ಐಫೋನ್‌ನಲ್ಲಿ ಇಲ್ಲದ ಟಾಪ್ ಫೀಚರ್ಸ್ ಆಂಡ್ರಾಯ್ಡ್‌ನಲ್ಲಿ!!!

By Shwetha
|

ಜಗತ್ತಿನ ಅತ್ಯಂತ ದೊಡ್ಡ ಆಪರೇಟಿಂಗ್ ಸಿಸ್ಟಮ್ ಎಂದೆನಿಸಿರುವ ಆಂಡ್ರಾಯ್ಡ್ ಮತ್ತು ಐಫೋನ್ ಇತ್ತೀಚೆಗೆ ತಾನೇ ತಾಜಾ ಅಪ್‌ಡೇಟ್‌ಗಳನ್ನು ಪಡೆದುಕೊಂಡಿವೆ. ಆಪಲ್ ಐಓಎಸ್ 10 ಅನ್ನು ಬಿಡುಗಡೆ ಮಾಡಿದರೆ, ಗೂಗಲ್ ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿ ನ್ಯೂಗಾವನ್ನು ಬಿಡುಗಡೆ ಮಾಡಿದೆ. ಈ ಎರಡೂ ಹೊಸ ಓಎಸ್‌ಗಳು ಬಳಕೆದಾರರಿಗೆ ಆಕರ್ಷಕ ಬಳಕೆ ವಿಧಾನಗಳನ್ನು ಪ್ರಸ್ತುತಪಡಿಸಿದ್ದು ಈವರೆಗೂ ಇರದ ಹೊಸ ಅಂಶಗಳನ್ನು ಬಳಕೆದಾರರು ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ಓದಿರಿ: ನೀವರಿಯಲೇಬೇಕಾಗಿರುವ ರಿಲಾಯನ್ಸ್ ಜಿಯೋ ಡೇಟಾ ಯೋಜನೆ ಟಾರಿಫ್ಸ್

ಆದರೆ ಈ ಎರಡೂ ಓಎಸ್‌ಗಳು ಭಿನ್ನವಾದ ಫೀಚರ್‌ಗಳನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್‌ನ ಯಾವ ಮುಖ್ಯ ಫೀಚರ್‌ಗಳು ಐಫೋನ್‌ನಲ್ಲಿಲ್ಲ ಎಂಬುದನ್ನು ಕಂಡುಕೊಳ್ಳೋಣ.

ಸ್ಪಿಲ್ಟ್ ಸ್ಕ್ರೀನ್

ಸ್ಪಿಲ್ಟ್ ಸ್ಕ್ರೀನ್

ಆಂಡ್ರಾಯ್ಡ್ 7.0 ನ್ಯೂಗಾ ಮತ್ತು ಆಪಲ್ ಐಓಎಸ್ 10 ಬಳಕೆದಾರರಿಗೆ ಸ್ಪಿಲ್ಟ್ ಸ್ಕ್ರೀನ್ ಮಲ್ಟಿಟಾಸ್ಕಿಂಗ್ ಫೀಚರ್ ಅನ್ನು ನೀಡಿದೆ. ಇಲ್ಲಿರುವ ವ್ಯತ್ಯಾಸವೆಂದರೆ ಸ್ಪಿಲ್ಟ್ ಸ್ಕ್ರೀನ್ ಅನ್ನು ಐಪ್ಯಾಡ್ ಮತ್ತು ಕಾಣಬಹುದು ಐಫೋನ್‌ನಲ್ಲಲ್ಲ. ಆಂಡ್ರಾಯ್ಡ್ ನ್ಯೂಗಾ ಈ ವಿಶೇಷತೆಯನ್ನು ಸಣ್ಣ ಮತ್ತು ದೊಡ್ಡ ಪರದೆಯ ಫೋನ್‌ಗಳೆರಡರಲ್ಲೂ ತಂದಿದೆ.

ತ್ವರಿತ ಟಾಗಲ್ ಅಧಿಸೂಚನೆಗಳು

ತ್ವರಿತ ಟಾಗಲ್ ಅಧಿಸೂಚನೆಗಳು

ಟಾರ್ಚ್, ವೈಫೈ, ಡೇಟಾ ಆಕ್ಸೆಸ್ ಮತ್ತು ಇನ್ನಷ್ಟು ಫೀಚರ್‌ಗಳಿಗೆ ತ್ವರಿತ ಪ್ರವೇಶವನ್ನು ಆಂಡ್ರಾಯ್ಡ್ ನೀಡುತ್ತದೆ. ನೀವು ಅಧಿಸೂಚನೆ ಪ್ಯಾನಲ್ ಅನ್ನು ಕೆಳಕ್ಕೆ ಎಳೆದಾಗ ಈ ಫೀಚರ್‌ಗಳನ್ನು ನಿಮಗೆ ಕಾಣಬಹುದಾಗಿದೆ.

ಐಓಎಸ್ 10 ನಲ್ಲಿ ನೀವು ಕೆಳಗಿಂದ ಸ್ವೈಪ್ ಮಾಡಿದಾಗ ಮಾತ್ರವೇ ಕಂಟ್ರೋಲ್ ಸೆಂಟರ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದು. ಇದು ಎಲ್ಲಾ ಟಾಗಲ್‌ಗಳನ್ನು ಪ್ರವೇಶಿಸುವ ಕಂಟ್ರೋಲ್ ಸೆಂಟರ್ ಆಗಿದೆ. ಮ್ಯೂಸಿಕ್ ಪ್ಲೇಯರ್ ಮತ್ತು ಏರ್‌ಪ್ಲೇ ಶಾರ್ಟ್‌ಕಟ್‌ಗಳಿಗೂ ಇದೇ ಪ್ರವೇಶವನ್ನು ಒದಗಿಸುತ್ತದೆ.

ಅಪ್ಲಿಕೇಶನ್‌ಗಳ ನಡುವೆ ತ್ವರಿತ ಬದಲಾವಣೆ

ಅಪ್ಲಿಕೇಶನ್‌ಗಳ ನಡುವೆ ತ್ವರಿತ ಬದಲಾವಣೆ

ಎರಡು ಅಪ್ಲಿಕೇಶನ್‌ಗಳ ನಡುವೆ ತ್ವರಿತವಾಗಿ ಬದಲಾಯಿಸುವ ಫೀಚರ್ ಅನ್ನು ಆಂಡ್ರಾಯ್ಡ್ ಪಡೆದುಕೊಂಡಿದೆ. ಮಲ್ಟಿ ವಿಂಡೋ ಬಟನ್‌ಗೆ ಎರಡು ಬಾರಿ ಟ್ಯಾಪ್ ಮಾಡಬೇಕು ಮತ್ತು ಕೊನೆಯ ಬಾರಿ ಬಳಸಲಾದ ಅಪ್ಲಿಕೇಶನ್ ಇಲ್ಲಿ ಕಾಣಸಿಗುತ್ತದೆ.

ಐಓಎಸ್ 10 ನಲ್ಲಿ, ಹೋಮ್ ಬಟನ್ ಮೇಲೆ ದೀರ್ಘವಾಗಿ ಒತ್ತುವುದರಿಂದ ಹಿನ್ನಲೆಯಲ್ಲಿ ಎಲ್ಲಾ ಅಪ್ಲಿಕೇಶನ್‌ಗಳ ವಿವರ ದೊರೆಯುತ್ತದೆ.

ಡೋಜ್

ಡೋಜ್

ಗೂಗಲ್‌ನ ಆಂಡ್ರಾಯ್ಡ್ ಓಎಸ್ ಕೂಡ ಡೋಜ್ ಎಂಬ ಉತ್ತಮ ಫೀಚರ್ ಅನ್ನು ಹೊಂದಿದೆ. ಆಂಡ್ರಾಯ್ಡ್ ಮಾರ್ಶ್ ಮಲ್ಲೊನಲ್ಲಿ ಇದನ್ನು ಮೊದಲ ಬಾರಿಗೆ ಪ್ರಸ್ತುತಪಡಿಸಲಾಯಿತು,ಇದು ಬ್ಯಾಟರಿ ಜೀವನವನ್ನು ರಕ್ಷಿಸಿಕೊಳ್ಳಲು ನೆರವಾಗಲಿದೆ. ಡೋಜ್ ಫೀಚರ್ ಅನ್ನು ಆನ್ ಮಾಡಿದೊಡನೆ ರಾತ್ರಿ ಪೂರ್ತಿ 3% ಬ್ಯಾಟರಿ ಚಾರ್ಜ್ ನಷ್ಟವಾಗುತ್ತದೆ. ನ್ಯೂಗಾದಲ್ಲಿ ಈ ಫೀಚರ್ ಅನ್ನು ಇನ್ನಷ್ಟು ಅಪ್‌ಡೇಟ್ ಮಾಡುವ ಇರಾದೆಯನ್ನು ಗೂಗಲ್ ಹೊಂದಿದೆ. ಐಓಎಸ್ ಬ್ಯಾಟರಿ ಡ್ರೈನ್ ಮಾಡುತ್ತಿದ್ದು, ಇದರಲ್ಲಿ ಹೆಚ್ಚಿನ ಫೀಚರ್‌ಗಳಿಲ್ಲ.

ಡೇಟಾ ಸೇವರ್

ಡೇಟಾ ಸೇವರ್

ಡೋಜ್ ಬ್ಯಾಟರಿಗೆ ಹೇಗೆ ಸಹಾಯಕವೋ ಅಂತೆಯೇ, 'ಡೇಟಾ ಸೇವರ್' ಇಂಟರ್ನೆಟ್ ಬಳಕೆಗಾಗಿ ಇದೆ. ಹಿನ್ನಲೆಯಲ್ಲಿ ಇಂಟರ್ನೆಟ್ ಆನ್ ಆಗಿದ್ದಾಗ ಚಾಲನೆಯಾಗುವ ಅಪ್ಲಿಕೇಶನ್‌ಗಳ ಮೇಲೆ ನಿಯಂತ್ರಣವನ್ನು ಪಡೆದುಕೊಳ್ಳುತ್ತದೆ. ಐಓಎಸ್ 10 ಈ ಫೀಚರ್ ಅನ್ನು ಹೊಂದಿಲ್ಲ.

ಡೇ ಡ್ರೀಮ್ ವಿಆರ್

ಡೇ ಡ್ರೀಮ್ ವಿಆರ್

ಆಂಡ್ರಾಯ್ಡ್ ಓಎಸ್‌ಗೆ ಗೂಗಲ್ ಕೆಲವೊಂದು ವರ್ಚುವಲ್ ರಿಯಾಲಿಟಿ ಸ್ಪರ್ಶವನ್ನು ನೀಡಿದೆ ಅದಕ್ಕಾಗಿ ಡೇ ಡ್ರೀಮ್ ವಿಆರ್ ಅನ್ನು ನ್ಯೂಗಾದಲ್ಲಿ ಆಂಡ್ರಾಯ್ಡ್ ಅಪ್‌ಡೇಟ್ ಮಾಡಿದೆ.

ಹೆಚ್ಚು ಮಾಹಿತಿಯುಕ್ತ ಸೆಟ್ಟಿಂಗ್ಸ್ ಪುಟ

ಹೆಚ್ಚು ಮಾಹಿತಿಯುಕ್ತ ಸೆಟ್ಟಿಂಗ್ಸ್ ಪುಟ

ಐಓಎಸ್ 10 ನಂತೆಯೇ, ಆಂಡ್ರಾಯ್ಡ್ ನಾಗಟ್ ಹೊಸ ಸೆಟ್ಟಿಂಗ್ ಪುಟವನ್ನು ಪಡೆದುಕೊಂಡಿದೆ. ಮಿಸ್ ಆಗಿರುವ ಸೆಟ್ಟಿಂಗ್ ಅಪ್ ಮೂಲ ಟಾಸ್ಕ್‌ಗಳಾದ ಇಮೇಲ್ ಖಾತೆಗಳು ಅಥವಾ ವಾಯ್ಸ್ ಕಮಾಂಡ್‌ಗಳನ್ನು ಇದು ಹೊಂದಿದೆ.

ಮಲ್ಟಿಪಲ್ ಪ್ರೊಫೈಲ್‌ಗಳನ್ನು ರಚಿಸಿ

ಮಲ್ಟಿಪಲ್ ಪ್ರೊಫೈಲ್‌ಗಳನ್ನು ರಚಿಸಿ

ಆಂಡ್ರಾಯ್ಡ್ 5.0 ಲಾಲಿಪಪ್‌ನಲ್ಲಿ ಪ್ರಸ್ತುತಪಡಿಸಲಾದ ಈ ಫೀಚರ್ ಪ್ರತ್ಯೇಕ ಸ್ಟೋರೇಜ್ ಡ್ರೈವ್‌ನಲ್ಲಿ ತಮ್ಮ ಹ್ಯಾಂಡ್ ಸೆಟ್‌ ಒಳಗೆಯೇ ಬಹು ಪ್ರೊಫೈಲ್‌ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಅಧಿಸೂಚನೆ ಶೇಡ್‌ನಲ್ಲಿ ನೇರವಾಗಿ ಬಳಕೆದಾರರು ಪ್ರೊಫೈಲ್‌ಗಳ ನಡುವೆ ಬದಲಾಯಿಸಿಕೊಳ್ಳಬಹುದಾಗಿದೆ.

ತ್ವರಿತ ಅಪ್ಲಿಕೇಶನ್‌ಗಳು

ತ್ವರಿತ ಅಪ್ಲಿಕೇಶನ್‌ಗಳು

ತ್ವರಿತ ಅಪ್ಲಿಕೇಶನ್‌ಗಳೊಂದಿಗೆ, ಬಳಕೆದಾರರಿಗೆ ಅಪ್ಲಿಕೇಶನ್‌ಗಳನ್ನು ವೇಗವಾಗಿ ಹುಡುಕಿಕೊಳ್ಳಬಹುದಾಗಿದೆ. ಜೆಲ್ಲಿ ಬೀನ್ ಅಥವಾ ಅದಕ್ಕಿಂತ ಮೇಲ್ಮಟ್ಟದ ಆವೃತ್ತಿಗಳಲ್ಲಿ ಇನ್‌ಸ್ಟಂಟ್ ಆಪ್ಸ್ ಕಾಂಪಿಟೇಬಲ್ ಮಾಡುತ್ತದೆ. ಆಪಲ್ ಇನ್ನೂ ಕೂಡ ತನ್ನ ಐಓಎಸ್‌ನಲ್ಲಿ ಈ ಫೀಚರ್ ಅನ್ನು ಪ್ರಸ್ತುತಪಡಿಸಬೇಕಾಗಿದೆ.

ಹೆಚ್ಚಿನ ಓಎಸ್ ಅಪ್‌ಡೇಟ್‌ಗಳು

ಹೆಚ್ಚಿನ ಓಎಸ್ ಅಪ್‌ಡೇಟ್‌ಗಳು

ಆಪಲ್ ಐಓಎಸ್ 8 ಅನ್ನು ಪ್ರಸ್ತುತಪಡಿಸಿದ ಸಂದರ್ಭದಲ್ಲಿ, ಗಾತ್ರದಲ್ಲಿ ಇದನ್ನು 4ಜಿಬಿಗೆ ಇಳಿಸಿತು, ಓಎಸ್ ಅಪ್‌ಡೇಟ್ ಗಾತ್ರವನ್ನು 2ಜಿಬಿಗೆ ಇಳಿಸಿತು. ಗೂಗಲ್ ತನ್ನ ಆಂಡ್ರಾಯ್ಡ್ ಓಎಸ್ ಅಪ್‌ಡೇಟ್‌ನಲ್ಲಿ ಹೆಚ್ಚುಕಡಿಮೆ 1ಜಿಬಿ ಅಥವಾ ಅದಕ್ಕಿಂತ ಕಡಿಮೆ ಇದ್ದ ಸಂದರ್ಭದಲ್ಲಿ ಕೂಡ 'ಸೀಮ್‌ಲೆಸ್ ಅಪ್‌ಡೇಟ್' ಫೀಚರ್ ಅನ್ನು ಪ್ರಾಯೋಜಿಸಿದ್ದು ಇದನ್ನು ನ್ಯೂಗಾದಲ್ಲಿ ಕಂಡುಕೊಳ್ಳಬಹುದಾಗಿದೆ.

ಹಿನ್ನಲೆಯಲ್ಲಿ ಹೊಸ ಅಪ್‌ಡೇಟ್‌ಗಳನ್ನು ಇದು ಡೌನ್‌ಲೋಡ್ ಮಾಡಿಕೊಂಡು ಡಿವೈಸ್ ಅನ್ನು ರಿಸ್ಟಾರ್ಟ್ ಮಾಡಿದ ಸಂದರ್ಭದಲ್ಲಿ ಬಳಕೆದಾರರಿಗೆ ಇದು ತೋರಿಸುತ್ತದೆ.

Best Mobiles in India

English summary
Here are 10 Android features that are missing from the brand-new iOS 10.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X