ಬಂದಿದೆ ವಿಕೆಡ್‌ಲೀಕ್‌ನ ವಾಮೀ ನೋಟ್‌

Posted By: Staff
<ul id="pagination-digg"><li class="next"><a href="/mobile/wickedleak-wammy-note-is-available-now-2.html">Next »</a></li></ul>
ಬಂದಿದೆ ವಿಕೆಡ್‌ಲೀಕ್‌ನ ವಾಮೀ ನೋಟ್‌

ಜಾಗತಿಕ ಮಾರುಕಟ್ಟೆಯಲ್ಲಿ ಸಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ ಯಶಸ್ವಿಯಾದಂತೆ, ಹಲವು ಭಾರತೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಅಗ್ಗದ ಬೆಲೆಯ ತಾಂತ್ರಿಕ ಸರಕುಗಳ ತಯಾರಕರುಗಳು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಪೂರೈಸುವ ಮೂಲಕ ಭಾರತೀಯ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ. ಒಂದರ ನಂತರ ಒಂದರಂತೆ ಕಡಿಮೆ ದರಗಳಲ್ಲಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ದಕ್ಷಿಣ ಕೊರಿಯಾ ಮೂಲದ ಫಾಬ್ಲೆಟ್‌ ತಯಾರಿಕೆಯ ದೊಡ್ಡಣ್ಣ ಸ್ಯಾಮ್ಸಂಗ್‌ನ ಷೇರುಗಳನ್ನು ನಿರಂತರವಾಗಿ ತಮ್ಮದಾಗಿಸಿ ಕೊಳ್ಳುತ್ತಾ ಬಂದಿವೆ.

ಇದನ್ನೇ ಹಿಂಬಾಲಿಸುತ್ತಿರುವ ಮುಂಬೈ ಮೂಲದ ಕಡಿಮೆ ದರದ ಗ್ರಾಹಕ ತಾಂತ್ರಿಕ ಸರಕು ತಯಾರಿಕಾ ಸಂಸ್ಥೆಯಾದ ವಿಕೆಡ್‌ಲೀಕ್‌, ಇತ್ತೀಚೆಗೆ ಆಂಡ್ರಾಯ್ಡ್‌ 4.0 ಐಸ್‌ ಕ್ರೀಮ್‌ ಸ್ಯಾಂಡ್ವಿಚ್‌ ಚಾಲಿತ "ವಾಮಿ ನೋಟ್‌" ಹೆಸರಿನ ನೂತನ ಫಾಬ್ಲೆಟ್‌ ಬಿಡುಗಡೆ ಮಾಡಿದ್ದು ಇದರ ಬೆಲೆ ಕೇವಲ 11,000 ರೂ. ಮಾತ್ರ.

ಮಾರುಕಟ್ಟೆಯಲ್ಲಿನ ಇತರೇ ಹಲವು ಹೈಬ್ರೀಡ್‌ ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳ ನಡುವೆ ನೂತನವಾಗಿ ಬಿಡುಗಡೆಯಾಗಿರುವ ವಾಮಿ ಫಾಬ್ಲೆಟ್‌ನಲ್ಲಿ ಮಾರುಕಟ್ಟೆಯಲ್ಲಿನ ಪೈಪೋಟಿ ಎದುರಿಸಲು ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ ಎಂದು ತಿಳಿದುಕೊಳ್ಳೋಣ.

<ul id="pagination-digg"><li class="next"><a href="/mobile/wickedleak-wammy-note-is-available-now-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot