ಪಾಸ್ ವರ್ಡ್ ಇಲ್ಲದೆಯೇ ನಿಮ್ಮ ರಿಲಯನ್ಸ್ 4ಜಿ ಆ್ಯಂಡ್ರಾಯ್ಡ್ ಫೋನನ್ನು ಅನ್ ಲಾಕ್ ಮಾಡಿ.

Written By:

ಈಗಂತೂ ಸ್ಮಾರ್ಟ್ ಫೋನುಗಳು ಖಾಸಗಿ ಸಾಧನಗಳಾಗಿವೆ ಮತ್ತು ಪ್ರತಿಯೊಬ್ಬರೂ ತಮ್ಮ ಫೋನಿನಲ್ಲಿರುವ ಡಾಟಾ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಇಚ್ಛಿಸುತ್ತರೆ.

ಪಾಸ್‌ವರ್ಡ್‌ ಇಲ್ಲದೇ ರಿಲಾಯನ್ಸ್ 4G ಫೋನ್‌ ಅನ್‌ಲಾಕ್‌ ಹೇಗೆ?

ನಿಮ್ಮ ಸ್ಮಾರ್ಟ್ ಫೋನನ್ನು ಪಿನ್ ನಂಬರ್, ಪಾಸ್ ವರ್ಡ್, ಪ್ಯಾಟರ್ನ್ ಅಥವಾ ಬೆರಳಚ್ಚು ಉಪಯೋಗಿಸಿ ಅನ್ ಲಾಕ್ ಮಾಡಬಹುದು. ಈ ರೀತಿಯಾಗಿ ಮಾಡುವುದರಿಂದ, ನಿಮ್ಮ ಮೊಬೈಲಿನಲ್ಲಿರುವ ಡಾಟಾ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಪಿನ್ ನಂಬರ್, ಪಾಸ್ ವರ್ಡ್ ಅಥವಾ ಪ್ಯಾಟರ್ನ್ ಅನ್ನು ಮರೆತುಬಿಟ್ಟರೆ ಹೇಗಿರುತ್ತದೆ ಯೋಚಿಸಿ!

ಓದಿರಿ: ರಿಲಾಯನ್ಸ್ ಜಿಯೋ ಸಮಸ್ಯೆಗೆ ಇಲ್ಲಿದೆ ಪರಿಹಾರ

ರಿಲಯನ್ಸ್ ಜಿಯೋ ಸಿಮ್ ಇರುವ ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಲಾಕ್ ಸ್ಕ್ರೀನ್ ಅನ್ನು ಬೈಪಾಸ್ ಮಾಡುವುದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನಿಮ್ಮ ಲಾಕ್ಸ ಸ್ಕ್ರೀನ್ ಸೆಕ್ಯುರಿಟಿಯನ್ನು ನೀವು ಮರೆತುಬಿಟ್ಟರೂ ನಿಮ್ಮ ಸ್ಮಾರ್ಟ್ ಫೋನನ್ನು ಅನ್ ಲಾಕ್ ಮಾಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆ್ಯಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಉಪಯೋಗಿಸಿ ಅನ್ ಲಾಕ್ ಮಾಡಿ.

ಆ್ಯಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಉಪಯೋಗಿಸಿ ಅನ್ ಲಾಕ್ ಮಾಡಿ.

ಅನ್ ಲಾಕ್ ಮಾಡಲು ಇರುವ ಒಂದು ವಿಧಾನವೆಂದರೆ ಆ್ಯಂಡ್ರಾಯ್ಡ್ ಡಿವೈಸ್ ಮ್ಯಾನೇಜರ್. ಕಂಪ್ಯೂಟರ್ ಅಥವಾ ಮತ್ತೊಂದು ಮೊಬೈಲ್ ಫೋನಿನಲ್ಲಿ google.com/android/devicemanager ವೆಬ್ ಪುಟಕ್ಕೆ ಭೇಟಿ ಕೊಡಿ. ನಿಮ್ಮ ಗೂಗಲ್ ಖಾತೆ ಬಳಸಿ ಲಾಗಿನ್ ಆಗಿ. ನಂತರ, ನಿಮ್ಮ ಮೊಬೈಲನ್ನು ಆಯ್ದುಕೊಂಡು 'ಲಾಕ್' ಆಯ್ಕೆ ಮಾಡಿ. ತಾತ್ಕಾಲಿಕ ಪಾಸ್ ವರ್ಡ್ ಅನ್ನು ನಮೂದಿಸಿ ಮತ್ತೆ 'ಲಾಕ್' ಮೇಲೆ ಕ್ಲಿಕ್ ಮಾಡಿ. ಬಾಕ್ಸಿನ ಕೆಳಗೆ ಮೂರು ಬಟನ್ನುಗಳು ಕಾಣಿಸುತ್ತದೆ - ರಿಂಗ್, ಲಾಕ್ ಮತ್ತು ಇರೇಸ್. ಈಗ ನಿಮ್ಮ ಮೊಬೈಲಿನಲ್ಲಿ ಬರುವ ಪಾಸ್ ವರ್ಡ್ ಜಾಗದಲ್ಲಿ ತಾತ್ಕಾಲಿಕ ಪಾಸ್ ವರ್ಡ್ ಅನ್ನು ನಮೂದಿಸಿ. ಈಗ ನಿಮ್ಮ ಮೊಬೈಲ್ ಅನ್ ಲಾಕ್ ಆಗುತ್ತದೆ.

ಗೂಗಲ್ ಲಾಗಿನ್ ಬಳಸಿ ಅನ್ ಲಾಕ್ ಮಾಡಿ.

ಗೂಗಲ್ ಲಾಗಿನ್ ಬಳಸಿ ಅನ್ ಲಾಕ್ ಮಾಡಿ.

ಇದು ಆ್ಯಂಡ್ರಾಯ್ಡ್ ಕಿಟ್ ಕ್ಯಾಟ್ 4.4 ಮತ್ತು ಅದರ ಹಿಂದಿನ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಸ್ಮಾರ್ಟ್ ಫೋನನ್ನು ಅನ್ ಲಾಕ್ ಮಾಡಲಿರುವ ವೇಗದ ವಿಧಾನ. ನಿಮ್ಮ ಲಾಕ್ ಸ್ಕ್ರೀನ್ ಪ್ಯಾಟರ್ನ್ ನೆನಪಿಲ್ಲದಿದ್ದರೆ ಐದಕ್ಕಿಂತ ಹೆಚ್ಚು ಸಲ ತಪ್ಪಾಗಿ ಪ್ಯಾಟರ್ನ್ ಹಾಕಿ. ನಂತರ ಪ್ಯಾಟರ್ನ್ ಮರೆತುಹೋಗಿದೆ ಎನ್ನುವ ಆ್ಯಯ್ಕೆಯನ್ನು ಆಯ್ದುಕೊಳ್ಳಿ. ಈಗ ನಿಮ್ಮ ಬ್ಯಾಕ್ ಅಪ್ ಪಿನ್ ಅಥವಾ ಗೂಗಲ್ ಲಾಗಿನ್ ವಿವರಗಳನ್ನು ಹಾಕಿ ಫೋನನ್ನು ಅನ್ ಲಾಕ್ ಮಾಡಬಹುದು.

ಲಾಕ್ ಸ್ಕ್ರೀನ್ ಅನ್ನು ಡಿಸೇಬಲ್ ಮಾಡಲು ಕಸ್ಟಮ್ ರಿಕವರಿ ಉಪಯೋಗಿಸಿ.

ಲಾಕ್ ಸ್ಕ್ರೀನ್ ಅನ್ನು ಡಿಸೇಬಲ್ ಮಾಡಲು ಕಸ್ಟಮ್ ರಿಕವರಿ ಉಪಯೋಗಿಸಿ.

ಈ ವಿಧಾನವನ್ನು ಪ್ರಯತ್ನಿಸಲು, ನಿಮ್ಮ ಫೋನಿನಲ್ಲಿ ಎಸ್.ಡಿ ಕಾರ್ಡ್ ಇರಬೇಕು. ಇದು ಅನ್ ಲಾಕ್ ಮಾಡುವ ಮುಂದುವರೆದ ವಿಧಾನ. ಪ್ಯಾಟರ್ನ್ ಪಾಸ್ ವರ್ಡ್ ಡಿಸೇಬಲ್ ಝಿಪ್ ಫೈಲನ್ನು ಕಂಪ್ಯೂಟರಿಗೆ ಡೌನ್ ಲೋಡ್ ಮಾಡಿಕೊಳ್ಳಿ, ನಂತರ ನಿಮ್ಮ ಫೋನಿನ ಎಸ್.ಡಿ ಕಾರ್ಡಿಗೆ ಹಾಕಿಕೊಳ್ಳಿ. ಕಾರ್ಡನ್ನು ಫೋನಿಗೆ ಹಾಕಿದ ನಂತರ ಫೋನನ್ನು ರಿಕವರಿ ಮೋಡಿನಲ್ಲಿ ರೀಬೂಟ್ ಮಾಡಿ. ಎಸ್.ಡಿ ಕಾರ್ಡಿನಲ್ಲಿರುವ ಝಿಪ್ ಫೈಲನ್ನು ಫ್ಲಾಷ್ ಮಾಡಿ ಮತ್ತು ಮೊಬೈಲನ್ನು ರೀಬೂಟ್ ಮಾಡಿ. ಲಾಕ್ ಸ್ಕ್ರೀನ್ ಇಲ್ಲದೆಯೇ ನಿಮ್ಮ ಫೋನ್ ಆನ್ ಆಗುತ್ತದೆ. ಪಾಸ್ ವರ್ಡ್ ಅಥವಾ ಪ್ಯಾಟರ್ನ್ ಲಾಕ್ ಸ್ಕ್ರೀನ್ ಪರದೆಯ ಮೇಲೆ ಮೂಡುತ್ತದೆ, ಯಾವುದಾದರೂ ಪ್ಯಾಟರ್ನ್ ಅಥವಾ ಪಾಸ್ ವರ್ಡ್ ಬಳಸಿ ಫೋನನ್ನು ಅನ್ ಲಾಕ್ ಮಾಡಿ.

ಕೊನೆಯದಾಗಿ ಫ್ಯಾಕ್ಟರಿ ರೀಸೆಟ್ ಮಾಡಿ.

ಕೊನೆಯದಾಗಿ ಫ್ಯಾಕ್ಟರಿ ರೀಸೆಟ್ ಮಾಡಿ.

ಫ್ಯಾಕ್ಟರಿ ರೀಸೆಟ್ ಮಾಡುವುದರಿಂದ ನಿಮ್ಮ ಮೊಬೈಲಿನಲ್ಲಿ ಇರುವ ಎಲ್ಲಾ ಡಾಟಾ ಅಳಿಸಿಹೋಗುತ್ತದೆ. ಹಾಗಾಗಿ ನಿಮ್ಮ ಫೋನನ್ನು ಅನ್ ಲಾಕ್ ಮಾಡಲು ಈ ಆಯ್ಕೆಯನ್ನು ಬಳಸುವ ಮುಂಚೆ ಯೋಚಿಸಿರಿ! ಇದು ಕೊನೆಯ ಆಯ್ಕೆ ಅಷ್ಟೇ ಎನ್ನುವುದನ್ನು ನೆನಪಿಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you don't know how you can unlock your Android smartphone without the pin or password, you will definitely find this content useful. You will get to know how you can unlock your Jio smartphone without the lock screen security.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot