ಈ ವರ್ಷದ ಹೆಚ್ಚು ಬೇಡಿಕೆಯ ಟೆಕ್ ಉದ್ಯೋಗಗಳಾವುವು ಗೊತ್ತಾ?..ಇಲ್ಲಿದೆ ಲಿಸ್ಟ್‌!

|

ಟೆಕ್‌ ವಲಯದಲ್ಲಿ ಕೇಳಿಬರುವುದು ಸಾಮಾನ್ಯವಾಗಿ ಸ್ಮಾರ್ಟ್‌ ಡಿವೈಸ್‌ಗಳ ಹೆಸರು. ಆದರೆ, ಇದರಲ್ಲಿ ಹಲವಾರು ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತವೆ. ದುರಾದೃಷ್ಟ ಎಂದರೆ ಕೆಲವು ತಿಂಗಳುಗಳಿಂದ ಪ್ರಮುಖ ಕಂಪೆನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಸಹ ಜರುಗುತ್ತಿದೆ. ಆದರೂ ಸಹ ಲಿಂಕ್ಡ್‌ಇನ್ 2023 ರಲ್ಲಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳ ಪಟ್ಟಿಯನ್ನು ವರದಿ ಮಾಡಿದೆ.

ಈ ವರ್ಷದ ಹೆಚ್ಚು ಬೇಡಿಕೆಯ ಟೆಕ್ ಉದ್ಯೋಗಗಳಾವುವು ಗೊತ್ತಾ?..ಇಲ್ಲಿದೆ ಲಿಸ್ಟ್‌

ಹೌದು, ಲಿಂಕ್ಡ್‌ಇನ್ ಉದ್ಯೋಗ ಸಂಬಂಧಿತ ಜಾಹೀರಾತು ಹಾಗೂ ಮಾಹಿತಿಯನ್ನು ನೀಡುವ ಪ್ಲಾಟ್‌ಫಾರ್ಮ್‌ ಆಗಿದ್ದು, ಈ ಮೂಲಕ ಅದೆಷ್ಟೋ ಜನರು ತಮ್ಮ ವೃತ್ತಿ ಜೀವನವನ್ನು ಕಂಡುಕೊಂಡಿದ್ದಾರೆ. ಇದರ ನಡುವೆ ಯಾವ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬ ಡೇಟಾವನ್ನು ಬಹಿರಂಗಪಡಿಸಿದ್ದು, ನೀವೇನಾದರೂ ಕೆಲಸ ಹುಡುಕುತ್ತಿದ್ದರೆ ಲಿಂಕ್ಡ್‌ಇನ್ ಪ್ರಕಾರ 2023 ರಲ್ಲಿ ತಂತ್ರಜ್ಞಾನ ಮತ್ತು ಮಾಧ್ಯಮ ಉದ್ಯಮದಲ್ಲಿ ಬೇಡಿಕೆಯಲ್ಲಿರುವ ಟಾಪ್ 10 ಉದ್ಯೋಗ ವಿವರವನ್ನು ನೋಡಿ.

ಅನುಭವ ಬರಹಗಾರರು (User experience writers)
ಅನುಭವ ಇರುವ ಬರಹಗಾರರಿಗೆ ಈ ವರ್ಷ ಭಾರೀ ಬೇಡಿಕೆ ಇರಲಿದೆ ಎನ್ನಲಾಗಿದೆ. ಮೂಲಭೂತವಾಗಿ ಡಿಜಿಟಲ್ ಉತ್ಪನ್ನಗಳಾದ ಆಪ್‌ಗಳು ಮತ್ತು ವಿನ್ಯಾಸಕ್ಕೆ ಪೂರಕವಾಗಿರುವ ವೆಬ್‌ಸೈಟ್‌ಗಳಿಗಾಗಿ ಅನುಭವ ಬರಹಗಾರರು ಕಂಟೆಂಟ್‌ ಅನ್ನು ಸಿದ್ಧಪಡಿಸುತ್ತಾರೆ. ಈ ಉದ್ಯೋಗಕ್ಕೆ ಕಾಪಿರೈಟಿಂಗ್, ಕಂಟೆಂಟ್‌ ಸ್ಟ್ರಾಟೆಜಿ ಸ್ಕಿಲ್‌ ಅವಶ್ಯಕ. ಅದರಂತೆ ಈ ಉದ್ಯೋಗಗಳು
ತಂತ್ರಜ್ಞಾನ ಮತ್ತು ಮಾಧ್ಯಮ, ಹಣಕಾಸು ಸೇವೆಗಳು, ವೃತ್ತಿಪರ ಸೇವೆಗಳಲ್ಲಿ ಲಭ್ಯ ಇರಲಿವೆ

ಡೇಟಾ ಅನ್ನೋಟೇಟರ್
ಪಠ್ಯ, ಫೋಟೋಗಳು ಮತ್ತು ವಿಡಿಯೋಗಳಂತಹ ವಿಷಯವನ್ನು ಟ್ಯಾಗ್ ಮಾಡುವ ಮಾನವ ಚಟುವಟಿಕೆಯಾಗಿದೆ. ಇದರಿಂದಾಗಿ ಯಂತ್ರ ಕಲಿಕೆಯ ಮಾದರಿಗಳು ಅವುಗಳನ್ನು ಗುರುತಿಸಬಹುಹುದಾಗಿದೆ. ಈ ಉದ್ಯೋಗ ಪಡೆಯಲು ಡೇಟಾ ವಿಶ್ಲೇಷಣೆ, ಲೆಕ್ಕಪತ್ರ ನಿರ್ವಹಣೆಯ ಕಲೆ ತಿಳಿದಿರಬೇಕು.ಅಂತೆಯೇ ಈ ಉದ್ಯೋಗಗಳು ವೃತ್ತಿಪರ ಸೇವೆಗಳು, ತಂತ್ರಜ್ಞಾನ ಮತ್ತು ಮಾಧ್ಯಮ, ಉತ್ಪಾದನೆ ಕ್ಷೇತ್ರದಲ್ಲಿ ಲಭ್ಯ ಇರಲಿವೆ.

ಈ ವರ್ಷದ ಹೆಚ್ಚು ಬೇಡಿಕೆಯ ಟೆಕ್ ಉದ್ಯೋಗಗಳಾವುವು ಗೊತ್ತಾ?..ಇಲ್ಲಿದೆ ಲಿಸ್ಟ್‌

ಹೆಡ್‌ ಆಪ್ ಗ್ರೋಥ್‌
ಯಾವುದೇ ಸಂಸ್ಥೆಯ ಅಭಿವೃದ್ಧಿಗೆ ಈ ಹುದ್ದೆಗಳು ಅವಶ್ಯಕ. ಅದರಂತೆ ಈ ಉದ್ಯೋಗದಲ್ಲಿ ತಂತ್ರಗಳು ಮತ್ತು ಯೋಜನೆಗಳ ಮೂಲಕ ಬೆಳವಣಿಗೆಯ ಗುರಿಗಳನ್ನು ಸಿದ್ಧಪಡಿಸಲಾಗುತ್ತದೆ. ಜೊತೆಗೆ ಗ್ರಾಹಕರ ನೆಲೆಯನ್ನು ಉಳಿಸಿಕೊಳ್ಳುವುದು ಮತ್ತು ಬೆಳೆಸುವುದು ಈ ಉದ್ಯೋಗದ ಪ್ರಮುಖ ಕರ್ತವ್ಯವಾಗಿರಲಿದೆ. ಇದಕ್ಕಾಗಿ ಬೆಳವಣಿಗೆಯ ತಂತ್ರಗಳು, ಬೆಳವಣಿಗೆ ಹ್ಯಾಕಿಂಗ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯ ಇರಬೇಕಿದೆ. ಈ ರೀತಿಯ ಕೆಲಸಗಳು ತಂತ್ರಜ್ಞಾನ ಮತ್ತು ಮಾಧ್ಯಮ, ವೃತ್ತಿಪರ ಸೇವೆಗಳು, ಮನರಂಜನಾ ಪೂರೈಕೆದಾರ ಕ್ಷೇತ್ರದಲ್ಲಿ ಸೃಷ್ಟಯಾಗಲಿವೆ.

ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ರೆಪ್ರೆಸೆಂಟೇಟಿವ್ಸ್
ಈ ಹುದ್ದೆಯಲ್ಲಿ ವಿವಿಧ ಸಂವಹನ ವಿಧಾನಗಳ ಮೂಲಕ ಸಂಭಾವ್ಯ ಗ್ರಾಹಕರನ್ನು ಪ್ರತಿನಿಧಿಸಬೇಕಾಗುತ್ತದೆ. ಈ ಮೂಲಕ ಕೆಲಸ ಮಾಡುವ ಕಂಪನಿ / ಬ್ರ್ಯಾಂಡ್‌ಗೆ ಮಾರಾಟದ ಪ್ರಕ್ರಿಯೆಯನ್ನು ನಡೆಸಬೇಕಿದೆ. ಈ ಹುದ್ದೆಗೆ ಲೀಡ್ ಜನರೇಷನ್, ಮಾರುಕಟ್ಟೆ ಸಂಶೋಧನೆ, ಗ್ರಾಹಕ ಸಂಬಂಧ ನಿರ್ವಹಣೆ (CRM)ಯ ಕೌಶಕ್ಯವನ್ನು ಹೊಂದಿರಬೇಕಿದೆ. ಅಂತೆಯೇ ತಂತ್ರಜ್ಞಾನ ಮತ್ತು ಮಾಧ್ಯಮ, ವೃತ್ತಿಪರ ಸೇವೆಗಳು, ಹಣಕಾಸು ಸೇವೆಗಳಲ್ಲಿ ಈ ಹುದ್ದೆಗಳು ಸಿಗಲಿವೆ.

ಈ ವರ್ಷದ ಹೆಚ್ಚು ಬೇಡಿಕೆಯ ಟೆಕ್ ಉದ್ಯೋಗಗಳಾವುವು ಗೊತ್ತಾ?..ಇಲ್ಲಿದೆ ಲಿಸ್ಟ್‌

ಸೇಲ್ಸ್‌ ಡೆವಲಪ್‌ಮೆಂಟ್‌ ರೆಪ್ರೆಸೆಂಟೇಟಿವ್ಸ್
ಈ ಹುದ್ದೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿನ ಮಾರಾಟ ಅಭಿವೃದ್ಧಿ ಪ್ರತಿನಿಧಿಗಳು ಹೊಸ ಲೀಡ್‌ಗಳನ್ನು ಸಂಪರ್ಕಿಸಬಹುದಾಗಿದೆ. ಹಾಗೆಯೇ ಈ ಹುದ್ದೆಗಾಗಿ ಲೀಡ್ ಜನರೇಷನ್, ಕೋಲ್ಡ್ ಕಾಲಿಂಗ್, ಸೇಲ್ಸ್ ಕೌಶಲ್ಯವನ್ನು ಹೊಂದಿರಬೇಕಿದೆ. ಇದರೊಂದಿಗೆ ತಂತ್ರಜ್ಞಾನ ಮತ್ತು ಮಾಧ್ಯಮ, ವೃತ್ತಿಪರ ಸೇವೆಗಳು, ಹಣಕಾಸು ಸೇವೆಗಳಲ್ಲಿ ಈ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಕಸ್ಟಮರ್‌ ಸಕ್ಸಸ್‌ ಎಂಜಿನಿಯರ್‌
ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಗ್ರಾಹಕರಿಗೆ ತಾಂತ್ರಿಕ ಬೆಂಬಲವನ್ನು ಒದಗಿಸಲು ಕಸ್ಟಮರ್‌ ಸಕ್ಸಸ್‌ ಎಂಜಿನಿಯರ್‌ ಕೆಲಸ ಅಗತ್ಯವಾಗಿದೆ. ಈ ಹುದ್ದೆ ಪಡೆದುಕೊಳ್ಳಲು ಲಿನಕ್ಸ್, ಅಮೆಜಾನ್ ವೆಬ್ ಸೇವೆಗಳು (AWS), ಗ್ರಾಹಕ ಬೆಂಬಲದ ಕೌಶಲ್ಯ ಹೊಂದಿರಬೇಕಾಗಿದೆ. ಇದರೊಂದಿಗೆ ತಂತ್ರಜ್ಞಾನ ಮತ್ತು ಮಾಧ್ಯಮ, ವೃತ್ತಿಪರ ಸೇವೆಗಳು, ಸಾರಿಗೆ ಕ್ಷೇತ್ರದಲ್ಲಿ ಈ ಕೆಲಸಗಳು ಲಭ್ಯ.

ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೇಜರ್
ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೇಜರ್ ಬಹು ಹಂತಗಳಲ್ಲಿ ಕೆಲಸ ಮಾಡುವ ಮೂಲಕ ತಂತ್ರಜ್ಞಾನ ಆಧಾರಿತ ಉತ್ಪನ್ನ ಅಭಿವೃದ್ಧಿಗೆ ಜವಾಬ್ದಾರರಾಗಿರುತ್ತಾರೆ. ಹೆಚ್ಚು ಬೇಡಿಕೆಯಿರುವ ಉದ್ಯೋಗ ಇವಾಗಿದ್ದು, ಸಾಕಷ್ಟು ಅನುಭವದ ಅಗತ್ಯವಿರುತ್ತದೆ. ಈ ಕೆಲಸ ಪಡೆದುಕೊಳ್ಳಬೇಕು ಎಂದರೆ ಅಗೈಲ್ ಮೆಥಡಾಲಜೀಸ್, ಅಗೈಲ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಸಾಫ್ಟ್ವೇರ್ ಡೆವಲಪ್ಮೆಂಟ್ ಲೈಫ್ ಸೈಕಲ್ (SDLC) ನ ಸ್ಕಿಲ್‌ ಇರಬೇಕು. ಹಾಗೆಯೇ ಈ ಕೆಲಸಗಳು ತಂತ್ರಜ್ಞಾನ ಮತ್ತು ಮಾಧ್ಯಮ, ವೃತ್ತಿಪರ ಸೇವೆಗಳು, ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಲಭ್ಯ ಇರಲಿವೆ.

ಈ ವರ್ಷದ ಹೆಚ್ಚು ಬೇಡಿಕೆಯ ಟೆಕ್ ಉದ್ಯೋಗಗಳಾವುವು ಗೊತ್ತಾ?..ಇಲ್ಲಿದೆ ಲಿಸ್ಟ್‌

ಇನ್ಸೈಟ್ ಅನಾಲಿಸ್ಟ್
ಕಂಪೆನಿಯು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಇನ್ಸೈಟ್ ಅನಾಲಿಸ್ಟ್ ಹುದ್ದೆಗಳು ಅವಶ್ಯಕ. ಈ ಹುದ್ದೆಯ ಮೂಲಕ ಸಂಸ್ಥೆಯ ಡೇಟಾವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಹಾಗೆಯೇ ಅಗತ್ಯಕ್ಕೆ ತಕ್ಕಂತೆ ಫಿಲ್ಟರ್ ಮಾಡಲಾಗುತ್ತದೆ. ಈ ಕೆಲಸ ಗಿಟ್ಟಿಸಿಕೊಳ್ಳಲು ಡೇಟಾ ಅನಾಲಿಟಿಕ್ಸ್ ಸೇರಿದಂತೆ ಇನ್ನಿತರೆ ಕೌಶಲ್ಯವನ್ನು ಪಡೆದಿರಬೇಕು. ಈ ಹುದ್ದೆಗಳು ವೃತ್ತಿಪರ ಸೇವೆಗಳು, ಹಣಕಾಸು ಸೇವೆಗಳು, ತಂತ್ರಜ್ಞಾನ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸೃಷ್ಟಿಯಾಗಲಿವೆ.

ಕ್ಯಾಂಪೇನ್ ಅಸೋಸಿಯೇಟ್ಸ್‌
ಕ್ಯಾಂಪೇನ್ ಅಸೋಸಿಯೇಟ್ಸ್‌ ಪ್ರಚಾರಗಳ ರಚನೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಮೂಲಕ ಪಾವತಿಸಿದ ಜಾಹೀರಾತು ಬಜೆಟ್‌ಗಳನ್ನು ಮೇಲ್ವಿಚಾರಣೆ ಮಾಡಬೇಕಿದೆ. ಹಾಗೆಯೇ ಈ ಆಯಾ ವಿಭಾಗದ ಟ್ರೆಂಡ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಈ ಕೆಲಸಕ್ಕಾಗಿ ಪ್ರಚಾರ ತಂತ್ರಗಳು, ಇಮೇಲ್ ಮಾರ್ಕೆಟಿಂಗ್, ಡಿಜಿಟಲ್ ಮಾರ್ಕೆಟಿಂಗ್‌ನ ಸ್ಕಿಲ್‌ಗಳನ್ನು ಪಡೆದಿರಬೇಕಿದೆ. ವೃತ್ತಿಪರ ಸೇವೆಗಳ ಕ್ಷೇತ್ರದಲ್ಲಿ ಈ ಕೆಲಸಗಳು ಲಭ್ಯ ಆಗಲಿವೆ.

ಗ್ರಾಫಿಕ್ ಡಿಸೈನ್ ಮ್ಯಾನೇಜರ್
ವಿನ್ಯಾಸ ಉತ್ಪಾದನೆಯ ಗುಣಮಟ್ಟದ ಭರವಸೆಗಾಗಿ ಗ್ರಾಫಿಕ್ ಡಿಸೈನ್ ಮ್ಯಾನೇಜರ್ ಇದೆಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಾರೆ. ಈ ಕೆಲಸಕ್ಕಾಗಿ ಲೋಗೋ ವಿನ್ಯಾಸ, ಅಡೋಬ್ ಇಲ್ಲಸ್ಟ್ರೇಟರ್, ಬ್ರ್ಯಾಂಡಿಂಗ್‌ನಲ್ಲಿ ಕೌಶಲ್ಯ ಹೊಂದಿರಬೇಕಿದೆ. ಅಂತೆಯೇ ಚಿಲ್ಲರೆ ವ್ಯಾಪಾರ, ತಂತ್ರಜ್ಞಾನ ಮತ್ತು ಮಾಧ್ಯಮ, ವೃತ್ತಿಪರ ಸೇವೆಗಳಲ್ಲಿ ಈ ಕೆಲಸಗಳು ಲಭ್ಯ ಆಗಲಿವೆ.

Best Mobiles in India

English summary
LinkedIn is a job related advertising and information platform that released data on which jobs are in high demand in 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X