Subscribe to Gizbot

ರೆಡ್‌ಮಿ 4 ಖರೀದಿಸುವ ಪ್ಲಾನ್ ಇದ್ದವರಿಗೆ ಶುಭ ಸುದ್ದಿ..!!!

Written By:

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಹವಾ ಎಬ್ಬಿಸಿದ ಶಿಯೋಮಿ ರೆಡ್‌ಮಿ 4 ಇಂದಿಗೂ ಆನ್‌ಲೈನಲ್ಲಿ ಭಾರೀ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದೆ ಬೆನ್ನಲ್ಲಿ ಈ ಫೋನ್ ಆಫ್ ಲೈನ್ ಮಾರುಕಟ್ಟೆಗೂ ಕಾಲಿಟ್ಟಿದೆ.

ರೆಡ್‌ಮಿ 4 ಖರೀದಿಸುವ ಪ್ಲಾನ್ ಇದ್ದವರಿಗೆ ಶುಭ ಸುದ್ದಿ..!!!

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

ಇಷ್ಟು ದಿನ ಕೇಲವ ಮಿ.ಕಾಮ್ ಮತ್ತು ಅಮೇಜಾನ್ ಶಾಪಿಂಗ್ ತಾಣದಲ್ಲಿ ಮಾತ್ರವೇ ಈ ಫೋನ್ ಮಾರಾಟವಾಗುತ್ತಿತ್ತು. ಅಲ್ಲಿ ಫ್ಲಾಷ್ ಸೇಲಿನಲ್ಲಿ ಮಾತ್ರವೇ ಫೋನ್ ದೊರೆಯುತ್ತಿದ್ದರಿಂದ ಹೆಚ್ಚಿನ ಮಂದಿಯನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಆಫ್ ಲೈನ್ ಮಾರುಕಟ್ಟೆಗೆ ಈ ಫೋನ್ ಲಗ್ಗೆ ಇಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ರೆಡ್‌ಮಿ 4 ಫಸ್ಟ್ ಲುಕ್ ವಿಡಿಯೋ ಇಲ್ಲಿದೆ:

ಭಾರತದಲ್ಲಿ ರೆಡ್‌ಮಿ 4 ಲಾಂಚ್ ಆದ ಸಂದರ್ಭದಲ್ಲಿ ಫೋನಿನ ಕುರಿತ ಸಂಫೂರ್ಣ ಮಾಹಿತಿಯನ್ನು ನೀಡಲಾಗಿತ್ತು. ನೀವು ಈ ಪೋನ್ ಖರೀದಿಸುವ ಮುನ್ನ ಈ ವಿಡಿಯೋ ನೋಡಿ.

ಮೊದಲ ಮಾರಾಟದಲ್ಲೇ ದಾಖಲೆ:

ಮೊದಲ ಮಾರಾಟದಲ್ಲೇ ದಾಖಲೆ:

ಮೇ 23 ರಂದು ಫ್ಲಾಷ್ ಸೇಲಿನಲ್ಲಿ ಮಾರಾಟಗೊಂಡ ರೆಡ್‌ಮಿ 4 ಕೇವಲ 8 ನಿಮಿಷದಲ್ಲಿ 2.5 ಲಕ್ಷ ಫೋನ್ ಗಳು ಗ್ರಾಹಕರ ಕೈ ಸೇರಿತ್ತು. ಈ ಮೂಲಕ ಶಿಯೋಮಿ ಭಾರತದಲ್ಲಿ ಹೊಸ ಭಾಷ್ಯವನ್ನು ಬರೆದಿತ್ತು.

ರೆಡ್‌ಮಿ 4 ವಿಶೇಷತೆ:

ರೆಡ್‌ಮಿ 4 ವಿಶೇಷತೆ:

ಶಿಯೋಮಿ ರೆಡ್‌ಮಿ 4 ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, 5 ಇಂಚಿನ HD (720x1280 p) ಡಿಸ್‌ಪ್ಲೇ ಹೊಂದಿದೆ, ಇದಕ್ಕೆ 2.5D ಕರ್ವಡ್ ಗ್ಲಾಸ್ ವಿನ್ಯಾಸ ಮಾಡಲಾಗಿದೆ. ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 420 ಪ್ರೋಸೆಸರ್ ಜೊತೆಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗದೆ. ಇದರಲ್ಲಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಬೆಲೆ ಗಳು:

ಬೆಲೆ ಗಳು:

ಶಿಯೋಮಿ ರೆಡ್‌ಮಿ 4 ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, ಆನ್‌ ಲೈನಿನಲ್ಲಿ ಈ ಫೋನಿನ ಬೆಲೆ ಕ್ರಮವಾಗಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿ: ಬೆಲೆ ರೂ.6,999, 3GB RAM ಮತ್ತು 32GB ಇಂಟರ್ನಲ್ ಮೆಮೊರಿ:ಬೆಲೆ ರೂ.8,999 ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ: ಬೆಲೆ ರೂ.10,999 ಆಗಿತ್ತು, ಆದರೆ ಆಫ್‌ಲೈನ್ ಮಾರುಕಟ್ಟೆಯಲ್ಲಿ ಬೆಲೆ ರೂ. 500 ಹೆಚ್ಚಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
now, with an aim to ramp up its offline presence, the Xiaomi Redmi 4 will also be available to purchase via offline channels in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot