ಸ್ಮಾರ್ಟ್‌ಫೋನ್‌ ನ ಪ್ರಮುಖ ಆಪ್‌ ಲಾಕರ್‌ಗಳಿವು: ಏನೆಲ್ಲಾ ಫೀಚರ್ಸ್‌ ಇವೆ ನೋಡಿ!

|

ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ಸುರಕ್ಷತೆಯ ದೃಷ್ಟಿಯಿಂದ ಲಾಕ್‌ ಪ್ಯಾಟರ್ನ್‌ ಬಳಸುವುದು ಸಾಮಾನ್ಯವಾಗಿದೆ. ಅದರಲ್ಲೂ ಬ್ಯಾಂಕಿಂಗ್‌, ಯುಪಿಐ ಪಾಸ್‌ವರ್ಡ್‌ ಸೇರಿದಂತೆ ಬಹುಮುಖ್ಯವಾದ ಮಾಹಿತಿಯನ್ನು ಸೆಕ್ಯುರ್‌ ಮಾಡುವುದು ಬಹುಮುಖ್ಯವಾಗಿದೆ. ಇದಕ್ಕಾಗಿಯೇ ಪ್ಲೇ ಸ್ಟೋರ್‌ನಲ್ಲಿ ಹಲವು ಫೋನ್‌ಲಾಕ್‌ ಅಪ್ಲಿಕೇಶನ್‌ ಲಭ್ಯವಿದ್ದು, ಇವುಗಳ ಮೂಲಕ ನಿಮ್ಮ ಮಾಹಿತಿ ಬೇರೆಯವರ ಕೈ ಸೇರದಂತೆ ತಡೆಯಬಹುದಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿನ ಆಪ್‌ಗಳಿಗೆ ರಕ್ಷಣೆ ನೀಡಲು ಸದ್ಯಕ್ಕೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೂರಾರು ಆಪ್ ಲಾಕರ್‌ಗಳು ಲಭ್ಯವಿವೆ. ಅದಕ್ಕೂ ಮಿಗಿಲಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ್ನು ಹೆಚ್ಚು ಸೆಕ್ಯುರ್‌ ಮಾಡುವ ಕೆಲವು ಪ್ರಮುಖ ಆಪ್‌ಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ. ಈ ಆಪ್‌ಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನ ಆಪ್‌ಗಳನ್ನು ಪಾಸ್‌ವರ್ಡ್‌ ರಚಿಸುವ ಮೂಲಕ ಲಾಕ್‌ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಯಾವೆಲ್ಲಾ ಆಪ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಲಾಕ್‌ಡೌನ್ ಪ್ರೊ

ಲಾಕ್‌ಡೌನ್ ಪ್ರೊ

ಉಚಿತ ಅಂಡ್ರಾಯ್ಡ್‌ ಅಪ್ಲಿಕೇಶನ್ ವಿಭಾಗದ ಲಾಕರ್ ಆಪ್‌ಗಳಲ್ಲಿ ಒಂದಾಗಿದೆ. ಇದರಿಂದ ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಲಾದ ಎಲ್ಲಾ ಆಪ್‌ಗಳನ್ನು ಕೆಲವೇ ಟ್ಯಾಪ್‌ಗಳಲ್ಲಿ ಲಾಕ್ ಮಾಡಬಹುದಾಗಿದೆ. ಲಾಕ್‌ಡೌನ್ ಪ್ರೊ ಪ್ಯಾಟರ್ನ್ ಲಾಕ್, ಕ್ಲಾಸಿಕ್ ಲಾಕ್ ಮತ್ತು ಕ್ಯಾಲ್ಕುಲೇಟರ್ ಲಾಕ್ ಎಂಬ ಮೂರು ವಿಭಿನ್ನ ಪಾಸ್‌ವರ್ಡ್ ಮೋಡ್‌ಗಳನ್ನು ನೀಡುತ್ತದೆ. ಇದರ ಜೊತೆಗೆ ಖಾಸಗಿ ಚಿತ್ರಗಳನ್ನು ಮರೆಮಾಡಲು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಲಾಕ್‌ಡೌನ್ ಪ್ರೊ ಅತ್ಯುತ್ತಮ ಭದ್ರತೆ ಇರುವ ಹಾಗೂ ಗೌಪ್ಯತೆ ಕಾಪಾಡಿಕೊಳ್ಳುವ ಅಪ್ಲಿಕೇಶನ್ ಆಗಿದ್ದು, ಇದನ್ನು ಆಂಡ್ರಾಯ್ಡ್‌ ನಲ್ಲಿ ಬಳಸಬಹುದಾಗಿದೆ.

ಫರ್ಪೆಕ್ಟ್ ಆಪ್‌ಲಾಕ್

ಫರ್ಪೆಕ್ಟ್ ಆಪ್‌ಲಾಕ್

ಈ ಸ್ಮಾರ್ಟ್‌ ಆಪ್‌ ನಿಮ್ಮ ವಾಟ್ಸ್‌ ಆಪ್‌, ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಪ್ರಮುಖ ಸಂದೇಶ ಆಧಾರಿತ ಆಪ್‌ಗಳನ್ನು ಲಾಕ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಪಿನ್‌, ಪ್ಯಾಟರ್ನ್ ಹಾಗೆಯೇ ಗೆಸ್ಚರ್‌ನೊಂದಿಗೆ ಆಪ್‌ಗಳಿಗೆ ಪಾಸ್‌ವರ್ಡ್‌‌ ರಚಿಸಿಕೊಳ್ಳಬಹುದು. ಇಷ್ಟೇ ಅಲ್ಲದೆ ಸ್ಮಾರ್ಟ್‌ಫೋನ್‌ನ ಬ್ರೈಟ್‌ನೆಸ್ ಅನ್ನು ನಿಯಂತ್ರಣ ಮಾಡುವ ಸಾಮರ್ಥ್ಯದ ಜೊತೆಗೆ ವೈ-ಫೈ, ಮೊಬೈಲ್, ಡೇಟಾ ಮುಂತಾದ ಸಿಸ್ಟಮ್ ಸೆಟ್ಟಿಂಗ್‌ಗಳನ್ನು ಸಹ ಲಾಕ್ ಮಾಡುವಂತಹ
ಫೀಚರ್ಸ್ ಇದರಲ್ಲಿದೆ.

ನಾರ್ಟನ್ ಅಪ್ಲಿಕೇಶನ್ ಲಾಕ್

ನಾರ್ಟನ್ ಅಪ್ಲಿಕೇಶನ್ ಲಾಕ್

ಈ ಆಪ್‌ ಬಳಕೆದಾರರಿಗೆ ಸುರಕ್ಷಿತ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಆಯ್ಕೆಯನ್ನು ನೀಡುತ್ತದೆ. ಇದು ಎಲ್ಲಾ ರೀತಿಯ ಅಪ್ಲಿಕೇಶನ್‌ಗಳನ್ನು ಲಾಕ್ ಮಾಡಲು ಅನುಮತಿಸುತ್ತದೆ. ಇದರ ಜೊತೆಗೆ ಬಳಕೆದಾರರು ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಖಾಸಗಿಯಾಗಿ ಇರಿಸಿಕೊಳ್ಳಬಹುದಾಗಿದೆ.

ಲಾಕ್‌ಇಟ್

ಲಾಕ್‌ಇಟ್

ಲಾಕ್‌ಇಟ್ ಆಲ್-ಇನ್-ಒನ್ ಭದ್ರತಾ ಅಪ್ಲಿಕೇಶನ್ ಆಗಿದ್ದು, ಅಪ್ಲಿಕೇಶನ್ ಸಂದೇಶಗಳಿಂದ ಹಿಡಿದು ಕರೆ ಲಾಗ್‌ಗಳವರೆಗೆ ಎಲ್ಲವನ್ನೂ ಲಾಕ್ ಮಾಡಿಕೊಳ್ಳಬಹುದಾಗಿದೆ. ವಾಟ್ಸ್‌ಆಪ್‌, ಫೇಸ್‌ಬುಕ್‌, ಮೆಸೆಂಜರ್‌ಗಳನ್ನು ಸುರಕ್ಷಿತಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಅಪ್ಲಿಕೇಶನ್ ಎಂಬ ಹೆಸರು ಗಳಿಸಿಕೊಂಡಿದೆ.

ವಾಲ್ಟ್

ವಾಲ್ಟ್

ಈ ಆಪ್‌ನಿಂದ ನಿಮ್ಮ ಖಾಸಗಿ ಫೋಟೋಗಳು, ವಿಡಿಯೋಗಳು ಹಾಗೂ ಸಂದೇಶ, ಕರೆ ಲಾಗ್‌ಗಳು ಸೇರಿದಂತೆ ಎಲ್ಲಾ ರೀತಿಯ ಪ್ರಮಖ ಮಾಹಿತಿಯನ್ನು ಲಾಕ್‌ ಮಾಡಿಕೊಳ್ಳಬಹುದು. ಇದರಲ್ಲಿ ಆನ್‌ಲೈನ್ ಟ್ರ್ಯಾಕರ್‌ಗಳು ಮತ್ತು ಜಾಹೀರಾತುಗಳನ್ನು ನಿರ್ಬಂಧಿಸುವ ಖಾಸಗಿ ಬ್ರೌಸರ್ ಆಯ್ಕೆಯನ್ನೂ ಇದು ಹೊಂದಿದೆ.

ಆಪ್‌ಲಾಕ್ ಮಾಸ್ಟರ್

ಆಪ್‌ಲಾಕ್ ಮಾಸ್ಟರ್

ಆಪ್‌ಲಾಕ್ ಮಾಸ್ಟರ್ ಹೊಸ ಅಪ್ಲಿಕೇಶನ್ ಆಗಿದ್ದು, ಪಿನ್ ಅಥವಾ ಪ್ಯಾಟರ್ನ್‌ ಮೂಲಕ ಆಪ್‌ಗಳನ್ನು ಲಾಕ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಫಿಂಗರ್‌ಪ್ರಿಂಟ್ ಲಾಕ್‌ ಸಹ ಇದೆ. ಆಪ್‌ ಮಾತ್ರವಲ್ಲದೇ, ಕರೆ ಲಾಗ್‌ಗಳು, ಸಂದೇಶ ಸೇರಿದಂತೆ ಇತ್ಯಾದಿಗಳನ್ನು ಲಾಕ್ ಮಾಡಬಹುದು.

ಆಪ್‌ಲಾಕ್‌

ಆಪ್‌ಲಾಕ್‌

ಆಪ್‌ಲಾಕ್‌ ಅಪ್ಲಿಕೇಶನ್‌ ಆಂಡ್ರಾಯ್ಡ್‌ನ ಅತ್ಯುತ್ತಮ ಅಪ್ಲಿಕೇಶನ್ ಲಾಕರ್‌ಗಳಲ್ಲಿ ಒಂದಾಗಿದೆ. ಇದು ಫೇಸ್‌ಬುಕ್‌, ವಾಟ್ಸ್‌ಆಪ್‌, ಗ್ಯಾಲರಿ ಸೇರಿದಂತೆ ಎಲ್ಲಾರೀತಿಯ ಆಪ್‌ಗಳನ್ನು ಲಾಕ್‌ ಮಾಡಿಟ್ಟುಕೊಳ್ಳಬಹುದು. ಜೊತೆಗೆ ಸ್ಮಾರ್ಟ್‌ಫೋನ್‌ನಲ್ಲಿನ ಕೆಲವು ಸೆಟ್ಟಿಂಗ್‌ಗನ್ನು ಸಹ ಇದರಿಂದ ಲಾಕ್‌ ಮಾಡಬಹುದು.

ಕ್ಯಾಸ್ಪರ್ಸ್ಕಿ ಮೊಬೈಲ್ ಆಂಟಿವೈರಸ್‌

ಕ್ಯಾಸ್ಪರ್ಸ್ಕಿ ಮೊಬೈಲ್ ಆಂಟಿವೈರಸ್‌

ಕ್ಯಾಸ್ಪರ್ಸ್ಕಿ ಮೊಬೈಲ್ ಆಂಟಿವೈರಸ್ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಅತ್ಯುತ್ತಮ ಆಪ್‌ ಆಗಿದೆ. ಇದು ಆಪ್‌ಗಳನ್ನು ಲಾಕ್‌ ಮಾಡುವುದಲ್ಲದೆ ಆಂಟಿವೈರಸ್‌ನಿಂದ ಮೊಬೈಲ್‌ನ್ನು ರಕ್ಷಣೆ ಮಾಡುತ್ತದೆ. ಇದು ಆಪ್‌ಗಳ ಜೊತೆ ಫೋನ್‌ನಲ್ಲಿನ ಸೆಟ್ಟಿಂಗ್‌ಗಳನ್ನೂ ಸಹ ಲಾಕ್‌ ಮಾಡಿಕೊಳ್ಳಲು ಅನುಮತಿಸುತ್ತದೆ.

Best Mobiles in India

English summary
It is common to keep other important information on the phone, including password information. For this reason, we give some app locker details in this story.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X