Just In
- 27 min ago
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- 1 hr ago
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- 2 hrs ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 4 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
Don't Miss
- News
Morbi Bridge Collapse: ಗುಜರಾತ್ ಸೇತುವೆ ದುರಂತ: ನವೀಕರಣ ಸಂಸ್ಥೆಯ ಮುಖ್ಯಸ್ಥ ನ್ಯಾಯಾಲಯಕ್ಕೆ ಶರಣು!
- Movies
ದರ್ಶನ್ ಮಾತು ಕೇಳಿದ್ಮೇಲೆ ಫ್ಯಾನ್ಸ್ 'ನವಗ್ರಹ- 2' ಮೇಲೆ ಆಸೆ ಇಟ್ಟುಕೊಳ್ಳೋದು ವ್ಯರ್ಥ!
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹಿಳಾ ಸಂಸ್ಥಾಪಕರನ್ನು ಹೊಂದಿರುವ ಭಾರತದ 10 ಟೆಕ್ ಉದ್ಯಮಗಳು
ಟೆಕ್ ಕಂಪನಿಗಳನ್ನು ಆರಂಭಿಸುವಲ್ಲಿ ಇಂದು ಭಾರತದ ಮಹಿಳೆಯರು ಸಹ ಪುರುಷರಿಗೆ ಸಮಾನರಾಗಿ ಸಹಭಾಗಿತ್ವ ವಹಿಸಿದ್ದಾರೆ. ಟೆಕ್ ಉದ್ಯಮಗಳನ್ನು ಆರಂಭಿಸುವಲ್ಲಿ ಸಂಸ್ಥಾಪಕರಾಗಿ/ಸಹ-ಸಂಸ್ಥಾಪಕರಾಗಿಯೂ ಸಹ ಕೆಲವು ಪ್ರಮುಖ ಕಂಪನಿಗಳ ಉದ್ಯಮದಲ್ಲಿ ತಮ್ಮ ಪಾತ್ರ ವಹಿಸಿದ್ದಾರೆ. ಅಂದಹಾಗೆ ಇಂದಿನ ಲೇಖನದಲ್ಲಿ ಮಹಿಳಾ ಸಂಸ್ಥಾಪಕರನ್ನ ಹೊಂದಿರುವ 10 ಟೆಕ್ ಉದ್ಯಮಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಈ ಮಹಿಳೆಯರು ಇಂದಿನ ಯುವತಿಯರಿಗೆ ಸ್ಫೂರ್ತಿ ನೀಡುವಲ್ಲಿ ಸಂಶಯವಿಲ್ಲ.
ಪ್ರಖ್ಯಾತ ಟೆಕ್ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು

MyDala- ಅನಿಶಾ ಸಿಂಘ್
ಆನ್‌ಲೈನ್ ಖರೀದಿದಾರರಿಗೆ ಬಹುಶಃ MyDala ತಿಳಿದಿರುತ್ತದೆ. ವಿಶಾಲವಾದ ಆನ್‌ಲೈನ್ ಕೂಪನ್ಸ್ ಮತ್ತು ಡಿಸ್‌ಕೌಂಟ್ ವೇದಿಕೆಗೆ MyDala ಭಾರತದಾದ್ಯಂತ ಪ್ರಖ್ಯಾತವಾಗಿದ್ದು, ಇದನ್ನು 2009 ರಲ್ಲಿ ಅನಿಶಾ ಸಿಂಘ್ ಸಂಸ್ಥಾಪಿಸಿದರು. 200 ನಗರ ಪ್ರದೇಶಗಳಾದ್ಯಂತ 400 ದಶಲಕ್ಷ ಬಳಕೆದಾರರನ್ನು ಪ್ರತಿನಿತ್ಯ ಹೊಂದುವ ಗುರಿ ಹೊಂದಿ ಚಾಲನೆಯಲ್ಲಿದೆ.

ShopXlues-ರಾಧಿಕ ಘೈ ಅಗರ್‌ವಾಲ್
ShopXlues, ಟೆಕ್ ಗ್ಯಾಜೆಟ್ಸ್‌ಗಳು, ಫ್ಯಾಷನ್, ಫೂಟ್‌ವಿಯರ್ ಮತ್ತು ಆಭರಣಗಳು ಸೇರಿದಂತೆ ಆನ್‌ಲೈನ್ ಮಾರಾಟ ವೆಬ್‌ಸೈಟ್ ಆಗಿದೆ. ShopXlues ಅನ್ನು ರಾಧಿಕ ಘೈ ಅಗರ್‌ವಾಲ್'ರವರು ಸಹ-ಸಂಸ್ಥಾಪಕರಾಗಿ ಆರಂಭಿಸಿದರು.

MobiKwik-ಉಪಸನ ಟಕು
ಉಪಸನ ಟಕು'ರವರು 'ಬಿಪಿನ್ ಪ್ರೀತ್ ಸಿಂಘ್' ಜೊತೆ ಸೇರಿ ಮೊಬೈಲ್ ವ್ಯಾಲೆಟ್ ಮತ್ತು ಆನ್‌ಲೈನ್ ಹಣ ಪಾವತಿ ವೇದಿಕೆ MobiKwik ಅನ್ನು ಸ್ಥಾಪಿಸಿದರು.

Yatra-ಸಬಿನಾ ಛೋಪ್ರಾ
yatra.com ಅನ್ನು ಧ್ರುವ್ ಶ್ರಿಂಗಿ, ಮನಿಶ್ ಅಮಿನ್ ಮತ್ತು ಸಬಿನಾ ಛೋಪ್ರಾ'ರವರು ಜೊತೆಗೂಡಿ 2006 ರಲ್ಲಿ ಆರಂಭಿಸಿದರು. yatra.com ಭಾರತದ ಇತರೆ ಎಲ್ಲಾ ವೆಬ್‌ಸೈಟ್‌ಗಳಿಗಿಂತ ವಿಶಾಲವಾದ ಟ್ರಾವೆಲ್ ಸಂಬಂಧಿತ ವೆಬ್‌ಸೈಟ್ ಆಗಿದೆ.

Infibeam- ನೀರು ಶರ್ಮಾ
ನೀರು ಶರ್ಮಾ'ರವರು ರಿಟೇಲಿಂಗ್, ಇ-ಕಾಮರ್ಸ್, ಸಾಫ್ಟ್‌ವೇರ್ ಮತ್ತು ಇಂಟರ್ನೆಟ್ ಸೇವೆಯ ಟೆಕ್ ಉದ್ಯಮ Infibeam ಸಹ-ಸಂಸ್ಥಾಪಕರು ಮತ್ತು ಕಾರ್ಪೋರೇಟ್ ಮತ್ತು ಬ್ಯುಸಿನೆಸ್ ಅಭಿವೃದ್ದಿಯ ಮುಖ್ಯಸ್ಥರಾಗಿದ್ದಾರೆ.

Zivame-ರಿಛ ಕರ್
ರಿಛ ಕರ್'ರವರು 2011 ರಲ್ಲಿ Zivame ಉದ್ಯಮವನ್ನು ಸಹ-ಸಂಸ್ಥಾಪಕರಾಗಿ ಆರಂಭಿಸಿದರು. ಇಂದು ಭಾರತದ ಅತಿದೊಡ್ಡ ಮಹಿಳಾ ಒಳ ಉಡುಪುಗಳ ಆನ್‌ಲೈನ್ ರಿಟೇಲರ್ ಕಂಪನಿ Zivame ಎಂದು ಪ್ರಖ್ಯಾತವಾಗಿದೆ.

YourStory- ಶ್ರದ್ಧಾ ಶರ್ಮಾ
ಶ್ರದ್ಧಾ ಶರ್ಮಾ'ರವರು 2008 ರವರೆಗೆ 'ದಿ ಟೈಮ್ಸ್ ಆಫ್ ಇಂಡಿಯಾ, ಸಿಎನ್‌ಬಿಸಿ ಟಿವಿ18' ಮಾಧ್ಯಮಗಳಲ್ಲಿ ಅನುಭವ ಪಡೆದು ನಂತರ ತಮ್ಮದೇ ಆದ yourstory.com ಅನ್ನು ಆರಂಭಿಸಿದರು.

LimeRoad- ಸುಚಿ ಮುಖರ್ಜಿ
ಭಾರತದಲ್ಲಿ ಮಹಿಳೆಯರಿಗಾಗಿಯೇ ಇರುವ ಮೊಟ್ಟ ಮೊದಲ ಫ್ಯಾಷನ್ ವೇದಿಕೆ 'LimeRoad' ಅನ್ನು ಸುಚಿ ಮುಖರ್ಜಿ'ರವರು ನಡೆಸುತ್ತಿದ್ದಾರೆ.

Sheroes- ಸೈರೀ ಚಹಲ್
Sheroes, ಭಾರತದಲ್ಲಿ ಮನೆಯಿಂದಲೇ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ಪೋರ್ಟಲ್ ಆಗಿದೆ. ಅಲ್ಲದೇ ಸಮುದಾಯ ಸಭೆ, ಉದ್ಯೋಗ ಮೇಳ, ವಿಶೇಷ ವರ್ಕ್‌ಶಾಪ್ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. Sheroes ಅನ್ನು 2014 ರಲ್ಲಿ ಆರಂಭಿಸಿದರು.

Sugarbox- ನಿಹಾರಿಕ ಝುನ್‌ಝುನ್‌ವಾಲಾ
Sugarbox, ಮಹಿಳೆಯರಿಗಾಗಿ ಎಲ್ಲಾ ವಿಧಧ ಗಿಫ್ಟ್ ಸಬ್‌ಸ್ಕ್ರಿಪ್ಶನ್ ಸೇವೆ ನೀಡುವ ಉದ್ಯಮವಾಗಿದೆ. ಇದನ್ನು ನಿಹಾರಿಕ ಝುನ್‌ಝುನ್‌ವಾಲಾ'ರವರು 2014 ರ ನವೆಂಬರ್‌ನಲ್ಲಿ ತಮ್ಮ ಸ್ವಯಂ ಉದ್ಯಮವಾಗಿ ಆರಂಭಿಸಿದರು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470