ಹೆಚ್ಚು ಮಾರಾಟವಾಗುತ್ತಿರುವ ಟಾಪ್ 12 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು

Written By:

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಳೆದ ಒಂದು ವರ್ಷದಿಂದ ಸಾಕಷ್ಟು ಬದಲಾವಣೆಯನ್ನು ನಾವು ಕಂಡುಕೊಳ್ಳಬಹುದಾಗಿದೆ. ಚೀನಾ ಸ್ಮಾರ್ಟ್‌ಫೋನ್ ತಯಾರಕರು ಜಾಗತಿಕ ಮಾರುಕಟ್ಟೆಯನ್ನು ತಮ್ಮ ಮುಷ್ಟಿಯಲ್ಲಿ ತೆಗೆದುಕೊಂಡಿದ್ದು 12 ಸ್ಥಾನಗಳನ್ನು ತಮ್ಮದಾಗಿಸಿಕೊಂಡು ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನಾಳುತ್ತಿವೆ.

ಓದಿರಿ: ನೋಕಿಯಾ 1100; ಬ್ಯಾಕ್‌ ಟು ಸೇಲ್‌

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಮುಖ ಫೋನ್ ಮಾರಾಟಗಾರರು ಎಂದೆನಿಸಿರುವ ಸ್ಯಾಮ್‌ಸಂಗ್ ಮತ್ತು ಆಪಲ್ ಜೊತೆಗೆ ಈಗ ಹನ್ನೆರಡು ಸ್ಥಾನಗಳನ್ನು ಹಂಚಿಕೊಂಡು ಸೋನಿ, ಮೈಕ್ರೋಸಾಫ್ಟ್ ಮತ್ತು ಕೂಲ್ ಪ್ಯಾಡ್ ಕಂಪೆನಿಗಳು ಹಣಾಹಣಿಯನ್ನು ನೀಡುತ್ತಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ 12 ಸ್ಥಾನಗಳನ್ನು ಹಂಚಿಕೊಂಡಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ವಿವರಗಳನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಥಮ ಸ್ಥಾನ ಸ್ಯಾಮ್‌ಸಂಗ್

#1

ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದ್ದು ವರ್ಷದ ಕೊನೆಯಲ್ಲಿ 320 ಮಿಲಿಯನ್ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವ ಇರಾದೆಯನ್ನು ಪಡೆದುಕೊಂಡಿದೆ.
ಎಲ್ಲಾ ಸ್ಯಾಮ್‌ಸಂಗ್ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡನೇ ಸ್ಥಾನ ಆಪಲ್

#2

ಐಫೋನ್ 6 ಪ್ಲಸ್ ಎರಡನೇ ಸ್ಥಾನದಲ್ಲಿದ್ದು ಮಾರುಕಟ್ಟೆಯನ್ನಾಳುತ್ತಿದೆ. ಅಮೇರಿಕನ್ ಇಂಟರ್‌ನ್ಯಾಶನಲ್ ತಂತ್ರಜ್ಞಾನ ಕಂಪೆನಿಯಾಗಿರುವ ಇದು ಕ್ಯಾಲಿಫೋರ್ನಿಯಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ.
ಎಲ್ಲಾ ಆಪಲ್ ಐಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೂರನೇ ಸ್ಥಾನದಲ್ಲಿ ಹುವಾವೆ

#3

ಹುವಾವೆ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಚೀನಾದ ಮಲ್ಟಿನ್ಯಾಶನಲ್ ಕಂಪೆನಿ ಎಂದೆನಿಸಿದ್ದು ಶೆನ್‌ಜೆನ್‌ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ.
ಎಲ್ಲಾ ಹುವಾವೆ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಲ್ಕನೇ ಸ್ಥಾನದಲ್ಲಿ ಒಪ್ಪೊ

#4

ಒಪ್ಪೊ ಇಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಚೀನಾದ ಇಲೆಕ್ಟ್ರಾನಿಕ್ ಮ್ಯಾನುಫೇಕ್ಚರರ್ ಆಧಾರಿತ ಕಂಪೆನಿಯಾಗಿದ್ದು ಇದು ಹೆಚ್ಚು ಸ್ಮಾರ್ಟ್‌ಫೋನ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುತ್ತಿದೆ.
ಎಲ್ಲಾ ಒಪ್ಪೊ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐದನೇ ಸ್ಥಾನದಲ್ಲಿ ಶ್ಯೋಮಿ

#5

ಖಾಸಗಿಯಾಗಿ ಚೀನಾ ಹೊಂದಿರುವ ಕಂಪೆನಿಯಾಗಿರುವ ಶ್ಯೋಮಿ ತನ್ನ ಮುಖ್ಯ ಕಚೇರಿಯನ್ನು ಬೀಜಿಂಗ್‌ನಲ್ಲಿ ಪಡೆದುಕೊಂಡಿದೆ. ಐದನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಕಂಪೆನಿ ಎಂದೆನಿಸಿರುವ ಶ್ಯೋಮಿ 70.8 ಮಿಲಿಯನ್ ಯೂನಿಟ್‌ಗಳನ್ನು ಮಾರಾಟ ಮಾಡಿದೆ.
ಎಲ್ಲಾ ಶ್ಯೋಮಿ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರನೇ ಸ್ಥಾನದಲ್ಲಿ ವಿವೊ

#6

ವಿವೊ ಮೊಬೈಲ್ ಚೈನೀಸ್ ಇಂಟರ್ನ್ಯಾಶನಲ್ ಕಂಪೆನಿಯಾಗಿದ್ದು, ಫೋನ್ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಯನ್ನು ಮಾಡುತ್ತಿದೆ. 2009 ರಲ್ಲಿ ಇದು ಸ್ಥಾಪನೆಯಾಗಿದ್ದು ಬಿಬಿಕೆ ಇಲೆಕ್ಟ್ರಾನಿಕ್ಸ್‌ನ ಉಪ ಬ್ರ್ಯಾಂಡ್ ಎಂದೆನಿಸಿದೆ.
ಎಲ್ಲಾ ವಿವೊ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏಳನೇ ಸ್ಥಾನದಲ್ಲಿ ಎಲ್‌ಜಿ

#7

ಇಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್, ಕೆಮಿಕಲ್ಸ್ ಮತ್ತು ಟೆಲಿಕಾಮ್ ಉತ್ಪನ್ನಗಳನ್ನು ಈ ಸಂಸ್ಥೆಯು ತಯಾರಿಸುತ್ತಿದ್ದು 80 ದೇಶಗಳಲ್ಲಿ ತನ್ನ ಸಂಸ್ಥೆಗಳನ್ನು ಈ ಕಂಪೆನಿಯು ಹೊಂದಿದೆ.
ಎಲ್ಲಾ ಎಲ್‌ಜಿ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಂಟನೇ ಸ್ಥಾನದಲ್ಲಿ ZTE

#8

ಚೀನಾದ ಮಲ್ಟಿನ್ಯಾಶನಲ್ ಟೆಲಿಕಮ್ಯುನಿಕೇಶನ್ ಸಂಸ್ಥೆಯಾಗಿರುವ ZTE ಶೇನ್‌ಜೆನ್‌ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ.
ಎಲ್ಲಾ ZTE ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂಭತ್ತನೇ ಸ್ಥಾನದಲ್ಲಿ ಲಿನೊವೊ

#9

2016 ರ ಮೊದಲ ತ್ರೈಮಾಸಿಕದಲ್ಲಿ ಒಂಭತ್ತನೇ ಸ್ಥಾನಕ್ಕೆ ಕುಸಿದ ಲಿನೊವೊ ಕಂಪೆನಿ 10.9 ಬಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ.
ಎಲ್ಲಾ ಲಿನೊವೊ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹತ್ತನೇ ಸ್ಥಾನದಲ್ಲಿ ಅಲಾಕ್ಟೆಲ್

#10

ಟಿಸಿಎಲ್/ಅಲಾಕ್ಟೆಲ್ ಚೀನಾದ ಮಲ್ಟಿ ನ್ಯಾಶನಲ್ ಕಂಪೆನಿಯಾಗಿದ್ದು ಹುಯಿಜುನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ. ವಿಶ್ವದ 25 ನೇ ಅತಿದೊಡ್ಡ ಗ್ರಾಹಕ ಇಲೆಕ್ಟ್ರಾನಿಕ್ ಉತ್ಪಾದಕನಾಗಿ ಈ ಕಂಪೆನಿ ಹೆಸರು ಮಾಡಿದೆ.
ಎಲ್ಲಾ ಅಲಾಕ್ಟೆಲ್ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನ್ನೊಂದನೇ ಸ್ಥಾನದಲ್ಲಿ ಮೀಜು

#11

ಚೀನಾದ ಕನ್ಸ್ಯೂಮರ್ ಇಲೆಕ್ಟ್ರಾನಿಕ್ ಕಂಪೆನಿಯಾಗಿರುವ ಮೀಜು ಜುಹಾಯ್‌ನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. 2003 ರಲ್ಲಿ ಸ್ಥಾಪನೆಯಾದ ಈ ಕಂಪೆನಿ ಎಮ್‌ಪಿ 3 ಮತ್ತು ಎಮ್‌ಪಿ 4 ಪ್ಲೇಯರ್‌ಗಳ ತಯಾರಿಕೆಯನ್ನು ಮಾಡುತ್ತದೆ.
ಎಲ್ಲಾ ಮೀಜು ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನ್ನೆರಡನೇ ಸ್ಥಾನದಲ್ಲಿ ಮೈಕ್ರೋಮ್ಯಾಕ್ಸ್

#12

ಭಾರತೀಯ ಗ್ರಾಹಕ ಕಂಪೆನಿಯಾಗಿರುವ ಮೈಕ್ರೋಮ್ಯಾಕ್ಸ್ ಹರ್ಯಾಣ ಗುರ್‌ಗಾಂವ್‌ನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. ಐಟಿ ಸಾಫ್ಟ್‌ವೇರ್ ಕಂಪೆನಿಯಾಗಿ ಇದು ಸ್ಥಾಪನೆಯಾಗಿದ್ದು ನಂತರವಷ್ಟೇ ಮೊಬೈಲ್ ಹ್ಯಾಂಡ್‌ಸೆಟ್ ವ್ಯವಹಾರಕ್ಕೆ ಇಳಿದಿದೆ.
ಎಲ್ಲಾ ಮೈಕ್ರೋಮ್ಯಾಕ್ಸ್ ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Below, you will get to know the top 12 smartphone brands across the globe and their positions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot