ಆಕ್ಸಿಡೆಂಟ್‌ ಮುಂಚೆಯೇ ಎಚ್ಚರಿಸುವ ಗ್ಯಾಜೆಟ್ ಬೆಂಗಳೂರಿನಲ್ಲಿ

By Suneel
|

ಸಂಚಾರಿ ನಿಯಮವನ್ನು ಪಾಲಿಸಿ ಅಪಘಾತಗಳನ್ನು ತಡೆಗಟ್ಟಿ ಅಂತ ಸಾರ್ವಜನಿಕರಿಗೆ ಹೇಳಿ ಹೇಳಿ ಸರ್ಕಾರ ಮತ್ತು ಸಂಚಾರಿ ಪೋಲೀಸರು ಬೇಸರಗೊಂಡಿದ್ದಾರೆ. ಅಲ್ಲದೇ ಹೆಲ್ಮೆಟ್‌ ಧರಿಸದೇ ಓಡಾಟ ಮಾಡುವವರ ದ್ವಿಚಕ್ರ ವಾಹನಕಾರರಿಗೆ ಫೋಟೋ ಸಹಿತ ಸಾಕ್ಷಿಯನ್ನು ಮೆನೆಗೆ ಕಳುಹಿಸಿ ದಂಡ ವಸೂಲಿ ಮಾಡಿ ಹಾಗೂ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸೆಲ್‌ ಮಾಡುವುದಾಗಿ ಹೇಳಿದರು ಹಲವರು ಇದಕ್ಕೆ ಕ್ಯಾರೇ ಎಂದಿಲ್ಲ.

ಓದಿರಿ: ಮಂಗಳನ ಅಂಗಳ ಕಲರ್ ಕ್ಯಾಮೆರಾದಲ್ಲಿ

ಇನ್ನು ಎಷ್ಟೋ ಜನ ಮೈ ಮರೆತು ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿ ಎಸ್ಕೇಫ್‌ ಆಗುತ್ತಿದ್ದರು. ಇಂತಹ ಎಲ್ಲಾ ಸಮಸ್ಯೆಗಳನ್ನು ಅರಿತ ಸೂಪರ್‌ ಬ್ರೈನ್‌ಗಳು ಎಲ್ಲಾ ಸಮಸ್ಯೆಯನ್ನು ಒಂದೇ ಗ್ಯಾಜೆಟ್‌ನಲ್ಲಿ ನಿರ್ವಹಿಸಿ ಅಪಘಾತಗಳು ಆಗುವ ಮುಂಚೆಯೇ ಎಚ್ಚರಿಕೆ ನೀಡುವ ಒಂದು 'ರಕ್ಷಾ ಸೇಫ್‌ಡ್ರೈವ್‌' ಎಂಬ ಗ್ಯಾಜೆಟ್‌ ಅನ್ನು ಅಭಿವೃದ್ದಿಗೊಳಿಸಿದ್ದಾರೆ. ವಿಶೇಷವೆಂದರೆ ಈ ಗ್ಯಾಜೆಟ್‌ ಅಭಿವೃದ್ದಿಗೊಂಡಿರುವುದು ಬೆಂಗಳೂರಿನಲ್ಲಿ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ರಕ್ಷಾ ಸೇಫ್‌ಡ್ರೈವ್‌ ಗ್ಯಾಜೆಟ್‌ನ ಅನುಕೂಲ ಮತ್ತು ವಿಶೇಷತೆಯನ್ನು ತಿಳಿಸುತ್ತಿದೆ.

ರಕ್ಷಾ ಸೇಫ್‌ಡ್ರೈವ್

ರಕ್ಷಾ ಸೇಫ್‌ಡ್ರೈವ್

ರಕ್ಷಾ ಸೇಫ್‌ಡ್ರೈವ್‌ ಯಾವುದೇ ಅಪಘಾತ ಸಂಭವಿಸುವ ಮುನ್ನ ಸ್ವಯಂಚಾಲಿತವಾಗಿ ಎಚ್ಚರಿಕೆ ನೀಡುತ್ತದೆ.

ರಕ್ಷಾ ಸೇಫ್‌ಡ್ರೈವ್‌ ಸಂಶೋಧಕರು

ರಕ್ಷಾ ಸೇಫ್‌ಡ್ರೈವ್‌ ಸಂಶೋಧಕರು

ಪ್ರಸಾದ್ ಪಿಳ್ಳೈ ಮತ್ತು ಜಯಂತ್ ಜಗದೀಶ್ ರಕ್ಷಾ ಸೇಫ್‌ ಡ್ರೈವ್ ಗ್ಯಾಜೆಟ್ ಸಂಶೋಧಿಸಿದ್ದಾರೆ.

 Elsys ಕಂಪನಿ

Elsys ಕಂಪನಿ

ತಿರುವನಂತಪುರ ಮೂಲದ Elsys ಕಂಪನಿಯು ಕಳೆದ ತಿಂಗಳಿನಿಂದ ಬೆಂಗಳೂರಿನಲ್ಲಿ ತನ್ನ ಕಛೇರಿ ಪ್ರಾರಂಭಿಸಿದ್ದು, ಇಂಟೆಲಿಜೆಂಟ್‌ ಗ್ಯಾಜೆಟ್‌ಗಳ ಸಂಶೋಧನೆಗೆ ಹೆಸರು ವಾಸಿಯಾಗಿದೆ.

ರಕ್ಷಾ ಸೇಫ್‌ಡ್ರೈವ್‌ ಕಾರ್ಯಾಚರಣೆ ಹೇಗೆ ?

ರಕ್ಷಾ ಸೇಫ್‌ಡ್ರೈವ್‌ ಕಾರ್ಯಾಚರಣೆ ಹೇಗೆ ?

ಹಿಂಭಾಗದ ಪ್ರದರ್ಶನ ತೋರಿಸುವ ಚಾಲಕರ ಮುಂಭಾಗದಲ್ಲಿ ಈ ರಕ್ಷಾ ಸೇಫ್‌ಡ್ರೈವ್ ಗ್ಯಾಜೆಟ್‌ ಇರಿಸಲಾಗುತ್ತಿದ್ದು, ಇದು ಯಾವುದೇ ಅಪಘಾತ ಸಂಭವಿಸುವ ಅಥವಾ ಡಿಕ್ಕಿ ಹೊಡೆಯುವ ವಾಹನದಿಂದ ಜರುಗುವ ಸನ್ನಿವೇಶಗಳನ್ನು ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತದೆ.

ರಕ್ಷಾ ಸೇಫ್‌ಡ್ರೈವ್‌ ಕಾರ್ಯಾಚರಣೆ ಹೇಗೆ ?

ರಕ್ಷಾ ಸೇಫ್‌ಡ್ರೈವ್‌ ಕಾರ್ಯಾಚರಣೆ ಹೇಗೆ ?

ಇದು ಸ್ಮಾರ್ಟ್‌ ಪ್ಯಾನಿಕ್ ಬಟನ್‌ ಹೊಂದಿದ್ದು, ಒಮ್ಮೆ ಟಚ್‌ ಮಾಡುವುದರ ಮೂಲಕ ಎರಡು ವಿಧಾನದಲ್ಲಿ ವಾಯ್ಸ್ ಸಂಪರ್ಕವನ್ನು ನೆಟ್‌ವರ್ಕ್‌ ಸಹಾಯದಿಂದ ಕಲ್ಪಿಸುತ್ತದೆ.

ತುರ್ತು ಸಂಧರ್ಭದಲ್ಲಿ ಉಪಯೋಗಿಸಬಹುದು.

ತುರ್ತು ಸಂಧರ್ಭದಲ್ಲಿ ಉಪಯೋಗಿಸಬಹುದು.

ಇದನ್ನು ತುರ್ತು ಸಂಧರ್ಭದಲ್ಲಿ ಉಪಯೋಗಿಸ ಬಹುದಾಗಿದ್ದು, ತೊಂದರೆಗೆ ಓಳಗಾದ ವಾಹನಗಳಿಗೆ ಕೇಂದ್ರದಿಂದ ಕರೆಮಾಡಿ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ.

ಸಾಮಾನ್ಯವಾದ ಅಪಘಾತಗಳು

ಸಾಮಾನ್ಯವಾದ ಅಪಘಾತಗಳು

ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚು ಸಾಮಾನ್ಯವಾಗಿದ್ದು, ಹಲವರು ವಾರದಲ್ಲಿ ಒಮ್ಮೆಯಾದರೂ ಸಣ್ಣ ಸಣ್ಣ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ. ಜೀವನದಲ್ಲಿ ಹೆಚ್ಚು ಕನಸುಗಳನ್ನು ಹೊಂದಿರುವವರು ಅಪಘಾತಗಳನ್ನು ತಪ್ಪಿಸಲು ಇಂತಹ ಹೊಸ ಟೆಕ್ನಾಲಜಿಗಳನ್ನು ಬಳಸಿಕೊಳ್ಳಬೇಕಾಗಿದೆ ಎಂದು ಕಂಪನಿಯ ಸಿಇಓ ಪ್ರಸಾದ್ ಹೇಳಿದ್ದಾರೆ.

 ರಕ್ಷಾ ಸಾಫ್ಟ್‌ಡ್ರೈವ್ ಗ್ಯಾಜೆಟ್ ವಿಶೇಷತೆ.

ರಕ್ಷಾ ಸಾಫ್ಟ್‌ಡ್ರೈವ್ ಗ್ಯಾಜೆಟ್ ವಿಶೇಷತೆ.

* ಇದನ್ನು ಸಾಮಾನ್ಯವಾಗಿ ಅಪಘಾತವಾಗುವುದರ ಪರಿಣಾಮದ ಆಧಾರವಾಗಿ ವಿನ್ಯಾಸಗೊಳಿಸಲಾಗಿದೆ.
* ರಕ್ಷಾ ಮೊಬೈಲ್‌ ರೀತಿಯಲ್ಲಿ ಚಾರ್ಜ್‌ ಆಗಬಲ್ಲದು.
* ಒಮ್ಮೆ ಚಾರ್ಜ್‌ ಮಾಡಿದರೆ 6-8 ಗಂಟೆ ಸಮಯ ಕೆಲಸ ನಿರ್ವಹಿಸಬಹುದು.

ಕಾರು ತಯಾರಕರೊಂದಿಗೆ ಸಹಭಾಗಿತ್ವ.

ಕಾರು ತಯಾರಕರೊಂದಿಗೆ ಸಹಭಾಗಿತ್ವ.

ಸಿಇಓ ಪ್ರಸಾದ್‌ ರವರು ಕಾರು ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡು ಕಾರುಗಳಲ್ಲಿ ಇನ್‌ಬಿಲ್ಟ್‌ ಆಗಿ ಈ ಗ್ಯಾಜೆಟ್‌ ಅಳವಡಿಸುವುದಾಗಿ ಚಿಂತಿಸಿರುವ ಬಗ್ಗೆ ಹೇಳಿದ್ದಾರೆ.

ಮಾಹಿತಿ

ಮಾಹಿತಿ

ಕಂಪನಿಯು ಮಾಹಿತಿ ಸಂಬಂಧ ಪಟ್ಟಂತೆ ಹೆಚ್ಚು ಎಚ್ಚರಿಕೆ ವಹಿಸಿದ್ದು, ಅಪಘಾತಕ್ಕೆ ಒಳಗಾದ ವಾಹನದ ಎಲ್ಲಾ ಮಾಹಿತಿಯೂ ಈ ಗ್ಯಾಜೆಟ್‌ನಿಂದ ತಿಳಿಯಲಿದ್ದು, ಕಮಾಂಡ್‌ ಕೇಂದ್ರಕ್ಕೆ ಎಲ್ಲಾ ಮಾಹಿತಿ ತಿಳಿಯಲಿದೆ.

ಸಿಎಂಓ ಜಯಂತ್‌ ಜಗದೀಶ್

ಸಿಎಂಓ ಜಯಂತ್‌ ಜಗದೀಶ್

ಅಪಘಾತದಲ್ಲಿ ಭಾಗಿಯಾದ ಕಾರು ಅಥವಾ ಇತರೆ ವಾಹನ ಎಲ್ಲಿದ್ದರೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯ ಈ ಗ್ಯಾಜೆಟ್‌ಗೆ ಇದೆ ಎಂದು ಸಿಎಂಓ ಜಯಂತ್‌ ಜಗದೀಶ್ ಹೇಳಿದ್ದಾರೆ.

ಗ್ಯಾಜೆಟ್‌ ವಾಹನ ಚಲನೆಯ ವೇಗವನ್ನು ಕಲೆಹಾಕಲಿದೆ.

ಗ್ಯಾಜೆಟ್‌ ವಾಹನ ಚಲನೆಯ ವೇಗವನ್ನು ಕಲೆಹಾಕಲಿದೆ.

ಗ್ಯಾಜೆಟ್‌ ವಾಹನ ಚಲನೆಯ ವೇಗವನ್ನು ಕಲೆಹಾಕಲಿದೆ.

ರಕ್ಷಾ ಸೇಫ್‌ಡ್ರೈವ್‌ ಗ್ಯಾಜೆಟ್  ಸಂಚಾರಿ ಪೋಲೀಸರ ಕೆಲಸ ನಿರ್ವಹಣೆಗೆ ಹೆಚ್ಚು ಸಹಾಯವಾಗಲಿದೆ.

ರಕ್ಷಾ ಸೇಫ್‌ಡ್ರೈವ್‌ ಗ್ಯಾಜೆಟ್ ಸಂಚಾರಿ ಪೋಲೀಸರ ಕೆಲಸ ನಿರ್ವಹಣೆಗೆ ಹೆಚ್ಚು ಸಹಾಯವಾಗಲಿದೆ.

ರಕ್ಷಾ ಸೇಫ್‌ಡ್ರೈವ್‌ ಗ್ಯಾಜೆಟ್ ಸಂಚಾರಿ ಪೋಲೀಸರ ಕೆಲಸ ನಿರ್ವಹಣೆಗೆ ಹೆಚ್ಚು ಸಹಾಯವಾಗಲಿದೆ.

Best Mobiles in India

English summary
The high number of casualties in road accidents has prompted two entrepreneurs, Prasad Pillai and Jayanth Jagadeesh, to manufacture a gadget that automatically alerts rescue services in case of an accident. Raksha SafeDrive automatically alerts rescue services in the event of an accident.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X