Subscribe to Gizbot

ಈ ಅಪ್ಲಿಕೇಶನ್‌ಗಳು ಫೋನ್‌ನಲ್ಲಿಲ್ಲ ಎಂದರೆ ನೀವು ದುರಾದೃಷ್ಟವಂತರು

Written By:

ನಿಮ್ಮ ಫೋನ್ ಎಷ್ಟೇ ಅತ್ಯುತ್ತಮ ಕ್ಯಾಮೆರಾ, ಫೀಚರ್, ಕ್ಷಿಪ್ರತೆ ಹೀಗೆ ಅತಿ ಶ್ರೀಮಂತ ಅಂಶಗಳನ್ನು ಹೊಂದಿದ್ದರೂ ಅದರಲ್ಲಿ ಅಗತ್ಯವಾಗಿರುವ ಅಪ್ಲಿಕೇಶನ್‌ಗಳು ಇಲ್ಲ ಎಂದಾದಲ್ಲಿ ನಿಮ್ಮ ಫೋನ್ ವ್ಯರ್ಥ ಎಂದೇ ಅರ್ಥ. ನಿಮ್ಮ ಅಗತ್ಯಗಳನ್ನು ಪೂರೈಸುವ ಅಪ್ಲಿಕೇಶನ್‌ಗಳು ಎಂದರೆ ನಿಮಗೆ ಸಂಪೂರ್ಣ ಮಾಹಿತಿಯನ್ನು ಅಂಗೈಯಲ್ಲೇ ಪಡೆಯಬಹುದು ಎಂದಾಗಿದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ಸ್: ಹೊಡೆಯಿರಿ ಜಾಕ್‌ಪ್ಯಾಟ್

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ದೊರೆಯುವ ಈ ಅಪ್ಲಿಕೇಶನ್‌ಗಳು ನಿಮಗೆ ಅತ್ಯುತ್ತಮ ಸೇವೆಯನ್ನು ಒದಗಿಸಬಲ್ಲುವು. ಹವಾಮಾನ ಮಾಹಿತಿ ಅಪ್ಲಿಕೇಶನ್‌ಗಳು, ಚಾಟ್ ಅಪ್ಲಿಕೇಶನ್‌ಗಳು, ಕ್ಯಾಮೆರಾ ಎಡಿಟಿಂಗ್ ಅಪ್ಲಿಕೇಶನ್‌ಗಳು ಹೀಗೆ ಹತ್ತು ಹಲವು ಅಪ್ಲಿಕೇಶನ್‌ಗಳನ್ನು ನಿಮಗೆ ಒದಗಿಸಲ್ಲ ಅಪ್ಲಿಕೇಶನ್‌ಗಳ ಉತ್ತಮ ಸಂಗ್ರಹವನ್ನು ನಾವು ಹೊಂದಿರುವೆವು.

ಬನ್ನಿ ಇಂದಿನ ಲೇಖನದಲ್ಲಿ ಅತ್ಯುತ್ತಮ ಅಪ್ಲಿಕೇಶನ್‌ಗಳ ಸಂಗ್ರಹವನ್ನೇ ನಾವು ನಿಮ್ಮ ಮುಂದಿಡುತ್ತಿದ್ದು ಅವುಗಳ ಬಳಕೆಯನ್ನು ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಇಮೇಲ್ ಸೇವೆ

ಜಿಮೇಲ್

ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಕೆಲವೊಮ್ಮೆ ಜಿಮೇಲ್ ಅಪ್ಲಿಕೇಶನ್‌ಗಳು ಪೂರ್ವ ಇನ್‌ಸ್ಟಾಲ್ ಆಗಿ ಬರುವುದಿಲ್ಲ. ಗೂಗಲ್‌ನ ಉತ್ತಮ ಇಮೇಲ್ ಸೇವೆಗಳನ್ನು ನಿಮಗೆ ಇದರ ಮೂಲಕ ಪಡೆದುಕೊಳ್ಳಬಹುದಾಗಿದೆ.ಡೌನ್‌ಲೋಡ್ ಲಿಂಕ್

ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್

ಟ್ವಿಟ್ಟರ್

ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿರುವ ಟ್ವಿಟ್ಟರ್ ನಿಮಗೆ ಮಾಹಿತಿಯನ್ನು ನೀಡುವಲ್ಲಿ ನಿಸ್ಸೀಮ.ಡೌನ್‌ಲೋಡ್ ಲಿಂಕ್

ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್

ಫೇಸ್‌ಬುಕ್

ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಆಗಿರುವ ಫೇಸ್‌ಬುಕ್ ಡೌನ್‌ಲೋಡ್ ಉಚಿತವಾಗಿದೆ.ಡೌನ್‌ಲೋಡ್ ಲಿಂಕ್

ಜಗಾಟ್ ರೇಟಿಂಗ್ಸ್ ಮತ್ತು ಲೈವ್ ಟ್ರಾಫಿಕ್ ಮಾಹಿತಿ

ಗೂಗಲ್ ಮ್ಯಾಪ್ಸ್

ಹೊಸ ನೆರೆಹೊರೆಯವರನ್ನು ಹುಡುಕುವಲ್ಲಿ ಗೂಗಲ್ ಮ್ಯಾಪ್ಸ್ ಸಹಕಾರಿಯಾಗಿದೆ. ಸ್ಥಳೀಯವಾಗಿ ನೀವು ಇದನ್ನು ಹೊಂದಿಸಿದಲ್ಲಿ, ಬಿಲ್ಟ್ ಇನ್ ಜಗಾಟ್ ರೇಟಿಂಗ್ಸ್ ಮತ್ತು ಲೈವ್ ಟ್ರಾಫಿಕ್ ಮಾಹಿತಿಯೊಂದಿಗೆ ಬಂದಿದೆ.ಡೌನ್‌ಲೋಡ್ ಲಿಂಕ್

ಫೋಟೋ ಹಂಚಿಕೆ ಅಪ್ಲಿಕೇಶನ್

ಇನ್‌ಸ್ಟಾಗ್ರಾಮ್

ಫೋಟೋ ಹಂಚಿಕೆ ಅಪ್ಲಿಕೇಶನ್ ಆಗಿರುವ ಇನ್‌ಸ್ಟಾಗ್ರಾಮ್ ನಿಮಗೆ ಉತ್ತಮ ಸೇವೆಯನ್ನು ಒದಗಿಸುವಲ್ಲಿ ನೆರವನ್ನು ನೀಡುತ್ತದೆ.ಡೌನ್‌ಲೋಡ್ ಲಿಂಕ್

ಯುಎಸ್‌ನಲ್ಲಿ ಹೆಚ್ಚು ಜನಪ್ರಿಯ

ಕ್ರೋಮ್

ಯುಎಸ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಗೂಗಲ್‌ನ ಕ್ರೋಮ್ ನಿಮ್ಮೆಲ್ಲಾ ಡೆಸ್ಕ್‌ಟಾಪ್ ಬ್ರೌಸಿಂಗ್ ಹಿಸ್ಟರಿ ಮತ್ತು ಬುಕ್‌ಮಾರ್ಕ್‌ಗಳನ್ನು ಸಿಂಕ್ ಮಾಡುತ್ತದೆ.ಡೌನ್‌ಲೋಡ್ ಲಿಂಕ್

ವೀಡಿಯೋ ಸೈಟ್

ಯೂಟ್ಯೂಬ್

ಹೆಚ್ಚು ಜನಪ್ರಿಯವಾಗಿರುವ ವೀಡಿಯೋ ಸೈಟ್ ಆಗಿದೆ. ಡೌನ್‌ಲೋಡ್ ಲಿಂಕ್

ಮೋಜುದಾಯಕ ಅಪ್ಲಿಕೇಶನ್

ವೈನ್

ಮೋಜುದಾಯಕ ಆರು ಸೆಕೆಂಡುಗಳ ವೀಡಿಯೋವನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.ಡೌನ್‌ಲೋಡ್ ಲಿಂಕ್

ಆಂಡ್ರಾಯ್ಡ್ ಅಪ್ಲಿಕೇಶನ್‌

ಎವರ್ ನೋಟ್

ಎವರ್ ನೋಟ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಮತ್ತು ಡೆಸ್ಕ್‌ಟಾಪ್‌ನಾದ್ಯಂತ ನೋಟ್‌ಗಳನ್ನು ರಚಿಸಿ, ಉಳಿಸಿ ಮತ್ತು ಸಿಂಕ್ ಮಾಡಿ.ಡೌನ್‌ಲೋಡ್ ಲಿಂಕ್

ಮನಿ ಅಪ್ಲಿಕೇಶನ್

ಸ್ಕ್ವೇರ್ ಕ್ಯಾಶ್

ನಿಮ್ಮ ಫೋನ್‌ನಲ್ಲಿ ಅತಿ ಸುಲಭವಾಗಿ ಹಣವನ್ನು ಕಳುಹಿಸಿ.ಡೌನ್‌ಲೋಡ್ ಲಿಂಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you were lucky enough to receive your very first Android phone as a holiday present this year, you’ll want to do the following immediately Here are 10 Google Play store apps you’ll want to grab first for your new Android phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot