿನಲ್ಲೂ ಗಾಢವಾದ ಚಿತ್ರಗಳು

ಹೋನರ್ 8 ಆರು ಲೆನ್ಸ್‌ಗಳನ್ನು ಪಡೆದುಕೊಂಡಿದ್ದು, ವೈಡ್ ಆಂಗಲ್ ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ಪಡೆದುಕೊಂಡಿದೆ. ಫೋನ್ ಹಿಂಭಾಗದಲ್ಲಿ 12 ಎಮ್‌ಪಿ ಸೋನಿ ಸೆನ್ಸಾರ್ ಅನ್ನು ಹೊಂದಿದ್ದು ವೃತ್ತಿಪರ ಆರ್‌ಜಿಬಿ ಸೆನ್ಸಾರ್ ಬಣ್ಣದ ಮಾಹಿತಿಯನ್ನು ಸೆರೆಹಿಡಿಯುತ್ತದೆ. ಎರಡನೆ ಕ್ಯಾಮೆರಾ ಮೊನೊಕ್ರೋಮ್ ಸೆನ್ಸಾರ್ ಅನ್ನು ಪಡೆದುಕೊಂಡಿದ್ದು ಇದು ಗಾಢತೆಯನ್ನು ಅಳೆಯುತ್ತದೆ. ನೀವು ಶಾಟ್ ತೆಗೆದೊಡನೆ ಹೋನರ್ 8 ನ ಸಾಫ್ಟ್‌ವೇರ್ ಎರಡು ಚಿತ್ರಗಳನ್ನು ಸಿಂಗಲ್ ಚಿತ್ರದಂತೆ ಮಾಡುತ್ತದೆ ಇದರಿಂದ ಕಡಿಮೆ ಬೆಳಕಿನಲ್ಲೂ ನಿಮಗೆ ಉತ್ತಮ ಚಿತ್ರಗಳು ದೊರೆಯುತ್ತದೆ. ಐಫೋನ್ 7 12 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು 1.8 ಅಪಾರ್ಚರ್ ಇದರಲ್ಲಿದೆ.

3.5 ಎಮ್‌ಎಮ್ ಹೆಡ್‌ಫೋನ್ ಜಾಕ್‌ನಲ್ಲಿ ಮ್ಯೂಸಿಕ್ ಪ್ಲೇ ಮಾಡಿ

3.5 ಎಮ್‌ಎಮ್ ಹೆಡ್‌ಫೋನ್ ಜಾಕ್‌ನಲ್ಲಿ ಮ್ಯೂಸಿಕ್ ಪ್ಲೇ ಮಾಡಿ

ನಮ್ಮ ಜೀವನವನ್ನು ಇನ್ನಷ್ಟು ಸರಳಗೊಳಿಸಲು ಸ್ಮಾರ್ಟ್‌ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದಲೇ ಹೋನರ್ 8, 3.5 ಎಮ್‌ಎಮ್ ಹೆಡ್‌ಫೋನ್ ಜಾಕ್ ಅನ್ನು ಪಡೆದುಕೊಂಡಿದ್ದು, ಆಪಲ್ ಐಫೋನ್ 7 ನಲ್ಲಿ ನಿಮಗೆ ಇದನ್ನು ಕಾಣಲು ಸಾಧ್ಯವಿಲ್ಲ.ಹೋನರ್ 8 ನೊಂದಿಗೆ ನೀವು ಹೆಚ್ಚುವರಿ ಬ್ಲ್ಯೂಟೂತ್ ಅನ್ನು ಖರೀದಿಸುವ ಅಗತ್ಯವಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇಗವಾದ ಆಟೊಫೋಕಸ್

ವೇಗವಾದ ಆಟೊಫೋಕಸ್

ಹೋನರ್ 8 ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು 'ಲೇಸರ್ ಆಟೊಫೋಕಸ್' ತಂತ್ರಜ್ಞಾನ ಇದರಲ್ಲಿದೆ. ಇದು ಅತ್ಯುತ್ತಮ ಕ್ಷಣಗಳನ್ನು ನಿಮಗೆ ಮಿಸ್ ಮಾಡಲು ಅನುಮತಿಸುವುದೇ ಇಲ್ಲ. ಚಿತ್ರವನ್ನು ಕೊಂಚ ಕೂಡ ಸಮಯ ವೇಸ್ಟ್ ಮಾಡದೇ ತೆಗೆಯಲು ನಿಮಗೆ ಇದು ಅನುಮತಿಸುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ

ಫಿಂಗರ್ ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ

ಐಫೋನ್ 7 ನಂತೆಯೇ, ಹೋನರ್ 8 ಸ್ಮಾರ್ಟ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಪಡೆದುಕೊಂಡಿದ್ದು ಇದ ಪ್ರೊಗ್ರಾಮೇಬಲ್ ಶಾರ್ಟ್ ಕಟ್ ಬಟನ್ ಅನ್ನು ಹೊಂದಿದ್ದು, ಹೆಚ್ಚಿನ ಫಂಕ್ಶನ್‌ಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹ್ಯಾಂಡ್‌ಸೆಟ್ ಅನ್‌ಲಾಕ್ ಮಾಡಲು ಚಿತ್ರಗಳನ್ನು ಕ್ಲಿಕ್ ಮಾಡಲು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.

ಡ್ಯುಯಲ್ ಸಿಮ್ ಸಂಪರ್ಕ

ಡ್ಯುಯಲ್ ಸಿಮ್ ಸಂಪರ್ಕ

ಹೈಬ್ರೀಟ್ ಸಿಮ್ ಕಾರ್ಡ್ ಸ್ಲಾಟ್‌ನೊಂದಿಗೆ ಹೋನರ್ 8 ಬಂದಿದ್ದು ಒಂದೇ ಸಮಯದಲ್ಲಿ ಎರಡು ಸಿಮ್ ಕಾರ್ಡ್‌ಗಳನ್ನು ನೀವು ಎರಡು ಫೋನ್‌ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವ ತಲೆ ನೋವು ಇರುವುದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಂಗರ್ ಪ್ರಿಂಟ್ ಸೆನ್ಸಾರ್ ಮೂಲಕ ಗ್ಯಾಲರಿ ಬ್ರೌಸ್ ಮಾಡಿ

ಫಿಂಗರ್ ಪ್ರಿಂಟ್ ಸೆನ್ಸಾರ್ ಮೂಲಕ ಗ್ಯಾಲರಿ ಬ್ರೌಸ್ ಮಾಡಿ

ನಿಮ್ಮ ಗ್ಯಾಲರಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಬಳಸಿಕೊಂಡು ಇಮೇಜ್‌ಗಳನ್ನು ಬ್ರೌಸ್ ಮಾಡುವುದು ಎಷ್ಟು ಉತ್ತಮವಾದುದು ಅಲ್ಲವೇ? ಫಿಂಗರ್ ಪ್ರಿಂಟ್ ಸೆನ್ಸಾರ್‌ನಲ್ಲಿ ಡಿಸ್‌ಪ್ಲೇಯನ್ನು ಸ್ಪರ್ಶಿಸದೆಯೇ ನಿಮಗೆ ಚಿತ್ರಗಳನ್ನು ಬ್ರೌಸ್ ಮಾಡಬಹುದಾಗಿದೆ.

ವಿಸ್ತರಿಸಬಹುದಾದ ಮೆಮೊರಿ ಬೆಂಬಲ

ವಿಸ್ತರಿಸಬಹುದಾದ ಮೆಮೊರಿ ಬೆಂಬಲ

ಸೀಮಿತ ಸ್ಟೋರೇಜ್ ಎಂದರೆ ಯಾರಿಗಾದರೂ ತಲೆನೋವನ್ನು ಉಂಟುಮಾಡುವುದು ಖಂಡಿತ. ಹೋನರ್ 8 ಇದೆ ಎಂದಾದಲ್ಲಿ ಮೆಮೊರಿ ಭರ್ತಿಯಾಗುತ್ತದೆ ಎಂಬ ಸಂದೇಹ ಬೇಡ. 32 ಜಿಬಿಯನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲ್ಟಿ ಟಾಸ್ಕಿಂಗ್

ಮಲ್ಟಿ ಟಾಸ್ಕಿಂಗ್

4ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು, ಹಿನ್ನಲೆಯಲ್ಲಿ 30 ಅಪ್ಲಿಕೇಶನ್‌ಗಳನ್ನು ಒಮ್ಮೆಲೇ ನಿಮಗೆ ಚಾಲನೆ ಮಾಡಬಹುದಾಗಿದೆ. ಆಪಲ್ ಐಫೋನ್ 7 2ಜಿಬಿ RAM ಅನ್ನು ಪಡೆದುಕೊಂಡಿದೆ.

ವೀಡಿಯೊ ಶೂಟಿಂಗ್ ಅತ್ಯುತ್ತಮ

ವೀಡಿಯೊ ಶೂಟಿಂಗ್ ಅತ್ಯುತ್ತಮ

ಈ ಡಿವೈಸ್‌ನಲ್ಲಿ ವೀಡಿಯೊ ಶೂಟಿಂಗ್ ಅನ್ನು ಅದ್ಭುತವಾಗಿ ಮಾಡಬಹುದಾಗಿದೆ. ಹೋನರ್ 8 ಡ್ಯುಯಲ್ ಲೆನ್ಸ್ ಕ್ಯಾಮೆರಾ ಫೀಚರ್ ಅನ್ನು ಪಡೆದುಕೊಂಡಿದ್ದು 'ಪ್ರೊ ವೀಡಿಯೊ ಮೋಡ್' ನಿಮಗೆ ಪೂರ್ಣ ಮ್ಯಾನುವಲ್ ಕಂಟ್ರೋಲ್ ಅನ್ನು ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's a breakdown of what Honor 8 can do that the iPhone 7 can't.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X