ಬೆಂಗಳೂರಿನಲ್ಲಿ ಬಿಡುಗಡೆಯಾದ 99 ರೂಪಾಯಿಯ 'ನಮೋಟೆಲ್' ಸ್ಮಾರ್ಟ್‌ಫೋನ್‌

Written By:

250 ರೂಪಾಯಿಗಳಿಗೆ "ಫ್ರೀಡಂ 251" ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ನೀಡುತ್ತೇವೆ ಎಂದು ವಿವಾದಕ್ಕೆ ಒಳಗಾಗಿ ವಂಚನೆ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ "ನಮೋಟೆಲ್‌" ಎಂಬ ಕಂಪನಿಯ ಮಾಧವರೆಡ್ಡಿ ರೂ.99 ಕ್ಕೆ ಸ್ಮಾರ್ಟ್‌ಫೋನ್‌ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ. 99 ರೂಪಾಯಿಯ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸುವುದು ಹೇಗೆ? ಅದರ ಫೀಚರ್‌ ಏನು ಎಂಬಿತ್ಯಾದಿ ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಮೋಟೆಲ್‌ ಆಂಡ್ರಾಯ್ಡ್‌ ಮೊಬೈಲ್‌ ಫೀಚರ್‌

ನಮೋಟೆಲ್‌ ಆಂಡ್ರಾಯ್ಡ್‌ ಮೊಬೈಲ್‌ ಫೀಚರ್‌

1

ನಮೋಟೆಲ್ ಕಂಪನಿಯ ಸಿಇಓ ಮಾಧವರೆಡ್ಡಿಯವರು ಮೊಬೈಲ್‌ ಅನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಅದರ ಫೀಚರ್‌ಗಳು ಕೆಳಗಿನಂತಿವೆ.
* 5.1 ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಮ್‌
* 4 ಇಂಚಿನ ಡಿಸ್‌ಪ್ಲೇ
* 1.3 ಕ್ವಾಡ್‌ಕೋರ್‌ ಪ್ರೊಸೆಸರ್
* 1GB RAM
* VGA ಮುಂಭಾಗ ಕ್ಯಾಮೆರಾ
* 4 GB ಸ್ಟೋರೇಜ್‌
* 3G ಸ್ಮಾರ್ಟ್‌ಫೋನ್‌
* 1325 mAh ಬ್ಯಾಟರಿ
* ಡ್ಯುಯಲ್‌ ಸಿಮ್‌

ರೂ 99 ರ ಮೊಬೈಲ್‌ ಖರೀದಿ ಹೇಗೆ?

ರೂ 99 ರ ಮೊಬೈಲ್‌ ಖರೀದಿ ಹೇಗೆ?

2

ಮೊದಲಿಗೆ bemybanker.com ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ 199 ರೂಪಾಯಿ ಹಣ ಪಾವತಿಸಿ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಪಡೆಯಬೇಕು. ನಂತರ BMB Refrence ID ಸಿಗುತ್ತದೆ. ಇದನ್ನು ಬಳಸಿ www.namotel.com ನಲ್ಲಿ ನೋಂದಾವಣೆ ಮಾಡಿಕೊಂಡು ಆಧಾರ್‌ ಕಾರ್ಡ್‌ ನಂಬರ್‌ ಮತ್ತು ಭಾವಚಿತ್ರ ಅಪ್‌ಲೋಡ್‌ ಮಾಡಬೇಕು. ಈ ಪ್ರೊಸೆಸ್‌ ಆದ ಮೇಲೆ ಕಂಪನಿ ಇಮೇಲ್‌ ಕಳುಹಿಸುತ್ತದೆ ಎಂದು ಕಂಪನಿ ಸಿಇಓ ಮಾಧವರೆಡ್ಡಿಯವರು ಹೇಳಿದ್ದಾರೆ.

 ಲಾಗಿನ್‌

ಲಾಗಿನ್‌

3

ಅಂದಹಾಗೆ ಮಾಧವರೆಡ್ಡಯವರು ಮೇ 17 ರಿಂದ ಮೇ 25ನೇ ದಿನಾಂಕದವರೆಗೆ ಮಾತ್ರ ವೆಬ್‌ಸೈಟ್‌ಗೆ ಲಾಗಿನ್‌ ಆಗಬಹುದು ಎಂದು ಮಾಹಿತಿ ತಿಳಿಸಿದ್ದಾರೆ.

ಮಾಧವರೆಡ್ಡಿಯವರು ಹೇಳಿದ್ದೇನು?

ಮಾಧವರೆಡ್ಡಿಯವರು ಹೇಳಿದ್ದೇನು?

4

ಗ್ರಾಹಕರು ಯಾವ ಗ್ಯಾರಂಟಿ ಮೇಲೆ ನಿಮಗೆ ಹಣವನ್ನು ಕಟ್ಟಬೇಕು ಎಂದು ವರದಿಗಾರರು ಕೇಳಿದ ಪ್ರಶ್ನೆಗೆ "ನಾನು ರೈತ ಕುಟುಂಬದಿಂದ ಬಂದವನು. ಹಲವಾರು ಖಾಸಗಿ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಜನರಿಗೆ ಒಳ್ಳೆಯ ಸೇವೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಯ ಮೊಬೈಲ್‌ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂದರು.

ಚಿತ್ರ ಕೃಪೆ:PTI Photo by Shailendra Bhojak

ಮೊಬೈಲ್‌ ಮಾರಾಟ

ಮೊಬೈಲ್‌ ಮಾರಾಟ

5

ಪ್ರಸ್ತುತದಲ್ಲಿ ಮೊಬೈಲ್‌ 99 ರೂ.ನ ಮೊಬೈಲ್‌ ಅನ್ನು ಕರ್ನಾಟಕದಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು , 25-30 ಲಕ್ಷ ಮಾರಾಟ ಗುರಿಹೊಂದಲಾಗಿದೆ ಎಂದು ಮಾಧವರೆಡ್ಡಿಯವರು ಹೇಳಿದ್ದಾರೆ. 6 ಕೋಟಿಗಿಂತ ಹೆಚ್ಚು ಜನರು ಇರುವ ಕರ್ನಾಟಕದಲ್ಲಿ ಕೇವಲ 25-30 ಲಕ್ಷ ಮೊಬೈಲ್‌ ಅನ್ನು 99 ರೂಪಾಯಿಗೆ ಮಾರಾಟ ಮಾಡುವುದು ದೊಡ್ಡ ವಿಷಯವೇನು ಅಲ್ಲಾ ಅಲ್ವಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
world’s cheapest smartphone, priced at Rs 99. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot