ವಿಶ್ವ ಟೆಕ್ ವಲಯದ ಚುಕ್ಕಾಣಿ ಹಿಡಿದಿರುವ ಭಾರತೀಯರು ಇವರು!

|

ಕ್ರೀಡೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಸೇರಿದಂತೆ ವಿಶ್ವ ಮಟ್ಟದ ಹಲವು ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಅನನ್ಯ. ಪ್ರಪಂಚದ ಪ್ರಮುಖ ಗಣ್ಯ ವ್ಯಕ್ತಿಗಳ ಸಾಲಿನಲ್ಲಿಯೂ ಕೆಲವು ಭಾರತೀಯರು ಗುರುತಿಸಿಕೊಂಡಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿಯೂ ಭಾರತೀಯರು ನೆಲೆಸಿದ್ದು, ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಕೆಲವು ಭಾರತೀಯರು ದೈತ್ಯ ವಿದೇಶಿ ಟೆಕ್ ಕಂಪನಿಗಳ ಚುಕ್ಕಾಣಿಯನ್ನು ಹಿಡಿದ್ದಿದ್ದಾರೆ.

ವಿಶ್ವ ತಂತ್ರಜ್ಞಾನ

ಹೌದು, ವಿಶ್ವ ತಂತ್ರಜ್ಞಾನ ವಲಯವು ವೇಗವಾಗಿ ಬೆಳೆಯುತ್ತಿದ್ದು, ಪ್ರತಿಷ್ಠಿತ ಟೆಕ್ ಕಂಪನಿಗಳು ನೂತನ ಆವಿಷ್ಕಾರಗಳನ್ನು ಪರಿಚಯಿಸುತ್ತಲೆ ಸಾಗಿದ್ದಾರೆ. ಆ ಪೈಕಿ ಗೂಗಲ್, ಮೈಕ್ರೋಸಾಫ್ಟ್‌, ಅಡೊಬ್ ಸೇರಿದಂತೆ ದೊಡ್ಡ ಕಂಪನಿಗಳು ಸ್ಮಾರ್ಟ್‌ಫೋನ್‌, ಸಾಫ್ಟ್‌ವೇರ್ ವಲಯದಲ್ಲಿ ಲೀಡರ್‌ ಆಗಿವೆ. ಹಾಗೆಯೇ ಫೇಸ್‌ಬುಕ್, ಟ್ವಿಟ್ಟರ್ ಸಾಮಾಜಿಕ ತಾಣಗಳು ಸಹ ಭಾರಿ ಟ್ರೆಂಡಿಂಗ್ ನಲ್ಲಿವೆ. ಆದರೆ ಈ ಎಲ್ಲ ಕಂಪನಿಗಳಲ್ಲಿ ಭಾರತೀಯರ ಕೊಡುಗೆ ಇದೆ ಎನ್ನುವುದು ಹೆಮ್ಮೆಯ ವಿಷಯ ಆಗಿದೆ. ಈ ನಿಟ್ಟಿನಲ್ಲಿ ವಿಶ್ವ ಟೆಕ್ ವಲಯವನ್ನು ಆಳ್ವಿಕೆ ಮಾಡುತ್ತಿರುವ ಟಾಪ್‌ 10 ಭಾರತೀಯರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಸುಂದರ್ ಪಿಚೈ  (Sundar Pichai)

ಸುಂದರ್ ಪಿಚೈ (Sundar Pichai)

ಮೂಲತ ಭಾರತೀಯರಾದ ಸುಂದರ್ ಪಿಚೈ ಅವರು ಸದ್ಯ ಇವರು ವಿಶ್ವ ಟೆಕ್ ಕ್ಷೇತ್ರದ ದಿಗ್ಗಜ ಗೂಗಲ್ ಸಂಸ್ಥೆಯ ಸಿಇಓ-CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಗಷ್ಟ 10, 2015 ರಂದು ಗೂಗಲ್ ಸಿಇಓ ಆಗಿ ನೇಮಕವಾಗಿರುವ ಇವರಿಗೆ ಡಿಸೆಂಬರ್ 2019ರಲ್ಲಿ ಹೆಚ್ಚುವರಿಯಾಗಿ Alphabet-ಅಲ್ಫಾಬೆಟ್ ಸಿಇಓ ಜವಾಬ್ದಾರಿಯನ್ನು ನೀಡಿದ್ದಾರೆ. 47 ವರ್ಷದ ಸುಂದರ್ ಪಿಚೈ ಹುಟ್ಟಿದ್ದು, ತಮಿಳನಾಡಿನ ಚೆನೈನಲ್ಲಿ.

ಸತ್ಯ ನಡೆಲ್ಲಾ ​(Satya Nadella)

ಸತ್ಯ ನಡೆಲ್ಲಾ ​(Satya Nadella)

ಪ್ರಸ್ತುತ ದೈತ್ಯ ಟೆಕ್ ಸಂಸ್ಥೆ ಆಗಿರುವ ಮೈಕ್ರೋಸಾಫ್ಟ್‌ನ CEO ಆಗಿ ಕಾರ್ಯನಿರ್ವಹಿಸುತ್ತಿರುವ ಸತ್ಯ ನಡೆಲ್ಲಾ ಅವರು ಹುಟ್ಟಿ ಬೆಳೆದಿದ್ದು, ಹೈದ್ರಾಬಾದ್‌ನಲ್ಲಿ. 52 ವರ್ಷ ವಯಸ್ಸಿನ ಇವರು 1992ರಿಂದ ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2014ರಿಂದ ಸಂಸ್ಥೆಯ CEO ಆಗಿ ನೇಮಕವಾಗಿದ್ದಾರೆ. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ BE ಶಿಕ್ಷಣವನ್ನು ಮುಗಿಸಿದ್ದಾರೆ.

ಶಾಂತನು ನಾರಾಯಣ (​Shantanu Narayen)

ಶಾಂತನು ನಾರಾಯಣ (​Shantanu Narayen)

ಶಾಂತನು ನಾರಾಯಣ ಅವರು ಮೂಲತ ಹೈದ್ರಾಬಾದ್‌ನವರಾಗಿದ್ದು, ಸದ್ಯ ಇವರು ಅಮೆರಿಕಾದ ಪ್ರತಿಷ್ಠಿತ ಅಡೊಬ್ ಸಾಫ್ಟ್‌ವೇರ್ ಸಂಸ್ಥೆಯ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಪಲ್‌ ಸಂಸ್ಥೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಇವರು 1998ರಲ್ಲಿ ಅಡೊಬ್ ಸಂಸ್ಥೆ ಸೇರಿಕೊಂಡರು. 2007ರಿಂದ ಸಂಸ್ಥೆಯ ಸಿಒಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಲಿಫೊರ್ನಿಯದಲ್ಲಿ MBA ಯನ್ನು ಪೂರೈಸಿದ್ದಾರೆ.

ಜಯಶ್ರೀ ಉಲ್ಲಾಳ್ (​Jayashree Ullal)

ಜಯಶ್ರೀ ಉಲ್ಲಾಳ್ (​Jayashree Ullal)

ಜಯಶ್ರೀ ಉಲ್ಲಾಳ್ ಅವರು ಯುಎಸ್‌ಎ ನಲ್ಲಿರುವ ಪ್ರತಿಷ್ಠಿತ ಕಂಪ್ಯೂಟರ್ ನೆಟವರ್ಕ ಸಂಸ್ಥೆಯಾದ 'ಅರಿಷ್ಟಾ ನೆಟವರ್ಕ (Arista Network)'ನ ಅಧ್ಯಕ್ಷೆ ಮತ್ತು ಸಿಒಓ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಶ್ರೀ ಅವರು ತಮ್ಮ ವೃತ್ತಿ ಜೀವನವನ್ನು AMD ಸಂಸ್ಥೆಯಲ್ಲಿ ಆರಂಭಿಸಿದ್ದರು. ಫೋರ್ಬ್ಸ್ ಮ್ಯಾಗಜೀನ್ ಗುರುತಿಸುವ ವಿಶ್ವದ ಪ್ರಭಾವಿ ಗಣ್ಯವ್ಯಕ್ತಿಗಳ ಟಾಪ್ 5ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದಾರೆ.

ರಾಜೀವ್ ಸೂರಿ (​Rajeev Suri)

ರಾಜೀವ್ ಸೂರಿ (​Rajeev Suri)

ಮೂಲತ ಭಾರತೀಯರಾಗಿರುವ ರಾಜೀವ್ ಸೂರಿ ಅವರು ಸದ್ಯ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ನೋಕಿಯಾ ಸಂಸ್ಥೆಯ ಅಧ್ಯಕ್ಷ ಹಾಗೂ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1995ರಲ್ಲಿ ನೋಕಿಯಾ ಸಂಸ್ಥೆಯನ್ನು ಸೇರಿದ ರಾಜೀವ್‌ ಅವರು ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿ 2014ರಲ್ಲಿ CEO ಹುದ್ದೆಗೆ ನೇಮಕವಾದರು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ B-Tech ಶಿಕ್ಷಣವನ್ನು ಪೂರೈಸಿದ್ದಾರೆ.

