ರೆಡ್ಮಿ ನೋಟ್ 8 ವಿಮರ್ಶೆ : ಕಡಿಮೆ ಬೆಲೆಗೆ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್‌ಫೋನ್!

|

ಚೀನಾ ಮೂಲದ ಶಿಯೋಮಿ ಕಂಪನಿಯು ಇತ್ತೀಚಿಗೆ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ರೆಡ್ಮಿ ನೋಟ್ 7 ಫೋನಿನ ಮುಂದುವರಿದ ಭಾಗ ಎನ್ನಬಹುದಾಗಿದೆ. ಕ್ಯಾಮೆರಾ, ಪ್ರೊಸೆಸರ್ ಕಾರ್ಯವೈಖರಿ, ಬ್ಯಾಟರಿ, ಲುಕ್‌ ಹೀಗೆ ಹತ್ತು ಹಲವು ಹಂತಗಳಲ್ಲಿ ಸದ್ಯದ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿಯೇ 'ರೆಡ್ಮಿ ನೋಟ್ 8' ಸ್ಮಾರ್ಟ್‌ಫೋನ್‌ ಭಿನ್ನವಾಗಿ ಕಾಣುತ್ತದೆ.

ಸ್ಮಾರ್ಟ್‌ಫೋನ್

ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ ಕಾಲ್ಕಮ್ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಿಂಬದಿಯಲ್ಲಿ ನಾಲ್ಕು ರಿಯರ್ ಕ್ಯಾಮೆರಾ ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿ ಗುರುತಿಸಿಕೊಂಡಿರುವುದು ವಿಶೇಷ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ 6 ಜಿಬಿ RAM ವೇರಿಯಂಟ್‌ ಆಯ್ಕೆಯನ್ನು ಹೊಂದಿದ್ದು, ವೇಗವು ಮತ್ತು ಮಲ್ಟಿಟಾಸ್ಕ್ ಕೆಲಸಗಳು ಉತ್ತಮವಾಗಿ ಸಾಗುತ್ತವೆ. ರೆಡ್ಮಿ ನೋಟ್‌ನ ಇತರೆ ಫೀಚರ್ಸ್‌ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಆಕರ್ಷಕ ನೋಟವನ್ನು ಪಡೆದಿರುವ ಶಿಯೋಮಿ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ 6.39-ಇಂಚಿನ ಪೂರ್ಣ-ಎಚ್‌ಡಿ + 1080x2340 ಪಿಕ್ಸೆಲ್‌ಗಳು ಪರದೆ ಹೊಂದಿದೆ, 90 ಪ್ರತಿಶತದಷ್ಟು ಸ್ಕ್ರೀನ್-ಟು -ಬಾಡಿ ಅನುಪಾತ ಮತ್ತು 19.5: 9 ಆಕಾರ ಅನುಪಾತ. ಬಳಕೆದಾರರಿಗೆ ಕಂಫರ್ಟ್‌ ಅನಿಸುವುದರಲ್ಲಿ ಎರಡು ಮಾತಿಲ್ಲ. ಸ್ಮಾರ್ಟ್‌ಫೋನ್ ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ ಮತ್ತು ವಾಟರ್ ಡ್ರಾಪ್ ಶೈಲಿಯ ನಾಚ್ ಅಪ್ ಫ್ರಂಟ್ ಅನ್ನು ಹೊಂದಿದೆ.

ಪ್ರೊಸೆಸರ್ ವೇಗ ಹೇಗಿದೆ

ಪ್ರೊಸೆಸರ್ ವೇಗ ಹೇಗಿದೆ

ರೆಡ್‌ಮಿ ನೋಟ್ 8 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 6 ಜಿಬಿ RAM ಮತ್ತು 128 ಜಿಬಿ ಆನ್‌ಬೋರ್ಡ್ ಸಂಗ್ರಹ ಪಡೆದಿದೆ. ಹಾಗೂ 4GB ಆಯ್ಕೆಯು ಸಿಗಲಿದೆ. ಪ್ರೊಸೆಸರ್‌ ವೇಗ ಉತ್ತಮವಿದ್ದು, ಅದಕ್ಕೆ ಹೆಚ್ಚಿನ ಬೆಂಬಲ ನೀಡಲು ಆಂಡ್ರಾಯ್ಡ್ 9 ಪೈ ಒದಗಿಸಲಾಗಿದೆ. ಈ ಫೋನ್ ಅಧಿಕ ಡೇಟಾ ಬೇಡುವ ಗೇಮ್ಸ್‌ ಹಾಗೂ ಮಲ್ಟಿಟಾಸ್ಕ್ ಕೆಲಸಗಳಿಗೆ ಹೆಚ್ಚಿನ ಸಪೋರ್ಟ್ ನೀಡುತ್ತದೆ.

ನಾಲ್ಕು ಕ್ಯಾಮೆರಾ

ನಾಲ್ಕು ಕ್ಯಾಮೆರಾ

ರೆಡ್ಮಿ ನೋಟ್ 8 ಫೋನಿನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗಿದೆ. ಶಿಯೋಮಿ ಮೊದಲ ಬಾರಿಗೆ ಕಡಿಮೆ ಬೆಲೆಗೆ ಕ್ವಾಡ್‌ ಕ್ಯಾಮೆರಾ ನೀಡುತ್ತಿದೆ. ಇದರಲ್ಲಿ ಪ್ರಥಮ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಎರಡನೇಯದು 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸಾರ್‌ ಹೊಂದಿದೆ. ಮತ್ತು ಉಳಿದೆರಡು ಕ್ಯಾಮೆರಾಗಳು 2 ಮೆಗಾಪಿಕ್ಸೆಲ್ ನಲ್ಲಿವೆ. ಕ್ಯಾಮೆರಾ ತನ್ನ ವರ್ಗದಲ್ಲಿಯೇ ಬೆಸ್ಟ್‌ ಎನ್ನಬಹುದಾಗಿದೆ. ಇನ್ನು ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಕ್ಯಾಮೆರಾ ಕ್ವಾಲಿಟಿ ಉತ್ತಮವಾಗಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ಪ್ರಸ್ತುತ 4,000mAh ಸಾಮರ್ಥ್ಯದ ಬ್ಯಾಟರಿ ಸಾಮನ್ಯವಾಗಿದ್ದು, ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನಲ್ಲಿಯೂ ಸಹ 4000mAh ಬ್ಯಾಟರಿ ಲೈಫ್‌ ನೀಡಲಾಗಿದೆ. ಮತ್ತು 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಒದಗಿಸಿದ್ದು, ಬೇಗನೆ ಚಾರ್ಜ್ ಪಡೆದುಕೊಳ್ಳಲು ನೆರವಾಗಲಿದೆ. ಇದರೊಂದಿಗೆ ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸ್ಮಾರ್ಟ್‌ಪೋನ್ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಹೊಂದಿರುವುದು ಈ ಫೋನಿನ ಪ್ರಮುಖ ವಿಶೇಷತೆಗಳನ್ನು ಒಂದಾಗಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ಭಾರತದಲ್ಲಿ ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆಯು 9,999 ರೂ.ಗಳಾಗಿದೆ. 4 ಜಿಬಿ RAM + 64 ಜಿಬಿ ವೇರಿಯಂಟ್‌ ಮಾದರಿಯ ರೆಡ್ಮಿ ನೋಟ್ 8 ಫೋನ್ ಬೆಲೆ 9,999 ರೂ.ಗಳಾದರೆ, 6 ಜಿಬಿRAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ. ಇತ್ತೀಚಿಗೆ ಇ-ಕಾಮರ್ಸ್‌ ತಾಣಗಳಲ್ಲಿ ಹಲವು ಸೇಲ್‌ ಕಂಡಿದೆ.

ಕೊನೆಯ ಮಾತು

ಕೊನೆಯ ಮಾತು

ಶಿಯೋಮಿ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್ ಆಗಿದೆ. 10,000ರೂ ಪ್ರೈಸ್‌ಟ್ಯಾಗ್‌ ಬೆಲೆಯಲ್ಲಿ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡಿದ್ದು ಇದರ ಪ್ಲಸ್‌ ಪಾಯಿಂಟ್‌. ಮುಖ್ಯವಾಗಿ 48ಎಂಪಿ ಕ್ಯಾಮೆರಾ, ಡಿಸೈನ್, ಲುಕ್, ಪ್ರೊಸೆಸರ್‌ ಬೆಸ್ಟ್‌ ಪಾಯಿಂಟ್ಸ್‌ ಅನಿಸಲಿವೆ. ಈ ಫೋನಿನಲ್ಲಿ ಬ್ಯಾಟರಿ ಲೈಫ್‌ ಅನ್ನು ಇನ್ನಷ್ಟು ಹೆಚ್ಚಿಸಬೇಕಿತ್ತು ಹಾಗೂ ಡಿಸ್‌ಪ್ಲೇ ಗುಣಮಟ್ಟದಲ್ಲಿ ಇನ್ನಷ್ಟು ಹೊಸತನ ನೀಡಬೇಕಿತ್ತು ಎನ್ನುವುದನ್ನು ಹೊರತುಪಡಿಸಿದರೇ ಈ ಫೋನ್ ಚೀಪ್‌ ಆಂಡ್‌ ಬೆಸ್ಟ್‌ ಕೇಟಗರಿಯಲ್ಲಿ ಉತ್ತಮ ಆಯ್ಕೆ ಆಗಿದೆ.

Best Mobiles in India

English summary
The Redmi Note 8 has some key features going its way- Snapdragon 665 SoC and 48MP quad-camera setup. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X