5000mAh ಬ್ಯಾಟರಿ ಸಾಮಾರ್ಥ್ಯದ ZTE ಬ್ಲೇಡ್ A2 ಪ್ಲಸ್: ಬೆಲೆ ರೂ.11,999

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಸ್ಮಾರ್ಟ್‌ಪೋನ್‌ಗಳ ಹಾವಳಿ ಅಧಿಕವಾಗಿದ್ದು, ಅದರಲ್ಲೂ ದೀರ್ಘಕಾಲ ಬ್ಯಾಟರಿ ಬಾಳಿಕೆ ನೀಡುವ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.

|

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಸ್ಮಾರ್ಟ್‌ಪೋನ್‌ಗಳ ಹಾವಳಿ ಅಧಿಕವಾಗಿದ್ದು, ಅದರಲ್ಲೂ ದೀರ್ಘಕಾಲ ಬ್ಯಾಟರಿ ಬಾಳಿಕೆ ನೀಡುವ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಗಳು ಹೆಚ್ಚು ಬ್ಯಾಟರಿ ಸಾಮಾರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ.

ಓದಿರಿ: ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?

ಇದೇ ಸಾಲಿಗೆ ಸೇರಲಿರುವ ಮತ್ತೊಂದು ಸ್ಮಾರ್ಟ್‌ಪೋನ್‌ ಅದುವೇ 5000mAh ಬ್ಯಾಟರಿ ಸಾಮಾರ್ಥ್ಯದ ZTE ಬ್ಲೇಡ್ A2 ಪ್ಲಸ್.

5000mAh ಬ್ಯಾಟರಿ:

5000mAh ಬ್ಯಾಟರಿ:

ಮಾರುಕಟ್ಟೆಯಲ್ಲಿ ಈಗಾಗಲೇ 5000mAh ಬ್ಯಾಟರಿ ಸಾಮಾರ್ಥ್ಯದ ಸ್ಮಾರ್ಟ್‌ಪೋನುಗಳ ಸಾಲಿನಲ್ಲಿ ಲಿನೋವೊ ಕಂಪನಿಯ ಲಿನೋವೊ P2 ಮತ್ತು ಆಸಸ್ ಕಂಪನಿಯ ಜೆನ್‌ಪೋನ್ 3ಎಸ್ ಮ್ಯಾಕ್ಸ್ ಪೋನುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಈ ಪೋನುಗಳಿಗೆ ಸ್ಪರ್ಧೆಯೊಡ್ಡಲೂ ZTE ಬ್ಲೇಡ್ A2 ಪ್ಲಸ್‌ ಮುಂದಾಗಿದೆ. ಬೆಲೆಯಲ್ಲಿಯೂ ಇದು ಇತರೇ ಪೋನುಗಳಿಗಿಂತ ಕಡಿಮೆ ಇದೆ.

5.5 ಇಂಚಿನ Full HD ಡಿಸ್‌ಪ್ಲೇ:

5.5 ಇಂಚಿನ Full HD ಡಿಸ್‌ಪ್ಲೇ:

ZTE ಬ್ಲೇಡ್ A2 ಪ್ಲಸ್‌ ಪೋನಿನಲ್ಲಿ 1920 x 1080p ಗುಣಮಟ್ಟದ 5.5 ಇಂಚಿನ Full HD ಡಿಸ್‌ಪ್ಲೇ ಹೊಂದಿದೆ. ಜೊತೆಗೆ 2.5D ಕರ್ವಡ್ ಗ್ಲಾಸ್ ಪ್ಯಾನಲ್ ಪ್ರೋಟೆಕ್ಷನ್ ಸಹ ಹೊಂದಿದೆ. ಗುಣಮಟ್ಟದ ವಿಡಿಯೋ ನೋಡಲು ಸಹಾಯಕಾರಿಯಾಗಿದೆ.

ವೇಗದ ಕಾರ್ಯಚರಣೆಗೆ 4GB RAM :

ವೇಗದ ಕಾರ್ಯಚರಣೆಗೆ 4GB RAM :

ZTE ಬ್ಲೇಡ್ A2 ಪ್ಲಸ್‌ ಪೋನು ವೇಗವಾಗಿ ಕಾರ್ಯನಿರ್ವಹಿಸಲಿದ್ದು, 1.5GHz ಆಕ್ಟಾ ಕೋರ್ ಮೀಡಿಯಾ ಟೆಕ್ MT6750T ಹಾಗೂ 64-bit ಆಕ್ಟಾಕೋರ್ CPU ಹೊಂದಿದೆ. ಇದರೊಂದಿಗೆ 4GB RAM ಮತ್ತು 64 GB ಇಂಟರ್ನಲ್ ಮೆಮೊರಿ ಸಹ ಇದೆ. ಅಲ್ಲದೇ 128 GB ಮೆಮೊರಿ ವಿಸ್ತರಿಸಿಕೊಳ್ಳಬಹುದಾದ ಅವಕಾಶವನ್ನು ಹೊಂದಿದೆ.

13 MP/8MP ಕ್ಯಾಮೆರಾ:

13 MP/8MP ಕ್ಯಾಮೆರಾ:

ZTE ಬ್ಲೇಡ್ A2 ಪ್ಲಸ್‌ ಸ್ಮಾರ್ಟ್‌ಪೋನಿನಲ್ಲಿ ಗುಣಮಟ್ಟದ ಕ್ಯಾಮೆರಾಗಳಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಮುಂಭಾದ ಕ್ಯಾಮೆರಾ ಜೊತೆಯಲ್ಲಿ LED ಫ್ಲಾಷ್ ಲೈಟ್ ನೀಡಲಾಗಿದೆ.

ಇತರೆ ವಿಶೇಷತೆಗಳು:

ಇತರೆ ವಿಶೇಷತೆಗಳು:

ಆಂಡ್ರಾಯ್ಟ್ 6.0 ನಲ್ಲಿ ಈ ಪೋನು ಕಾರ್ಯನಿರ್ವಹಿಸಲಿದ್ದು, 4G ಸಪೋರ್ಟ್ ಮಾಡಲಿದೆ. ಸಿಲ್ವರ್ ಮತ್ತು ಗೋಲ್ಡ್ ಬಣ್ಣದಲ್ಲಿ ಈ ಪೋನು ಲಭ್ಯವಿದ್ದು, ಫೆಬ್ರವರಿ 6 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭವಾಗಲಿದೆ.

Best Mobiles in India

Read more about:
English summary
The latest big battery smartphone joining in is the ZTE Blade A2 Plus. It packs in a humungous a 5000mAh battery. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X