ಬಳಕೆದಾರರ ಟಾಪ್ ಫೇವರೇಟ್ ಟಾಪ್ ಫೇಸ್‌ಬುಕ್ ಫೀಚರ್ಸ್

By Shwetha
|

ವಿಶ್ವದ ಟಾಪ್ ಸಾಮಾಜಿಕ ಜಾಲತಾಣ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್, ಹೊಸ ಹೊಸ ಫೀಚರ್‌ಗಳನ್ನು ಬಳಕೆದಾರರ ಮೆಚ್ಚುಗೆಗೆ ಅನುಸಾರವಾಗಿ ಬಿಡುಗಡೆ ಮಾಡುತ್ತಿದೆ. 360 ಡಿಗ್ರಿ ವೀಕ್ಷಣೆಯಲ್ಲಿ ವೀಡಿಯೊಗಳನ್ನು ವೀಕ್ಷಿಸುವ ಮೂಲಕ ಅಂತೆಯೇ ವೀಡಿಯೊಗಳನ್ನು ಪ್ರೊಫೈಲ್ ಚಿತ್ರವನ್ನಾಗಿಸುವವರೆಗೆ ಫೇಸ್‌ಬುಕ್ ಅತ್ಯಾಧುನಿಕವಾಗಿ ಮಾರ್ಪಡುಗಳನ್ನು ಮಾಡಿಕೊಳ್ಳುತ್ತಿದೆ.

ಓದಿರಿ: 2ಜಿಯಲ್ಲೂ ಫೇಸ್‌ಬುಕ್ ತ್ವರಿತ ಲೋಡಿಂಗ್

ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನ ಲೇಟೆಸ್ ಟಾಪ್ 10 ಫೀಚರ್‌ಗಳನ್ನು ಅರಿತುಕೊಳ್ಳೋಣ.

ಲೈವ್ ವೀಡಿಯೊ ಸ್ಟ್ರೀಮಿಂಗ್

ಲೈವ್ ವೀಡಿಯೊ ಸ್ಟ್ರೀಮಿಂಗ್

ಸ್ಟ್ರೀಮಿಂಗ್ ವೀಡಿಯೊ ಫ್ರೆಯನ್ನು ಫೇಸ್‌ಬುಕ್ ಇತ್ತೀಚೆಗೆ ಸೇರಿಕೊಂಡಿದೆ. ಹೊಸ ಫೀಚರ್ ಆದ "ಲೈವ್" ಅನ್ನು ಫೇಸ್‌ಬುಕ್ ಲಾಂಚ್ ಮಾಡಿದ್ದು, ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ವೀಡಿಯೊ ಸ್ಟ್ರೀಮ್ ಮಾಡಬಹುದು.

ಬಳಕೆದಾರರನ್ನು ಪರಿಶೀಲಿಸಲು

ಬಳಕೆದಾರರನ್ನು ಪರಿಶೀಲಿಸಲು

ಪರಿಶೀಲಿಸಿದ ಖಾತೆಗಳನ್ನು ಹೊಂದಿರುವ ಬಳಕೆದಾರರಿಗೆ, ಪತ್ರಿಕೋದ್ಯಮಿಗಳು ಒಳಗೊಂಡಂತೆ ಈ ಫೀಚರ್‌ನಲ್ಲಿ ತಮ್ಮ ಅನುಯಾಯಿಗಳೊಂದಿಗೆ ಸಂಪರ್ಕದಲ್ಲಿರಬಹುದು. ಮೆನ್ಶನ್ಸ್ ಅಪ್ಲಿಕೇಶನ್ ಎಂಬ ಹೆಸರನ್ನು ಇದು ಪಡೆದುಕೊಂಡಿದೆ.

ಟಿಪ್ಪಣಿಗಳಿಗಾಗಿ ರಿಬೂಟ್

ಟಿಪ್ಪಣಿಗಳಿಗಾಗಿ ರಿಬೂಟ್

ಫೇಸ್‌ಬುಕ್ ಇತ್ತೀಚೆಗೆ ಅಪ್‌ಡೇಟೆಡ್ ನೋಟ್ಸ್ ಫೀಚರ್ ಅನ್ನು ಬಿಡುಗಡೆ ಮಾಡಿದ್ದು ಬ್ಲಾಗ್ ಪೋಸ್ಟ್‌ನಂತೆ ಇದನ್ನು ಮಾಡುತ್ತಿದೆ. ಫಾಂಟ್ ಫಾರ್ಮಾಟಿಂಗ್ ಫೀಚರ್ ಅನ್ನು ಬಳಕೆದಾರರಿಗೆ ಇದು ಒದಗಿಸುತ್ತಿದ್ದು ಪೋಸ್ಟ್‌ನ ಮೇಲ್ಭಾಗದಲ್ಲಿ ದೊಡ್ಡದಾದ ಕವರ್ ಫೋಟೋವನ್ನು ಸೇರಿಸಲು ಇದು ಅನುಮತಿಸುತ್ತದೆ.

360 ಡಿಗ್ರಿನಲ್ಲಿ ವೀಡಿಯೊಗಳು

360 ಡಿಗ್ರಿನಲ್ಲಿ ವೀಡಿಯೊಗಳು

360 ಡಿಗ್ರಿನಲ್ಲಿ ವೀಡಿಯೊಗಳನ್ನು ಬೆಂಬಲಿಸುವ ನ್ಯೂಸ್ ಫೀಡ್ ಅನ್ನು ಫೇಸ್‌ಬುಕ್ ಅಪ್‌ಡೇಟ್ ಮಾಡಿದೆ. ವರ್ಚುವಲ್ ರಿಯಾಲಿಟಿಯಲ್ಲಿ ಬಳಕೆದಾರರನ್ನು ಈ ಫೀಚರ್ ಪ್ರದರ್ಶಿಸುತ್ತದೆ.

ಪ್ರೊಫೈಲ್ ಚಿತ್ರದಂತೆ ವೀಡಿಯೊಗಳನ್ನು ಸೇರಿಸುವುದು

ಪ್ರೊಫೈಲ್ ಚಿತ್ರದಂತೆ ವೀಡಿಯೊಗಳನ್ನು ಸೇರಿಸುವುದು

ತಮ್ಮ ಪ್ರೊಫೈಲ್‌ನಂತೆ ಶಾರ್ಟ್ ವೀಡಿಯೊಗಳನ್ನು ಸೇರಿಸಲು ಇದೀಗ ಫೇಸ್‌ಬುಕ್ ಬಳಕೆದಾರರನ್ನು ಅನುಮತಿಸುತ್ತಿದೆ. ಬಳಕೆದಾರರು ತಾತ್ಕಾಲಿಕ ಪ್ರೊಫೈಲ್ ಚಿತ್ರವನ್ನು ಹೊಂದಿಸಬಹುದಾಗಿದ್ದು ನಿರ್ದಿಷ್ಟ ಸಮಯದಲ್ಲಿ ಇದು ಅವರಿಗೆ ತಮ್ಮ ಹಳೆಯ ಚಿತ್ರವನ್ನು ರಿವರ್ಟ್ ಮಾಡುತ್ತದೆ.

ಫೇಸ್‌ಬುಕ್ ಡಿಸ್‌ಲೈಕ್ ಬಟನ್

ಫೇಸ್‌ಬುಕ್ ಡಿಸ್‌ಲೈಕ್ ಬಟನ್

ಫೇಸ್‌ಬುಕ್ ಲಾಂಚ್‌ನಿಂದ ಹಿಡಿದು, ವಿಶ್ವದಾದ್ಯಂತವಿರುವ ಫೇಸ್‌ಬುಕ್ ಬಳಕೆದಾರರು ಡಿಸ್‌ಲೈಕ್ ಬಟನ್‌ಗಾಗಿ ಹೆಚ್ಚಿನ ಬೇಡಿಕೆಯನ್ನಿಟ್ಟಿದ್ದಾರೆ. ಡಿಸ್‌ಲೈಕ್ ಬಟನ್‌ಗೆ ಹೊರತಾಗಿ ಕಂಪೆನಿಯು "ರಿಯಾಕ್ಶನ್" ಬಟನ್‌ಗಳನ್ನು ಬಿಡುಗಡೆ ಮಾಡಿದೆ. ಇದು ಎಮೋಶನ್‌ಗಳನ್ನು ಒಳಗೊಂಡಿದೆ.

ಫೇಸ್‌ಬುಕ್‌ನಲ್ಲಿ ಸಜೆಸ್ಟೆಡ್ ವೀಡಿಯೊಗಳು

ಫೇಸ್‌ಬುಕ್‌ನಲ್ಲಿ ಸಜೆಸ್ಟೆಡ್ ವೀಡಿಯೊಗಳು

ಸಜೆಸ್ಟೆಡ್ ವೀಡಿಯೊಗಳು ಫೀಚರ್ ಅನ್ನು ಫೇಸ್‌ಬುಕ್ ಬಿಡುಗಡೆ ಮಾಡಿದೆ. ಈ ಫೀಚರ್ ಅನ್ನು ಕಂಪೆನಿ ಪರಿಶೀಲಿಸುತ್ತಿದ್ದು ಫೇಸ್‌ಬುಕ್ ಬಳಕೆದಾರರಿಗೆ ಸಂಬಂಧಿತ ವೀಡಿಯೊಗಳನ್ನು ಸಾಲಾಗಿ ಅಂದರೆ ಅವರ ನ್ಯೂಸ್ ಫೀಡ್‌ನಿಂದ ಟ್ಯಾಪ್ ಮಾಡಿದ ನಂತರ ತೋರಿಸುತ್ತದೆ.

ಇನ್‌ಸ್ಟಂಟ್ ಆರ್ಟಿಕಲ್ಸ್

ಇನ್‌ಸ್ಟಂಟ್ ಆರ್ಟಿಕಲ್ಸ್

ಮೊಬೈಲ್ ಫೋನ್‌ಗಳಲ್ಲಿ ಇನ್ನಷ್ಟು ವೇಗವಾಗಿ ಓದುವ ಸೌಲಭ್ಯವನ್ನು ಈ ಫೀಚರ್ ಮಾಡಲಿದೆ. ಕಂಪೆನಿಯ ಪ್ರಕಾರ, 10 ಪಟ್ಟು ಅಧಿಕವಾಗಿ ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನ್ಯೂಸ್ ಸ್ಟೋರಿಗಳ ಲೋಡ್ ಸಮಯವನ್ನು ಇದು ಸುಧಾರಿಸುತ್ತದೆ.

'ರಿಯಲ್ ಟೈಮ್'

'ರಿಯಲ್ ಟೈಮ್'

ಸಾರ್ವಜನಿಕವಾಗಿ ಹಂಚಲಾದ ಸುದ್ದಿಯ ಕುರಿತ ಸಂವಾದಗಳನ್ನು ಜನರು ಹುಡುಕಲು ಅನುಮತಿಸುವಂತಹ ತನ್ನ ಹುಡುಕಾಟ ಸಾಮರ್ಥ್ಯಗಳನ್ನು ಫೇಸ್‌ಬುಕ್ ಅಪ್‌ಡೇಟ್ ಮಾಡಿದೆ.

ಅಧಿಸೂಚನೆ ಟ್ಯಾಬ್ ಅನ್ನು ಹೆಚ್ಚು ವೈಯಕ್ತೀಕರಿಸಲಾಗಿದೆ

ಅಧಿಸೂಚನೆ ಟ್ಯಾಬ್ ಅನ್ನು ಹೆಚ್ಚು ವೈಯಕ್ತೀಕರಿಸಲಾಗಿದೆ

ನಿಮಗಾಗಿ ತನ್ನ ನೋಟಿಫಿಕೇಶನ್ ಟ್ಯಾಬ್ ಅನ್ನು ಫೇಸ್‌ಬುಕ್ ಹೆಚ್ಚು ವೈಯಕ್ತೀಕರಿಸುತ್ತಿದೆ. ಫೇಸ್‌ಬುಕ್‌ನ ವಿಸ್ತರಿತ ಸೂಚನೆಗಳು ಸಮುದಾಯ ಸುದ್ದಿ ಮತ್ತು ಈವೆಂಟ್‌ಗಳನ್ನು ಸಹ ಒಳಗೊಂಡಿದೆ.

Best Mobiles in India

English summary
Facebook, the world's top social network, has rolled out a slew of new features in the recent past. From allowing users to watch videos in 360-degree view to adding videos as profile pictures, these and many of the new features are aimed at improving user experience. Here's are the 10 such Facebook features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X