ಸಾವನ್‌ ಜೊತೆಗೆ ಕೈ ಜೋಡಿಸಿದ ಜಿಯೋ ಮ್ಯೂಸಿಕ್‌

|

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿರುವ ಜಿಯೋ, ಕೇವಲ ಟೆಲಿಕಾಂ ಮಾತ್ರವಲ್ಲದೇ ಆಪ್‌ಗಳ ಮೂಲಕವೂ ಹೆಚ್ಚಿನ ಜನರನ್ನು ತಲುಪುವ ಕಾರ್ಯವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಯೋ ಮ್ಯೂಸಿಕ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಸಾವನ್ ಮ್ಯೂಸಿಕ್ ನೊಂದಿಗೆ ಕೈ ಜೋಡಿಸಲಿದೆ.

ಸಾವನ್‌ ಜೊತೆಗೆ ಕೈ ಜೋಡಿಸಿದ ಜಿಯೋ ಮ್ಯೂಸಿಕ್‌

ಈ ಮೂಲಕ ಆನ್‌ಲೈನ್‌ ಮತ್ತು ಆಪ್‌ ಮ್ಯೂಸಿಕ್ ಸ್ಟ್ರೀಮಿಂಗ್‌ನಲ್ಲಿ ಹೊಸ ಭಾಷ್ಯವನ್ನು ಬರೆಯಲು ಜಿಯೋ ಮುಂದಾಗಿದ್ದು, ಈ ಹಿಂದೆ ಜಿಯೋ ಟಿವಿ ಆಪ್‌ ಅನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಬಳಕೆದಾರರಿಗೆ ಹೆಚ್ಚಿನ ಸೇವೆಯನ್ನು ನೀಡಲು ಮುಂದಾಗಿತ್ತು. ಸದ್ಯ ಇದೇ ಮಾದರಿಯಲ್ಲಿ ಮ್ಯೂಸಿಕ್ ಆಪ್‌ ಅನ್ನು ಡೆವಲಪ್ ಮಾಡಲಿದೆ.

ಈಗಾಗಲೇ ಜಿಯೋ ಮತ್ತು ಸಾವನ್ ನೊಂದಿಗೆ ಒಪ್ಪಂದವೂ ನಡೆಸಿದ್ದು, ಈ ಜೋಡಿ ಇನ್ನೂ ಹೆಚ್ಚಿನ ಕೇಳುಗರನ್ನು ತಲುಪಲು ಹೊಸ ಹೊಸ ಸಾಧ್ಯತೆಗಳನ್ನು ತೋರಿಸಿಕೊಡಲಿದ್ದು, ಬಳಕೆದಾರರಿಗೆ ಗುಣಮಟ್ಟದ ಸೇವೆಯನ್ನು ನೀಡಲಿವೆ ಎನ್ನಲಾಗಿದೆ. ರಿಲಯನ್ಸ್ ಸಮೂಹದ ಜಿಯೋಮ್ಯೂಸಿಕ್ ಆಪ್ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಸಾವನ್‌ ಜೊತೆಗೆ ಕೈ ಜೋಡಿಸಿದ ಜಿಯೋ ಮ್ಯೂಸಿಕ್‌

ಜಿಯೋಮ್ಯೂಸಿಕ್ ಆಪ್‌ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ದೇಶದ 20 ಭಾಷೆಗಳಲ್ಲಿ 16 ಮಿಲಿಯನ್‌ಗಿಂತ ಹೆಚ್ಚಿನ ಎಚ್‌ಡಿ ಗುಣಮಟ್ಟದ ಹಾಡುಗಳ ಸಂಗ್ರಹವನ್ನು ಹೊಂದಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ 2007 ರಲ್ಲಿ ಪ್ರಾರಂಭವಾದ ಸಾವನ್ ಡಿಜಿಟಲ್ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ಮುಂಚೂಣಿ ಸ್ಥಾನದಲ್ಲಿದೆ ಎನ್ನಲಾಗಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಜಿಯೋ ಸಾವನ್‌ನೊಂದಿಗೆ ಕೈ ಜೋಡಿಸುವ ಮೂಲಕ ಜಾಗತಿಕ ಮ್ಯೂಸಿಕ್ ಸ್ಟೀಮಿಂಗ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಇದರಿಂದ ಹೆಚ್ಚಿನ ಲಾಭವನ್ನು ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ. ಒಟ್ಟಿನಲ್ಲಿ ಬಳಕೆದಾರರಿಗೆ ಹೆಚ್ಚಿನ ಮ್ಯೂಸಿಕ್ ಬಳಕೆಗೆ ದೊರೆಯಲಿದೆ.

Most Read Articles
Best Mobiles in India

English summary
Reliance Industries to merge Jio Music with Saavn. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X