ಬೈಕ್ ಓಡಿಸುವಾಗ ಮೊಬೈಲ್‌ನಲ್ಲಿ ಮಾತನಾಡುತ್ತೀರಾ..? ಹಾಗಿದ್ರೆ ಈ ಸ್ಟೋರಿ ನಿಮಗಾಗಿ..!

Written By:

ಬೆಂಗಳೂರಿನ ಬಿಝಿ ರಸ್ತೆಯಲ್ಲಿ ಬೈಕ್ ಓಡಿಸುತ್ತಾ ಇಲ್ಲವೇ ಕಾರು ಡ್ರೈವ್ ಮಾಡುವ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಮಾತಾಡುತ್ತಿರುವುದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಇದೊಂದು ಅಪಾಯಕಾರಿ ಅಭ್ಯಾಸವಾಗಿದ್ದು, ನೀವು ಈ ಅಭ್ಯಾಸವನ್ನು ರೂಡಿಸಿಕೊಂಡಿದ್ದರೇ ಬಿಟ್ಟು ಬಿಡುವುದು ಉತ್ತಮ. ಇಲ್ಲವಾದರೆ ಈ ಒಂದು ಅಭ್ಯಾಸ ನಿಮ್ಮ ಪ್ರಾಣಕ್ಕೆ ಹಾಕಿಕಾರಕವಾಗಲಿದ್ದು, ಬೇರೆಯವರಿಗೂ ಮಾರಕವಾಗಲಿದೆ.

ಬೈಕ್ ಓಡಿಸುವಾಗ ಮೊಬೈಲ್‌ನಲ್ಲಿ ಮಾತನಾಡುತ್ತೀರಾ..? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ದಿನದಿಂದ ದಿನಕ್ಕೆ ಫೋನ್‌ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು ಇಳಿಕೆಯಾಗುತ್ತಿಲ್ಲ. ಇದು ಅಭ್ಯಾಸವು ವಾಹನ ಸವಾರ ಪ್ರಾಣಕ್ಕೆ ಮತ್ತು ರಸ್ತೆಯಲ್ಲಿ ಸಾಗುತ್ತಿರುವ ಇತರೆ ಸವಾರರಿಗೂ ಅಪಾಯವನ್ನು ಸೃಷ್ಟಿ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಅರಿವೂ ಮೂಡಿಸಲು ಮುಂದಾಗಿದ್ದಾರೆ.

ಓದಿರಿ: ಇಂಟರ್ನೆಟ್‌ ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ: ಪರಿಣಾಮ ತೀರಾ ಅಪಾಯಕಾರಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತೀ ಹೆಚ್ಚು ಪ್ರಕರಣಗಳು:

ಅತೀ ಹೆಚ್ಚು ಪ್ರಕರಣಗಳು:

ಸದ್ಯ ಬಿಡುಗಡೆಯಾಗಿರುವ ವರದಿಯೊಂದು 2017ರಲ್ಲಿ ಚಾಲನೆ ವೇಳೆ ಮೊಬೈಲ್‌ ಫೋನ್‌ ಬಳಸುವ ಚಾಲಕರ ವಿರುದ್ಧ ಸಂಚಾರಿ ಪೊಲೀಸರುವ ಬರೋಬ್ಬರಿ 2.79 ಲಕ್ಷ ಪ್ರಕರಣಗಳು ದಾಖಲಿಸಲಾಗಿದೆ ಎಂಬ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ. ಹೀಗೆ ಫೋನಿನಲ್ಲಿ ಮಾತನಾಡುತ್ತಾ ಡ್ರೈವ್ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಅಪಘಾತಗಳು ಸಂಭವಿಸಲಿದೆ ಎನ್ನಲಾಗಿದೆ.

2016ಕ್ಕಿಂತ ಅಧಿಕ:

2016ಕ್ಕಿಂತ ಅಧಿಕ:

ಚಾಲನೆ ವೇಳೆ ಮೊಬೈಲ್‌ ಫೋನ್‌ ಬಳಸುವವರ ಪ್ರಮಾಣವು 2016ಕ್ಕಿಂತ 2017ರಲ್ಲಿ ಅಧಿಕವಾಗಿದೆ ಎನ್ನಲಾಗಿದೆ. 2016ರಲ್ಲಿ ಚಾಲನೆ ವೇಳೆ ಮೊಬೈಲ್‌ ಫೋನ್‌ ಬಳಸಿದ್ದಕ್ಕಾಗಿ 2.53 ಲಕ್ಷ ಕೇಸ್‌ಗಳು ದಾಖಲಿಸಲಾಗಿತ್ತು. ಆದರೆ ಈ ಬಾರಿ 2.79 ಲಕ್ಷ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.

Do you know what all u can do by Downloading Hike Messenger app.?
ಮಾತನಾಡುವದಕ್ಕಿಂತ ಚಾಟಿಂಗ್ ಅಪಾಯಕಾರಿ:

ಮಾತನಾಡುವದಕ್ಕಿಂತ ಚಾಟಿಂಗ್ ಅಪಾಯಕಾರಿ:

ಬೈಕ್ ಮತ್ತು ಕಾರುಗಳನ್ನು ಚಾಲನೆ ಮಾಡುವ ಸಂದರ್ಭದಲ್ಲಿ ಮೊದಲು ಕೇವಲ ಮಾತಡುತ್ತಿರುವವರನ್ನು ಕಾಣಬಹುದಾಗಿತ್ತು, ಆದರೆ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದ ಬಳಿಕ ದ್ವಿಚಕ್ರ ವಾಹನ ಹಾಗೂ ಕಾರು ಚಾಲನೆ ವೇಳೆ ಚಾಟಿಂಗ್‌ ಮಾಡುವ ಚಾಲಕರ ಸಂಖ್ಯೆ ಅಧಿಕಾಗಿದ್ದು, ಇದು ರಸ್ತೆ ಅಪಘಾತ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಬೈಕ್ ಸವಾರರೇ ಹೆಚ್ಚು:

ಬೈಕ್ ಸವಾರರೇ ಹೆಚ್ಚು:

ಬೈಕ್ ಮತ್ತು ಸ್ಕೂಟರ್ ಸವಾರರು ಚಾಲನೆ ಮಾಡುವ ವೇಳೆ ಹೆಚ್ಚಾಗಿ ಮೊಬೈಲ್‌ ಬಳಸುತ್ತಾರೆ ಎನ್ನುವ ಮಾಹಿತಿ ಈ ಅಂಕಿ-ಅಂಶದಿಂದ ತಿಳಿದುಬಂದಿದೆ. ಇದರಿಂದಾಗಿ ಪಾದಚಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಎಚ್ಚರ ಅಗತ್ಯ:

ಎಚ್ಚರ ಅಗತ್ಯ:

ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಬೈಕ್ ಮತ್ತು ಕಾರುಗಳನ್ನು ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆಮಾಡ ಬೇಡಿ ಎಂದು ಅರಿವು ಮೂಡಿಸುತ್ತಿದ್ದಾರೆ. ಜನರು ಈ ಕುರಿತು ಎಚ್ಚರಿಕೆ ವಹಿಸದಿದ್ದರೇ ಮುಂದೆ ತೊಂದರೆ ನಿಶ್ವಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
using cellphone while driving. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot