TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಒಂದು ವರ್ಷ ಗ್ಯಾರೆಂಟಿಗೆ ರೂ.850ಕ್ಕೆ ದೊರೆಯುವ ಮೂರು ಫೋನ್‌ಗಳು...!
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಫೀಚರ್ ಫೋನ್‌ಗಳು ಲಾಂಚ್ ಆಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಹಲವು ಫೀಚರ್ ಫೋನ್‌ಗಳನ್ನು ಲಾಂಚ್ ಮಾಡಿರುವ ಡಿಟೇಲ್ ಕಂಪನಿಯೂ ಮತ್ತೇ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಮೂಲಕ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧಿಸಲು ಮುಂದಾಗಿದೆ.
ಸದ್ಯ ಮಾರುಕಟ್ಟೆಗೆ ಡಿಟೇಲ್ D1 ವೈಬ್, ಡಿಟೇಲ್ D1 ಪ್ಲಸ್ ಮತ್ತು ಡಿಟೇಲ್ D1 ಶೈನ್ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಎಲ್ಲಾ ಫೋನ್‌ಗಳು ರೂ.850ಕ್ಕಿಂತಲೂ ಕಡಿಮೆ ಬೆಲೆಗೆ ದೊರೆಯುತ್ತಿದೆ. ಹಿರಿಯರಿಗೆ ಮತ್ತು ಎರಡನೇ ಫೋನ್ ಆಗಿ ಬಳಕೆ ಮಾಡಿಕೊಳ್ಳುವವರಿಗೆ ಇದು ಕಡಿಮೆ ಬೆಲೆಗೆ ಮತ್ತು ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಈ ಹಿನ್ನಲೆಯಲ್ಲಿ ಡಿಟೇಲ್ ಫೀಚರ್ ಫೋನ್‌ಗಳ ಕುರಿತ ಮಾಹಿತಿಯೂ ಮುಂದಿದೆ.
ಡಿಟೇಲ್ ಮೂರು ಫೋನ್‌ಗಳ ಬೆಲೆ:
ಡಿಟೇಲ್ D1 ವೈಬ್, D1 ಪ್ಲಸ್ ಮತ್ತು D1 ಶೈನ್ ಫೋನ್‌ಗಳು ನಿಮ್ಮ ಬೆಜೆಟ್ ಬೆಲೆಯಲ್ಲಿ ದೊರೆಯಲಿದೆ. ಡಿಟೇಲ್ D1 ವೈಬ್ ರೂ.820ಕ್ಕೆ, D1 ಪ್ಲಸ್ ರೂ.830ಕ್ಕೆ ಮತ್ತು D1 ಶೈನ್ ಫೋನ್ ರೂ.810ಕ್ಕೆ ಮಾರಾಟವಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿರುವ ಈ ಫೀಚರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ.
ಡಿಟೇಲ್ ಫೋನ್‌ಗಳ ವಿಶೇಷತೆಗಳು..!
ಈ ಫೀಚರ್ ಫೋನಿನಲ್ಲಿ ವೈರ್ ಲೈಸ್ FM ರೇಡಿಯೋವನ್ನು ಕೇಳುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿದೆ. ಇದರೊಂದಿಗೆ ಲೈವ್ FM ಆಲಾರ್ಮ್ ಅನ್ನು ಇಟ್ಟುಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೆ 1.77 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ.
ಕ್ಯಾಮೆರಾ:
ಈ ಮೂರು ಫೀಚರ್ ಫೊನ್‌ಗಳಲ್ಲಿ ಡಿಜಿಟಲ್ ಕ್ಯಾಮೆರಾವನ್ನು ಹೊಂದಿವೆ ಎನ್ನಲಾಗಿದೆ. ಅಲ್ಲದೇ ವೈವ್ ಫೋನ್‌ನಲ್ಲಿ LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ. ಮೂರು ಫೋನ್‌ಗಳ್ಲಿ ಡ್ಯುಯಲ್ ಸಿಮ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ 1050 mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಮಲ್ಟಿ ಲಾಗ್ವೇಜ್ ಸೇವೆಯನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.
ವಿಡಿಯೋ ಪ್ಲೇಯರ್:
ಈ ಮೂರು ಫೋನ್‌ಗಳಲ್ಲಿ ಆಟೋ ಆಡಿಯೋ ರೆಕಾರ್ಡಿಂಗ್, ವಿಡಿಯೋ ರೆಕಾರ್ಡಿಂಗ್, ಸೌಂಡ್ ರೆಕಾರ್ಡಿಂಗ್, ಟಾರ್ಜ್ ಸೇರಿದಂತೆ ಆಡಿಯೋ ವಿಡಿಯೋ ಪ್ಲೇಯರ್ ಅನ್ನು ಹೊಂದಿದೆ. ಅಲ್ಲದೇ ಬ್ಲೂಟೂತ್ ಸಫೋರ್ಟ್ ಸಹ ಇದೆ.
ಒಂದು ವರ್ಷ ಗ್ಯಾರೆಂಟಿ:
ಇದಲ್ಲದೇ ಈ ಮೂರು ಫೋನ್‌ಗಳು ಒಂದು ವರ್ಷದ ವ್ಯಾರೆಂಟಿಯನ್ನು ಹೊಂದಿವೆ ಎನ್ನಲಾಗಿದ್ದು, ವುಮೇನ್ ಸೇಪ್ಟಿ ಬಟನ್ ಅನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನುವ ಆಯ್ಕೆಗಳೊಂದಿಗೆ ಈ ಪೋನ್‌ಗಳು ಕಾಣಿಸಿಕೊಂಡಿದೆ.
ಕೇವಲ ರೂ.1799ಕ್ಕೆ ಆಂಡ್ರಾಯ್ಡ್ ಗೊ ಫೋನ್..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ..!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಚೀನಾ ಕಂಪನಿಯ ಆರ್ಭಟವು ಹೆಚ್ಚಾಗಲು ಇದೊಂದೇ ಸ್ಮಾರ್ಟ್‌ಫೋನ್ ಸಾಕು, ಚೀನಾದ ಬೇರೆ ಟಾಪ್ ಕಂಪನಿಗಳಿಗೆ ಸಾಧ್ಯವಾದ ಸಾಧ್ಯತೆಯೊಂದನ್ನು ತೋರಿಸಿಕೊಟ್ಟಿರುವ ಈ ಕಂಪನಿ ಇದುವರೆಗೂ ಯಾವುದೇ ಸ್ಮಾರ್ಟ್‌ಫೋನ್ ಕಂಪನಿಯೂ ನೀಡದ ಬೆಲೆಗೆ ಹೆಚ್ಚಿನ ಪ್ರಮಾಣದ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಿದೆ.
ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಗರಿಷ್ಠ ಫೀಚರ್ಸ್‌ನೊಂದಿಗೆ ಬಂದಿರುವ ಐವಿವೋಮಿ ಹೊಸ ಫೋನ್ ಕುರಿತು ಮಾಹಿತಿಯೂ ಇಲ್ಲಿದೆ. ಶಿಯೋಮಿ, ವಿವೋ, ಒಪ್ಪೋ ಕಂಪನಿಗಳಿಗೂ ಸಾಧ್ಯವಾಗದ ಮಾದರಿಯಲ್ಲಿ ಐವೋಮಿ ಹೊಸ ಮಾದರಿಯಲ್ಲಿ ಐವೋಮಿ iಪ್ರೋ ಹೆಸರಿನ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಈ ನೂತನ ಫೋನ್ ಭಾರತದ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನಲಾಗಿದೆ. ಈ ಬೆಲೆ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಇನ್ನೆಂದು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.
ಫುಲ್ ವೀವ್ಯೂ ಡಿಸ್‌ಪ್ಲೇ:
ಐವೋಮಿ iಪ್ರೋ ಸ್ಮಾರ್ಟ್‌ಫೋನಿನಲ್ಲಿ ಫುಲ್ ವೀವ್ಯೂ ಡಿಸ್‌ಪ್ಲೇ ಯನ್ನು ಕಾಣಬಹುದಾಗಿದೆ. 4.95 ಇಂಚಿನ ಡಿಸ್‌ಪ್ಲೇಯನ್ನು ಈ ಫೋನಿನಲ್ಲಿ ನೀಡಲಾಗಿದೆ. ಇದು 18:9 ಅನುಪಾತದಿಂದ ಕೂಡಿದೆ. ಇದೊಂದು ಬಜೆಟ್ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ಫೋನ್ ಆಗಿದ್ದು, FWVGA+ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಫೇಸ್ ಲಾಕ್ ಸೇವೆಯನ್ನು ಹೊಂದಿದೆ.
ಆಂಡ್ರಾಯ್ಡ್ ಗೋ:
ಐವೋಮಿ iಪ್ರೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಗೋನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮಿಡಿಯಾ ಟೆಕ್ MT6737 ಪ್ರೋಸೆಸರ್ ಹೊಂದಿದ್ದು, 1 GB RAM ಅನ್ನು ಕಾಣಬಹುದಾಗಿದೆ. ಅಲ್ಲದೇ ಇದು 8 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, 128 ಜಿಬಿ ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದು ಬಳಕೆದಾರರಿಗೆ ದೊಡ್ಡದಾದ ಅವಕಾಶವನ್ನು ನೀಡಲಿದೆ.
ಬೆಸ್ಟ್ ಕ್ಯಾಮೆರಾ:
ಐವೋಮಿ iಪ್ರೋ ಸ್ಮಾರ್ಟ್‌ಫೋನಿನಲ್ಲಿ 5 MP ಸೆಲ್ಪೀ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ 5 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಈ ಎರಡು ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ.
ಬೆಲೆ:
ಫುಲ್ ವೀವ್ಯೂ ಡಿಸ್‌ಪ್ಲೇ ಹೊಂದಿರುವ ನೂತನ ಐವೋಮಿ iಪ್ರೋ ಸ್ಮಾರ್ಟ್‌ಫೋನಿನ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರೆಂಟಿ, ಈ ಸ್ಮಾರ್ಟ್‌ಫೋನ್ ಕೇವಲ ರೂ.3,999ಕ್ಕೆ ಲಭ್ಯವಿದೆ ಎನ್ನಲಾಗಿದೆ. ಇಷ್ಟು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಯಾವುದೇ ಆಂಡ್ರಾಯ್ಡ್ ಗೋನಲ್ಲಿ ಸ್ಮಾರ್ಟ್‌ಫೋನ್ ದೊರೆಯುತ್ತಿಲ್ಲ.
ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ:
ಐವೋಮಿ iಪ್ರೋ ಸ್ಮಾರ್ಟ್‌ಫೋನಿನಲ್ಲಿ ಫ್ಲಿಪ್ ಕಾರ್ಟ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ. ಇದಲ್ಲದೇ ಜಿಯೋದಿಂದ ರೂ.2200 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದರಿಂದಾಗಿ ಈ ಸ್ಮಾರ್ಟ್‌ಫೋನ್ ಎಫೆಕ್ಟ್‌ವಿವ್ ಆಗಿ ರೂ.1799ಕ್ಕೆ ಮಾರಾಟವಾಗಲಿದೆ.