ಇಂಟರ್ನೆಟ್ ಬಳಕೆದಾರ ಪಡೆಯಬಹುದು 1 ವರ್ಷ ವ್ಯಾಲಿಡಿಟಿಯ ಡಾಟಾ ಪ್ಯಾಕ್‌

By Suneel
|

ಟೆಲಿಕಾಂ ನಿಯಂತ್ರಕ ಟ್ರಾಯ್‌ ಮೊಬೈಲ್‌ ಡಾಟಾ ಪ್ಯಾಕ್‌ಗಳ ವ್ಯಾಲಿಡಿಟಿ ಅವಧಿಯನ್ನು 90 ದಿನಗಳಿಂದ 365 ದಿನಗಳವರೆಗೆ ವ್ಯಾಲಿಡಿಟಿ ಹೊಂದಲು ಅನುಮತಿ ನೀಡಿದೆ. ಇಂಟರ್ನೆಟ್‌ ಬಳಕೆದಾರರನ್ನು ಹೆಚ್ಚಿಸುವ ಮತ್ತು ಆಕರ್ಷಿಸುವ ಮೂಲ ಆಶಯದೊಂದಿಗೆ ಮೊಬೈಲ್ ಡಾಟಾ ಪ್ಯಾಕ್‌ಗಳನ್ನು ಒಂದು ವರ್ಷದ ಅವಧಿವರೆಗೆ ವ್ಯಾಲಿಡಿಟಿ ನೀಡಲು ಟೆಲಿಕಾಂಗಳಿಗೆ ಅನುಮತಿ ನೀಡಿದೆ. ನೀವು ಇಂಟರ್ನೆಟ್‌ ಬಳಕೆದಾರರೇ ಆಗಿದ್ದಲ್ಲಿ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

Read:ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಮತ್ತು ಆಕ್ಟಿವೇಟ್ ಹೇಗೆ?

ಟ್ರಾಯ್‌

ಟ್ರಾಯ್‌

" ಕೇವಲ ವಿಶೇಷ ಟ್ಯಾರಿಫ್‌ ವೋಚರ್ಸ್‌ ಮತ್ತು ಡಾಟಾ ಪ್ಯಾಕ್‌ ಬೆನಿಫಿಟ್ಸ್‌ಗಳಿಗೆ ಸಂಬಂಧಿಸಿದ ವ್ಯಾಲಿಡಿಟಿಯನ್ನು ದೀರ್ಘ ಸಮಯಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಟ್ರಾಯ್‌ ಸ್ವೀಕರಿಸಿದ್ದು, ಈ ಬೆನಿಫಿಟ್‌ಗಳು ಕನಿಷ್ಠ ವೈರ್‌ಲೆಸ್‌ ಇಂಟರ್ನೆಟ್‌ ಗ್ರಾಹಕರನ್ನು ಆಕರ್ಷಿಸಲು ಅನುಕೂಲವಾಗಲಿದೆ. ಇವರುಗಳು ಕಡಿಮೆ ಬೆಲೆಯ ಡಾಟಾ ಪ್ಯಾಕ್‌ ಪಡೆದು ದೀರ್ಘಕಾಲ ಉಪಯೋಗಿಸಲು ಇಚ್ಛಿಸುತ್ತಾರೆ" ಎಂದು ಟ್ರಾಯ್‌ ಹೇಳಿದೆ.

ಟೆಲಿಕಾಂ ಕಂಪನಿಗಳು

ಟೆಲಿಕಾಂ ಕಂಪನಿಗಳು

ಪ್ರಸ್ತುತದಲ್ಲಿ ಟೆಲಿಕಾಂ ಕಂಪನಿಗಳು ಗರಿಷ್ಠ 90 ದಿನಗಳ ವ್ಯಾಲಿಡಿಟಿಯ ರಿಚಾರ್ಜ್‌ ವೋಚರ್‌ಗಳನ್ನು ಗ್ರಾಹಕರಿಗೆ ನೀಡಬಹುದು. ಆದರೆ ಗ್ರಾಹಕ ಖರೀದಿಸಿದ ಮೊಬೈಲ್‌ ಇಂಟರ್ನೆಟ್ ಡಾಟಾವನ್ನು ನಿಗದಿಪಡಿಸಿದ ಅವಧಿಯೊಳಗೆ ಬಳಸದಿದ್ದಲ್ಲಿ ಬಳಸದ ಡಾಟಾ ಕೊನೆಗೊಳ್ಳುತ್ತದೆ.

ಪ್ರಸ್ತುತ ನಿಯಂತ್ರಣಾತ್ಮಕ ವ್ಯವಸ್ಥೆ

ಪ್ರಸ್ತುತ ನಿಯಂತ್ರಣಾತ್ಮಕ ವ್ಯವಸ್ಥೆ

ಟ್ರಾಯ್‌ನ ಪ್ರಸ್ತುತ ನಿಯಂತ್ರಣಾತ್ಮಕ ಟೆಲಿಕಾಂ ವ್ಯವಸ್ಥೆಯಡಿ "ಟೆಲಿಕಾಂ ಸೇವೆ ಒದಗಿಸುವವರು ವಿಶೇಷ ಟ್ಯಾರಿಫ್‌ ವೋಚರ್‌ ಮಾದರಿಯಲ್ಲಿ ಡಾಟಾ ಸೇವೆ ನೀಡಬಹುದು ಅಥವಾ ಪ್ರತ್ಯೇಕವಾಗಿ ಇತರೆ ಟ್ಯಾರಿಫ್‌ ಐಟೆಂಗಳೊಂದಿಗೆ ಗರಿಷ್ಠ 90 ದಿನಗಳ ಅನುಮತಿಯ ವ್ಯಾಲಿಡಿಟಿ ನೀಡಬಹುದು" ಎಂದಿದೆ.

10ನೇ ತಿದ್ದುಪಡಿ

10ನೇ ತಿದ್ದುಪಡಿ

"ಟೆಲಿಕಾಂ ಗ್ರಾಹಕರ ರಕ್ಷಣಾ ನಿಯಮಗಳ" 10ನೇ ತಿದ್ದುಪಡಿ ಪ್ರಕಾರ 'ಗರಿಷ್ಠ 365 ದಿನಗಳ ವಿಶೇಷ ಟ್ಯಾರಿಫ್‌ ವೋಚರ್ ಡಾಟಾ' ವ್ಯಾಲಿಡಿಟಿ ನೀಡಬಹುದು ಎಂದು ಟ್ರಾಯ್‌ ಹೇಳಿದೆ.

ವ್ಯಾಲಿಡಿಟಿ

ವ್ಯಾಲಿಡಿಟಿ

ಇನ್ನುಮುಂದೆ ಟೆಲಿಕಾಂಗಳು ಮೊಬೈಲ್‌ ಇಂಟರ್ನೆಟ್‌ ಗ್ರಾಹಕರಿಗೆ ಯಾವುದೇ ವಿಶೇಷ ಡಾಟಾ ಆಫರ್‌ಗಳನ್ನು 90 ದಿನಗಳ ಗರಿಷ್ಠ ವ್ಯಾಲಿಡಿಟಿ ಬದಲಾಗಿ ಒಂದು ವರ್ಷದ ಅವಧಿವರೆಗೆ ವ್ಯಾಲಿಡಿಟಿ ನೀಡಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಸಿಮ್ ಕಾರ್ಡ್ ರಿಚಾರ್ಜ್ ಮಾಡುವಾಗ ಈ 6 ತಪ್ಪುಗಳನ್ನು ಮಾಡಬೇಡಿಸಿಮ್ ಕಾರ್ಡ್ ರಿಚಾರ್ಜ್ ಮಾಡುವಾಗ ಈ 6 ತಪ್ಪುಗಳನ್ನು ಮಾಡಬೇಡಿ

ವ್ಯಕ್ತಿ ಟಚ್ ಮಾಡಿ ಕಿಸ್‌ ಮಾಡಿದ ಫೀಲ್‌ ಅನ್ನು ನಿಮ್ಮ ಫೋನ್‌ನಿಂದ ಪಡೆಯಿರಿ ವ್ಯಕ್ತಿ ಟಚ್ ಮಾಡಿ ಕಿಸ್‌ ಮಾಡಿದ ಫೀಲ್‌ ಅನ್ನು ನಿಮ್ಮ ಫೋನ್‌ನಿಂದ ಪಡೆಯಿರಿ

Best Mobiles in India

Read more about:
English summary
Trai approves internet data packs with 1 year validity. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X