ಗೂಗಲ್ ವಿರುದ್ಧ ನಿಜಕ್ಕೂ ಸೆಣಸಾಡುವ ಸಾಮರ್ಥ್ಯ ಹೊಂದಿದೆಯೇ ಹುವಾಯಿ?

By Gizbot Bureau
|

ಹುವಾಯಿ ಸ್ಮಾರ್ಟ್ ಫೋನ್ ಸಂಸ್ಥೆ ಕಳೆದೆರಡು ವರ್ಷಗಳಲ್ಲಿ ತನ್ನ ಬ್ಯುಸಿನೆಸ್ ನಲ್ಲಿ ಉತ್ತುಂಗ ಸ್ಥಾನಕ್ಕೆ ಏರುತ್ತಲೇ ಇದೆ. ಇತ್ತೀಚೆಗೆ ಆಪಲ್ ನ್ನು ಹಿಂದಿಕ್ಕಿರುವ ಹುವಾಯಿ ಆಪಲ್ ಸಂಸ್ಥೆಯನ್ನು ಎರಡನೇ ಸ್ಥಾನಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಹೆಚ್ಚಿನವರಿಗೆ ಸಾಫ್ಟ ವೇರ್ ವಿಚಾರದಲ್ಲಿ ಹುವಾಯಿ ಸಂಸ್ಥೆ ಹಿಂಬದಿಯಲ್ಲಿ ಏನು ಮಾಡುತ್ತಿದೆ ಎಂಬ ಬಗ್ಗೆ ತಿಳಿದಿಲ್ಲ.

ಆದಾಯದ ಮೇಲೆ ಹೊಡೆತ:

ಆದಾಯದ ಮೇಲೆ ಹೊಡೆತ:

ಆದರೆ ಇದರ ವಿರುದ್ಧ ಆಪಲ್ ಕೂಡ ಕೈಕಟ್ಟಿ ಕುಳಿತುಕೊಳ್ಳಲಿಲ್ಲ.ಹುವಾಯಿ ಸಂಸ್ಥೆಯ ಪ್ರಮುಖ ಮಾರುಕಟ್ಟೆಯಾಗಿರುವ ಯುಎಸ್ ನಲ್ಲಿ ಹುವಾಯಿ ಸಂಸ್ಥೆಯ ಟೆಲಿಕಾಂ ಸಾಧನಗಳನ್ನು ಬಳಸದಿರುವಂತೆ ನಿಷೇಧವನ್ನು ಹೇರಿದೆ. ಇದು ಹುವಾಯಿ ಸಂಸ್ಥೆಯ ಆದಾಯದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮವನ್ನುಂಟು ಮಾಡಿದೆ.

ದೊಡ್ಡ ಮಟ್ಟದಲ್ಲಿ ತಯಾರಾದ ಹುವಾಯಿ:

ದೊಡ್ಡ ಮಟ್ಟದಲ್ಲಿ ತಯಾರಾದ ಹುವಾಯಿ:

ಆದರೆ ಒಂದು ವೇಳೆ ಕೋರ್ಟಿನಲ್ಲಿ ಈ ಕೇಸನ್ನು ಸಂಸ್ಥೆ ಸೋತರೆ ಅಥವಾ ಅಂದುಕೊಂಡಂತೆ ನಡೆಯದೇ ಇದ್ದರೆ ಹುವಾಯಿ ಅದರ ಪರಿಣಾಮ ಎದುರಿಸುವುದಕ್ಕೆ ದೊಡ್ಡ ಮಟ್ಟದಲ್ಲಿ ಸಿದ್ಧವಾಗಿದೆ ಎಂದು ಹೇಳಿದೆ.

ಹುವಾಯಿಯ ಸ್ವಂತ ಆಪರೇಟಿಂಗ್ ಸಿಸ್ಟಮ್:

ಹುವಾಯಿಯ ಸ್ವಂತ ಆಪರೇಟಿಂಗ್ ಸಿಸ್ಟಮ್:

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹುವಾಯಿ ಸಂಸ್ಥೆಯ ಎಕ್ಸಿಕ್ಯೂಟೀವ್ ಆಗಿರುವ ರಿಚರ್ಡ್ ಯು ಅವರು ಕಂಪೆನಿಯು ತನ್ನದೇ ಸ್ವಂತ ಆಪರೇಟಿಂಗ್ ಸಿಸ್ಟಮ್ ನ್ನು ತಯಾರಿಸಿದೆ ಮತ್ತು ಬಿಡುಗಡೆಗೊಳಿಸಲು ಸಿದ್ಧವಾಗಿದೆ ಎಂದು ಹೇಳಿದೆ. ಸದ್ಯ ಹುವಾಯಿ ಮತ್ತು ಹಾನರ್ ಎರಡೂ ಸಂಸ್ಥೆಗಳ ಹ್ಯಾಂಡ್ ಸೆಟ್ ಗೂಗಲ್ ನ ಆಂಡ್ರಾಯ್ಡ್ ಆಧಾರಿತ EMUI ನ್ನು ಹೊಂದಿದೆ.

