ಈ ಸ್ಮಾರ್ಟ್‌ಫೋನ್‌ಗಳು ದುಬಾರಿ ಎಂದರೇ ಎಷ್ಟು ದುಬಾರಿ ಗೊತ್ತಾ..?

By Avinash
|

ಇದು ಸ್ಮಾರ್ಟ್‌ಫೋನ್ ಲೋಕ. ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ರಾರಾಜಿಸುತ್ತವೆ. ಅಬ್ಬಬ್ಬಾ ಎಂದರೆ ನಾವು ನೀವೆಲ್ಲಾ ಒಂದು ಲಕ್ಷ ರೂ. ವರೆಗೂ ಸ್ಮಾರ್ಟ್‌ಫೋನ್‌ಗಳನ್ನು ಬಳಸಿರಬಹುದು. ಭಾರತದಲ್ಲಿ ಆಪಲ್ ತನ್ನ ಐಫೋನ್‌ ಎಕ್ಸ್‌ 256GB ಆವೃತ್ತಿಯನ್ನು ಒಂದು ಲಕ್ಷ ರೂ.ಗೆ ಬಿಡುಗಡೆ ಮಾಡಿದಾಗ ಎಲ್ಲರೂ ಬಾಯಿ ಮೇಲೆ ಬೆರಳು ಇಟ್ಟುಕೊಂಡು ಲಕ್ಷ ರೂಪಾಯಿನಾ ಎಂದು ಕೇಳಿದ್ದು ಇದೆ.

ಈ ಸ್ಮಾರ್ಟ್‌ಫೋನ್‌ಗಳು ದುಬಾರಿ ಎಂದರೇ ಎಷ್ಟು ದುಬಾರಿ ಗೊತ್ತಾ..?

ಆದರೆ, ಇಂದು ನಾವೇಳುವ ವಿಷಯ ನಿಮ್ಮನ್ನು ಇನ್ನಷ್ಟು ವಿಚಲಿತಗೊಳಿಸುತ್ತದೆ. ಹೌದು, ಒಂದು ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಬಹುದು ಅಂತ ನೀವು ಊಹೆ ಮಾಡ್ತಿದಿರಿ ಅದೆಲ್ಲವನ್ನು ಈ ಸ್ಮಾರ್ಟ್‌ಫೋನ್‌ಗಳು ತಲೆಕೆಳಗೆ ಮಾಡುತ್ತವೆ. ಹೌದು, ಇಂದು ನಾವೇಳೋಕ್ ಹೋಗ್ತಿರೋದು ವಿಶ್ವದ ಅತಿ ದುಬಾರಿ ಫೋನ್‌ಗಳ ಬಗ್ಗೆ. ಈ ಫೋನ್‌ಗಳ ಬೆಲೆ ಕೇಳಿದರೆ ನೀವ್ಯಾರೂ ನಂಬಲ್ಲ ಎನ್ನುವುದು ಗೊತ್ತಿದೆ. ಆದರೂ, ಇದು ಸತ್ಯವೇ.

1. ದಿ ಡೈಮಂಡ್ ಕ್ರಿಪ್ಟೋ

1. ದಿ ಡೈಮಂಡ್ ಕ್ರಿಪ್ಟೋ

ವಿಶ್ವದಲ್ಲಿಯೇ ಅತಿ ದುಬಾರಿ ಫೋನ್ ಎಂಬ ಹೆಗ್ಗಳಿಕೆ ದಿ ಡೈಮಂಡ್ ಕ್ರಿಪ್ಟೋ ಮೊಬೈಲ್‌ಗೆ ಸಲ್ಲುತ್ತದೆ. ಈ ಮೊಬೈಲ್ ಅತಿ ಹೆಚ್ಚು ಭದ್ರತೆ ಬೇಕೆನ್ನುವರು ಉಪಯೋಗಿಸುತ್ತಿದ್ದರು. ಆದರೆ, ಈಗ ಈ ಸಾಧನ ತನ್ನ ವ್ಯಾಲಿಡಿಟಿ ಕಳೆದುಕೊಮಡಿದೆ. ಸುರಕ್ಷಿತವಾಗಿ ಸಂಪರ್ಕವನ್ನು ಕಡಿತಗೊಳಿಸಲು ಬಯಸಿದರೆ ಎನ್‌ಕ್ರಿಪ್ಟೆಡ್ ಧ್ವನಿ ಮತ್ತು ಎಸ್‌ಎಂಎಸ್‌ ಸಂವಹನದಲ್ಲಿ ಈ ಮೊಬೈಲ್ ಸಹಾಯಕವಾಗುತ್ತದೆ. ಸ್ಪೆಕ್‌ಶೀಟ್ ವಿಂಡೋಸ್ ಸಿಇ ಆಪರೇಟಿಂಗ್ ಸಿಸ್ಟಮ್ ಮತ್ತು ಮೊಟೊರೊಲಾ ಎಮ್ಎಕ್ಸ್ 21 ಪ್ರೊಸೆಸರ್ ಅನ್ನು ನಿಮಗೆ ನೀಡುತ್ತದೆ. ಆದರೆ ಸಂಪೂರ್ಣವಾಗಿ ಈ ಸಾಧನವನ್ನು ಎನ್‌ಕ್ರಿಪ್ಟ್‌ ಮಾಡಲಾಗಿದೆ. ಬೆಲೆ ಎಷ್ಟು ಗೊತ್ತಾ? 8.97 ಕೋಟಿ ರೂ. ಎಂದರೆ ನಂಬಲೇ ಬೇಕು.

2. ವಿಐಪಿಎನ್‌ ಡೈಮಂಡ್ ಬ್ಲಾಕ್‌

2. ವಿಐಪಿಎನ್‌ ಡೈಮಂಡ್ ಬ್ಲಾಕ್‌

ಯುಎಸ್‌ಪಿ ಕೇವಲ 5 ವಿಐಪಿಎನ್‌ ಡೈಮಂಡ್ ಬ್ಲಾಕ್‌ ತಯಾರಿಸಿ ಬಿಡುಗಡೆ ಮಾಡಿದ್ದು, ವಿಶ್ವದಲ್ಲಿ ಈ ಫೋನ್ ಯಾರ ಬಳಿ ಇದೆ ಎಂಬುದು ಯಾರಿಗೂ ಗೊತ್ತಿಲ್ಲ. ವಿನ್ಯಾಸ ನೋಡಿದರೆ ವಜ್ರಗಳ ಬೆಲೆಯನ್ನೇ ಈ ಮೊಬೈಲ್ ಹೊಂದಿದೆ. ಅಂದ ಹಾಗೇ ಈ ಮೊಬೈಲ್ ಬೆಲೆ 300000 ಯುಎಸ್ ಡಾಲರ್. ಅಂದರೆ, ಭಾರತೀಯ ರೂಪಾಯಿಗೆ ಹೋಲಿಸಿದರೆ ಸುಮಾರು 2.7 ಕೋಟಿ ರೂ. ಅಬ್ಬಾ ಎಷ್ಟಲ್ಲಾ ಬೆಲೆ..?

3. ಸಾವೆಲ್ಲಿ ಚಂಪಾಗ್ನಿ ಡೈಮಂಡ್

3. ಸಾವೆಲ್ಲಿ ಚಂಪಾಗ್ನಿ ಡೈಮಂಡ್

ಸಾವೆಲ್ಲಿ ಚಂಪಾಗ್ನಿ ಡೈಮಂಡ್ ಮೊಬೈಲ್‌ಗೆ ಬಳಸಿದ ವಸ್ತುಗಳು ಮತ್ತು ವಿನ್ಯಾಸಕ್ಕಾಗಿ ದುಬಾರಿಯಾಗಿದೆ. ಇದು 185 ಕ್ಯಾರೆಟ್ ಗುಲಾಬಿ ಚಿನ್ನದ ಶೆಲ್ಗಳೊಂದಿಗೆ 395 ಬಿಳಿ ಮತ್ತು ಕಾಗ್ನ್ಯಾಕ್ ವಜ್ರಗಳನ್ನು ಹೊಂದಿದೆ. ಆಂಡ್ರಾಯ್ಡ್‌ ಸಾಧನವಾಗಿರುವ ಈ ಮೊಬೈಲ್ ಗ್ರಾಹಕರಿಗೆ ಕಸ್ಟ್‌ಮೈಜ್ ಸೇವೆಗಳನ್ನು ಒದಗಿಸುತ್ತದೆ. ಇದರ ಬೆಲೆ 57,000 ಡಾಲರ್ ಅಂದರೆ ಸುಮಾರು 39.36 ಲಕ್ಷ ರೂ..!

4. ಗೋಲ್ಡ್‌ವಿಶ್ ಎಕ್ಲಿಪ್ಸ್‌

4. ಗೋಲ್ಡ್‌ವಿಶ್ ಎಕ್ಲಿಪ್ಸ್‌

ಹೌದು ನೀವು ಹೆಸರನ್ನು ಸರಿಯಾಗಿಯೇ ಓದಿದ್ದಿರಿ..! ಈ ಸ್ಮಾರ್ಟ್‌ಫೋನ್ ಕೈಯಿಂದ ತಯಾರಿಸಿದ ಸ್ಪೋರ್ಟ್ಸ್ ಲೇಥರ್ ಮತ್ತು ಬೆಲೆಬಾಳುವ ಲೋಹಗಳ ಚೌಕಟ್ಟನ್ನು ಹೊಂದಿದೆ. ಸ್ಕ್ರಾಚ್ ನಿರೋಧಕ 5.5 ಇಂಚಿನ ಕೆಪ್ಯಾಸಿಟಿವ್ ಟಚ್‌ ಸ್ಕ್ರೀನ್ ಹೊಂದಿದೆ. ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್‌ ಪ್ರೊಸೆಸರ್ ಹಾಗೂ ಆಂಡ್ರಾಯ್ಡ್‌ ಒಎಸ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಈ ಮೊಬೈಲ್ ಬೆಲೆ 7668 ಡಾಲರ್ ಆಗಿದ್ದು, ಭಾರತೀಯ ರೂಪಾಯಿ ಮೌಲ್ಯಕ್ಕೆ ಪರಿವರ್ತಿಸಿದರೆ 5.27 ಲಕ್ಷ ರೂ. ಆಗುತ್ತದೆ.

5.ಗೋಲ್ಡ್‌ವಿಶ್ ಎಕ್ಲಿಪ್ಸ್‌ - ಮ್ಯಾಜಿಕ ಆನಿಕ್ಸ್ ಅಲಿಗೇಟರ್ ಸ್ಮಾರ್ಟ್‌ಫೋನ್

5.ಗೋಲ್ಡ್‌ವಿಶ್ ಎಕ್ಲಿಪ್ಸ್‌ - ಮ್ಯಾಜಿಕ ಆನಿಕ್ಸ್ ಅಲಿಗೇಟರ್ ಸ್ಮಾರ್ಟ್‌ಫೋನ್

ಈ ಸ್ಮಾರ್ಟ್‌ಫೋನ್‌ಗಿಂತ ಗೋಲ್ಡ್‌ವಿಶ್ ಎಕ್ಲಿಪ್ಸ್‌ ಅಗ್ಗವಾಗಿದೆ. ಆಂಡ್ರಾಯ್ಡ್‌ ಮತ್ತು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಕಪ್ಪು ಅಲಿಗೇಟರ್ ಚರ್ಮ ಇರುವುದರಿಂದ ಈ ಸ್ಮಾರ್ಟ್‌ಫೋನ್ ಬೆಲೆ 7,965 ಡಾಲರ್ ಆಗಿದೆ. ಅಂದರೆ, ಸುಮಾರು 5.5 ಲಕ್ಷ ರೂ. ಆಗುತ್ತೆ.

6.ಸಿರಿನ್ ಸೋಲಾರಿನ್

6.ಸಿರಿನ್ ಸೋಲಾರಿನ್

ಇದು ಪ್ರೈವಸಿ ಕೇಂದ್ರಿಕೃತ ಸ್ಮಾರ್ಟ್‌ಫೋನ್ ಆಗಿದ್ದು, ಬಳಕೆದಾರರಿಗೆ ಅತ್ಯಂತ ಗೌಪ್ಯತೆ ನೀಡುತ್ತದೆ. ಈ ಸ್ಮಾರ್ಟ್‌ಫೋನ್ ಸ್ಪೇಕ್-ಶೀಟ್‌ ನಿರಾಶಾದಾಯಕವಾಗಿದೆ. ಮತ್ತು ಹಳೆ ಆಂಡ್ರಾಯ್ಡ್ ಲಾಲಿಪಾಪ್ ಒಎಸ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ ಸುಮಾರು 9 ಲಕ್ಷ ರೂ. ಎಂದರೆ ನಂಬಲೇಬೇಕು.

7. ಪೋರ್ಷೆ ಡಿಸೈನ್ ಹುವಾವೇ ಮೇಟ್ ಆರ್ಎಸ್

7. ಪೋರ್ಷೆ ಡಿಸೈನ್ ಹುವಾವೇ ಮೇಟ್ ಆರ್ಎಸ್

ಹುವಾವೇ ಇತ್ತೀಚೆಗೆ ಪೋರ್ಷೆ ಡಿಸೈನ್ ಮೇಟ್ 10 ಎಂಬ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಡೈಮಂಡ್ ಬ್ಲ್ಯಾಕ್ ಬಣ್ಣ 512GB)ಆವೃತ್ತಿಗೆ 2,599 ಡಾಲರ್ ಎಂದರೆ 1.79 ಲಕ್ಷ ರೂ. ಆಗಿದೆ. ಪೋರ್ಷೆ ಡಿಸೈನ್ ಮೇಟ್ 10 ಸ್ಮಾರ್ಟ್‌ಫೋನ್‌ ಹುವಾವೇ ಮೇಟ್‌ನಂತೆ ಅನೇಕ ವಿಶೇಷತೆಗಳನ್ನು ಹೊಂದಿದೆ. ಪೋರ್ಷೆ ಡಿಸೈನ್ ಇಂಟರ್‌ಫೇಸ್ ಹಾಗೂ ವಿಶೇಷವಾಗಿ ವಿನ್ಯಾಸಗೊಳಿಸಲಾದ ಚರ್ಮದ ಬ್ಯಾಕ್‌ಕೇಸ್ ಹೊಂದಿದೆ.

8. ಹಾನರ್ ನೋಟ್ 10 ರೋಲ್ಸ್‌ ರಾಯ್ಸ್‌

8. ಹಾನರ್ ನೋಟ್ 10 ರೋಲ್ಸ್‌ ರಾಯ್ಸ್‌

ಹುವಾವೇಯ ಉಪಬ್ರಾಂಡ್‌ ಆದ ಹಾನರ್ ಶೀಘ್ರದಲ್ಲಿಯೇ ಅಂದರೆ ಇದೇ ಜುಲೈ 26ಕ್ಕೆ ತನ್ನ ಹೊಸ ದುಬಾರಿ ಫೋನ್‌ ಆದ ನೋಟ್‌ 10 ರೋಲ್ಸ್‌ ರಾಯ್ಸ್‌ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ. ಇದು ಲಿಮಿಟೆಡ್ ಆವೃತ್ತಿಯಾಗಿದ್ದು, ಚೀನಾದಲ್ಲಿ ಬಿಡುಗಡೆಗೊಳ್ಳಲಿದೆ. ನೋಟ್‌ 10 ರೋಲ್ಸ್‌ ರಾಯ್ಸ್‌ ಬೆಲೆ 1.02 ಲಕ್ಷ ರೂ. ಇರುವ ಸಾಧ್ಯತೆ ಇದೆ.

9. ಒಪ್ಪೊ ಫೈಂಡ್ ಎಕ್ಸ್‌ ಲ್ಯಾಂಬೋರ್ಗಿನಿ

9. ಒಪ್ಪೊ ಫೈಂಡ್ ಎಕ್ಸ್‌ ಲ್ಯಾಂಬೋರ್ಗಿನಿ

ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೊ ಇತ್ತೀಚೆಗೆ ತನ್ನ ಫ್ಲಾಗ್‌ಶಿಪ್‌ ಫೈಂಡ್ ಎಕ್ಸ್‌ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆಗೊಳಿಸಿದೆ. ಭಾರತಕ್ಕೆ ಇನ್ನು ಈ ಮೊಬೈಲ್ ಬಂದಿಲ್ಲ. ಭಾರತದಲ್ಲಿ ಈ ಫೋನ್ ಬಿಡುಗಡೆಯಾದರೆ 1.52 ಲಕ್ಷ ರೂ. ಬೆಲೆ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಪಾಪ್‌ಅಪ್ ಕ್ಯಾಮೆರಾ ಹೊಂದಿರುವುದು ಮತ್ತು ಪ್ರಮುಖ ಫ್ಲಾಗ್‌ಶಿಪ್ ಫೀಚರ್‌ಗಳನ್ನು ಹೊಂದಿದೆ.

10.ಟೊನಿನೋ ಲ್ಯಾಂಬೋರ್ಗಿನಿ ಆಲ್ಫಾ ಒನ್

10.ಟೊನಿನೋ ಲ್ಯಾಂಬೋರ್ಗಿನಿ ಆಲ್ಫಾ ಒನ್

ಲ್ಯಾಂಬೋರ್ಗಿನಿ ಆಲ್ಫಾ ಒನ್ ಐಷಾರಾಮಿ ಸ್ಮಾರ್ಟ್‌ಫೋನ್ ಆಗಿದ್ದು, ಇಟಾಲಿಯನ್ ಬ್ಲಾಕ್‌ ಲೇಥರ್ ಮತ್ತು ಸಾಕಷ್ಟು ವಿಭಿನ್ನವಾದ ಕ್ಲಾಸ್ ಶೈಲಿಯನ್ನು ಹೊಂದಿದೆ. ಆದರೆ, ಹಾರ್ಡ್‌ವೇರ್‌ಗಳಿಗೆ ಸಂಬಂಧಿಸಿದಂತೆ ಸ್ಪೇಕ್‌-ಶೀಟ್‌ ನಿಮ್ಮನ್ನು ಮೆಚ್ಚಿಸುವುದಿಲ್ಲ. ಹಳೆಯ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 820 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿದ್ದು, ಆಂಡ್ರಾಯ್ಡ್ ನೌಗಾಟ್ ಒಎಸ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 2,450 ಡಾಲರ್ ಆಗಿದ್ದು, ಭಾರತೀಯ ರೂಪಾಯಿಯಲ್ಲಿ 1.69 ಲಕ್ಷ ರೂ. ಆಗಿದೆ.

Best Mobiles in India

English summary
World’s 10 of the most expensive smartphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X