ದಿನೇಶ್ ಪಾಲಿವಾಲ್ ​(Dinesh Paliwal)

ದಿನೇಶ್ ಪಾಲಿವಾಲ್ ​(Dinesh Paliwal)

62 ವರ್ಷ ವಯಸ್ಸಿನ ದಿನೇಶ್ ಪಾಲಿವಾಲ್ ಅವರು ಹುಟ್ಟಿ ಬೆಳೆದಿದ್ದು ಉತ್ತರ ಪ್ರದೇಶದ ಆಗ್ರಾದಲ್ಲಿ. ಸದ್ಯ ಇವರು ಹರ್ಮನ್ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷ ಹಾಗೂ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರ್ಮನ್ ಸಂಸ್ಥೆಯನ್ನು ಸೇರುವ ಮೊದಲು 22ವರ್ಷ್ ABB ಗ್ರೂಪ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ನಾರ್ತ್ ಅಮೆರಿಕಾದ ABB ಸಂಸ್ಥೆಯ ಸಿಇಓ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ನಿಕೇಶ್ ಅರೊರಾ (​Nikesh Arora)

ನಿಕೇಶ್ ಅರೊರಾ (​Nikesh Arora)

ಮೂಲತ ಭಾರತೀಯರಾದ ನಿಕೇಶ್ ಅರೋರಾ ಅವರು ಸದ್ಯ ಪ್ರತಿಷ್ಠಿತ ಸೈಬರ್ ಸೆಕ್ಯುರಿಟಿ ಸಂಸ್ಥೆಯಾಗಿರುವ ಪಾಲೊ ಆಲ್ಟೊ ನೆಟವರ್ಕ್ಸ್‌(Palo Alto Networks)ನ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾರ್ಥಿಸ್ಟನ್ ಯುನಿವರ್ಸಿಟಿಯಿಂದ MBA ಪದವಿ ಪಡೆದಿದ್ದಾರೆ.

ನೇಹಾ ನರಖೇಡ್ (​Neha Narkhede)

ನೇಹಾ ನರಖೇಡ್ (​Neha Narkhede)

ನೇಹಾ ನರಖೇಡ್ ಅವರು ಪ್ರಸ್ತುತ Confluent ಸಂಸ್ಥೆಯ ಸಹ ಸ್ಥಾಪಕರು ಮತ್ತು CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. Confluent ಡಾಟಾ ಅನಾಲಿಟಿಕ್ಸ್‌ ಮತ್ತು ರಿಯಲ್ ಟೈಮ್ ಸ್ಟೀಮಿಂಗ್ ಸೇವೆಯ ಸಂಸ್ಥೆಯಾಗಿದೆ. ಫೋರ್ಬ್ ನಿಯತಕಾಲಿಕೆಯ 2018ರ ಟೆಕ್ ಲೋಕದ ಪ್ರಮುಖ 50 ಮಹಿಳಾ ಸಾಲಿನಲ್ಲಿ ಇವರು ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಪರಾಗ್ ಅಗರ್ವಾಲ್ (Parag Agrawal)

ಪರಾಗ್ ಅಗರ್ವಾಲ್ (Parag Agrawal)

ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿರುವ ಪರಾಗ್ ಅಗರ್ವಾಲ್ ಅವರು ಸದ್ಯ ಟ್ವಿಟ್ಟರ್ ತಾಂತ್ರಿಕ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂಜಲಿ ಸುಡ್ (Anjali Sud)

ಅಂಜಲಿ ಸುಡ್ (Anjali Sud)

ಭಾರತೀಯ ಮೂಲದ ಅಂಜಲಿ ಸುಡ್ ಅವರು 2017ರಲ್ಲಿ ನ್ಯೂಯಾರ್ಕನಲ್ಲಿರುವ Vimeo ವಿಡಿಯೊ ಪ್ಲಾಟ್‌ಫಾರ್ಮ್ ಸಂಸ್ಥೆಯಲ್ಲಿ CEO ಆಗ ಕಾರ್ಯನಿರ್ವಹಿಸುತ್ತಿದ್ದಾರೆ. Vimeo ಜಾಹಿರಾತು ಮುಕ್ತ ವಿಡಿಯೊ ಪ್ಲಾಟ್‌ಫಾರ್ಮ್ ಆಗಿದೆ.

Most Read Articles
Best Mobiles in India

English summary
Here's a look at 10 India-born CEOs of global technology giants. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more