ಭವಿಷ್ಯದ ತಂತ್ರಜ್ಞಾನ ನಿಮ್ಮೆದುರಲ್ಲೇ!!!

Written By:

ಭವಿಷ್ಯವನ್ನು ನಿಮ್ಮೆದುರಲ್ಲೇ ಸದ್ಯದಲ್ಲೇ ಸನ್ನಿಹಿತವಾಗಲಿದೆ. ಮುಂಬರಲಿರುವ ಗ್ಯಾಜೆಟ್‌ಗಳ ಪರಿಚಯವನ್ನು ಇಂದಿನ ಅನ್ವೇಷಣೆಗಳು ನಡೆಸಿದ್ದು ಸಿಇಎಸ್‌ನಂತಹ ಈವೆಂಟ್‌ನಲ್ಲಿ ಈ ಗ್ಯಾಜೆಟ್‌ಗಳ ಪರಿಚಯವನ್ನು ಮಾಡಲಾಗಿದೆ.

ಓದಿರಿ: ಆಕ್ಸಿಡೆಂಟ್‌ ಮುಂಚೆಯೇ ಎಚ್ಚರಿಸುವ ಗ್ಯಾಜೆಟ್ ಬೆಂಗಳೂರಿನಲ್ಲಿ

ಸದ್ಯಕ್ಕೆ ಈ ಡಿವೈಸ್‌ಗಳು ಮಾರುಕಟ್ಟೆಗೆ ಅಡಿ ಇಡದೇ ಇದ್ದರೂ ಕಾಲಕ್ರಮೇಣ ಈ ಡಿವೈಸ್‌ಗಳು ನಿಮ್ಮ ಮನಗೆಲ್ಲುವುದು ಖಂಡಿತ. ಭವಿಷ್ಯದ ಕಲ್ಪನೆಯನ್ನು ನಿಮ್ಮ ಕಣ್ಣಲ್ಲೇ ಕಾಣುವ ತುಡಿತವನ್ನು ಈ ಡಿವೈಸ್‌ಗಳು ಮಾಡಿದ್ದು ತಂತ್ರಜ್ಞಾನದ ಚಮತ್ಕಾರಕ್ಕೆ ನೀವು ಶಹಬ್ಬಾಷ್ ಎನ್ನಲೇಬೇಕು. ಹಾಗಿದ್ದರೆ ಬನ್ನಿ ಇಲ್ಲಿದೆ ಆ ಗ್ಯಾಜೆಟ್‌ಗಳ ಸಂಪೂರ್ಣ ವಿವರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒತ್ತಡದ ಜೀವನ

ಮೆಲೊಮೈಂಡ್ ಹೆಡ್‌ಸೆಟ್

ಒತ್ತಡದ ಜೀವನಕ್ಕೆ ಸಂಗೀತ ಕೊಂಚ ಆರಾಮವನ್ನು ನೀಡುತ್ತದೆ. ಮೆಲೊಮೈಂಡ್ ಹೆಡ್‌ಸೆಟ್ ನಿಮಗೆ ಉತ್ತಮ ಹಾಡುಗಳನ್ನು ಕೇಳಲು ಸಹಕಾರಿಯಾಗಲಿದೆ.

ಪ್ರಥಮ ವೈರ್‌ಲೆಸ್ ಸ್ಮಾರ್ಟ್ ಇನ್ ಇಯರ್ ಹೆಡ್‌ಫೋನ್

ಬ್ರ್ಯಾಗಿ ಡ್ಯಾಶ್ ಹೆಡ್‌ಸೆಟ್

ಈ ಹೆಡ್‌ಸೆಟ್‌ಗಳು ಪ್ರಥಮ ವೈರ್‌ಲೆಸ್ ಸ್ಮಾರ್ಟ್ ಇನ್ ಇಯರ್ ಹೆಡ್‌ಫೋನ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದು 1000 ಹಾಡುಗಳನ್ನು ತನ್ನ ಆಂತರಿ ಮೆಮೊರಿಯಲ್ಲಿ ಸಂಗ್ರಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇ - ಇಂಕ್ ಡಿಸ್‌ಪ್ಲೇ

ಗೋ ಆಕ್ಟಿವಿಟಿ ಟ್ರ್ಯಾಕ್ಟರ್

ಕ್ಲಿಪ್‌ನಂತಿರುವ ವೇರಿಯೇಬಲ್ ಅನ್ನು ಇದು ಹೊಂದಿದ್ದು ಇ - ಇಂಕ್ ಡಿಸ್‌ಪ್ಲೇಯೊಂದಿಗೆ ಇದು ಬಂದಿದೆ ನಿಮ್ಮ ಪ್ರೊಗ್ರೆಸ್ ಕುರಿತಾದ ಮಾಹಿತಿಯನ್ನು ಇದು ತಿಳಿಸುತ್ತಿರುತ್ತದೆ.

ರಿಯಲ್ ಟೈಮ್ ಡೇಟಾ

ಇಂಟೆಲ್ ಕ್ಯೂರಿ ಚಿಪ್

ಇಂಟೆಲ್‌ನ ಈ ಚಿಪ್ ರಿಯಲ್ ಟೈಮ್ ಡೇಟಾವನ್ನು ಟ್ರಾನ್ಸ್‌ಮಿಟ್ ಮಾಡುತ್ತದೆ ಕ್ರೀಡಾಳುಗಳಿಗೆ ಇದು ಹೆಚ್ಚು ಉಪಕಾರಿಯಾಗಿದೆ.

ಸ್ಮಾರ್ಟ್ ಐ ವೇರ್

ರಾಡಾರ್ ಪೇಸ್

ಈ ರಾಡಾರ್ ಪೇಸ್ ಸ್ಮಾರ್ಟ್ ಐ ವೇರ್ ಆಗಿದ್ದು, ನಿಮ್ಮ ಕಾರ್ಯಕ್ಷಮತೆಯನ್ನು ಇದು ಮಾನಿಟರ್ ಮಾಡುತ್ತದೆ. ಇದು ವರ್ಚುವಲ್ ತರಬೇತಿಯನ್ನು ನೀಡುತ್ತಿದ್ದು ತಂತ್ರಜ್ಞಾನವನ್ನು ಸುಧಾರಿಸುವ ಕ್ಷಿಪ್ರತೆ ಇದರಲ್ಲಿದೆ.

ರಿಯಲ್ ಸೀನ್ ತಂತ್ರಜ್ಞಾನ

ಯೂನಿ ಡ್ರೋನ್

ಹೆಕ್ಸಾಕೋಪ್ಟರ್ ಡ್ರೋನ್ ಇಂಟೆಲ್‌ನ ರಿಯಲ್ ಸೀನ್ ತಂತ್ರಜ್ಞಾನದೊಂದಿಗೆ ಬಂದಿದೆ. ಈ ಡ್ರೋನ್ 360 ಡಿಗ್ರಿ ಗಿಂಬಲ್ ಕ್ಯಾಮೆರಾದೊಂದಿಗೆ ಬಂದಿದ್ದು 12 ಎಮ್‌ಪಿ ಸ್ಟಿಲ್‌ಗಳೊಂದಿಗೆ 4 ಕೆ ವೀಡಿಯೊಗಳೊಂದಿಗೆ ಬಂದಿದೆ.

 ಪ್ರಿ ಸ್ಕೂಲರ್‌

ಕ್ಯಾಟರ್ ಪಿಲ್ಲರ್ ಬೋಟ್

ಈ ಕ್ಯಾಟರ್ ಪಿಲ್ಲರ್ ಬೋಟ್ ಪ್ರಿ ಸ್ಕೂಲರ್‌ಗಳಿಗಾಗಿ ವಿಶೇಷವಾಗಿ ವಿನ್ಯಾಸಪಡಿಸಲಾಗಿದೆ. ಈ ರೊಬೋಟ್ ಮೋಟಾರ್ ಹೆಡ್ ಅನ್ನು ಹೊಂದಿದ್ದು ಎಂಡು ವಿಭಾಗಗಳನ್ನು ಹೊಂದಿದೆ ಇದು ಎಡಕ್ಕೆ, ಬಲಕ್ಕೆ ಹೋಗುವ ವಿಶೇಷತೆಯನ್ನು ಹೊಂದಿದ್ದು ಹಾಡುಗಳನ್ನು ನಿಲ್ಲಿಸದೇ ಪ್ಲೇ ಮಾಡುತ್ತದೆ.

ಇಂಟೆಲ್‌ ಚಿಪ್

ಸ್ಮಾರ್ಟ್ ಹ್ಯಾಟ್

ಕ್ಯೂರಿ ಚಿಪ್ ಆಧಾರಿತ, ಇಂಟೆಲ್‌ ಅಳವಡಿತ ಚಿಪ್ ಈ ಹ್ಯಾಟ್‌ನಲ್ಲಿದೆ. DAQRI ಸ್ಮಾರ್ಟ್ ಹಾರ್ಡ್ ಹ್ಯಾಟ್ ಇದಾಗಿದ್ದು, ಬಿಲ್ಟ್ ಇನ್ ಕ್ಯಾಮೆರಾವನ್ನು ಇದು ಪಡೆದುಕೊಂಡಿದೆ.

ಭದ್ರತಾ ಕ್ಯಾಮೆರಾ

ರಿಂಗ್ ಸ್ಟಿಕ್ ಅಪ್ ಕ್ಯಾಮ್

ಈ ಹೊರಾಂಗಣ ಭದ್ರತಾ ಕ್ಯಾಮೆರಾ ಮನೆಗಳಿಗೆ ಅತ್ಯವಶ್ಯಕವಾಗಿದೆ. ನೈಟ್ ವಿಶನ್ ಕ್ಯಾಮೆರಾ ಇದರಲ್ಲಿದ್ದು ಇನ್‌ಫ್ರಾ ಮೋಶನ್ ಸೆನ್ಸಾರ್ ಒಳಗೊಂಡಿರುವುದರಿಂದ ಯಾವುದೇ ಚಲನವಲನಗಳುಂಟಾದಲ್ಲಿ ನಿಮ್ಮ ಫೋನ್‌ಗೆ ಅಧಿಸೂಚನೆಯನ್ನು ನೀಡುತ್ತದೆ. ಇದು ಮೈಕ್ರೋಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದ್ದು ಶಬ್ಧಗಳನ್ನು ಆಲಿಸಬಹುದಾಗಿದೆ.

ಬಿಲ್ಟ್ ಇನ್ ಕ್ಯಾಮೆರಾ

ಪವರ್ ಬೋಟ್ ರೊಬೋಟ್ ವಾಕ್ಯೂಮ್

ಬೋಟ್ ತನ್ನ ಬಿಲ್ಟ್ ಇನ್ ಕ್ಯಾಮೆರಾವನ್ನು ಬಳಸಿ ನಿಮ್ಮ ಮನೆಯ ನಕ್ಷೆಯನ್ನು ತಯಾರಿಸುತ್ತದೆ. ಇದನ್ನು ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್ ಬಳಸಿ ನೋಡಬಹುದಾಗಿದೆ. ಕ್ಲೀನಿಂಗ್ ಪ್ರೊಸೆಸ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಅಪ್ಲಿಕೇಶನ್ ನಿಮಗೆ ನೀಡಲಿದ್ದು ಯಾವುದೇ ಸಮಸ್ಯೆಯಿದ್ದಲ್ಲಿ ನಿಮಗೆ ತಿಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The future is now! On the second day of CES 2016, we have seen another set of weird gadgets that got released in the market. With this in mind, here's a list of top 20 strange, but awesome gadgets that got announced during the CES event.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot