ಮುಂಭಾಗ ಹಾಗೂ ಹಿಂಭಾಗ ಎರಡು ಕಡೆ ಡಿಸ್‌ಪ್ಲೇ ಹೊಂದಿರುವ ಡ್ಯುಯಲ್ ಸ್ಕ್ರಿನ್ ಸ್ಮಾರ್ಟ್‌ಫೋನ್....!

ಡ್ಯುಯಲ್ ಸ್ಕ್ರಿನ್ ಎಂದರೆ ಪೋನಿನ ಮುಂಭಾಗದಲ್ಲಿಯೂ ಪರದೆಯನ್ನು ಕಾಣಬಹುದಾಗಿದ್ದು, ಹಿಂಭಾಗದ ಬ್ಯಾಕ್ ಕವರ್ ಸಹ ಡಿಸ್ಪ್ಲೇಯಾಗಿದೆ. ಈ ಸ್ಮಾರ್ಟ್‌ಪೋನ್ ಅನ್ನು ಯೊಟಾಫೋನ್ ಅಭಿವೃದ್ಧಿ ಪಡಿಸಿದೆ.

|

ದಿನೇ ದಿನೇ ಸ್ಮಾರ್ಟ್‌ಫೋನ್ ಲೋಕದಲ್ಲಿ ಹೊಸ ಹೊಸ ಆವಿಷ್ಕಾರಗಳು ಜರುಗುತ್ತಿರುತ್ತವೆ. ಇದೇ ಮಾದರಿಯಲ್ಲಿ ಮೊದಲು ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಬಂತು, ಆದರ ಹಿಂದಯೇ ಮುಂಭಾಗದಲ್ಲೂ ಡ್ಯುಯಲ್ ಕ್ಯಾಮರಾ ಕಾಣಿಸಿಕೊಂಡಿತ್ತು. ಈಗ ಹೊಸ ಮಾದರಿಯ ಫೋನಿನ ಆಗಮನವಾಗಿದ್ದು, ಈ ಸ್ಮಾರ್ಟ್‌ ಡ್ಯುಯಲ್ ಸ್ಕ್ರಿನ್ ಹೊಂದಿದೆ.

ಮುಂಭಾಗ ಹಾಗೂ ಹಿಂಭಾಗ ಎರಡು ಕಡೆ ಡಿಸ್‌ಪ್ಲೇ ಹೊಂದಿರುವ ಡ್ಯುಯಲ್ ಸ್ಕ್ರಿನ್

ಓದಿರಿ: ಶಿಯೋಮಿಯಿಂದ ಕೈಗೆಟುಕುವ ದರದಲ್ಲಿ ಪವರ್ ಬ್ಯಾಂಕ್, ಸ್ಪಿಕರ್ ಇನ್ನು ಹಲವು..!!

ಡ್ಯುಯಲ್ ಸ್ಕ್ರಿನ್ ಎಂದರೆ ಪೋನಿನ ಮುಂಭಾಗದಲ್ಲಿಯೂ ಪರದೆಯನ್ನು ಕಾಣಬಹುದಾಗಿದ್ದು, ಹಿಂಭಾಗದ ಬ್ಯಾಕ್ ಕವರ್ ಸಹ ಡಿಸ್ಪ್ಲೇಯಾಗಿದೆ. ಈ ಸ್ಮಾರ್ಟ್‌ಪೋನ್ ಅನ್ನು ಯೊಟಾಫೋನ್ ಅಭಿವೃದ್ಧಿ ಪಡಿಸಿದ್ದು, ರಷ್ಯಾ ಮೂಲಕದ ಈ ಕಂಪನಿ ವಿಶ್ವದ ಮೊದಲ ಡ್ಯುಯಲ್ ಸ್ಕ್ರಿನ್ ಫೋನ್‌ ಅನ್ನು ಅಭಿವೃದ್ಧಿ ಪಡಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಬೆಲೆ:

ಬೆಲೆ:

ಈ ಫೋನ್ ಎರಡು ಮಾದರಿಯಲ್ಲಿ ದೊರೆಯಲಿದ್ದು, 64 GB ಮಾದರಿಯೂ ರೂ. 22,500ಕ್ಕೆ ಲಭ್ಯವಿದ್ದರೇ, 128GB ಮಾದರಿಯೂ ರೂ, 29,000ಕ್ಕೆ ದೊರೆಯಲಿದೆ ಎನ್ನಲಾಗಿದೆ. ಆದರೆ ಇದು ಭಾರತೀಯ ಮಾರುಕಟ್ಟೆಗೆ ಬಂದರೆ ಬೆಲೆಗಳಲ್ಲಿ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳಿದೆ.

ಡ್ಯುಯಲ್ ಸ್ಕ್ರಿನ್:

ಡ್ಯುಯಲ್ ಸ್ಕ್ರಿನ್:

ಈ ಡ್ಯುಯಲ್ ಸ್ಕ್ರಿನ್ ಸ್ಮಾರ್ಟ್ ಫೋನಿಗೆ ಯೊಟಾ 3 ಎಂದು ನಾಮಕರಣ ಮಾಡಲಾಗಿದ್ದು, ಕೂಲ್ ಪ್ಯಾಡ್ ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡುವ ಕಂಪನಿಯೇ ಈ ಫೋನುಗಳನ್ನು ತಯಾರಿಸುತ್ತಿದೆ. ಈ ಫೋನಿನ ಮುಂಭಾಗದಲ್ಲಿ 5.5 ಇಂಚಿನ FHD ಡಿಸ್‌ಪ್ಲೇ ಇದ್ದು, ಹಿಂಭಾಗದಲ್ಲಿ 5.2 ಇಂಚಿನ HD ಪರದೆಯನ್ನು ನಾವು ಕಾಣಬಹುದಾಗಿದೆ.

ಯೊಟಾ 3 ವಿಶೇಷತೆಗಳು:

ಯೊಟಾ 3 ವಿಶೇಷತೆಗಳು:

ಮಧ್ಯಮ ಬೆಲೆಯ ಸ್ಮಾರ್ಟ್‌ಫೋನುಗಳಲ್ಲಿ ಇರುವಂತಹ ಆಯ್ಕೆಗಳನ್ನು ನಾವಿಲ್ಲಿ ನೋಡಬಹುದಾಗಿದೆ. ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಇದರಲ್ಲಿದ್ದು, ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಸಿಲಿದೆ. ಡ್ಯುಯಲ್ ಸಿಮ್ ಕಾರ್ಡ್ ಹಾಕಬಹುದಾಗಿದ್ದು, 4GB RAM ಇದರಲ್ಲಿದೆ.

ಕ್ಯಾಮೆರಾ ಹೇಗಿದೆ:

ಕ್ಯಾಮೆರಾ ಹೇಗಿದೆ:

ಇದಲ್ಲದೇ ಫೋನಿನ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಕಾಣಬಹುದಾಗಿದೆ, ಮುಂಭಾಗದಲ್ಲಿ 13 MP ಕ್ಯಾಮೆರಾ ಇದೆ. 3200mAh ಬ್ಯಾಟರಿ ಇದರಲ್ಲಿದ್ದು, USB ಟೈಪ್ ಸಿ ಚಾರ್ಜರ್ ಇದರಲ್ಲಿದೆ.

Best Mobiles in India

Read more about:
English summary
YotaPhone, the smartphone which is popular for its dual-display feature, is all set to get the third iteration later this year. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X