ವಿವೋ X70 ಪ್ರೊ ಪ್ಲಸ್ ಫಸ್ಟ್‌ ಲುಕ್: ಅತ್ಯುತ್ತಮ ಹೈ ಎಂಡ್‌ ಕ್ಯಾಮೆರಾ ಫೋನ್!

|

ವಿವೋ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ X70 ಸ್ಮಾರ್ಟ್‌ಫೋನ್ ಸರಣಿಯು ಗ್ರಾಹಕರನ್ನು ಆಕರ್ಷಿಸಿದೆ. ಈ ಸರಣಿಯು ವಿವೋ X70 ಪ್ರೊ ಮತ್ತು ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಆ ಪೈಕಿ ಹೈ ಎಂಡ್‌ ಫೀಚರ್ಸ್‌ಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದು, ವಿವೋ X70 ಪ್ರೊ ಪ್ಲಸ್ ಫೋನ್. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 888+ SoC ಪ್ರೊಸೆಸರ್‌ ಒಳಗೊಂಡಿದೆ.

ಮಾರುಕಟ್ಟೆಯಲ್ಲಿ

ವಿವೋ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಲಾಂಚ್ ಮಾಡಿರುವ ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ ಪಡೆದಿದೆ. ಈ ಸ್ಮಾರ್ಟ್‌ಫೋನ್ 12 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯ ಜೊತೆಗೆ ಆಂಡ್ರಾಯ್ಡ್ 11 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ ಮತ್ತು 4,500mAh ಬ್ಯಾಕ್‌ಅಪ್‌ ಜೊತೆಗೆ 55W ಫ್ಲ್ಯಾಶ್ ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ. ಇನ್ನುಳಿದಂತೆ ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ 6.78 ಇಂಚಿನ ಪೂರ್ಣ ಹೆಚ್‌ಡಿ + AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನಿನ ಡಿಸ್‌ಪ್ಲೇಯು 1440 x 3200 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ವೀಡಿಯೊ ಬಳಕೆ, ಗೇಮಿಂಗ್ ಮತ್ತು ಓದುವಿಕೆ, ವೆಬ್ ಬ್ರೌಸಿಂಗ್ ಸೇರಿದಂತೆ ಇತರೆ ಮಲ್ಟಿ ಟಾಸ್ಕಿಂಗ್ ಕೆಲಸಗಳಿಗೆ ಉತ್ತಮ ಮೊಬೈಲ್‌ ಎನಿಸಲಿದೆ.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 888+ SoC ಪ್ರೊಸೆಸರ್‌ ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಇನ್ನು ಈ ಫೋನ್ 12 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಪ್ರೊಸೆಸರ್ ಪವರ್ ಉತ್ತಮವಾಗಿದ್ದು, ಅಧಿಕ ಡೇಟಾ ಬೇಡುವ ಗೇಮ್‌ಗಳ ಆಟಕ್ಕೂ ಸಫೋರ್ಟ್‌ ನೀಡಲಿದೆ.

ಕ್ವಾಡ್‌ ಕ್ಯಾಮೆರಾ ರಚನೆ

ಕ್ವಾಡ್‌ ಕ್ಯಾಮೆರಾ ರಚನೆ

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ IMX598 ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಆಗಿದೆ. ಹಾಗೆಯೇ ಮೂರನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, ನಾಲ್ಕನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಪೆರಿಸ್ಕೋಪ್ ಸೆನ್ಸರ್ ಅನ್ನು ಹೊಂದಿದೆ. ಅದಲ್ಲದೆ, ನೈಟ್ ವೀಡಿಯೋ ಮೋಡ್, ಪ್ರೊ ಸಿನಿಮಾಟಿಕ್ ಮೋಡ್, ಅಂತರ್ನಿರ್ಮಿತ ಬ್ಯೂಟಿಫಿಕೇಶನ್ ಫೀಚರ್, ಹಲವಾರು ಫಿಲ್ಟರ್‌ಗಳು, ಪ್ರೊ ಮೋಡ್, ಟೈಮ್-ಲ್ಯಾಪ್ಸ್, ಸ್ಲೋ-ಮೋಷನ್ ಇತ್ಯಾದಿ ಅಗತ್ಯವಾದ ಮೋಡ್‌ಗಳ ಆಯ್ಕೆಗಳು ಇವೆ.

ಬ್ಯಾಟರಿ ಬಲ ಎಷ್ಟು?

ಬ್ಯಾಟರಿ ಬಲ ಎಷ್ಟು?

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 55W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. 47 ನಿಮಿಷಗಳ ಚಾರ್ಜ್ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ನೀಡಬಲ್ಲದು.

Most Read Articles
Best Mobiles in India

English summary
Vivo X70 Pro+ First Look: High-end Camera Phone With Excellent Display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X