Just In
Don't Miss
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Movies
ಊಟ ಕೊಡಲಿಲ್ಲ, ಬಾತ್ರೂಂಗೆ ಬಿಡಲಿಲ್ಲ, ಸ್ಟಾರ್ ನಟನ ವಿರುದ್ಧ ಪತ್ನಿ ಆರೋಪ
- News
Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ
- Sports
Ranji Trophy: ಶ್ರೇಯಸ್ ಗೋಪಾಲ್ ಶತಕ: ಉತ್ತರಾಖಂಡ ವಿರುದ್ಧ 358 ರನ್ಗಳ ಬೃಹತ್ ಮುನ್ನಡೆ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿವೋ ಎಸ್1 v/s ಗ್ಯಾಲ್ಯಾಕ್ಸಿ ಎಂ40 : ಯಾವುದು ಬೆಸ್ಟ್ ಬಜೆಟ್ ಫೋನ್!
ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದ್ದು, ಪ್ರಮುಖ ಮೊಬೈಲ್ ಕಂಪನಿಗಳು ಸೇರಿದಂತೆ ಹಲವು ಹೊಸ ಕಂಪನಿಗಳು ಸಹ ಸ್ಪರ್ಧಾತ್ಮಕ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತವೆ. ಅದೆಷ್ಟೋ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆದರೂ ಸಹ ಅವುಗಳಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿದ ಬೆರಳೆಣಿಕೆಯಷ್ಟು ಸ್ಮಾರ್ಟ್‌ಫೋನ್‌ಗಳು ಮಾತ್ರ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತವೆ.

ಈ ಪೈಕಿ ಸ್ಯಾಮ್‌ಸಂಗ್ ಮತ್ತು ಶಿಯೋಮಿ ಕಂಪನಿಗಳು ಮುಂದಿದ್ದು, ಮೀಡ್‌ರೇಂಜ್ ಬೆಲೆಯ ಕ್ಯಾಟಗರಿಯಲ್ಲಿ ವಿವೋ ಸಹ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ವಿವೋ ಸಂಸ್ಥೆಯು ಇದೇ ಅಗಷ್ಟ 7ರಂದು 'ವಿವೋ ಎಸ್1' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಬಹುತೇಕ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40 ಸ್ಮಾರ್ಟ್‌ಫೋನ್‌ಗೆ ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿದೆ.

ವಿವೋ ಎಸ್1 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ರಿಯರ್ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಜೊತೆಗೆ 32ಎಂಪಿ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಮೀಡಿಯಾ ಟೆಕ್ ಹಿಲಿಯೊ P65 SoC ಪ್ರೊಸೆಸರ್ ಬಲದೊಂದಿಗೆ, 4500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಹಾಗಾದರೇ ವಿವೋ ಎಸ್1 ಮತ್ತು ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40 ಸ್ಮಾರ್ಟ್‌ಫೋನ್‌ಗಳ ನಡುವಿನ ವ್ಯತ್ಯಾಸಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಸಾಮ್ಯತೆ
ವಿವೋ ಎಸ್1 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.38 ಇಂಚಿನ ಪೂರ್ಣ ಹೆಚ್‌ಡಿ ಸೂಪರ್ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ವಾಟರ್‌ಡ್ರಾಪ್ ಸ್ಟೈಲ್ ನಾಚ್ ಮಾದರಿಯನ್ನು ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಸಹ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.

ಪ್ರೊಸೆಸರ್ ವ್ಯತ್ಯಾಸ
ಹೊಸ 'ವಿವೋ ಎಸ್1' ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P65 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಜೊತೆಗೆ ಫನ್‌ಟಚ್ OS 9 ಆಪರೇಟಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40 ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್ ಪಡೆದುಕೊಂಡಿದ್ದು, ಒನ್ UI ಬೆಂಬಲಿತ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್ ಹೇಗಿದೆ
ವಿವೋ ಎಸ್1 ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 16ಎಂಪಿ, ಸೆಕೆಂಡರಿ ಕ್ಯಾಮೆರಾ 8ಎಂಪಿ ಮತ್ತು ತೃತೀಯ ಕ್ಯಾಮೆರಾ 2ಎಂಪಿ ಸಾಮರ್ಥ್ಯದಲ್ಲಿವೆ. ಗ್ಯಾಲ್ಯಾಕ್ಸಿ ಎಂ40 ಸ್ಮಾರ್ಟ್‌ಫೋನ್ ಸಹ ಮೂರು ಕ್ಯಾಮೆರಾ ಒಳಗೊಂಡಿದ್ದು, ಅವುಗಳು ಕ್ರಮವಾಗಿ ಪ್ರಾಥಮಿಕ ಕ್ಯಾಮೆರಾವು 32ಎಂಪಿ, ಸೆಕೆಂಡರಿ ಕ್ಯಾಮೆರಾ 5ಎಂಪಿ ಮತ್ತು ಮೂರನೇಯ ಕ್ಯಾಮೆರಾ 8ಎಂಪಿ ಸೆನ್ಸಾರ್ ಪಡೆದುಕೊಂಡಿವೆ.

ಸೆಲ್ಫಿ ಕ್ಯಾಮೆರಾ
ವಿವೋ ಎಸ್1 ಸ್ಮಾರ್ಟ್‌ಫೋನ್‌ನಲ್ಲಿ 32ಎಂಪಿ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಸ್ಯಾಮ್‌ಸಂಗ್‌ನಲ್ಲಿ 16ಎಂಪಿ ಸೆನ್ಸಾರ್‌ನ ಕ್ಯಾಮೆರಾ ಒದಗಿಸಲಾಗಿದೆ. ಎರಡರಲ್ಲಿಯೂ ಸೆಲ್ಫಿ ಕ್ಯಾಮೆರಾ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಗ್ಯಾಲ್ಯಾಕ್ಸಿ ಎಂ40 ಸ್ಮಾರ್ಟ್‌ಫೋನ್ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದ್ದರೂ ಸಹ ಫೋಟೊಗಳ ಗುಣಮಟ್ಟ ಉತ್ತಮವಾಗಿವೆ.

ಬ್ಯಾಟರಿ ಬ್ಯಾಕ್‌ಅಪ್ ಹೇಗಿದೆ
ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿ ಬ್ಯಾಕ್‌ಅಪ್ ತುಂಬಾ ಅಗತ್ಯವೇ ಸರಿ. ಈ ನಿಟ್ಟಿನಲ್ಲಿ ವಿವೋ ಎಸ್1 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಲೈಫ್ ಪಡೆದಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40 3,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಬ್ಯಾಟರಿ ಪವರ್ ವಿಷಯವಾಗಿ ನೋಡುವುದಾದರೇ ವಿವೋ ಎಸ್1 ಬ್ಯಾಟರಿ ಲೈಫ್ ಸ್ವಲ್ಪ ಬೆಟರ್ ಎನಿಸಲಿದೆ.

ವೇರಿಯಂಟ್ ಆಯ್ಕೆಗಳು
ವಿವೋ ಎಸ್1 ಸ್ಮಾರ್ಟ್‌ಫೋನ್ ಮೂರು ವೇರಿಯಮಟ್ ಮಾದರಿಗಳಲ್ಲಿ ಬಿಡುಗಡೆ ಆಗಿದ್ದು, ಅವು ಕ್ರಮವಾಗಿ 4GB RAM ಮತ್ತು 128GB, 6GB + 64GB ಮತ್ತು 6GB + 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿವೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40 ಸಹ 6GB + 128GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ. ವೇರಿಯಂಟ್‌ಗಳು ವಿವಿಧ ಶ್ರೇಣಿಯ ಬೆಲೆಗಳನ್ನು ಹೊಂದಿವೆ.

ಸ್ಮಾರ್ಟ್‌ಫೋನ್‌ಗಳ ಪ್ರೈಸ್‌ಟ್ಯಾಗ್
ವಿವೋ ಎಸ್1 ಸ್ಮಾರ್ಟ್‌ಫೋನಿನ 4GB RAM ಮತ್ತು 128GB ವೇರಿಯಂಟ್ ಬೆಲೆಯು 17,990ರೂ.ಗಳ, 6GB + 64GB ವೇರಿಯಂಟ್ ಬೆಲೆಯು 18,990ರೂ.ಗಳು ಮತ್ತು 19,990ರೂ.ಗಳಿಗೆ 6GB + 128GB ವೇರಿಯಂಟ್ ದೊರೆಯಲಿದೆ. ಅದೇ ರೀತಿ 6GB + 128GB ವೇರಿಯಂಟ್‌ನ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ40 ಸ್ಮಾರ್ಟ್‌ಫೋನ್ ಬೆಲೆಯು 19,990ರೂ.ಗಳು ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470