ಗೂಗಲ್ ಆಂಡ್ರಾಯ್ಡ್ ಕ್ಯೂವನ್ನು ಪ್ರಕಟಿಸಿದೆ:ಬೇಟಾ ವರ್ಷನ್ ನಲ್ಲಿ ತಿಳಿದುಬಂದ ಹೊಸ ಫೀಚರ್ ಗಳು

ದಕ್ಷಿಣ ಚೀನಾದ ಮಾರ್ನಿಂಗ್ ಪೋಸ್ಟ್ ನ ಮೊದಲಿನ ವರದಿಯ ಪ್ರಕಾರ ಹುವಾಯಿ ಸಂಸ್ಥೆ ತನ್ನದೇ ಸ್ವಂತ ಆಪರೇಟಿಂಗ್ ಸಿಸ್ಟಮ್ ತಯಾರಿಕೆಗಾಗಿ ಕಳೆದ ಏಳು ವರ್ಷಗಳಿಂದ ಕೆಲಸ ಮಾಡುತ್ತಿದೆ. ಯುಎಸ್ ತನಿಖೆಯ ನಂತರ ಈ ಅಂಶ ತಿಳಿದುಬಂದಿದೆ ಮತ್ತು ಇದರಲ್ಲಿ ZTE ಸ್ಮಾರ್ಟ್ ಫೋನ್ ಬ್ರ್ಯಾಂಡ್ ಕೂಡ ಒಳಗೊಂಡಿದೆ. ಹುವಾಯಿ ಸಂಸ್ಥೆ ತಿಳಿಸಿರುವ ಪ್ರಕಾರ ಸದ್ಯ ತನ್ನ ಮೊಬೈಲ್ ಡಿವೈಸ್ ಮತ್ತು ಲ್ಯಾಪ್ ಟಾಪ್ ಗಳಿಗೆ ಗೂಗಲ್ ಆಂಡ್ರಾಯ್ಡ್ ಮತ್ತು ಮೈಕ್ರೋ ಸಾಫ್ಟ್ ವಿಂಡೋಸ್ ಫ್ಲಾಟ್ ಫಾರ್ಮ್ ನ್ನೇ ಬಳಕೆ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ತನ್ನದೇ ಸ್ವಂತ ಓಎಸ್ ಬಳಕೆ ಮಾಡುವ ಬಗ್ಗೆ ಈಗ ಯಾವುದೇ ಚಿಂತನೆಯನ್ನು ಹುವಾಯಿ ನಡೆಸಿಲ್ಲ ಎಂದು ತಿಳಿದುಬಂದಿದೆ.

ಸ್ವಂತ ಓಎಸ್ ಬಳಸುವ ಚಿಂತನೆ ಇಲ್ಲ:

ಸ್ವಂತ ಓಎಸ್ ಬಳಸುವ ಚಿಂತನೆ ಇಲ್ಲ:

ಹುವಾಯಿ ಸ್ವಂತ ಆಂಡ್ರಾಯ್ಡ್ ಓಎಸ್ ಹೊಂದಿದೆ ಎಂಬ ಬಗ್ಗೆ ಕಳೆದ ಮೇ ತಿಂಗಳಲ್ಲೇ ಸುದ್ದಿಯಾಗಿತ್ತು.ಆದರೆ ಹುವಾಯಿ ಇದುವರೆಗೂ ತಮ್ಮದೇ ಸ್ವಂತ ಆಪರೇಟಿಂಗ್ ಸಿಸ್ಟಮ್ ರೆಡಿಯಾಗಿದೆ ಎಂದು ಹೇಳಿಯೇ ಇಲ್ಲ ಮತ್ತು ಬಹುಶ್ಯಃ ಥರ್ಡ್ ಪಾರ್ಟಿ ಆಪ್ ಡೆವಲಪರ್ ಜೊತೆಗೆ ಇದು ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆ ಇದೆ. ತನ್ನದೇ ಸ್ವಂತ ಓಎಸ್ ಮೂಲಕ ಮಾರುಕಟ್ಟೆಯಲ್ಲಿ ಯಾವ ಕ್ಷಣದಲ್ಲಿ ಬೇಕಿದ್ದರೂ ಕೂಡ ಹುವಾಯಿ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ.

ಮಾರುಕಟ್ಟೆ ಲೆಕ್ಕಾಚಾರ:

ಮೈಕ್ರೋ ಸಾಫ್ಟ್ ವಿಂಡೋಸ್,ಸ್ಯಾಮ್ ಸಂಗ್ ನ ಟೈಝನ್ ಮತ್ತು ನೋಕಿಯಾ ಸಿಂಬಿಯಾನ್ ಫ್ಲ್ಯಾಟ್ ಫಾರ್ಮ್ ಗಳು ಈ ಹಿಂದೆ ಇಳಿಯುವಿಕೆಗಾಗಿ ಪರದಾಡಿದವು ಮತ್ತು ಈಗಲೂ ಪರದಾಡುತ್ತಿವೆ.ಇದೀಗ ಗೂಗಲ್ ಆಂಡ್ರಾಯ್ಡ್ ಮತ್ತು ಆಪಲ್ ಐಓಎಸ್ ನ ಪೈ ಗಳು ಓಎಸ್ ಮಾರುಕಟ್ಟೆಯನ್ನು ಆಳುತ್ತಿದೆ.

Best Mobiles in India

English summary
World's second-biggest smartphone maker 'going against' Google, says it's ready with Android rival

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X