ಗ್ಯಾಲಕ್ಸಿ ನೋಟ್ 7 ಬದಲಿಗೆ ಖರೀದಿಸಬಹುದಾದ ಸ್ಮಾರ್ಟ್ ಫೋನುಗಳು.

|

ಈಗಾಗಲೇ ನೀವು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7ಗೆ ಸಂಬಂಧಪಟ್ಟಂತಹ ಸುದ್ದಿಗಳನ್ನು ಓದಿರುತ್ತೀರಿ. ಎಲ್ಲಾ ತಪ್ಪು ಕಾರಣಗಳಿಗಾಗಿ ಸ್ಯಾಮ್ಸಂಗ್ ನ ಈ ಸಾಧನ ಸುದ್ದಿ ಮಾಡಿತು. ಗ್ಯಾಲಕ್ಸಿ ನೋಟ್7ನಲ್ಲಿ ಏನು ತಪ್ಪಿತ್ತು ಎಂದು ಇದುವರೆಗೂ ಸ್ಯಾಮ್ಸಂಗ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಗ್ಯಾಲಕ್ಸಿ ನೋಟ್ 7 ಬದಲಿಗೆ ಖರೀದಿಸಬಹುದಾದ ಸ್ಮಾರ್ಟ್ ಫೋನುಗಳು.

ಸ್ಯಾಮ್ಸಂಗ್ ಯೋಚನೆಗೆ ತಕ್ಕಂತೆ ಗ್ಯಾಲಕ್ಸಿ ನೋಟ್ 7 ಯಶ ಕಾಣಲಿಲ್ಲ. ಬ್ಯಾಟರಿ ಸ್ಪೋಟಗೊಂಡ ಬಗ್ಗೆ ಅನೇಕ ವರದಿಗಳು ಬಂದವು, ಫೋನುಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು. ಯಶಸ್ಸಾಗುತ್ತಿದ್ದ ಫೋನೊಂದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವ ಬಗ್ಗೆ ಸ್ಯಾಮ್ಸಂಗ್ ಯೋಚಿಸಿರಲಿಲ್ಲ.

ಓದಿರಿ: ಜೊಲೋ ಬಿಡುಗಡೆ ಮಾಡಿದೆ ಫಿಂಗ್‌ಪ್ರಿಂಟ್ ಫೀಚರ್‌ ಹೊಂದಿರುವ ಸ್ಮಾರ್ಟ್‌ಫೋನ್!! ಬೆಲೆ ಎಷ್ಟು?

ಈ ರೀತಿ ಆಗುತ್ತದೆಯೆಂದು ಸ್ಯಾಮ್ಸಂಗ್ ಆಗಲೀ ನೀವಾಗಲೀ ನಿರೀಕ್ಷಿಸಿರಲಿಲ್ಲ. ಬಿಡುಗಡೆಯಾಗುವುದಕ್ಕೆ ಮೊದಲು ಅನೇಕ ವಿಶ್ಲೇಷಕರು ಸ್ಯಾಮ್ಸಂಗ್ ನ ಈ ಉತ್ಪನ್ನವನ್ನು ಹೊಗಳಿದ್ದರು.

ಓದಿರಿ: ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

ನಿಮ್ಮಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಇದ್ದರೆ ನೀವು ಸ್ಯಾಮ್ಸಂಗ್ ನ ಸಲಹೆಗಳನ್ನು ಪಾಲಿಸಿ ಅದನ್ನು ಹಿಂದಿರುಗಿಸಬೇಕು. ನಿಮ್ಮ ಫೋನನ್ನು ಕೊಟ್ಟುಬಿಡಬೇಕು. ಕೊಟ್ಟ ನಂತರ ನೋಟ್ 7ನಲ್ಲಿರುವ ವಿಶೇಷತೆಗಳುಳ್ಳ ಫೋನೊಂದನ್ನು ನೀವು ಹುಡುಕುತ್ತಿರಬೇಕು. ಹುಡುಕುವ ಹಾದಿಯಲ್ಲಿ ಅನೇಕ ಸ್ಮಾರ್ಟ್ ಫೋನುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ನಿಮ್ಮ ಅರಿವಿಗೆ ಬಂದಿರುತ್ತದೆ.

ಹೊಸ ಸ್ಮಾರ್ಟ್ ಫೋನ್ ತೆಗೆದುಕೊಳ್ಳಲು ನೀವು ನಿರ್ಧರಿಸಿದ್ದರೆ ನೋಟ್ 7 ಬದಲಿಗೆ ಈ ಸ್ಮಾರ್ಟ್ ಫೋನುಗಳನ್ನು ಆರಿಸಿಕೊಳ್ಳಬಹುದು. ಆ್ಯಂಡ್ರಾಯ್ಡ್ ಫೋನುಗಳ ಪಟ್ಟಿಯಿದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್.

ಸ್ಯಾಮ್ಸಂಗ್ ಅಭಿಮಾನಿಗಳಿಗೆ ಮತ್ತು ನೋಟ್ 7 ಅನ್ನು ಮೆಚ್ಚಿದವರಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ ಉತ್ತಮ ಆಯ್ಕೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ ನಲ್ಲಿನೋಟ್ 7ನಲ್ಲಿದ್ದ ಐರಿಸ್ ಸ್ಕ್ಯಾನರ್ ಇಲ್ಲ ಮತ್ತು ಎಸ್ ಪೆನ್ ಇಲ್ಲ. ಉಳಿದ ವಿಶೇಷತೆಗಳು ನೋಟ್ 7ನಲ್ಲಿದ್ದಂತೆಯೇ ಇದೆ. 12ಮೆಗಾಪಿಕ್ಸೆಲ್ಲಿನ ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ ತೆಗೆಯುವ ಕ್ಯಾಮೆರಾ, ಉತ್ತಮ ಸ್ಪಷ್ಟ ಪರದೆ, ಜೊತೆಗೆ ಸ್ಯಾಮ್ಸಂಗಿನ ಆಕರ್ಷಕ ವಿನ್ಯಾಸ ಇದರಲ್ಲಿದೆ.

ಜೊತೆಗೆ ಇದು ಜಲ ಮತ್ತು ಧೂಳು ನಿರೋಧಕ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ ಸ್ಯಾಮ್ಸಂಗಿನ ಅತ್ಯುತ್ತಮ ಫ್ಲಾಗ್ ಶಿಪ್ ಫೋನ್.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒನ್ ಪ್ಲಸ್ 3ಟಿ.

ಒನ್ ಪ್ಲಸ್ 3ಟಿ.

ಈ ಫೋನು ಉತ್ತಮವಾಗಿದೆ. ಜೇಬು ಸ್ನೇಹಿಯೂ ಹೌದು. 34,999ರುಪಾಯಿಗೆ ಲಭ್ಯವಿರುವ ಒನ್ ಪ್ಲಸ್ 3ಟಿ ಪ್ರತಿಸ್ಫರ್ಧಿ ಫೋನುಗಳಿಗಿಂತ ತುಂಬಾ ಕಡಿಮೆ ಬೆಲೆಯದ್ದು.

5.5ಇಂಚಿನ ಫುಲ್ ಹೆಚ್.ಡಿ ಪರದೆ (1080*1920 ಪಿಕ್ಸೆಲ್ಸ್), ಆಪ್ಟಿಕ್ ಅಮೊಲೆಡ್ ಪರದೆ ಇದರಲ್ಲಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೂ ಲಭ್ಯವಿದೆ. 6ಜಿಬಿ ರ್ಯಾಮ್, ಹೆಚ್ಚಿನ ಸಂಗ್ರಹ ಸಾಮರ್ಥ್ಯ, ವೇಗದ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 821 ಎಸ್.ಒ.ಸಿ ಮತ್ತು ಇನ್ನೂ ಅನೇಕ ವಿಶೇಷತೆಗಳು ಈ ಫೋನಿನಲ್ಲಿದೆ.

ಮೊಟೊ ಝಡ್ ಫೋರ್ಸ್ ಡ್ರಾಯ್ಡ್.

ಮೊಟೊ ಝಡ್ ಫೋರ್ಸ್ ಡ್ರಾಯ್ಡ್.

ಮೊಟೊ ಝಡ್ ಫೋರ್ಸ್ ಡ್ರಾಯ್ಡ್ ಕೂಡ ಉತ್ತಮ ಆಯ್ಕೆ. ಇದರಲ್ಲಿ ಬಿರುಕು ನಿರೋಧಕ ಪರದೆಯಿದೆ, ದೊಡ್ಡ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾ ವ್ಯವಸ್ಥೆಯಿದೆ. ಜೊತೆಗೆ ಈ ಸ್ಮಾರ್ಟ್ ಫೋನ್ ಮೊಟೊ ಮೊಡ್ಸ್ ಅನ್ನು ಬೆಂಬಲಿಸುತ್ತದೆ. ಮ್ಯಾಗ್ನೆಟ್ ಸಹಾಯದಿಂದ ಮೊಟೊ ಮೊಡ್ಸ್ ಅನ್ನು ಫೋನಿಗೆ ಸಂಪರ್ಕಿಸಬಹುದು.

ಮೊಟೊ ಮೊಡ್ಸ್ ಉಪಯೋಗಿಸಿಕೊಂಡು ಫೋನಿನ ಬ್ಯಾಟರಿ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದು, ದೊಡ್ಡ ಸ್ಪೀಕರಿನ ಸಹಾಯದಿಂದ ಹಾಡುಗಳನ್ನು ಕೇಳಬಹುದು, ಜೊತೆಗೆ ನಿಮ್ಮ ಮೊಬೈಲನ್ನು ಪ್ರೊಜೆಕ್ಟರ್ ಆಗಿ ಕೂಡ ಬಳಸಬಹುದು.

