ಫೇಸ್‌ಬುಕ್‌ನಲ್ಲಿ ಪೋಷಕರ ವರ್ತನೆ ಹೇಗಿರಬೇಕು?

By Shwetha
|

ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನೀವು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬ ಅಂಶ ಪ್ರಮುಖವಾದುದು. ಇನ್ನು ಸಾಮಾಜಿಕ ತಾಣದಲ್ಲಿ ನೀವು ಯಾವ ರೀತಿಯಲ್ಲಿ ನಿಮ್ಮ ಚಟುವಟಿಕೆಗಳನ್ನು ಕೈಗೊಳ್ಳುತ್ತೀರಿ ಎಂಬುದನ್ನು ಆಧರಿಸಿದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಜಾಣ ಹೆತ್ತವರಿಗಾಗಿ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದು ಫೇಸ್‌ಬುಕ್‌ನ ಬಳಕೆಯನ್ನು ನೀವು ಯಾವ ರೀತಿಯಲ್ಲಿ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.

ಓದಿರಿ: ವಿಶ್ವಪರಿಸರ ದಿನಕ್ಕಾಗಿ ಹಸಿರು ಗ್ಯಾಜೆಟ್ಸ್

ಹ್ಯಾಶ್‌ಟ್ಯಾಗ್‌ಗಳ ಬಳಕೆ

ಹ್ಯಾಶ್‌ಟ್ಯಾಗ್‌ಗಳ ಬಳಕೆ

ಫೋಟೋಗಳನ್ನು ಟ್ಯಾಗ್ ಮಾಡುವಾಗ ಆದಷ್ಟು ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದನ್ನು ಕಡಿಮೆ ಮಾಡಿ.

ನಿಮ್ಮ ಮಗುವಿನ ಬಗ್ಗೆ ಸ್ಟೇಟಸ್ ಅಪ್‌ಡೇಟ್ ಮಾಡುವುದು

ನಿಮ್ಮ ಮಗುವಿನ ಬಗ್ಗೆ ಸ್ಟೇಟಸ್ ಅಪ್‌ಡೇಟ್ ಮಾಡುವುದು

ನಿಮ್ಮ ಮಗುವಿನ ಬಗ್ಗೆ ನಿಮಗೆ ಹೆಮ್ಮೆ ಇರುವುದು ಸಂತಸದ ವಿಚಾರವೇ. ಆದರೆ ತಾಣದಲ್ಲಿ ಯಾವಾಗಲೂ ಇಂತಹುದೇ ವಿಷಯಗಳನ್ನು ಪ್ರಸ್ತಾವಿಸುವುದರಿಂದ ತಮಾಷೆಗೆ ನೀವು ಗುರಿಯಾಗಬಹುದು.

ನಿಮ್ಮನ್ನು ನೀವು ಬಣ್ಣಿಸಿಕೊಳ್ಳುವುದು

ನಿಮ್ಮನ್ನು ನೀವು ಬಣ್ಣಿಸಿಕೊಳ್ಳುವುದು

ಮಗುವಿನ ಪಾಲನೆ ಪೋಷಣೆಯಲ್ಲಿ ನೀವು ಸ್ವರ್ಗವನ್ನೇ ಕಂಡಿರಬಹುದು. ಆದರೆ ಯಾವಾಗಲೂ ಇದೇ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಾಕುವುದರಿಂದ ಕಿರಿಕಿರಿ ಉಂಟಾಗುತ್ತದೆ.

ಮಕ್ಕಳದ್ದೇ ಕಥೆ

ಮಕ್ಕಳದ್ದೇ ಕಥೆ

ನಿಮ್ಮ ಪ್ರೊಫೈಲ್ ಅಥವಾ ಸ್ಟೇಟಸ್ ನಿಮ್ಮ ಮಕ್ಕಳ ತುಂಟಾಟಗಳ ಸುದ್ದಿಯಿಂದಲೇ ತುಂಬಿಕೊಡಿದ್ದರೆ ಇತರರಿಗೆ ಅದು ಬೋರ್ ಆಗುವುದು ಖಂಡಿತ.

ಇತರ ಪೋಷಕರೊಂದಿಗೆ ಹೋಲಿಸುವುದು

ಇತರ ಪೋಷಕರೊಂದಿಗೆ ಹೋಲಿಸುವುದು

ಇತರ ಪೋಷಕರು ಯಾವ ರೀತಿ ಮಾಡುತ್ತಾರೋ ಅದೇ ರೀತಿ ನೀವು ಮಾಡುವುದನ್ನು ಮೊದಲು ನಿಲ್ಲಿಸಿ.

ಅತಿಯಾಗಿ ಹಂಚುವುದು

ಅತಿಯಾಗಿ ಹಂಚುವುದು

ಇನ್ನು ಆನ್‌ಲೈನ್‌ನಲ್ಲಿ ಅತಿಯಾಗಿ ಹಂಚಿಕೊಳ್ಳುವ ಪ್ರಕ್ರಿಯೆಗೆ ಲಗಾಮನ್ನು ಹಾಕಿ.

ಮಕ್ಕಳ ಸ್ನೇಹಿತರನ್ನು ಟೀಕಿಸುವುದು

ಮಕ್ಕಳ ಸ್ನೇಹಿತರನ್ನು ಟೀಕಿಸುವುದು

ಈ ರೀತಿ ಮಾಡುವುದರಿಂದ ನಿಮ್ಮ ಮಕ್ಕಳು ಅವರ ಸ್ನೇಹಿತರನ್ನು ನಡೆಸಿಕೊಳ್ಳುವ ರೀತಿ ದುಃಖಮಯವಾಗಿರುತ್ತದೆ.

ಶಿಕ್ಷಕರನ್ನು ದೂಷಿಸುವುದು

ಶಿಕ್ಷಕರನ್ನು ದೂಷಿಸುವುದು

ಶಿಕ್ಷಕರನ್ನು ಸಾಮಾಜಿಕ ತಾಣಗಳಲ್ಲಿ ದೂಷಿಸುವುದು ಅತಿಯಾಗಿ ನಡೆದುಕೊಂಡು ಬರುತ್ತಿದ್ದು ವರ್ಷದಿಂದ ವರ್ಷಕ್ಕೆ ಇಂತಹ ಘಟನೆಗಳು ಹೆಚ್ಚಾಗುತ್ತಿದೆ.

ನಿಮ್ಮ ಮಕ್ಕಳ ಸ್ನೇಹಿತರಾಗಿರುವುದು

ನಿಮ್ಮ ಮಕ್ಕಳ ಸ್ನೇಹಿತರಾಗಿರುವುದು

ನಿಮ್ಮ ಮಕ್ಕಳು ದೊಡ್ಡವರಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಿ. ಅವರ ಮೇಲೆ ಹೆಚ್ಚಿನ ನಿಗಾ ಇರಿಸುವುದು ಅವರಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಇದು ಆನ್‌ಲೈನ್‌ಗೂ ಸಂಬಂಧಿಸುತ್ತದೆ.

ಇತರ ಪೋಷಕರನ್ನು ದೂಷಿಸುವುದು

ಇತರ ಪೋಷಕರನ್ನು ದೂಷಿಸುವುದು

ಫೇಸ್‌ಬುಕ್‌ನಲ್ಲಿ ಇತರ ಪೋಷಕರನ್ನು ದೂಷಿಸುವ ಕೆಲಸವನ್ನು ಮಾಡದಿರಿ.

Best Mobiles in India

English summary
In this article we can see 10 things parents really ought to stop doing on Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X