ನೀವೇನಾದರೂ ಏಕಕಾಲಕ್ಕೆ ಎರಡು ಬಾರಿ ಮೊಬೈಲ್ ರೀಚಾರ್ಜ್ ಮಾಡಿದರೇ ಏನಾಗುತ್ತೆ ಗೊತ್ತಾ?

|

ಪ್ರಸ್ತುತ ಡಿಜಿಟಲ್ ಪೇಮೆಂಟ್ ಬಳಕೆ ಹೆಚ್ಚಾಗುತ್ತಿದ್ದು, ಬಹುತೇಕರು ತಮ್ಮ ಬಿಲ್ ಪೇಮೆಂಟ್, ಹಣ ವರ್ಗಾವಣೆ, ರೀಚಾರ್ಜ್‌ನಂತಹ ಅಗತ್ಯ ಕೆಲಸಗಳನ್ನು ಆನ್‌ಲೈನ್‌ ಮೂಲಕವೇ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರು ಮುಖ್ಯವಾಗಿ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಮ್‌ ಆಪ್ಸ್‌ ಪ್ಲಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಆಪ್ಸ್‌ಗಳ ಬಳಕೆ ಸುಲಭವಾಗಿದ್ದು, ಕೆಲಸಗಳು ತ್ವರಿತವಾಗುತ್ತವೆ.

ಯುಪಿಐ ಪೇಮೆಂಟ್ ಆಪ್ಸ್‌

ಹೌದು, ಸದ್ಯ ಯುಪಿಐ ಪೇಮೆಂಟ್ ಆಪ್ಸ್‌ಗಳ ಬಳಕೆಯ ರೂಢಿ ಅಧಿಕವಾಗಿದೆ. ಅಗತ್ಯ ಸೇವೆಗಳ ಬಿಲ್ ಪಾವತಿ, ಡಿಟಿಎಚ್ ರೀಚಾರ್ಜ್, ಪ್ರೀಪೇಯ್ಡ್ ಹಾಗೂ ಫೋಸ್ಟ್‌ಪೇಯ್ಡ್ ಫೋನ್ ರೀಚಾರ್ಜ್, ಆನ್‌ಲೈನ್ ಪೇಮೆಂಟ್‌ನಂತಹ ಕೆಲಸಗಳಿಗೆ ಈ ಯುಪಿಐ ಆಪ್ಸ್‌ ನೆರವಾಗಿವೆ. ಈ ಆಪ್ಸ್‌ಗಳಲ್ಲಿ ಮೊಬೈಲ್ ಪ್ರೀಪೇಯ್ಡ್‌ ರೀಚಾರ್ಜ್ ಮಾಡುವಾಗ ಕೆಲವೊಮ್ಮೆ ಆಕಸ್ಮಿಕವಾಗಿ ಒಂದೇ ನಂಬರ್‌ಗೆ, ಒಂದೇ ಸಮಯಕ್ಕೆ ನೀವು ಎಂದಾದರೂ ಎರಡು ಬಾರಿ ರೀಚಾರ್ಜ್ ಮಾಡಿದ್ದಿರಾ?..ಹೀಗೆ ಎರಡು ಬಾರಿ ರೀಚಾರ್ಜ್ ಮಾಡಿದರೇ ಏನಾಗುತ್ತದೆ ಎನ್ನುವ ಪ್ರಶ್ನೇಗಳಿಗೆ ಉತ್ತರ ಈ ಲೇಖನದಲ್ಲಿದೆ. ಮುಂದೆ ಓದಿರಿ.

ಸಾಮಾನ್ಯ ರೀಚಾರ್ಜ್ ಪ್ಲ್ಯಾನ್ ಎರಡು ಬಾರಿ ರೀಚಾರ್ಜ್ ಮಾಡಿದರೇ ಏನಾಗುತ್ತದೆ?

ಸಾಮಾನ್ಯ ರೀಚಾರ್ಜ್ ಪ್ಲ್ಯಾನ್ ಎರಡು ಬಾರಿ ರೀಚಾರ್ಜ್ ಮಾಡಿದರೇ ಏನಾಗುತ್ತದೆ?

ಯುಪಿಐ ಆಪ್ಸ್‌ಗಳ ಮೂಲಕ ರೀಚಾರ್ಜ್ ಮಾಡುವಾಗ ಮೊದಲು ನೀವು ಟಾಪ್-ಅಪ್ ಮಾಡಲು ಬಯಸುವ ಮೊತ್ತವನ್ನು ನೀವು ನಮೂದಿಸಬೇಕಾಗಿದೆ ಅಥವಾ ಅಲ್ಲಿ ವಿಂಡೋದಲ್ಲಿ ಲಭ್ಯವಿರುವ ಆಫರ್ ಆಯ್ಕೆಗಳಿಂದ ಆಯ್ಕೆ ಮಾಡಬಹುದು. ನಿಮ್ಮ ಪ್ರಿಪೇಯ್ಡ್ ಮೊಬೈಲ್ ಸಂಖ್ಯೆಗೆ ಆಕಸ್ಮಿಕವಾಗಿ ಸಾಮಾನ್ಯ ರೀಚಾರ್ಜ್ ಪ್ಯಾಕ್‌ ಅನ್ನು ಎರಡು ಬಾರಿ ರೀಚಾರ್ಜ್ ಮಾಡಿದರೇ ನಂತರ, ಈಗಾಗಲೆ ಲಭ್ಯವಿರುವ ಕರೆನ್ಸಿಗೆ ಮತ್ತೊಮ್ಮೆ ರೀಚಾರ್ಜ್ ಮಾಡಿರುವ ಹಣ ಜಮಾ ಆಗುತ್ತದೆ. ಎರಡು ಬಾರಿ ರೀಚಾರ್ಜ್ ಮಾಡಿದರೂ ಹಣ ಕಳೆದುಕೊಳ್ಳುವುದಿಲ್ಲ.
ಉದಾಹರಣೆಗೆ- ನಿಮ್ಮ ಪ್ರೀಪೇಯ್ಡ್‌ ಸಂಖ್ಯೆಗೆ ನೀವು ರೂ. 100ರೂ. ಸಾಮಾನ್ಯ ಪ್ಲ್ಯಾನ್‌ ಅನ್ನು ರೀಚಾರ್ಜ್ ಮಾಡಿದರೇ 81.75 ಟಾಕ್‌ಟೈಮ್ ಬರುತ್ತದೆ. ಇದೇ ಪ್ಲ್ಯಾನ್‌ ಅನ್ನು ನೀವು ಎರಡು ರೀಚಾರ್ಜ್ ಮಾಡಿದರೇ ಬಾಕಿ ಮೊತ್ತ 163.5ರೂ. ಆಗುತ್ತದೆ.

ವಿಶೇಷ ಪ್ಯಾಕ್‌ ಎರಡು ಬಾರಿ ರೀಚಾರ್ಜ್ ಮಾಡಿದರೇ ಏನಾಗುತ್ತದೆ?

ವಿಶೇಷ ಪ್ಯಾಕ್‌ ಎರಡು ಬಾರಿ ರೀಚಾರ್ಜ್ ಮಾಡಿದರೇ ಏನಾಗುತ್ತದೆ?

ಮೊಬೈಲ್‌ ಪ್ರೀಪೇಯ್ಡ್‌ ನಂಬರ್‌ಗೆ ವಿಶೇಷ ರೀಚಾರ್ಜ್‌ ಪ್ಯಾಕ್‌ಗಳನ್ನು ಎರಡು ಬಾರಿ ರೀಚಾರ್ಜ್ ಮಾಡಿದರೇ ಏನಾಗುತ್ತದೆ ಎಂಬ ಬಗ್ಗೆ ಸಾಮಾನ್ಯವಾಗಿ ಬಹುತೇಕರಲ್ಲಿ ಗೊಂದಲ ಇದ್ದೆ ಇರುತ್ತದೆ. ವಿಶೇಷ ಪ್ಯಾಕ್‌ಗಳನ್ನು ಎರಡು ಬಾರಿ ರೀಚಾರ್ಜ್ ಮಾಡಿದರೇ ಆ ಪ್ಲ್ಯಾನಿನಲ್ಲಿ ಲಭ್ಯ ಇರುವ ಪ್ರಯೋಜನಗಳು ಸೇರ್ಪಡೆ ಆಗುತ್ತವೆ ಆದರೆ ವ್ಯಾಲಿಡಿಟಿ ಮಾತ್ರ ಹೆಚ್ಚಾಗುವುದಿಲ್ಲ.
ಉದಾಹರಣಗೆ- 49ರೂ. ಸ್ಮಾರ್ಟ್‌ ಪ್ಯಾಕ್‌ ಅನ್ನು ರೀಚಾರ್ಜ್ ಮಾಡಿದರೇ 38.52ರೂ. ಟಾಕ್‌ಟೈಮ್, 28 ದಿನಗಳವರೆಗೆ ವ್ಯಾಲಿಡಿಟಿ ಹಾಗೂ 100MB ಡೇಟಾ ಲಭ್ಯವಾಗುತ್ತದೆ. ಆಕಸ್ಮಾತ್ ಈ ಪ್ಲ್ಯಾನ್ ಒಂದೇ ಸಮಯಕ್ಕೆ ಎರಡು ಬಾರಿ ರೀಚಾರ್ಜ್ ಮಾಡಿದರೇ ಬ್ಯಾಲೆನ್ಸ್‌ನಲ್ಲಿ ಒಟ್ಟು 77.04ರೂ. ಹಾಗೂ 204.8MB ಡೇಟಾ ಆಗುತ್ತದೆ. ಆದರೆ ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರುತ್ತದೆ. ಆನ್‌ಲೈನ್ ಮೂಲಕ ಮೊಬೈಲ್ ರೀಚಾರ್ಜ್‌ಗೆ ನೆರವಾಗಿರುವ ಆಪ್ಸ್‌ ಬಗ್ಗೆ ತಿಳಿಯಲು ಮುಂದೆ ಓದಿರಿ.

ಗೂಗಲ್‌ ಪೇ

ಗೂಗಲ್‌ ಪೇ

ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಗೂಗಲ್‌ ಪೇ ಬಹುತೇಕ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ನೀಡಿದೆ. ಬಳಕೆದಾರರು ಇಲ್ಲಿ ವಿದ್ಯುತ್ ಬಿಲ್, ಇನ್ಸೂರೆನ್ಸ್‌ ಪ್ರೀಮಿಯಂ, ಡಿಟಿಎಚ್ ರೀಚಾರ್ಜ್, ಮೊಬೈಲ್ ರೀಚಾರ್ಜ್, ಕೆಲವು ಮೆಟ್ರೊ ಸಿಟಿಗಳಲ್ಲಿ ಸಿಲಿಂಡರ್/ಗ್ಯಾಸ್ ಬುಕ್ಕಿಂಗ್ ಸೇವೆಗಳನ್ನು ಒಳಗೊಂಡಿದೆ. ಈಗಾಗಲೇ ಬಹುತೇಕರು ಮೊಬೈಲ್ ರೀಚಾರ್ಜ್‌ ಮಾಡಲು ಈ ಆಪ್ ಬಳಕೆ ಮಾಡುತ್ತಿದ್ದಾರೆ.

ಪೋನ್‌ ಪೇ

ಪೋನ್‌ ಪೇ

ಪೋನ್ ಪೇ ಸಹ ಒಂದು ಉತ್ತಮ ಆನ್‌ಲೈನ್ ಪೇಮೆಂಟ್ ಮಾಡುವ ಆಪ್‌ ಆಗಿದ್ದು, ಮೊದಲು ನಿಮ್ಮ ಬ್ಯಾಂಕ್ ಖಾತೆಯನ್ನು ಆಪ್‌ನಲ್ಲಿ ಲಿಂಕ್ ಮಾಡಿಕೊಂಡು ನಂತರ ನೀವು ಈ ಆಪ್‌ನಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್, ಇನ್ಸೂರೆನ್ಸ್‌ ಕಂತು, ಹಣ ವರ್ಗಾವಣೆ. ಸೇರಿದಂತೆ ಇನ್ನು ಅನೇಕ ಅಗತ್ಯ ಸೇವೆಗಳು ಲಭ್ಯ ಇವೆ. ಮೊಬೈಲ್ ರೀಚಾರ್ಜ್‌ ಮಾಡಲು ಸಹ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ.

ಪೇಟಿಎಮ್

ಪೇಟಿಎಮ್

ಪೆಟಿಎಮ್ ಮುಖಾಂತರ ನೀವು ವಿದ್ಯುತ್ ಬಿಲ್, ನೀರಿಲ್ ಬಿಲ್, ಮತ್ತು ಡಿಟಿಎಚ್, ರೀಚಾರ್ಜ್ ಇತರೆ ಯಾವುದೇ ಬಿಲ್ ಪೇಮೆಂಟ್ ಸಹ ಮಾಡಬಹುದಾಗಿದೆ. ಪ್ರತಿ ಪೇಮೆಂಟ್ ಕಾರ್ಯವೂ ಸುರಕ್ಷಿತವಾಗಿ ನಡೆಯುತ್ತದೆ. ಇದರೊಂದಿಗೆ ಪೇಟಿಎಮ್ ನವರು ಪೇಟಿಎಮ್ ಮಾಲ್ ಎಂಬ ಆನ್‌ಲೈನ್‌ ಶಾಪಿಂಗ್ ತಾಣವನ್ನು ಸಹ ಮಾಡಿದ್ದಾರೆ. ಹಾಗೆಯೇ ಮೊಬೈಲ್ ರೀಚಾರ್ಜ್ ಮಾಡಲು ಪೂರಕವಾಗಿದೆ.

Best Mobiles in India

English summary
Recharging the number twice with the same smart pack, the real-time and the data amount added up to the existing one.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X