ಶಿಯೋಮಿಯ 'ಡಬಲ್ ಪೊಲ್ಡೆಬಲ್' ಸ್ಮಾರ್ಟ್‌ಫೋನ್‌ ವಿಡಿಯೋ ರಿಲೀಸ್!!

|

ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ಬದಲಾವಣೆಗಳು ಬರುತ್ತಿದ್ದು, ಅತೀ ವಿಶೇಷ ಫೀಚರ್ಸ್ ಹೊಂದಿರುವ ನೂತನ ಫೋನ್‌ಗಳನ್ನು ಗ್ರಾಹಕರಿಗೆ ಪರಿಚಯಿಸಬೇಕು ಎಂದು ಎಲ್ಲಾ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ನಿರಂತರ ಪೈಪೋಟಿಯಲ್ಲಿರುತ್ತವೆ. ಸ್ಯಾಮ್ಸಂಗ್, ಮೊಟೊರೊಲಾ ಮತ್ತು ಒಪ್ಪೊ ಕಂಪನಿಗಳು ತಮ್ಮ 'ಫೊಲ್ಡೆಬಲ್ ಸ್ಮಾರ್ಟ್‌ಫೋನ್‌'ಗಳನ್ನು ಲಾಂಚ್ ಮಾಡಲು ತುದಿಗಾಲಲ್ಲಿ ನಿಂತಿವೆ. ಆದರೆ, ಈ ಎಲ್ಲಾ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಶಿಯೋಮಿ ಸಿದ್ಧವಾಗಿದೆ.

ಶಿಯೋಮಿಯ 'ಡಬಲ್ ಪೊಲ್ಡೆಬಲ್' ಸ್ಮಾರ್ಟ್‌ಫೋನ್‌ ವಿಡಿಯೋ ರಿಲೀಸ್!!

ಹೌದು, ಈಗಾಗಲೇ ಸ್ಯಾಮ್ಸಂಗ್, ಒಪ್ಪೊ ಮತ್ತು ಮೊಟೊರೊಲಾ ಸಂಸ್ಥೆಗಳು ತಮ್ಮ ಮುಂಬರಲಿರುವ 'ಪೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ' ಕುರಿತು ಮಾಹಿತಿ ಬಹಿರಂಗಪಡಿಸಿ ಗ್ರಾಹಕರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಆದರೆ, ಇದೀಗ ಶಿಯೋಮಿ ಕಂಪನಿ ಅವುಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ 'ಡಬಲ್ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌'ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಸಕಲ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಶಿಯೋಮಿಯ 'ಡಬಲ್ ಪೊಲ್ಡೆಬಲ್' ಸ್ಮಾರ್ಟ್‌ಫೋನ್‌ ವಿಡಿಯೋ ರಿಲೀಸ್!!

ಹೌದು, ಶಿಯೋಮಿ ಕಂಪನಿಯು 'ಡಬಲ್ ಪೊಲ್ಡೆಬಲ್' ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ''ಪೊಲ್ಡೆಬಲ್ ಸ್ಮಾರ್ಟ್‌ಫೋನ್ ತಯಾರಿಸುವಾಗ ಮಡಚುವ ಡಿಸ್‌ಪ್ಲೇ ಮತ್ತು ಸಾಫ್ಟವೇರ್ ಕುರಿತಾಗಿ ಹಲವು ಸಮಸ್ಯೆಗಳನ್ನು ಎದುರಿಸಿದ್ದೆವು ಆದರೆ, ಅನೇಕ ಹೊಸ ಬದಲಾವಣೆಗಳನ್ನು ಮಾಡಿಕೊಂಡು ಕೊನೆಯದಾಗಿ 'ಡಬಲ್ ಪೊಲ್ಡೆಬಲ್' ಸ್ಮಾರ್ಟ್‌ಫೋನ್‌ಗಳ ಸಿದ್ಧಪಡಿಸಿದ್ದೆವೆ' ಎಂದು ಶಿಯೋಮಿ ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷರಾದ ಲಿನ್ ಬಿನ್ ಅವರು ಹೇಳಿದ್ದಾರೆ.

ಶಿಯೋಮಿಯ 'ಡಬಲ್ ಪೊಲ್ಡೆಬಲ್' ಸ್ಮಾರ್ಟ್‌ಫೋನ್‌ ವಿಡಿಯೋ ರಿಲೀಸ್!!

ತನ್ನ ನೂತನ ಡಬಲ್ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಪ್ರಾತ್ಯಕ್ಷಿಕವಾಗಿ ಪರೀಕ್ಷಿಸಲಾಗಿದೆ ಎಂದು ಕಂಪನಿ ತಿಳಿಸಿದ್ದು, ಈ ಬಗ್ಗೆ ಒಂದು ವಿಡಿಯೋವನ್ನು ಸಹ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ನಾವು ಕೂಡ ಶಿಯೋಮಿಯ ಮೊದಲ 'ಡಬಲ್ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌' ಮಾದರಿಯನ್ನು ನೋಡಿ ಎಂಜಯ್ ಮಾಡಬಹುದಾಗಿದೆ. ಈ ಡಬಲ್ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು ತಮ್ಮ ಪ್ರತಿಸ್ಪರ್ಧಿ ಕಂಪನಿಗಳ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ನೀಡಲಿದೆ.

ಶಿಯೋಮಿಯ 'ಡಬಲ್ ಪೊಲ್ಡೆಬಲ್' ಸ್ಮಾರ್ಟ್‌ಫೋನ್‌ ವಿಡಿಯೋ ರಿಲೀಸ್!!

ಶಿಯೋಮಿಯ ಮುಂಬರಲಿರುವ ತನ್ನ ಎರಡು ಡಬಲ್ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌ ಮಾದರಿಗಳಿಗೆ "ಶಿಯೋಮಿ ಡ್ಯುಯಲ್ ಫ್ಲೆಕ್ಸ್" ಮತ್ತು "ಶಿಯೀಮಿ MIX ಫ್ಲೆಕ್ಸ್" ಹೆಸರುಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಇಂಗಿತವನ್ನು ಕಂಪನಿ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ಈ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಿಗೆ ಒಂದು ಹೊಸ ಹೆಸರಿನ ಸರಣಿಯನ್ನು ಆರಂಭಿಸುವ ಕುರಿತು ಕಂಪನಿ ಆಲೋಚಿಸುತ್ತಿದೆ ಎನ್ನಲಾಗುತ್ತಿದೆ. ಹಾಗಾದರೆ, ಖರೀದಿಸಲು ನಿವು ರೆಡಿನಾ.?!

Best Mobiles in India

English summary
while 2019 will be dominated by bezelless designs and display holes, we will also see more of foldable smartphones.to know more visit to kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X