ಬಳಕೆದಾರರ ಭದ್ರತೆ: ಆಂಡ್ರಾಯ್ಡ್ ಹಿನ್ನಡೆ

Posted By:

ನಮ್ಮ ಮೆಚ್ಚಿನ ಆಪರೇಟಿಂಗ್ ಸಿಸ್ಟಮ್ ಎಂದೆನಿಸಿರುವ ಆಂಡ್ರಾಯ್ಡ್ ಆಲ್ ಟೈಮ್ ಫೇವರೇಟ್ ಎಂದೆನಿಸಿದೆ. ಸ್ವತಂತ್ರ ಓಎಸ್ ಎಂದೇ ಖ್ಯಾತಿ ಗಳಿಸಿರುವ ಈ ಓಎಸ್ ಇತರ ಪ್ಲಾಟ್‌ಫಾರ್ಮ್‌ಗಳಂತೆ ನಿರ್ಬಂಧವನ್ನು ಬಳಕೆದಾರರ ಮೇಲೆ ಹೇರುವುದಿಲ್ಲ. ಯಾವುದೇ ಬಗೆಯ ಅಪ್ಲಿಕೇಶನ್‌ಗಳನ್ನು ಕೂಡ ತಡಕಾಡಿ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾದ ವ್ಯವಸ್ಥೆ ಇದರಲ್ಲಿದೆ.

ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವುದು ಹೇಗೆ?

ಬಳಕೆದಾರ ಸ್ನೇಹಿ ಎಂದೆನಿಸಿರುವ ಈ ಪ್ಲಾಟ್‌ಫಾರ್ಮ್ ಅನ್ನೇ ಮುಕ್ಕಾಲು ಪಾಲು ಜನರು ಇಷ್ಟಪಡುತ್ತಿದ್ದಾರೆ. ಆದರೆ ನೀವು ಇಷ್ಟಪಡುವ ಈ ಓಎಸ್‌ನಲ್ಲೂ ಕೆಲವೊಂದು ನಿಮಗೆ ಬೇಸರ ತರಿಸುವ ವಿಚಾರಗಳಿವೆ. ಈ ವಿಚಾರಗಳಿಂದ ಆಂಡ್ರಾಯ್ಡ್ ಅನ್ನು ನೀವು ಇಷ್ಟಪಡಲಾರಿರಿ. ಅದು ಏನು ಮತ್ತು ಅದು ನಿಮಗೆ ಕೂಡ ಇಷ್ಟವಾಗದೇ ಇರುವಂಥದ್ದೇ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಆವೃತ್ತಿಗಳು ದೊರೆಯದೇ ಇರುವುದು
  

ಹೊಸ ಆವೃತ್ತಿಗಳು ದೊರೆಯದೇ ಇರುವುದು

ಆಂಡ್ರಾಯ್ಡ್ ಫೋನ್‌ಗಳು ಉಂಟು ಮಾಡುವ ತಲೆನೋವು ಎಂದರೆ ಓಎಸ್‌ನ ಹೊಸ ಹೊಸ ಆವೃತ್ತಿಗಳನ್ನು ಅಪ್‌ಗ್ರೇಡ್ ಮಾಡಲು ಸಾಧ್ಯವಾಗದೇ ಇರುವಂಥದ್ದು.

ನಿಯಮಿತವಾಗಿರುವುದಿಲ್ಲ
  

ನಿಯಮಿತವಾಗಿರುವುದಿಲ್ಲ

ದೊಡ್ಡ ತಯಾರಿಕಾ ಸಂಸ್ಥೆಗಳು ಆಂಡ್ರಾಯ್ಡ್ ಸಿಸ್ಟಮ್ ಅನ್ನು ರನ್ ಮಾಡುವುದರಿಂದ ಅಪ್‌ಡೇಟ್‌ಗಳು ನಿಯಮಿತವಾಗಿರುವುದಿಲ್ಲ.

ಜಾಹೀರಾತು
  

ಜಾಹೀರಾತು

ತನ್ನ ಓಎಸ್‌ನಲ್ಲಿ ಮಿತಿಯಿಲ್ಲದ ಜಾಹೀರಾತನ್ನು ಗೂಗಲ್ ಅನುಮತಿಸುತ್ತಿರುವುದು. ಡೆವಲಪರ್‌ಗಳು ಬಳಕೆದಾರ ಸ್ನೇಹಿಯಾಗಿ ಜಾಹೀರಾತನ್ನು ಪ್ರಸಾರಪಡಿಸುತ್ತಿವೆ ಎಂಬುದು ಇವರ ನಂಬಿಕೆಯಾಗಿದೆ

ಅನ್‌ಇನ್‌ಸ್ಟಾಲ್
  

ಅನ್‌ಇನ್‌ಸ್ಟಾಲ್

ಹೆಚ್ಚುವರಿ ಜಾಹೀರಾತುಗಳು ಬಳಕೆದಾರರನ್ನು ಓಎಸ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವುದಕ್ಕೆ ಪ್ರಚೋದಿಸುತ್ತವೆ.

