ವಿವೋ ಎಕ್ಸ್21ನಿಂದ ತೆಗೆಯಿರಿ ಬೆಸ್ಟ್ ಸೆಲ್ಫಿ...ಡ್ಯುಯಲ್ ಕ್ಯಾಮೆರಾದಿಂದ ಅದ್ಭುತ ಚಿತ್ರ ಸೆರೆಹಿಡಿಯಿರಿ..!

  By Avinash
  |

  ಪ್ರಖ್ಯಾತ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿ ಇತ್ತೀಚೆಗೆ ತನ್ನ ಫ್ಲಾಗ್ ಶಿಪ್ ಹ್ಯಾಂಡ್ ಸೆಟ್ ಎಕ್ಸ್21 ಬಿಡುಗಡೆಗೊಳಿಸಿ ಸ್ಮಾರ್ಟ್ ಪೋನ್ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ವಿವೋ ಎಕ್ಸ್21 ಸ್ಮಾರ್ಟ್ ಪೋನ್ ಫ್ಯುಟುರಿಸ್ಟಿಕ್ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನಿಂಗ್ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಪೋನ್ ಆಗಿದೆ. ಇದು ಭವಿಷ್ಯದ ಮೊಬೈಲ್ ತಂತ್ರಜ್ಞಾನಕ್ಕೆ ಬುನಾದಿಯಾಗಿದೆ ಮತ್ತು ಮುಂದೆ ಬರುವ ಫ್ಲಾಗ್ ಶಿಪ್ ಸ್ಮಾರ್ಟ್ ಪೋನ್ ಗಳಿಗೆ ದಾರಿ ತೋರಿಸುವ ಕಾರ್ಯನಿರ್ವಹಿಸಿದೆ.

  ಫ್ಲಿಪ್‌ಕಾರ್ಟ್ 'ಸೂಪರ್ ವ್ಯಾಲ್ಯೂ ವೀಕ್' ಸೇಲ್ ಆರಂಭ!..10,999 ರೂ.ಗೆ ಗೂಗಲ್ ಪಿಕ್ಸೆಲ್ 2 ಆಫರ್!!

  ಆದರೆ, ವಿವೋ ಎಕ್ಸ್21 ಕೇವಲ ಗ್ಲಾಸ್ ಫಿಂಗರ್ ಪ್ರಿಂಟ್ ಸೆನ್ಸಾರ್ ನಿಂದ ಮಾತ್ರ ವಿಶಿಷ್ಟವಾಗಿಲ್ಲ. ಅದಲ್ಲದೇ, ಸ್ಮಾರ್ಟ್ ಪೋನ್ ಮಲ್ಟಿಮೀಡಿಯಾ ಪ್ಯಾಕೇಜ್ ಹೊಂದಿದ್ದು, ಫುಲ್ HD + AMOLED ಸ್ಕ್ರೀನ್, ಗ್ಲಾಸ್ ಮೆಟಲ್ ವಿನ್ಯಾಸ ಮತ್ತು ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಹೊಂದಿದೆ. ವಿವೋ ಎಕ್ಸ್ 21 ಸ್ಮಾರ್ಟ್ ಪೋನ್ 12 MP ಫ್ರಾಂಟ್ ಫೇಸಿಂಗ್ ಕ್ಯಾಮೆರಾ ಹೊಂದಿದ್ದು, ಅತ್ಯುತ್ತಮ ಬೆಳಕಿನ ಮತ್ತು ವಿವಿಧ ರೀತಿಯ ಸೆಲ್ಫಿಗಳಿಗೆ ಹೇಳಿ ಮಾಡಿಸಿದಂತಿದೆ.

  ವಿವೋ ಎಕ್ಸ್21ನಿಂದ ತೆಗೆಯಿರಿ ಬೆಸ್ಟ್ ಸೆಲ್ಫಿ..!

  ಇದಷ್ಟೇ ಅಲ್ಲದೇ, ವಿವೋ ಎಕ್ಸ್21 ಸ್ಮಾರ್ಟ್ ಪೋನ್ 12MP + 5MP ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, ಎಲ್ಲಾ ರೀತಿಯ ಬೆಳಕಿನಲ್ಲೂ ಉತ್ತಮ ಪೋಟೋ ಕ್ಲಿಕ್ಕಿಸುವ ಸಾಮರ್ಥ್ಯ ಹೊಂದಿದೆ. ಪೋಟೋಗ್ರಾಫಿ ಅನುಭವವನ್ನು ಉತ್ತೇಜಿಸಲು ಎರಡು ಕ್ಯಾಮೆರಾಗಳು ಡ್ಯುಯಲ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿವೆ. ಆಗಿದ್ದರೆ ವಿವೋ ಎಕ್ಸ್21 ಸ್ಮಾರ್ಟ್ ಪೋನ್ ಕ್ಯಾಮೆರಾ ವ್ಯವಸ್ಥೆ ಹೇಗೆಲ್ಲಾ ಕಾರ್ಯನಿರ್ವಹಿಸುತ್ತೆ ಎಂಬುದನ್ನು ಮುಂದೆ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಉತ್ತಮ ಸಾಮರ್ಥ್ಯವುಳ್ಳ ಡ್ಯಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ

  ವಿವೋ ಎಕ್ಸ್21 ಸ್ಮಾರ್ಟ್ ಪೋನ್ ಉತ್ತಮ ಸಾಮರ್ಥ್ಯವುಳ್ಳ ಡ್ಯಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, 12MP + 5MP ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ ಡ್ಯುಯಲ್ ಪಿಕ್ಸೆಲ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನ ಮಂದ ಬೆಳಕಿನಲ್ಲಿ ಪಿಕ್ಸೆಲ್ ಗಳಲ್ಲಿರುವ ಪೋಟೋಡಯೋಡ್ ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದ ಪೋಟೋಡಯೋಡ್ ಗಳು ಒಂದು ವಸ್ತುವನ್ನು ಅಥವಾ ದೃಶ್ಯವನ್ನು ಸೆರೆಹಿಡಿಯಲು ಪೋಕಸ್ ವೇಗ ಮತ್ತು ಸೆನ್ಸಾರ್ ನಿಖರತೆಯನ್ನು ಹೆಚ್ಚಿಸುತ್ತವೆ.
  ಸರಳವಾಗಿ ಹೇಳುವುದಾದರೆ, ಬೇರೆ ಯಾವುದೇ ಸ್ಟ್ಯಾಂಡರ್ಡ್ ಸ್ಮಾರ್ಟ್ ಪೋನ್ ಕ್ಯಾಮೆರಾವನ್ನು ಹೋಲಿಸಿದರೆ ವಿವೋ ಎಕ್ಸ್ 21 ಸ್ಮಾರ್ಟ್ ಪೋನ್ ಡ್ಯುಯಲ್ ಪಿಕ್ಸೆಲ್ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾದಿಂದ ಯಾವುದೇ ಬೆಳಕಿನಲ್ಲೂ ವೇಗವಾಗಿ ಮತ್ತು ನಿಖರವಾಗಿ ಉತ್ತಮವಾದ ಪೋಟೋಗ್ರಾಫಿ ಮಾಡಬಹುದಾಗಿದೆ.
  ಡ್ಯುಯಲ್ ಪಿಕ್ಸೆಲ್ ಸೆನ್ಸಾರ್ ಗೆ ಧನ್ಯವಾದಗಳನ್ನು ಹೇಳಲೆಬೇಕು. ಯಾಕೆಂದರೆ ವಿವೋ ಎಕ್ಸ್21 ಸ್ಮಾರ್ಟ್ ಪೋನ್ ಅದ್ಭುತವಾದ 24 ಮಿಲಿಯನ್ ಪೋಟೋಗ್ರಾಫಿಕ್ ಯುನಿಟ್ ಗಳನ್ನು ಹೊಂದಿದೆ. ಯಾವುದೇ ಬೆಳಕಿನಲ್ಲೂ ಸ್ಪಷ್ಟವಾದ ಮತ್ತು ಅತಿ ವಿವರವಾದ ಪಿಕ್ಚರ್ ಗಳನ್ನು ತೆಗೆಯಬಹುದೆಂದು ವಿವೋ ಎಕ್ಸ್21 ತೋರಿಸಿಕೊಟ್ಟಿದೆ.

  ಮಂದ ಬೆಳಕಿನ ಪೋಟೋ ಸ್ಯಾಂಪಲ್

  ಈ ಮಂದ ಬೆಳಕಿನ ಪೋಟೋ ತುಣುಕು ನಮ್ಮ ನೈಜ ಜೀವನವನ್ನು ಪರೀಕ್ಷಿಸಿ ವಿವೋ ಎಕ್ಸ್21 ನಿಮ್ಮ ಮನಸನ್ನು ಅಬ್ಬಾ ಎನ್ನುವಂತೆ ಮಾಡುತ್ತದೆ. ನಾವು ಮಂದ ಬೆಳಕಿನಲ್ಲಿ ಸ್ಮಾರ್ಟ್ ಪೋನ್ ಪರೀಕ್ಷಿಸುವಾಗ ಕ್ಯಾಮೆರಾ ಸಾಫ್ಟ್ ವೇರ್ ನಾಯ್ಸ್ ಅನ್ನು ಪರಿಶೀಲಿಸಿತು ಮತ್ತು ಸುಂದರವಾದ ಬಣ್ಣಗಳೊಂದಿಗೆ ಪಿಕ್ಚರ್ ಅನ್ನು ನಮ್ಮ ಮುಂದಿಟ್ಟಿತು. ಮೇಲಿನ ಪೋಟೋ ಗಮನಿಸಿದರೆ ವಿವೋ ಎಕ್ಸ್21 ಯಾವ ರೀತಿ ಅದ್ಭುತವಾಗಿ ಬೆಳಕಿನ ಸಂಪನ್ಮೂಲ ಕೊರತೆಯಲ್ಲೂ ಬಣ್ಣಗಳನ್ನು ಸೆರೆಹಿಡಿದಿರುವುದು ಗೊತ್ತಾಗುತ್ತದೆ. ಅದಲ್ಲದೇ ನೀರು ಮತ್ತು ಕಾಂಕ್ರೀಟ್ ವಿವರಣೆಯನ್ನು ಬಹಳ ಅದ್ಭುತವಾಗಿ ಕಟ್ಟಿಕೊಟ್ಟಿರುವುದನ್ನು ನೀವು ಗಮನಿಸಬಹುದು.
  ಇಂತಹ ಒಂದು ಅದ್ಭುತವಾದ ಇಮೇಜ್ ಅನ್ನು ನೈಸರ್ಗಿಕ ಬೆಳಕು ಇಲ್ಲದಿದ್ದಾಗಲೂ ಸೆರೆ ಹಿಡಿಯಲಾಗಿದೆ. ಡ್ಯುಯಲ್ ಪಿಕ್ಸೆಲ್ ಸೆನ್ಸಾರ್ ತಂತ್ರಜ್ಞಾನದೊಂದಿಗೆ ವಿವೋ ಎಕ್ಸ್21 ಮಂದ ಬೆಳಕು ಅಥವಾ ಬ್ಯಾಕ್ ಲೈಟ್ ಸಂದರ್ಭದಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯುತ್ತದೆ.

  ಪರಿಣಾಮಕಾರಿಯಾದ ಎಐ ಬೆಂಬಲಿತ HDR ಮೋಡ್

  ವಿವೋ ಎಕ್ಸ್21 ಪರಿಣಾಮಕಾರಿಯಾದ ಎಐ ಬೆಂಬಲಿತ HDR ಮೋಡ್ ಅನ್ನು 12MP+5MP ಡ್ಯುಯಲ್ ಲೆನ್ಸ್ ಕ್ಯಾಮೆರಾದೊಂದಿಗೆ ನೀಡುತ್ತಿದೆ. ಈ ತಂತ್ರಜ್ಞಾನದಿಂದ ಮಾರುಕಟ್ಟೆಯಲ್ಲಿರುವ ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ ನೀಡುವ ಬೇರೆ ಸ್ಮಾರ್ಟ್ ಪೋನ್ ಗಳಿಗಿಂತ ಮುಂದಿದೆ. ಸ್ಟ್ಯಾಂಡರ್ಡ್ HDR ಮೋಡ್ ಬದಲಾಗಿ ವಿವೋ ಎಕ್ಸ್21 ಎಐ ಬೆಂಬಲಿತ HDR ಮೋಡ್ ಹೊಂದಿದೆ. ಕೃತಕ ಬುದ್ಧಿಮತ್ತೆಯ ಶಕ್ತಿಯಿಂದ ಫ್ರೇಮ್ ನಲ್ಲಿರುವ ಬೆಳಕಿನ ಸಾಂದ್ರತೆ ಮತ್ತು ಅನೇಕ ಮಾಹಿತಿಗಳನ್ನು ಗುರುತಿಸಬಹುದಾಗಿದೆ. ಉತ್ತಮ ಪ್ರಕಾಶ ಹೊಂದಿರುವ ಪೋಟೋಗಳನ್ನು ಕತ್ತಲು ಮತ್ತು ಬ್ಯಾಕ್ ಲೈಟ್ ಸಂದರ್ಭದಲ್ಲಿ ತೆಗೆಯಬಹುದಾಗಿದ್ದು, ಪೋಟೋವನ್ನು ನೈಸರ್ಗಿಕವಾಗಿರುವಂತೆ ಕಾಣುತ್ತದೆ.

  ಡೇಲೈಟ್ ಪೋಟೋ

  ವಿವೋ ಎಕ್ಸ್21 ಸ್ಮಾರ್ಟ್ ಪೋನ್ ನಲ್ಲಿ ಡೇಲೈಟ್ ಪೋಟೋಗಳು ಅದ್ಭುತವಾಗಿದ್ದು, ಶೇ.100 ರಷ್ಟು ಜೂಮ್ ಮಾಡಿದಾಗಲೂ ಕನಿಷ್ಠ ಪೀಕ್ಸೆಲ್ ತೋರಿಸುತ್ತದೆ. ಉತ್ತಮ ಬಣ್ಣ ಮತ್ತು ಕಾಂಟ್ರಾಸ್ಟ್ ರೇಟಿಯೋದೊಂದಿಗೆ ವಿವೋ ಎಕ್ಸ್21ನ AMOLED ಸ್ಕ್ರೀನ್ ನಲ್ಲಿ ಅದ್ಭುತವಾಗಿ ಇಮೇಜ್ ಗಳನ್ನು ತೋರಿಸುತ್ತದೆ. ಡ್ಯುಯಲ್ ಕ್ಯಾಮೆರಾದಲ್ಲಿ 5MP ಸೆಕೆಂಡರಿ ಕ್ಯಾಮೆರಾ bokeh ಎಫೆಕ್ಟ್ ನೀಡುತ್ತದೆ. ಇದರಲ್ಲಿ ಡೆಪ್ತ್ ಆಫ್ ಫೀಲ್ಡ್ ಅನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಜ್ ಮಾಡಿ ಉತ್ತಮ ಔಟ್ ಪುಟ್ ತೆಗೆದುಕೊಳ್ಳಬಹುದು.

  ಎಐ ಫೇಸ್ ಬ್ಯೂಟಿ ಹೊಂದಿದ 12MP ಸೆಲ್ಫಿ ಕ್ಯಾಮೆರಾ

  ವಿವೋ ಕಳೆದ ಕೆಲವು ವರ್ಷಗಳಿಂದ ಅದ್ಭುತವಾದ ಸೆಲ್ಫಿ ಸ್ಮಾರ್ಟ್ ಪೋನ್ ಗಳನ್ನು ಪರಿಚಿಯಿಸಿದೆ. ಆದರೆ, ವಿವೋ ಎಕ್ಸ್21 ಎಲ್ಲಕ್ಕಿಂತ ವಿಭಿನ್ನವಾಗಿದ್ದು, ಎಐ ಫೇಸ್ ಬ್ಯೂಟಿ ಮತ್ತು ಎಆರ್ ಸ್ಟೀಕರ್ರ್ಸ್ ಹೊಂದಿದ 12MP ಸೆಲ್ಫಿ ಕ್ಯಾಮೆರಾ ಹೊಂದಿದೆ. 12MP ಫ್ರಾಂಟ್ ಫೇಸಿಂಗ್ ಕ್ಯಾಮೆರಾ ಡ್ಯುಯಲ್ ಪಿಕ್ಸೆಲ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತಾ ಎಐ ಫೇಸ್ ಬ್ಯೂಟಿ ಮೋಡ್ ಗೆ ಬೆಂಬಲಿಸುತ್ತದೆ.

  ವಿವೋದ ಕ್ಲಾಸಿಕ್ ಫೇಸ್ ಬ್ಯೂಟಿ ಫೀಚರ್ ಗೆ ಇದೊಂದು ಪ್ರಮುಖ ಬದಲಾವಣೆಯಾಗಿದೆ. ಎಐ ಫೇಸ್ ಬ್ಯೂಟಿ ಗಡ್ಡ, ಚರ್ಮದ ಬಣ್ಣ, ಕಣ್ಣುಗಳು ಸೇರಿದಂತೆ ವ್ಯಕ್ತಿಯ ವಿಶಿಷ್ಟ ಫೀಚರ್ಸ್ ಗಳನ್ನು ಗುರುತಿಸುತ್ತದೆ. ವಿವೋ ಎಕ್ಸ್ 21 ಸೆಲ್ಫಿ ಕ್ಯಾಮೆರಾ ಪರಿಪೂರ್ಣ ಸೆಲ್ಫಿಯನ್ನು ಉತ್ತಮಗೊಳಿಸಲು ಯಂತ್ರದ ಕಲಿಕಾ ಸಾಮರ್ಥ್ಯ ಬಳಸಲಾಗಿದೆ.ಎಐ ಫೇಸ್ ಬ್ಯೂಟಿ 12MP ಸೆಲ್ಫಿ ಕ್ಯಾಮೆರಾದಿಂದ ಬ್ಯಾಡ್ ಲೈಟ್ ಇದ್ದಾಗಲೂ ನಿಮ್ಮ ಪೋಟೋವನ್ನು ಬ್ರೈಟ್ ಮತ್ತು ನೈಸರ್ಗಿಕವಾಗಿ ಚೆಂದ ಕಾಣುವಂತೆ ಸೆರೆಹಿಡಿಯುತ್ತದೆ.

  ಎಆರ್ ಸ್ಟೀಕರ್ಸ್

  ವಿವೋ ಎಕ್ಸ್21 ಸ್ಮಾರ್ಟ್ ಪೋನ್ ಕ್ಯಾಮೆರಾ ಎಆರ್ ಸ್ಟೀಕರ್ಸ್ ಗೂ ಬೆಂಬಲ ನೀಡುತ್ತಿದ್ದು, ಸ್ನಾಪ್ ಚಾಟ್ ಮತ್ತು ಇನ್ಸ್ಟಾಗ್ರಾಂನಂತಹ ಸೋಷಿಯಲ್ ನೆಟ್ ವರ್ಕಿಂಗ್ ಅಪ್ಲಿಕೇಷನ್ ಗಳಲ್ಲಿ ಬಳಸಬಹುದಾಗಿದೆ. ಕ್ಲಿಕ್ ಬಟನ್ ಟಚ್ ಮಾಡಲು ಸುಲಭವಾಗಿ ಸಾಧ್ಯವಾಗುವುದಿಲ್ಲವೋ ಅದಕ್ಕಾಗಿ ಪಾಮ್ ಕ್ಯಾಪ್ಚರ್ ಫೀಚರ್ ಅನ್ನು ವಿವೋ ನೀಡಿದೆ. ಫ್ರಾಂಟ್ ಕ್ಯಾಮೆರಾ ಸೆಲ್ಫಿ ಲೈಟಿಂಗ್ ಫೀಚರ್ ಹೊಂದಿದ್ದು, ಸ್ಟುಡಿಯೋ ರೀತಿಯ ಲೈಟ್ ಎಫೆಕ್ಟ್ ಅನ್ನು ಸೆಲ್ಫಿಗೆ ನೀಡುತ್ತದೆ. ಇದರಿಂದ ಪ್ರತಿ ಸೆಲ್ಫಿಯೂ ವೃತ್ತಿಪರತೆಯನ್ನು ಹೊಂದಿರಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Vivo X21 Experience best-in-class selfies and stunning low-light images with dual rear camera. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more