ಗೂಗಲ್ ಪಿಕ್ಸೆಲ್.

ಗೂಗಲ್ ಪಿಕ್ಸೆಲ್.

ಆ್ಯಂಡ್ರಾಯ್ಡ್ ಪ್ರಪಂಚದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಉತ್ತಮ ಉತ್ಪನ್ನವೆಂದರೆ ಗೂಗಲ್ ಪಿಕ್ಸೆಲ್ ಎಕ್ಸ್.ಎಲ್. ಇದರಲ್ಲಿ ದೊಡ್ಡ ಪರದೆಯಿದೆ, ಕಾರ್ಯನಿರ್ವಹಣೆ ಚೆನ್ನಾಗಿದೆ ಮತ್ತು ಅದ್ಭುತ ಕ್ಯಾಮೆರ ಇದೆ. ವಿನ್ಯಾಸ ಹೆಚ್ಚು ಆಕರ್ಷಕವಾಗಿಲ್ಲ, ದುಬಾರಿಯೂ ಹೌದು ಆದರೂ ಉತ್ತಮ ಫೋನಿದು.

ಜೊತೆಗೆ ಇದು ನೆಕ್ಸಸ್ ನ ಮುಂದುವರಿಕೆಯಂತಿರುವ ಗೂಗಲ್ ಫೋನು. ಆ್ಯಂಡ್ರಾಯ್ಡ್ ನ ನೈಜ ಅನುಭವ ಇದರಲ್ಲಿ ದಕ್ಕುತ್ತದೆ. ಗೂಗಲ್ ಅಸಿಸ್ಟೆಂಟ್ ಇದರಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಉತ್ತಮ ಕ್ಯಾಮೆರಾ ಫೋನಿದು, ಎಲ್ಲಾ ವಿಶೇಷತೆಗಳೂ ಇದರಲ್ಲಿದೆ.

ಎಲ್.ಜಿ ವಿ20.

ಎಲ್.ಜಿ ವಿ20.

ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಎಲ್.ಜಿ ವಿ 20 ಸ್ಮಾರ್ಟ್ ಫೋನನ್ನು ನೋಟ್ 7ಗೆ ಬದಲಿಯಾಗಿ ಖರೀದಿಸಬಹುದು. ಗ್ಯಾಲಕ್ಸಿ ನೋಟ್ 7 ರೀತಿಯಲ್ಲಿಯೇ ವಿ20 ಕೂಡ ದೊಡ್ಡ ಪರದೆಯ ಫೋನಾಗಿದೆ, ಉತ್ತಮ ಗುಣ ಲಕ್ಷಣಗಳಿವೆ ಮತ್ತು ಕ್ಯಾಮೆರಾ ಹಾಗೂ ಕಾರ್ಯನಿರ್ವಹಣೆಯೂ ಚೆನ್ನಾಗಿದೆ.

ಎಸ್.ಪೆನ್ ರೀತಿಯ ವಿಶೇಷತೆಗಳು ಇದರಲ್ಲಿಲ್ಲದೇ ಹೋದರೂ ಮುಖ್ಯ ಪರದೆಯ ಮೇಲೊಂದು ತೆಳುವಾದ ಎರಡನೆಯ ಪರದೆ ಇದರಲ್ಲಿದೆ. ಡುಯಲ್ ಕ್ಯಾಮೆರಾ ಇದೆ ಮತ್ತು ವೈಡ್ ಆ್ಯಂಗಲ್ ಲೆನ್ಸ್ ಕೂಡ ಇದರಲ್ಲಿದೆ. ಜೊತೆಗೆ ಇದರಲ್ಲಿ ಆ್ಯಂಡ್ರಾಯ್ಡ್ 7.0 ನೌಗಾಟ್ ಇದೆ.

ಈ ಸ್ಮಾರ್ಟ್ ಫೋನುಗಳು ತಮ್ಮದೇ ರೀತಿಯಲ್ಲಿ ವಿಶಿಷ್ಟವಾಗಿವೆ ವಿನ್ಯಾಸದಲ್ಲಿ ಮತ್ತು ವಿಶೇಷಣಗಳಲ್ಲಿ. ಗ್ಯಾಲಕ್ಸಿ ನೋಟ್ 7ನ ಜಾಗವನ್ನು ಈ ಫೋನುಗಳು ಖಂಡಿತವಾಗಿ ತುಂಬಬಲ್ಲವು.

Best Mobiles in India

English summary
Phones you can consider instead of the Galaxy Note 7.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X