ಮಾಲ್‌ವೇರ್
  

ಮಾಲ್‌ವೇರ್

ಯಾವುದೇ ಓಎಸ್‌ಗಳು 100 ಶೇಕಡಾ ಸುರಕ್ಷಿತವಾಗಿರುವುದಿಲ್ಲ. ಸಮೀಕ್ಷೆಗಳ ಪ್ರಕಾರ ಗೂಗಲ್ ಪ್ಲೇ ಅಪ್ಲಿಕೇಶನ್‌ನಲ್ಲಿ ಮಾಲ್‌ವೇರ್‌ಗಳು ಕಡಿಮೆ ಎಂದಾಗಿದೆ.

ಪಾವತಿಯನ್ನು ದೋಚುತ್ತದೆ
  

ಪಾವತಿಯನ್ನು ದೋಚುತ್ತದೆ

ಇನ್ನು ಮೋಸದ ಎನ್‌ಇಎಸ್‌ಗಳು ಬಳಕೆದಾರರಿಗೆ ತಿಳಿಯದಂತೆ ಅವರ ಖಾತೆಗಳಿಂದ ಪಾವತಿಯನ್ನು ದೋಚುತ್ತದೆ. ಇನ್ನು ಬಳಕೆದಾರರಿಗೆ ತಲೆನೋವು ಎಂದೆನಿಸಿದ್ದ ಕೌಬಾಯ್ ಅಡ್ವೆಂಚರ್ ಗೇಮ್ ಅನ್ನು ಗೂಗಲ್ ಪ್ಲೇನಿಂದ ತೆಗೆದುಹಾಕಲಾಗಿದೆ.

ಬಗ್
  

ಬಗ್

ಸಣ್ಣ ನವೀಕರಣ ನಿರ್ವಹಣೆಯಿಂದ ಪ್ರತಿಯೊಂದು ಓಎಸ್‌ನಲ್ಲಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆಂಡ್ರಾಯ್ಡ್‌ನ ಪ್ರತಿಯೊಂದು ಹೊಸ ನವೀಕರಣಗಳು ಬಗ್‌ಗಳನ್ನು ಹೊಂದಿರುತ್ತವೆ ಎಂಬುದು ಬಳಕೆದಾರರ ದೂರಾಗಿದೆ.

ಗೌಪ್ಯತೆ ಸಮಸ್ಯೆಗಳು
  

ಗೌಪ್ಯತೆ ಸಮಸ್ಯೆಗಳು

ಗೂಗಲ್ ಬಳಕೆದಾರರ ಬಗ್ಗೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಆದರೆ ಗೂಗಲ್‌ನ ಈ ವರ್ತನೆ ಹೆಚ್ಚಿನ ಬಳಕೆದಾರರಲ್ಲಿ ಅಸಮಾಧಾನವನ್ನು ಉಂಟುಮಾಡುತ್ತಿದೆ. ವೈಯಕ್ತಿಕ ಮಾಹಿತಿಗಳನ್ನು ಗೂಗಲ್ ಪಡೆದುಕೊಳ್ಳುತ್ತಿದೆ ಎಂಬುದು ಇವರ ಗೋಳಾಗಿದೆ.

ಫೇಸ್‌ಬುಕ್‌
  

ಫೇಸ್‌ಬುಕ್‌

ಫೇಸ್‌ಬುಕ್‌ನಿಂದ ಅಪ್ಲಿಕೇಶನ್ ತನ್ನ ಡೇಟಾವನ್ನು ಕದ್ದು ಬಳಕೆದಾರರ ಫೋನ್‌ಗಳಲ್ಲಿರುವ ಸಂಪರ್ಕಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ರಕ್ಷಣಾ ನಿಯಮಾವಳಿಗಳು
  

ರಕ್ಷಣಾ ನಿಯಮಾವಳಿಗಳು

ಪ್ಲೇಸ್ಟೋರ್‌ನಲ್ಲಿ ಕಟ್ಟುನಿಟ್ಟಿನ ರಕ್ಷಣಾ ನಿಯಮಾವಳಿಗಳು ಇಲ್ಲದೇ ಇರುವುದು ಬಳಕೆದಾರರ ಮಾಹಿತಿಯನ್ನು ಹೊರಹೋಗುವಂತೆ ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Android is our favorite operating system — the name of the site probably gave that away — but it's certainly not perfect. There are some things we really hate about it, and we want them consigned to history as soon as possible.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot