ಈ ಹತ್ತು ಆಪ್‌ಗಳು ನಿಮ್ಮ ವಾಟ್ಸಾಪ್‌ ಅನುಭವವನ್ನು ದ್ವಿಗುಣಗೊಳಿಸುತ್ತವೆ!

|

ಸ್ಮಾರ್ಟ್‌ಫೋನ್ ಇದ್ದಮೇಲೆ ಎಲ್ಲರೂ ಸಾಮಾನ್ಯವಾಗಿ ವಾಟ್ಸಾಪ್‌ ಬಳಕೆ ಮಾಡೇ ಮಾಡುತ್ತಾರೆ. ಅದರಲ್ಲೂ ಜಾಗತಿಕವಾಗಿ ಶತಕೋಟಿಗೂ ಹೆಚ್ಚು ಬಳಕೆದಾರರು ಈ ಪ್ಲಾಟ್‌ಫಾರ್ಮ್‌ ಅನ್ನು ಬಳಕೆ ಮಾಡುತ್ತಿದ್ದಾರೆ. ಅದರಂತೆ ವಾಟ್ಸಾಪ್‌ ಸಹ ಭಿನ್ನ-ವಿಭಿನ್ನ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೆಚ್ಚಿನ ಅನುಭವ ನೀಡಲು ಮುಂದಾಗಿದೆ. ಆದರೂ ಸಹ ವಾಟ್ಸಾಪ್‌ ನಲ್ಲಿ ಇನ್ನೂ ಏನೋ ಬೇಕಿತ್ತು ಎಂದು ಕೊಂಡರೆ ಅದಕ್ಕೆ ಕೆಲವು ಸಪೋರ್ಟಿಂಗ್‌ ಆಪ್‌ಗಳ ವಿವರವನ್ನು ನೀಡಿದ್ದೇವೆ.

ವಾಟ್ಸಾಪ್‌

ಹೌದು, ನೀವು ಈವರೆಗೂ ಬಳಕೆ ಮಾಡುತ್ತಿದ್ದ ವಾಟ್ಸಾಪ್‌ ಅನುಭವಕ್ಕೂ ಈಗ ನಾವು ವಿವರಿಸಲಿರುವ ವಾಟ್ಸಾಪ್‌ ಅನುಭವನ್ನೂ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದು. ಇದರಲ್ಲಿ ಡಿಲೀಟ್‌ ಮಾಡಿದ ಮೆಸೆಜ್‌ಗಳನ್ನು ಓದುವುದರಿಂದ ಹಿಡಿದು ವಾಟ್ಸಾಪ್ ಕರೆಗಳನ್ನು ನಿರ್ಬಂಧಿಸುವವರೆಗೆ ಪ್ರಮುಖ ಆಪ್‌ಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ. ಮತ್ಯಾಕೆ ತಡ ಯಾವ್ಯಾವ ಆಪ್ ವಾಟ್ಸಾಪ್‌ಗೆ ಏನೆಲ್ಲಾ ಅನುಕೂಲತೆ ಮಾಡಿಕೊಡಲಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

WAMR

WAMR

WAMR ಆಪ್‌ ಮೂಲಕ ಡಿಲೀಟ್‌ ಮಾಡಿದ ಮೆಸೆಜ್‌ ಗಳನ್ನು ನೋಡಬಹುದಾಗಿದೆ. ಅದಷ್ಟೇ ಅಲ್ಲದೆ ನಿಮ್ಮ ಸ್ನೇಹಿತರು ಹಾಗೂ ನಿಮಗೆ ಬೇಕಾದವವರು ಫೋಟೋ ಕಳುಹಿಸಿ ತಕ್ಷಣಕ್ಕೆ ಡಿಲೀಟ್‌ ಮಾಡಿದರೆ ಅದನ್ನು ರೀಸ್ಟೋರ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಇದಕ್ಕೆ ಸಂಬಂಧಿಸಿದಂತೆ ನೋಟಿಫಿಕೇಶನ್‌ ಸಹ ಬರುತ್ತದೆ.

WABox

WABox

ವಾಟ್ಸ್ ಆಟೋ ಆಪ್‌ ಅನ್ನು ಬ್ಯುಸಿನೆಸ್‌ ಸಂಬಂಧ ಬಳಕೆ ಮಾಡಬಹುದು. ಈ ಆಪ್‌ ಮೂಲಕ ಯಾರಾದರೂ ಮೆಸೆಜ್‌ ಕಳುಹಿಸಿದಾಗ ಅದರ ಪ್ರತ್ಯುತ್ತರಕ್ಕೆ ವಾಟ್ಸ್ ಆಟೋ ಬಳಕೆಯಾಗುತ್ತದೆ. ಈ ಮೂಲಕ ಡೀಫಾಲ್ಟ್ ಪಠ್ಯದೊಂದಿಗೆ ಅದೇ ರಿಪ್ಲೇ ಮಾಡುತ್ತದೆ.

ಕ್ಯೂಬ್ ACR

ಕ್ಯೂಬ್ ACR

ಕ್ಯೂಬ್ ACR ಆಪ್‌ ಅನ್ನು ನೀವು ಮನರಂಜನೆ ಅಥವಾ ಬ್ಯುಸಿನೆಸ್‌ಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಕ್ಯೂಬ್ ಎಸಿಆರ್ ಅತ್ಯುತ್ತಮ ಕರೆ ರೆಕಾರ್ಡಿಂಗ್ ಗೆ ಉಪಯುಕ್ತವಾಗಿದ್ದು, ಜೊತೆಗೆ ಜೂಮ್ ಮತ್ತು ಇತರ ಕೆಲವು ಆಪ್‌ಗಳ ಕರೆಯನ್ನೂ ರೆಕಾರ್ಡ್‌ ಮಾಡಿಕೊಳ್ಳಬಹುದು.

WA ಕಾಲ್ ಬ್ಲಾಕರ್

WA ಕಾಲ್ ಬ್ಲಾಕರ್

ಇನ್ನು WA ಕಾಲ್ ಬ್ಲಾಕರ್ ಆಪ್‌ ಮೂಲಕ ನೀವು ವಾಟ್ಸಾಪ್‌ನಲ್ಲಿ ಬರುವ ಕರೆಗಳನ್ನು ನಿರ್ಬಂಧಿಸಬಹುದಾಗಿದೆ. ಜೊತೆಗೆ ಯಾರ್ಯಾರು ಕರೆ ಮಾಡಿದ್ದರು ಎಂಬ ಮಾಹಿತಿಯನ್ನೂ ಸಹ ನೀಡುತ್ತದೆ. ಈ ಕರೆ ಸೌಲಭ್ಯ ಆಡಿಯೋ ಹಾಗೂ ವಿಡಿಯೋ ಕರೆಗಳಿಗೆ ಅನ್ವಯಿಸುತ್ತದೆ.

ಟ್ರಾನ್ಸ್‌ಕ್ರೈಬರ್ ಫಾರ್‌ ವಾಟ್ಸಾಪ್‌

ಟ್ರಾನ್ಸ್‌ಕ್ರೈಬರ್ ಫಾರ್‌ ವಾಟ್ಸಾಪ್‌

ಟ್ರಾನ್ಸ್‌ಕ್ರೈಬರ್ ಫಾರ್‌ ವಾಟ್ಸಾಪ್‌ ಮೂಲಕ ವಾಯ್ಸ್‌‌ ನೋಟ್‌ ಅನ್ನು ಟೆಕ್ಸ್ಟ್‌ಆಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈ ಆಪ್‌ ಬಳಕೆ ಮಾಡಲು ಟ್ಯುಟೋರಿಯಲ್ ಸೌಲಭ್ಯ ಸಹ ಇದೆ.

ಸ್ಟೇಟಸ್‌ ಸೇವರ್‌

ಸ್ಟೇಟಸ್‌ ಸೇವರ್‌

ಇದರಲ್ಲಿ ಸ್ಟೇಟಸ್‌ನ ಫೋಟೋ, GIF, ವಿಡಿಯೋ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಸ್ಟೇಟಸ್ ಡೌನ್‌ಲೋಡರ್ ಆಪ್‌ನಿಂದ ನೇರವಾಗಿ ನಿಮ್ಮ ಸ್ನೇಹಿತರ ಸ್ಟೋರಿ ಗಳನ್ನು ನೀವು ಸೇವ್‌ ಮಾಡಿಕೊಂಡು ನಂತರ ನಿಮ್ಮ ಸ್ಟೇಟಸ್‌ನಲ್ಲಿಯೂ ಅದನ್ನು ಹಾಕಬಹುದು.

ಸ್ಟಿಕ್ಕರ್ ಮೇಕರ್

ಸ್ಟಿಕ್ಕರ್ ಮೇಕರ್

ಈ ಸ್ಟಿಕ್ಕರ್ ಮೇಕರ್ ಆಪ್‌ ಅನ್ನು ನೀವು ಸಂಭ್ರಮಾಚರಣೆ ಸಂದರ್ಭದಲ್ಲಿ ಬಳಕೆ ಮಾಡಬಹದು. ಯಾಕೆಂದರೆ ಹಬ್ಬ ಅಥವಾ ಇತರೆ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ತಮಾಷೆಯ ಸ್ಟಿಕ್ಕರ್‌ಗಳನ್ನು ನೀವು ರಚಿಸಿ ಬೇಕಾದವರಿಗೆ ಶೇರ್‌ ಮಾಡಬಹುದು.

ವಾಟ್ಸಪ್ಪರ್

ವಾಟ್ಸಪ್ಪರ್

ಯಾವುದೇ ಪಿಸಿ ಇಲ್ಲದೆ ಆಂಡ್ರಾಯ್ಡ್‌ ಮತ್ತು ಐಫೋನ್‌ ನಡುವೆ ನಿಮ್ಮ ಎಲ್ಲಾ ವಾಟ್ಸಾಪ್‌ ಡೇಟಾವನ್ನು ವರ್ಗಾಯಿಸುವುದಕ್ಕೆ ಈ ಆಪ್‌ ಸಹಕಾರಿಯಾಗಿದೆ. ಈ ಮೂಲಕ ನೀವು ಮೆಸೆಜ್‌, ಫೋಟೋಗಳು, ಫೈಲ್‌ಗಳು ಮತ್ತು ಇನ್ನೂ ಹೆಚ್ಚಿನ ಡೇಟಾವನ್ನು ವರ್ಗಾಹಿಸಬಹುದು.

ವಾಲಾಸ್ಟ್ ಸೀನ್

ವಾಲಾಸ್ಟ್ ಸೀನ್

ವಾಲಾಸ್ಟ್ ಸೀನ್ (WaLastSeen) ಮೂಲಕ ಯಾರು ಯಾವಾಗ ವಾಟ್ಸಾಪ್‌ನಲ್ಲಿ ಕೊನೆಯದಾಗಿ ಆನ್‌ಲೈನ್‌ನಲ್ಲಿ ಇದ್ದರು ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಇದನ್ನು ಪೋಷಕರಿಗಾಗಿಯೇ ರೂಪಿಸಲಾಗಿದೆ. ಯಾಕೆಂದರೆ, ಮಕ್ಕಳ ಮೇಲೆ ಕಣ್ಣಿಡಲು ಇದು ತುಂಬಾನೆ ಸಹಕಾರಿ.

ವಾಟ್ಸ್ ಆಟೋ

ವಾಟ್ಸ್ ಆಟೋ

ವಾಟ್ಸ್ ಆಟೋ ಆಪ್‌ ಅನ್ನು ಬ್ಯುಸಿನೆಸ್‌ ಸಂಬಂಧ ಬಳಕೆ ಮಾಡಬಹುದು. ಈ ಆಪ್‌ ಮೂಲಕ ಯಾರಾದರೂ ಮೆಸೆಜ್‌ ಕಳುಹಿಸಿದಾಗ ಅದರ ಪ್ರತ್ಯುತ್ತರಕ್ಕೆ ವಾಟ್ಸ್ ಆಟೋ ಬಳಕೆಯಾಗುತ್ತದೆ. ಈ ಮೂಲಕ ಡೀಫಾಲ್ಟ್ ಪಠ್ಯದೊಂದಿಗೆ ಅದೇ ರಿಪ್ಲೇ ಮಾಡುತ್ತದೆ.

Best Mobiles in India

English summary
10 Android apps that will help to whatsapp users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X